ಮಳಿಗೆ ಹಂಚಿಕೆಯಲ್ಲಿ ಕ್ಷೌರಿಕರಿಗೆ ಮೊದಲಾದ್ಯತೆ ನೀಡಿ
Team Udayavani, Jul 17, 2019, 2:20 PM IST
ಗದಗ: ಕ್ಷೌರಿಕರಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿ ಜಿಲ್ಲಾ ಸವಿತಾ ಸಮುದಾಯ ಮೀಸಲಾತಿ ಒಕ್ಕೂಟದಿಂದ ಡಿಸಿಗೆ ಮನವಿ ಸಲ್ಲಿಸಲಾಯಿತು.
ಗದಗ: ಜಿಲ್ಲಾಡಳಿತದಿಂದ ಮುಂದಿನ ದಿನಗಳಲ್ಲಿ ನಿರ್ಮಿಸಲಾಗುವ ವಾಣಿಜ್ಯ ಸಮುಚ್ಛಯದ ಮಳಿಗೆಗಳ ಹಂಚಿಕೆಯಲ್ಲಿ ಇಲ್ಲಿನ ವಕಾರ ಸಾಲು ತೆರವು ಕಾರ್ಯಾಚಾರಣೆಯಲ್ಲಿ ಅಂಗಡಿಗಳನ್ನು ಕಳೆದುಕೊಂಡಿರುವ ಬಡ ಕ್ಷೌರಿಕರಿಗೆ ಮೊದಲ ಆದ್ಯತೆ ನೀಡಬೇಕು ಎಂದು ಜಿಲ್ಲಾ ಸವಿತಾ ಸಮುದಾಯ ಮೀಸಲಾತಿ ಒಕ್ಕೂಟ ಆಗ್ರಹಿಸಿದೆ.
ಈ ಕುರಿತು ಮಂಗಳವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ಹಳೇ ಬಸ್ ನಿಲ್ದಾಣ ಮತ್ತು ಕಾಟನ್ ಮಾರ್ಕೆಟ್ ರೋಡ್ ಸಮೀಪದ ವಕಾರಗಳ ಲೀಜ್ ಅವಧಿ ಮುಕ್ತಾಯಗೊಂಡಿದ್ದರಿಂದ ಇತ್ತೀಚೆಗೆ ನಗರಸಭೆ ತೆರವು ಕಾರ್ಯಾಚರಣೆ ನಡೆಸಿದೆ. ಆದರೆ ಯಾವುದೇ ಮುನ್ಸೂಚನೆ ನೀಡದೆ ತೆರವು ಕಾರ್ಯಾ ನಡೆಸಿದ್ದರಿಂದ ಸವಿತಾ ಸಮಾಜದ 22 ಕ್ಷೌರದ ಅಂಗಡಿಗಳು ನೆಲಸಮಗೊಂಡಿದ್ದರಿಂದ ಅವರ ಬದುಕು ಬೀದಿಗೆ ಬಂದಿದೆ. ಈ ಪೈಕಿ ಸವಿತಾ ಸಮಾಜದ ವಿಕಲಚೇತನ ಗಿರಿರಾಜ ಕೋಟೆಕಲ್, ಆಂಜನೇಯ ಆದೋನಿ, ಕೃಷ್ಣಾ ಬಾಯಲಗುಡ್ಡ, ಶ್ರೀನಿವಾಸ ಕೋಟೆಕಲ್ಲ, ಶ್ರೀನಿವಾಸ ರಾಂಪುರ, ಜೀವಣ್ಣ ಮುಕ್ಕಣ್ಣ ರಾಮಪುರ ಎಂಬುವವರು ಸೇರಿದಂತೆ 22 ಕ್ಷೌರಿಕ ಅಂಗಡಿಗಳು ತೆರವು ಗೊಂಡಿದ್ದು, ಅವರ ನಿತ್ಯ ಜೀವನ ಸಂಕಷ್ಟಕ್ಕೆ ಸಿಲುಕಿದೆ ಎಂದು ದೂರಿದರು.
ವಕಾರ ಸಾಲು ತೆರವು ಪ್ರದೇಶದಲ್ಲಿ ಮುಂಬರುವ ದಿನಗಳಲ್ಲಿ ಸರಕಾರ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿದರೆ, ಈ ಭಾಗದಲ್ಲಿ ಅಂಗಡಿಗಳನ್ನು ಕಳೆದುಕೊಂಡಿರುವ ಸವಿತಾ ಸಮಾಜದ ಕ್ಷೌರಿಕರಿಗೆ ಮೊದಲ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸವಿತಾ ಸಮುದಾಯ ಮೀಸಲಾತಿ ಒಕ್ಕೂಟದ ಜಿಲ್ಲಾಧ್ಯಕ್ಷ ಕೃಷ್ಣ ಎಚ್. ಹಡಪದ, ಸಮಾಜದ ಹಿರಿಯರಾದ ಹನಮಂತಪ್ಪ ರಾಂಪುರ, ಬಾಲರಾಜ ಕೋಟೆಕಲ್, ಕೃಷ್ಣಾ ಬಾಯಲಗುಡ್ಡ, ಪರಶುರಾಮ ಕೋಟೆಕಲ್ಲ, ರಮೇಶ ರಾಂಪೂರ, ಪಾಂಡು ಕಾಳೆ, ಪಂಪಣ್ಣ ರಾಯಚೂರ, ದಿಲೀಪ ಸೋಳಂಕಿ, ವಿಷ್ಣು ಮಾನೆ, ರಾಮ ಮಾನೆ, ಜಂಬಣ್ಣ ಕಡಮೂರ ಹಾಗೂ ಸುರೇಶ ಬೂದೂರ, ಕುಮಾರ ಆದೋನಿ, ಅರುಣ ರಾಮಪುರ, ರಾಘವೇಂದ್ರ ರಾಂಪೂರ, ಶ್ರೀನಿವಾಸ ಶಿಕಾರಿಪುರ, ನವೀನ ಕೋಟೆಕಲ್ಲ, ದೀಪಕ ಗಂಗಾಧರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ
CM Siddaramaiah: ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮದು
Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ
Gadaga: ಮೂರು ದಿನಗಳ ಕಾಲ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್‌ಬಿಐ
PM Modi: ಇಂದಿನಿಂದ ಮೋದಿ ಕುವೈತ್ ಭೇಟಿ…: 43 ವರ್ಷಗಳ ಬಳಿಕ ಭಾರತದ ಪ್ರಧಾನಿ ಭೇಟಿ
UI Movie Review: ಫೋಕಸ್ ಸಿಗೋವರೆಗೆ ಸಿನ್ಮಾ ನೋಡ್ತಾನೇ ಇರಿ!
Bantwal; ನಿಷೇಧವಿದ್ದರೂ ಹಳೇಯ ಸೇತುವೆಯಲ್ಲಿ ಸಂಚಾರ; ಸಿಲುಕಿಕೊಂಡ ಗೂಡ್ಸ್ ವಾಹನ
ರಬಕವಿ-ಬನಹಟ್ಟಿ: ಸಚಿವರಿಂದ ಬೇಡಿಕೆ ಈಡೇರಿಸುವ ಭರವಸೆ… ತಿಂಗಳ ಬಳಿಕ ನೇಕಾರರ ಹೋರಾಟ ಅಂತ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.