ಮೇವುಂಡಿ ಗ್ರಂಥಾಲಯ ಒಳಹೊಕ್ಕರೆ ಜೀವ ಭಯ
Team Udayavani, Nov 10, 2019, 4:56 PM IST
ಮುಂಡರಗಿ: ತಾಲೂಕಿನ ಮೇವುಂಡಿ ಗ್ರಾಮದ ಗ್ರಂಥಾಲಯದ ಕಾಂಕ್ರೀಟ್ ಮೇಲ್ಛಾವಣಿ ಉದುರುತ್ತಿದ್ದು, ಓದುಗರು ಭಯದಲ್ಲೇ ಕುಳಿತು ಓದುವ ಪರಿಸ್ಥಿತಿ ನಿರ್ಮಾಣವಾಗಿದೆ.
ಗ್ರಂಥಾಲಯ ಕಟ್ಟಡ ಇಪ್ಪತ್ತು ವರ್ಷಗಳಷ್ಟು ಪುರಾತನವಾಗಿದ್ದು, ಎರಡು ವಿಭಾಗದಲ್ಲಿದೆ. ಒಂದು ವಿಭಾಗದ ಕಟ್ಟಡ ಮೇಲ್ಛಾವಣಿಯ ಕಾಂಕ್ರೀಟ್ ದಿನಂಪ್ರತಿ ಉದುರುತ್ತಿದ್ದು, ಓದುಗರ ತಲೆಯ ಮೇಲೆಯೇ ಕಾಂಕ್ರೀಟ್‌ನ ಕಲ್ಲು, ಉಸುಕು ಬೀಳುತ್ತಿರುತ್ತವೆ. ಅಲ್ಲದೇ ಇನ್ನೊಂದು ವಿಭಾಗದ ಮೇಲ್ಛಾವಣಿ ಉತ್ತಮವಾಗಿದ್ದರೂ ಉಬ್ಬಿದೆ.
ಕಳೆದ ಇಪ್ಪತ್ತು ವರ್ಷಗಳಿಂದ ಗ್ರಾಪಂ ಕಟ್ಟಡದಲ್ಲಿ ಸಾರ್ವಜನಿಕ ಗ್ರಂಥಾಲಯವು ಸಾಗಿ ಬಂದಿದೆ. ಗ್ರಾಪಂ ಕಟ್ಟಡದ ಮೇಲ್ಛಾವಣಿ ಶಿಥಿಲಾವಸ್ಥೆ ತಲುಪಿದೆ. ಮೇಲ್ಛಾವಣಿ ಉದುರಿ ಟೇಬಲ್ ಮತ್ತು ಕುರ್ಚಿಗಳ ಮೇಲೆ ಕಾಂಕ್ರೀಟ್‌ನ ಗಟ್ಟಿಯಾದ ಉಂಡೆಗಳು ಬೀಳುತ್ತಿವೆ. ಗ್ರಂಥಾಲಯದಲ್ಲಿ 4,230 ಗ್ರಂಥಗಳಿವೆ. ಗ್ರಂಥಾಲಯಕ್ಕೆ 254 ಜನ ಕಾಯಂ ಸದಸ್ಯರಿದ್ದಾರೆ. ಗ್ರಂಥಾಲಯದಲ್ಲಿ ಎರಡೇ ಎರಡು ದಿನಪತ್ರಿಕೆಗಳು ಬರುತ್ತಿವೆ. ಆದರೆ ಗ್ರಂಥಾಲಯದ ಮೇಲ್ವಿಚಾರಕರು ಆಸಕ್ತಿ ತಾಳಿ ಕಳೆದ ಮೂರು ವರ್ಷಗಳಿಂದ ಸ್ವಂತ ಹಣದಿಂದಲೇ ಇನ್ನೆರಡು ಪತ್ರಿಕೆ ತರಿಸುತ್ತಿದ್ದಾರೆ. ಇಂತಹ ಗ್ರಾಮೀಣ ಪ್ರದೇಶದ ಗ್ರಂಥಾಲಯ ಕಟ್ಟಡ ಬೀಳುವ ಭೀತಿಯಿದ್ದು, ಶೀಘ್ರ ದುರಸ್ತಿ ಮಾಡಬೇಕಿದೆ.
ಗ್ರಂಥಾಲಯ ಮೇಲ್ಛಾವಣಿ ಉದುರುತ್ತಿರುವ ಬಗ್ಗೆ ಗ್ರಂಥಾಲಯ ಇಲಾಖೆಗೂ, ಗ್ರಾಪಂ ಗಮನಕ್ಕೂ ತರಲಾಗಿದೆ. ಗ್ರಾಪಂನವರು ಮೇಲ್ಛಾವಣಿ ದುರಸ್ತಿ ಮಾಡಿಕೊಡುವುದಾಗಿ ಭರವಸೆ ನೀಡಿದ್ದಾರೆ. –ಹಾಲಪ್ಪ ಕೋರ್ಲಹಳ್ಳಿ,ಗ್ರಂಥಾಲಯ ಮೇಲ್ವಿಚಾರಕ
ದುರಸ್ತಿಗಾಗಿ 14ನೇ ಹಣಕಾಸು ಯೋಜನೆಯಲ್ಲಿ 2 ಲಕ್ಷ ರೂ. ಕ್ರಿಯಾಯೋಜನೆಯ ಪ್ರಸ್ತಾವನೆಗೆ ಅನುಮೋದನೆ ಸಿಕ್ಕಿದೆ. ಇನ್ನೂ ಲಕ್ಷ ರೂಪಾಯಿಗಳ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಬೇಗನೆ ಮೇಲ್ಛಾವಣಿ ದುರಸ್ತಿ ಮಾಡಲಾಗುವುದು. –ಸಂತೋಷ್ ಹೂಗಾರ, ಪಿಡಿಒ
-ಹು.ಬಾ. ವಡ್ಡಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gajendragad: ಮನೆಯಲ್ಲೇ ಮುಖ್ಯ ಶಿಕ್ಷಕಿಯ ಹ*ತ್ಯೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ
CM Siddaramaiah: ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮದು
Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.