ಗದಗ ರೈಲ್ವೆ ನಿಲ್ದಾಣಕ್ಕೆ ಆಧುನಿಕ ಸ್ಪರ್ಶ
Team Udayavani, Feb 1, 2021, 1:58 PM IST
ಗದಗ: ಈಗಾಗಲೇ ಗದಗ ಜಿಲ್ಲೆ ಬಿಂಕದಕಟ್ಟಿ ಮೃಗಾಲಯ, ಸಾಲು ಮರದ ತಿಮ್ಮಕ್ಕ ಸಸ್ಯೋದ್ಯಾನ ಹಾಗೂ ಭೀಷ್ಮ ಕೆರೆ ಆವರಣದಲ್ಲಿರುವ 111 ಅಡಿ ಮುಗಿಲೆತ್ತರದ ಬಸವೇಶ್ವರ ಮೂರ್ತಿಯಿಂದಾಗಿ ಪ್ರವಾಸಿಗರನ್ನು ಸೆಳೆಯುತ್ತಿದೆ. ಇನ್ನು ಈ ಸಾಲಿಗೆ ಇದೀಗ ಗದಗ ರೈಲ್ವೆ ನಿಲ್ದಾಣ ಹೊಸದಾಗಿ ಸೇರ್ಪಡೆಯಾಗಿದೆ. ಗದಗ ಜಂಕ್ಷನ್‌ನಲ್ಲಿ ಇತ್ತೀಚೆಗೆ ಹಲವು ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ.
ಅದರೊಂದಿಗೆ ರೈಲ್ವೆ ಇಲಾಖೆ ಕಾರ್ಯವೈಖರಿ ಸಾರುವ ಪ್ರಾತ್ಯಕ್ಷಿಕೆ, ಕಿರು ಉದ್ಯಾನ ಹಾಗೂ ವರ್ಣರಂಜಿತ ವನ್ಯಜೀವಿಗಳಚಿತ್ರಗಳು ನೋಡುಗರ ಕಣ್ಮನ ಸೆಳೆಯುತ್ತವೆ. ಗದಗ ರೈಲ್ವೆ ನಿಲ್ದಾಣದ ಮೊದಲನೇ ಪ್ಲಾಟ್ ಫಾರಂಗೆ ಹೊಂದಿಕೊಂಡಂತೆ ಸುಮಾರು ಮೂರು ಗುಂಟೆ ಜಾಗೆಯಲ್ಲಿ ಅತ್ಯಾಕರ್ಷಕವಾಗಿ ಕಿರು ಉದ್ಯಾನ ನಿರ್ಮಿಸಲಾಗಿದೆ.
ಉದ್ಯಾನದಲ್ಲಿ ಸ್ವರ ಮಾಂತ್ರಿಕ ಪಂ| ಭೀಮಸೇನ್ ಜೋಶಿ ಅವರ ಪುತ್ಥಳಿ ಪ್ರತಿಷ್ಠಾಪಿಸಲಾಗಿದೆ. ಅದರ ಹಿಂಭಾಗದ ಗೋಡೆಯಲ್ಲಿ ಪಂ| ಪುಟ್ಟರಾಜ ಕವಿ ಗವಾಯಿಗಳು ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರು, ಸಂಗೀತ ಪರಿಕರ ಚಿತ್ರಿಸಲಾಗಿದೆ. ಈ ಮೂಲಕ ಸಂಗೀತ ಲೋಕಕ್ಕೆ ಗದಗಿನ ಕೊಡುಗೆ ಸಾರುವ ಪ್ರಯತ್ನ ಮಾಡಲಾಗಿದೆ.
ಜೊತೆಗೆ ಪ್ರಯಾಣಿಕರು ಕೂರಲು ಹುಲ್ಲಿನ ಹಾಸಿಗೆ, ಹೂವಿನ ಗಿಡಗಳು, ರಾತ್ರಿ ವೇಳೆ ಇಲ್ಲಿನ ಪರಿಸರದ ಅಂದ ಹೆಚ್ಚಿಸಲು ಹೊಸ ಮಾದರಿಯ ವಿದ್ಯುತ್ ಬೆಳಕಿನ ವ್ಯವಸ್ಥೆ ಕಲ್ಪಿಸಲಾಗಿದೆ. ಜೊತೆಗೆ ರೈಲ್ವೆ ಹಳಿಗೆ ಬಳಸಿದ ಹಳೆಯ ಕಟ್ಟಿಗೆಗಳಿಂದ ನಿಲ್ಲಿಸಿ, ರೈಲ್ವೆ ಲಾಂಚನ ನಿರ್ಮಿಸಿರುವುದು ಸೆಲ್ಫಿ ಸ್ಪಾಟ್ ಆಗಿ ಪರಿವರ್ತಿಸಲಾಗಿದೆ.
ಇದನ್ನೂ ಓದಿ:ಚರ್ಚೆಗೆ ಕಾರಣವಾದ ಅರವಿಂದ ಪಾಟೀಲ ಮೌನ
ಪ್ರಮುಖ ಆಕರ್ಷಣೆ
ರೈಲ್ವೆ ಇಲಾಖೆ ಕಾರ್ಯವೈಖರಿ ಸಾರು ರೈಲ್ವೆ ಪ್ರಾತ್ಯಕ್ಷಿಕೆ ಗದಗ ನಿಲ್ದಾಣದ ಪ್ರಮುಖ ಆಕರ್ಷಣೆಯಾಗಿದೆ. ಸುಮಾರು 5×3 ಅಡಿ ವಿಸ್ತ್ರೀರ್ಣದಲ್ಲಿ ಅಚ್ಚುಕಟ್ಟಾದ ಪ್ರಾತ್ಯಕ್ಷಿಕೆ ನಿರ್ಮಿಸಲಾಗಿದೆ. ಒಂದು ನಿಲ್ದಾಣದಿಂದ ಮತ್ತೂಂದು ರೈಲ್ವೆ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಹಳಿಗಳು, ಪುಟ್ಟ ರೈಲು, ಸುಸ್ಸಜ್ಜಿತ ನಿಲ್ದಾಣ, ರೈಲ್ವೆ ಹಳಿಗಳನ್ನು ಸಂಧಿಸುವ ರಸ್ತೆ, ರೈಲ್ವೆ ಗೇಟ್, ಬೆಟ್ಟಗುಡ್ಡ, ಅರಣ್ಯದಲ್ಲಿ ಸ್ವತ್ಛಂದವಾಗಿ ವಿಹರಿಸುವ ವನ್ಯಜೀವಿಗಳ ಆಟಿಕೆಗಳಿಂದ ಆಕರ್ಷಣೀಯವಾಗಿ ಪ್ರಾತ್ಯಕ್ಷಿಕೆ ನಿರ್ಮಿಸಲಾಗಿದೆ. ರೈಲ್ವೆ ಇಲಾಖೆ ಕಾರ್ಯಕ್ಷಮತೆ ಹಾಗೂ ಪ್ರಯಾಣಿಕರ ಜವಾಬ್ದಾರಿಯನ್ನೂ ಮನವರಿಕೆ ಮಾಡಿಕೊಡುವುದು ಇದರ ಉದ್ದೇಶ ಎನ್ನುತ್ತಾರೆ ಇಲಾಖೆ ಅಧಿ ಕಾರಿಗಳು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gajendragad: ಮನೆಯಲ್ಲೇ ಮುಖ್ಯ ಶಿಕ್ಷಕಿಯ ಹ*ತ್ಯೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ
CM Siddaramaiah: ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮದು
Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.