ಭಾವೈಕ್ಯತೆಯ ಪ್ರತೀಕ ಮೆಹಬೂಬ್ ಸುಬ್ಹಾನಿ ಉರುಸ್
Team Udayavani, Dec 19, 2018, 4:47 PM IST
ಗಜೇಂದ್ರಗಡ: ಮತೀಯ ಭಾವನೆ ಹೋಗಲಾಡಿಸಿ ಭಾತೃತ್ವದ ಮಧುರ ಬಾಂಧವ್ಯದ ಬೆಸುಗೆಯನ್ನು ಗಟ್ಟಿಗೊಳಿಸುವ ಅಪರೂಪದ ತಾಣಗಳಲ್ಲಿ ಒಂದಾದ ಪಟ್ಟಣದ ಗುಡ್ಡದ ಮೇಲ್ಭಾಗದಲ್ಲಿರುವ ಹಜರತ್ ಸೈಯ್ಯದ್ ಶಹಾ ಮೆಹಬೂಬ ಸುಬ್ಹಾನಿ ಅವರ ಉರುಸು ಸೌಹಾರ್ದತೆಗೆ ಸಾಕ್ಷಿಯಾಗಿದೆ.
ಗಜೇಂದ್ರಗಡ ಹತ್ತು ಹಲವು ವಿಶೇಷತೆಗಳನ್ನು ಒಳಗೊಂಡಿದೆ. ಅಲ್ಲದೇ ಭಾತೃತ್ವದ ಕೇಂದ್ರ ಸ್ಥಳವಾಗಿದೆ. ಈ ಪುಣ್ಯ ಭೂಮಿಯಲ್ಲಿ ಆಡಳಿತ ನಡೆಸಿದ ಮರಾಠ ಸಾಮಂತರು ಸರ್ವ ಧರ್ಮಿಯರೂ ಒಟ್ಟಾಗಿ ಬದುಕು ನಡೆಯಬೇಕೆನ್ನುವ ಉದ್ದೇಶದಿಂದ 18 ಮಠ, 18 ಮಸೀದಿ, 18 ಬಾವಿಗಳನ್ನು ನಿರ್ಮಿಸಿದ್ದರು. ಅಂತೆಯೇ ಬೆಟ್ಟದ ಮೇಲ್ಭಾಗದಲ್ಲಿಯೂ ಹಿಂದು ಮತ್ತು ಮುಸ್ಲಿಂ ದೇವಾಲಯ ನಿರ್ಮಾಣ ಮಾಡುವ ಮೂಲಕ ಭಾವೈಕ್ಯತೆಗೆ ಮುನ್ನುಡಿ ಬರೆದಿದ್ದಾರೆ.
ಉರುಸು ಎಂಬಂದು ಸಾಧುಗಳ ಪುಣ್ಯತಿಥಿ. ಹೀಗಾಗಿ ಜಾತ್ರೆಯಂತೆ ವಿಶೇಷ ಪೂಜಾ ಕೈಂಕರ್ಯ ನೆರವೇರಿಸಲಾಗುವುದು. ಪ್ರಸ್ತುತ ದಿನಗಳಲ್ಲಿ ಜಾತೀಯತೆಯ ವಾದ ಪ್ರತಿವಾದಗಳ ಮಧ್ಯೆಯೇ ಪಟ್ಟಣದ ಗುಡ್ಡದ ಮೇಲ್ಭಾಗದಲ್ಲಿ ನಡೆಯುವ ಮೆಹಬೂಬ ಸುಬ್ಹಾನಿ ಉರುಸು ವಿಶೇಷತೆಗಳಿಗೆ ಕಾರಣವಾಗಿದೆ. ಇಲ್ಲಿ ಹಿಂದೂ-ಮುಸ್ಲಿಮರು ಭೇಟಿ ನೀಡಿ ಶರಣರ ಸಮಾಧಿ ಸ್ಥಳಕ್ಕೆ ಭಕ್ತಿ ಭಾವದಿಂದ ಪೂಜೆ ಸಲ್ಲಿಸುತ್ತಾರೆ.
ದರ್ಗಾಕ್ಕೆ ಪ್ರತಿ ಗುರುವಾರ ಮತ್ತು ಅಮವಾಸೆ ದಿನದಂದು ಭಕ್ತರು ಇಷ್ಟಾರ್ಥ ಸಿದ್ಧಿಗಾಗಿ ಹರಕೆ, ಪೂಜೆ ಸಲ್ಲಿಸುತ್ತಾರೆ. ಸೂಫಿ ಪಂಥದವರಾದ ಹಜರತ್ ಸೈಯ್ಯದ್ ಶಹಾ ಮೆಹಬೂಬ ಸುಬ್ಹಾನಿ ಅವರು ಹಲವು ದಶಕಗಳ ಹಿಂದೆ ಗಜೇಂದ್ರಗಡಕ್ಕೆ ಭೇಟಿ ನೀಡಿದ್ದರು. ಧರ್ಮ ಪ್ರಚಾರಕ್ಕಿಂತ ಸೌಹಾರ್ದತೆ, ಸಹಬಾಳ್ವೆಗೆ ಒತ್ತು ನೀಡಿ, ಸತ್ಯ ನಿಷ್ಠೆಗೆ ಹೆಸರಾಗಿ ಸಮಾನತೆಯ ಸಂದೇಶ ಸಾರಿದ್ದಾರೆ ಎಂಬುದು ಇತಿಹಾಸ ಪ್ರತೀತ.
ಹಜರತ್ ಸೈಯ್ಯದ್ ಶಹಾ ಮೆಹಬೂಬ ಸುಬ್ಹಾನಿ ಅವರು ಈ ಭಾಗದ ಹಳ್ಳಿಗಳಲ್ಲಿ ಭಾವೈಕ್ಯತೆಯ ಸಂದೇಶ ಪಸರಿಸಿದ ಕೀರ್ತಿ ಅವರದ್ದಾಗಿದೆ. ನಂತರ ಅವರು ಗಜೇಂದ್ರಗಡ ಬೆಟ್ಟ ಮೇಲೆ ನೆಲೆ ನಿಂತರು. ಅವರ ಕಾಲಾ ನಂತರ ಅಲ್ಲಿಯೇ ಅವರ ಗದ್ದುಗೆ ಸ್ಥಾಪಿಸಲಾಯಿತು. ಅಂದಿನಿಂದ ಇಲ್ಲಿಯವರೆಗೂ ಸರ್ವ ಸಮುದಾಯ ಜನರು ಉರುಸು ದಿನದಂದು ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.
ಉರುಸು ಆಚರಣೆ
ಐತಿಹಾಸಿಕ ಹಿನ್ನೆಲೆ ಹೊಂದಿರುವ ಬೆಟ್ಟದ ಮೇಲಿನ ಮೆಹಬೂಬ್ ಸುಬ್ಹಾನಿ ಅವರ ಭಾವೈಕ್ಯತಾ ಉರುಸು ಕಾರ್ಯಕ್ರಮ ಈಗಾಲೇ ಪ್ರಾರಂಭವಾಗಿದೆ. ಡಿ. 19ರಂದು ಭಾವೈಕ್ಯತಾ ಉರುಸು, ಡಿ. 20 ರಂದು ಜಿಯಾರತ್ ನಡೆಯಲಿದೆ. ಇಲ್ಲಿ ಯಾವುದೇ ಜಾತಿ ಮತ್ತು ಧರ್ಮಕ್ಕೆ ಸೀಮಿತವಾಗದೆ ಎಲ್ಲ ಜನಾಂಗ ಮತ್ತು ಧರ್ಮಿಯರು ಒಟ್ಟುಗೂಡಿ ಹತ್ತಾರು ದಶಕದಿಂದ ಉರುಸು ಆಚರಿಸುತ್ತಿದ್ದಾರೆ.
ಸರ್ವ ಜನಾಂಗದ ಶಾಂತಿಯ ತೋಟದಂತಿರುವ ಗಜೇಂದ್ರಗಡದಲ್ಲಿ ಎಲ್ಲ ಧರ್ಮಿಯರು ಭಾವ್ಯಕ್ಯತೆಯಿಂದ ಜಾತ್ರೆಗಳು, ಉರುಸುಗಳನ್ನು ಆಚರಿಸುತ್ತಾ ಬರಲಾಗಿದೆ. ಅಂತೆಯೇ ಗುಡ್ಡದ ಮೇಲ್ಭಾಗದಲ್ಲಿರುವ ಹಜರತ್ ಮೆಹಬೂಬ ಸುಬ್ಹಾನಿ ಅವರ ಉರುಸು ಸೌಹಾರ್ದತೆ ಪ್ರತೀಕವಾಗಿದೆ.
ಐ.ಎ. ರೇವಡಿ,ಕಸಾಪ ತಾಲೂಕಾಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gajendragad: ಮನೆಯಲ್ಲೇ ಮುಖ್ಯ ಶಿಕ್ಷಕಿಯ ಹ*ತ್ಯೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ
CM Siddaramaiah: ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮದು
Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.