ಎಸ್‌ಎಸ್‌ಕೆ ಸಮಾಜದಿಂದ ಬೃಹತ್ ರ್ಯಾಲಿ
Team Udayavani, Apr 20, 2019, 2:47 PM IST
ಗದಗ: ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಅವರಿಗೆ ಬೆಂಬಲ ಸೂಚಿಸಿ ನಗರದಲ್ಲಿ ಎಸ್‌ಎಸ್‌ಕೆ ಸಮಾಜದಿಂದ ಗುರುವಾರ ಸಂಜೆ ಬೃಹತ್ ಪಾದಯಾತ್ರೆ ನಡೆಸಲಾಯಿತು.
ನಗರದ ಹಳೇ ಸರಾಫ್ ಬಜಾರ್‌ನಿಂದ ಅಂಬಾ ಭವಾನಿ ದೇವಸ್ಥಾನದಿಂದ ಚೌವಡಿ ಕೂಟ, ಟಾಂಗಾಕೂಟ, ನಾಮಜೋಶಿ ರಸ್ತೆ, ವೀರೇಶ್ವರ ಲೈಬ್ರರಿ, ಹಳೇ ಬಸ್ ನಿಲ್ದಾಣ, ಬ್ಯಾಂಕ್ ರೋಡ್, ಟಾಂಗಾ ಕೂಟ, ಸ್ಟೇಷನ್ ರಸ್ತೆ, ಗಾಂಧಿ ವೃತ್ತ ಮಾರ್ಗವಾಗಿ ಬಿಜೆಪಿ ಚುನಾವಣಾ ಸಂಪರ್ಕ ಕಚೇರಿಗೆ ತಲುಪುವ ಮೂಲಕ ಮುಕ್ತಾಯಗೊಂಡಿತು.
ಮೆರವಣಿಗೆಯುದ್ದಕ್ಕೂ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಹಾಗೂ ಭಾರತ ಮಾತಾಕಿ ಜೈ ಎಂಬ ಘೊಷಣೆ ಕೂಗಿದರು. ಬಿಜೆಪಿ ಮುದ್ರಿಸಿದ್ದ ಕರ ಪತ್ರಗಳನ್ನು ಸಾರ್ವಜನಿಕರಿಗೆ ವಿತರಿಸುವ ಮೂಲಕ ಬಿಜೆಪಿಗೆ ಮತಯಾಚಿಸಿದರು.
ಇದಕ್ಕೂ ಮುನ್ನ ಜಗದಂಬಾ ದೇವವಸ್ಥಾನದ ಕಲ್ಯಾಣ ಮಂಟಪದಲ್ಲಿ ನಡೆದ ಸಭೆಯಲ್ಲಿ ಹುಬ್ಬಳ್ಳಿಯ ಮಾಜಿ ಶಾಸಕ ಅಶೋಕ ಕಾಟವೆ ಮಾತನಾಡಿದರು. ಸೊಲ್ಲಾಪುರ ಮಾಜಿ ಶಾಸಕ ನರಸಿಂಗ ಮೆಲಜಿ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಶ್ರೀಕಾಂತ ಖಟವಟೆ, ನಗರಸಭೆ ಮಾಜಿ ಉಪಾಧ್ಯಕ್ಷ ಶ್ರೀನಿವಾಸ ಭಾಂಡಗೆ, ಪ್ರಕಾಶ ಬಾಕಳೆ, ಬಿಜೆಪಿ ಶಹರ ಘಟಕದ ಅಧ್ಯಕ್ಷ ಜಗನ್ನಾಥಸಾ ಭಾಂಡಗೆ, ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸುಧೀರ ಕಾಟಿಗರ, ಕಿಶನ ಮೆರವಾಡೆ, ವಿನಾಯಕ ಹಬೀಬ, ದತ್ತು ಪವಾರ, ಮಾಧುಸಾ ಮೇರವಾಡೆ, ತೋಟೋಸಾ ಭಾಂಡಗೆ, ಬಿ.ಎಚ್.ಲದ್ವಾ, ಶಂಕರ ಪವಾರ, ಅನಿಲ ಖಟವಟೆ, ಪಕ್ಕೀರಸಾ ಭಾಂಡಗೆ, ಜಯಶ್ರೀ ಖಟವಟೆ, ರೇಣುಕಾ ಕಲಬುರ್ಗಿ, ಪ್ರಶಾಂತ ಕಾಟವಾ ಹಾಗೂ ನೂರಾರು ಮಹಿಳೆಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕಳಕಮಲ್ಲಯ್ಯ ಕ್ಷೇತ್ರ: ದಕ್ಷಿಣ ಕಾಶಿ ಪ್ರಸಿದ್ಧಿಯ ಸುಕ್ಷೇತ್ರ ಶ್ರೀಕಾಲ ಕಾಲೇಶ್ವರ…
ಆಕರ್ಷಕ ಪ್ರವಾಸಿ ತಾಣ, ಸುಂದರ ಊರು…ಸೂಡಿ ಪ್ರಾಚೀನ ಪರಂಪರೆಗೆ ಸಾಕ್ಷಿ…
Gadag; ಶಿರಹಟ್ಟಿ ಕ್ಷೇತ್ರದ ಶಾಸಕ ಚಂದ್ರು ಲಮಾಣಿ ಕಾರು ಚಾಲಕ ಆತ್ಮಹತ್ಯೆ
Protest: ಮುಳಗುಂದ: ಕಡಲೆ ಖರೀದಿ ಹಣ ಬಿಡುಗಡೆಗೆ ಆಗ್ರಹಿಸಿ ಪಾದಯಾತ್ರೆ… ಅಹೋರಾತ್ರಿ ಧರಣಿ
Karnataka Lokayukta; ಬೆಟಗೇರಿ ನಗರಸಭೆ ಇಂಜಿನಿಯರ್ ಗೆ ಬೆಳ್ಳಂಬೆಳಗ್ಗೆ ಶಾಕ್..!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.