![BR-Hills](https://www.udayavani.com/wp-content/uploads/2025/02/BR-Hills-415x249.jpg)
![BR-Hills](https://www.udayavani.com/wp-content/uploads/2025/02/BR-Hills-415x249.jpg)
Team Udayavani, Oct 23, 2021, 9:51 PM IST
ಗದಗ: ಸಿ.ಸಿ.ಪಾಟೀಲ ಅವರು ಜಿಪಂನಿಂದ ರಾಜಕೀಯ ಆರಂಭಿಸಿ, ಲೋಕೋಪಯೋಗಿ ಸಚಿವ ಸ್ಥಾನದ ವರೆಗೆ ಎತ್ತರಕ್ಕೆ ಬೆಳೆಯುವ ಜತೆಗೆ ನಾಡಿನ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಅವರು ರಾಜಕೀಯವಾಗಿ ನಡೆದು ಬಂದ ಹಾದಿ ಯುವ ನಾಯಕರಿಗೆ ಪ್ರೇರಣೆಯಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಮೋಹನ ಮಾಳಶೆಟ್ಟಿ ಹೇಳಿದರು.
ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಅವರ 63ನೇ ಜನ್ಮದಿನದ ಪ್ರಯುಕ್ತ ಬೆಟಗೇರಿಯ ವಾರ್ಡ್ ನಂ.9 ರಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಸಿ.ಸಿಪಾಟೀಲ ಅವರು ಜಿಪಂ ಸದಸ್ಯರಾಗಿ, ಶಾಸಕರಾಗಿ, ನಿಗಮದ ಅಧ್ಯಕ್ಷರಾಗಿ, 2008ರಲ್ಲಿ ಮುಖ್ಯಮಂತ್ರಿಯಾಗಿದ್ದ ಬಿ.ಎಸ್. ಯಡಿಯೂರಪ್ಪ ಅವರ ಸರ್ಕಾರದಲ್ಲಿ ಸಂಸದೀಯ ಕಾರ್ಯದರ್ಶಿಯಾಗಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾಗಿದ್ದರು. 2019ರಲ್ಲಿ ಮತ್ತೆ ರಾಜ್ಯದಲ್ಲಿ ಅ ಧಿಕಾರಕ್ಕೆ ಬಂದ ಬಿ.ಎಸ್ .ಯಡಿಯೂರಪ್ಪ ಅವರ ಸರಕಾರದಲ್ಲಿ ಅರಣ್ಯ, ಗಣಿ ಮತ್ತು ಭೂವಿಜ್ಞಾನ ಇಲಾಖೆ,
ಸಣ್ಣ ಕೈಗಾರಿಕೆ, ವಾರ್ತಾ ಮತ್ತು ಪ್ರಸಾರ ಖಾತೆ ಸಚಿವರಾಗಿ ಮಾದರಿಯಾಗುವಂತೆ ಕಾರ್ಯನಿರ್ವಹಿಸಿದ್ದಾರೆ.
ಹಾಲಿ ಲೋಕೋಪಯೋಗಿ ಸಚಿವರಾಗಿರುವ ಸಿ.ಸಿ.ಪಾಟೀಲರು ನಾಡಿನ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದು ಹೇಳಿದರು. ಶಿಬಿರದಲ್ಲಿ 256 ಜನರು ಕೋವಿಡ್ ಲಸಿಕೆ ಪಡೆದುಕೊಂಡರು. 300 ಅಧಿಕ ಜನರ ನೇತ್ರ ತಪಾಸಣೆ ನಡೆಸಲಾಯಿತು. 280 ಜನರ ಮಧುಮೇಹ(ಶುಗರ್), ಬಿಪಿ ತಪಾಸಣೆ ಹಾಗೂ ಅನೇಕ ರೀತಿಯ ಕಾಯಿಲೆಗಳಿಗೆ ತಪಾಸಣೆ ನಡೆಸಲಾಯಿತು.
ಕಾರ್ಯಕ್ರಮದಲ್ಲಿ ಬಿಜೆಪಿ ಪ್ರಮುಖರಾದ ಶಿವರಾಜಗೌಡ ಹಿರೇಮನಿ ಪಾಟೀಲ, ಅರವಿಂದ ಹುಲ್ಲೂರ, ಮಾಧವ ಗಣಾಚಾರಿ, ಡಾ|ಸುಭಾಷ ವಿ.ಶಿವನಗೌಡ್ರ, ಡಾ|ಹನುಮಂತ ಗೌಡ್ರ, ಡಾ|ಹಾದಿ, ಡಾ|ವಿಜಯಲಕ್ಷ್ಮಿ ಪಾಟೀಲ, ವಿಜಯ ಹಬೀಬ, ನಿತೀಶ್ ಸುಳೆಕೆರಿ, ಮಂಜು
ಮ್ಯಾಗೇರಿ, ಶಾರದಾ ಹಿರೇಮಠ, ಸ್ವಾತಿ ಅಕ್ಕಿ, ಮಂಜು ಕುಂಬಾರ, ಮಲ್ಲಪ್ಪ ಕರಿಬಿಷ್ಠಿ, ರಜತ್, ಮುರಳಿ ಹಬೀಬ, ಪ್ರಮೋದ ಮಾನೇದ, ರಾಮು ಬಾರಕೇರ, ಕುಮಾರ ಪೂಜಾರ, ಯಲ್ಲಪ್ಪ ಕೊಟಗಿ, ಮಂಜು ಬಳ್ಳಾರಿ, ರವಿ ಕೌಜಗೇರಿ, ರವಿ ರಜಪೂತ, ಗೌತಮ್ ರಜಪೂತ, ಕಿರಣ ಹಳ್ಳಿ, ಕಾರ್ತಿಕ ಕರಿಬಿಷ್ಠಿ, ಆಕಾಶ, ಶರಣಪ್ಪ ಮಾನೇದ, ಶೆಖಪ್ಪ ಕರಿಬಿಷ್ಠಿ, ರವಿ ಮಣಕವಾಡ, ನಿರ್ಮಲಾ ಮಡಿವಾಳರ ಪಾಲ್ಗೊಂಡಿದ್ದರು.
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
ಗದಗ-ಬೆಟಗೇರಿ ನಗರಸಭೆ ಮಾಜಿ ಅದ್ಯಕ್ಷೆ ಸೇರಿ ಇಬ್ಬರು ಸದಸ್ಯರ ಸದಸ್ಯತ್ವ ರದ್ದು
Gadag: ಕೌಟುಂಬಿಕ ಕಲಹದಿಂದ ನೊಂದು ಪೊಲೀಸ್ ಪೇದೆ ಆತ್ಮಹ*ತ್ಯೆ!
Approve:ಮೈಕ್ರೋ ಫೈನಾನ್ಸ್ ಕಿರುಕುಳ ವಿರುದ್ಧದ ಸುಗ್ರೀವಾಜ್ಞೆಗೆ ಕೊನೆಗೂ ರಾಜ್ಯಪಾಲರ ಅಂಕಿತ
Gadag: ಅಕ್ರಮ ಬಡ್ಡಿ ವ್ಯವಹಾರದ ವಿರುದ್ಧ ಕಾರ್ಯಾಚರಣೆ… ಅಪಾರ ಪ್ರಮಾಣದ ನಗ ನಗದು ವಶ
You seem to have an Ad Blocker on.
To continue reading, please turn it off or whitelist Udayavani.