![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
![Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!](https://www.udayavani.com/wp-content/uploads/2025/02/19-4-415x249.jpg)
Team Udayavani, Jul 13, 2019, 10:38 AM IST
ಸಾಂದರ್ಭಿಕ ಚಿತ್ರ.
ಗದಗ: ಪ್ರಸಕ್ತ ಸಾಲಿನ ಜನವರಿಯಿಂದ ಜು.12ರವರೆಗೆ ಜಿಲ್ಲೆಯಲ್ಲಿ ಸರಾಸರಿ 225 ಮಿಮೀ ವಾಡಿಕೆ ಮಳೆ ಪೈಕಿ 174 ಮಿಮೀ ಮಳೆ ಸುರಿದಿದೆ. ಇನ್ನುಳಿದಂತೆ 51 ಮಿಮೀ ನಷ್ಟು ಕಡಿಮೆ ಮಳೆಯಾಗಿದೆ. ಆದರೆ, ಜುಲೈನಲ್ಲಿ ಚೇತರಿಸಿಕೊಂಡಿರುವ ಮುಂಗಾರು ಜು.12ರವರೆಗೆ ವಾಡಿಕೆ ಸರಾಸರಿ ಮಳೆ 26 ಮಿಮೀ ಪೈಕಿ 39 ಮಿಮೀ ಮಳೆಯಾಗಿದೆ.
ಗದಗ ತಾಲೂಕಿನಲ್ಲಿ ಜ.1ರಿಂದ ಜು.12ರವರೆಗೆ ಸರಾಸರಿ 236 ಮಿಮೀ ವಾಡಿಕೆ ಮಳೆ ಪೈಕಿ 178 ಮಿಮೀ ಅಂದರೆ 58 ಮಿಮೀ ಮಳೆ ಕಡಿಮೆಯಾಗಿದೆ. ಆದರೆ ಜುಲೈ ತಿಂಗಳಲ್ಲಿ ವಾಡಿಕೆ ಸರಾಸರಿ ಮಳೆ 27 ಮಿಮೀ ಪೈಕಿ 37 ಮಿಮೀ ಮಳೆ ಸುರಿದಿದೆ.
ಗದಗ ಹೋಬಳಿಯಲ್ಲಿ ಜ.1 ರಿಂದ ಜು. 12ರವರೆಗೆ ಸರಾಸರಿ 247ಮಿಮೀ ವಾಡಿಕೆ ಮಳೆ ಪೈಕಿ 193 ಮಿಮೀ ಅಂದರೆ 54 ಮಿಮೀ ಮಳೆ ಕಡಿಮೆಯಾಗಿದೆ. ಜುಲೈ 12ರವರೆಗೆ ವಾಡಿಕೆ ಸರಾಸರಿ ಮಳೆ 29 ಮಿಮೀ ಪೈಕಿ 51ಮಿಮೀ ಮಳೆ ಆಗಿದೆ.
ಬೇಟಗೇರಿ ಹೋಬಳಿಯಲ್ಲಿ ಜ.1ರಿಂದ ಜುಲೈ 12ರವರೆಗೆ ಸರಾಸರಿ 228 ಮಿಮೀ ವಾಡಿಕೆ ಮಳೆ ಪೈಕಿ 164 ಮಿಮೀ ಅಂದರೆ 64 ಮಿಮೀ ಮಳೆ ಕಡಿಮೆಯಾಗಿದೆ. ಜುಲೈ ತಿಂಗಳಲ್ಲಿ ವಾಡಿಕೆ ಸರಾಸರಿಯಾಗಿ 24 ಮಿಮೀ ಮಳೆ ಆಗಿದೆ.
ಮುಂಡರಗಿ ತಾಲೂಕಿನಲ್ಲಿ ಜ.1ರಿಂದ ಜುಲೈ 12ರವರೆಗೆ ಸರಾಸರಿ 196 ಮಿಮೀ ವಾಡಿಕೆ ಮಳೆ ಪೈಕಿ 152 ಮಿಮೀ ಸುರಿದಿದ್ದು, 44 ಮಿಮೀ ನಷ್ಟು ಮಳೆ ಕಡಿಮೆಯಾಗಿದೆ. ಅದರಂತೆ ಜುಲೈನಲ್ಲಿ ಸರಾಸರಿ ಮಳೆ 23 ಮಿಮೀ ಪೈಕಿ 35 ಮಿಮೀ ಮಳೆ ಆಗಿದೆ.
ಮುಂಡರಗಿ ಹೋಬಳಿಯಲ್ಲಿ ಜ.1ರಿಂದ ಜುಲೈ 12ರವರೆಗೆ ಸರಾಸರಿ 202 ಮಿಮೀ ವಾಡಿಕೆ ಮಳೆ ಪೈಕಿ 123 ಮಿಮೀ ಅಂದರೆ 79 ಮಿಮೀ ಮಳೆ ಕಡಿಮೆಯಾಗಿದೆ. ಆದರೆ ಜುಲೈನಲ್ಲಿ 12ರವರೆಗೆ ವಾಡಿಕೆ ಸರಾಸರಿ ಮಳೆ 25 ಮಿಮೀ ಪೈಕಿ 36 ಮಿಮೀ ಮಳೆ ಆಗಿದೆ.
ಡಂಬಳ ಹೋಬಳಿಯಲ್ಲಿ ಜನವರಿ 1ರಿಂದ ಜುಲೈ 12 ರವರೆಗೆ ಸರಾಸರಿ 192 ಮಿಮೀ ವಾಡಿಕೆ ಮಳೆ ಪೈಕಿ 168 ಮಿಮೀ ಅಂದರೆ 24 ಮಿಮೀ ಮಳೆ ಕಡಿಮೆಯಾಗಿದೆ. ಆದರೆ ಜುಲೈನಲ್ಲಿ 2ರವರೆಗೆ ವಾಡಿಕೆ ಸರಾಸರಿ ಮಳೆ 21 ಮಿಮೀ ಪೈಕಿ 35 ಮಿಮೀ ಮಳೆ ಆಗಿದೆ.
ನರಗುಂದ ತಾಲೂಕಿನಲ್ಲಿ ಜನವರಿ 1 ರಿಂದ ಜುಲೈ 12 ರವರೆಗೆ ಸರಾಸರಿ 233 ಮಿಮೀ ವಾಡಿಕೆ ಮಳೆ ಪೈಕಿ 148 ಮಿಮೀ ಅಂದರೆ 85 ಮಿಮೀ ಮಳೆ ಕಡಿಮೆಯಾಗಿದೆ. ಜುಲೈ ತಿಂಗಳಲ್ಲಿ ವಾಡಿಕೆ ಸರಾಸರಿ ಮಳೆ 33 ಮಿಮೀ ಪೈಕಿ 23 ಮಿಮೀ ಮಾತ್ರ ಮಳೆ ಆಗಿದೆ.
ನರಗುಂದ ಹೋಬಳಿಯಲ್ಲಿ ಜನವರಿ 1 ರಿಂದ ಜುಲೈ 12ರವರೆಗೆ ಸರಾಸರಿ 208 ಮಿಮೀ ವಾಡಿಕೆ ಮಳೆ ಪೈಕಿ 155 ಮಿಮೀ ಅಂದರೆ 53 ಮಿಮೀ ಮಳೆ ಕಡಿಮೆಯಾಗಿದೆ. ಜುಲೈನಲ್ಲಿ 12ರವರೆಗೆ ವಾಡಿಕೆ ಸರಾಸರಿಯಾಗಿ 25 ಮಿಮೀ ಮಳೆ ಆಗಿದೆ.
ಕೊಣ್ಣೂರು ಹೋಬಳಿಯಲ್ಲಿ ಜ.1ರಿಂದ ಜು.12ರವರೆಗೆ ಸರಾಸರಿ 269 ಮಿಮೀ ವಾಡಿಕೆ ಮಳೆ ಪೈಕಿ 139 ಮಿಮೀ ಪೈಕಿ 130 ಮಿಮೀ ಮಳೆ ಕಡಿಮೆಯಾಗಿದೆ. ಜುಲೈ ಮಾಹೆಯಲ್ಲಿ ಸರಾಸರಿ ಮಳೆ 45 ಮಿ.ಮೀ ಪೈಕಿ 18 ಮಿಮೀ ಮಾತ್ರ ಮಳೆ ಆಗಿದೆ.
ರೋಣ ತಾಲೂಕಿನಲ್ಲಿ ಜ.1ರಿಂದ ಜುಲೈ 12ರವರೆಗೆ ಸರಾಸರಿ 209 ಮಿಮೀ ವಾಡಿಕೆ ಮಳೆ ಪೈಕಿ 171 ಮಿಮೀ ಅಂದರೆ 38 ಮಿಮೀ ಮಳೆ ಕಡಿಮೆಯಾಗಿದೆ. ಆದರೆ ಜುಲೈನಲ್ಲಿ 12ರವರೆಗೆ ಸರಾಸರಿ ಮಳೆ 20 ಮಿಮೀ ಪೈಕಿ 31 ಮಿಮೀ ಮಳೆ ಆಗಿದೆ.
ರೋಣ ಹೋಬಳಿಯಲ್ಲಿ ಜನವರಿ 1ರಿಂದ ಜುಲೈ 12ರವರೆಗೆ ಸರಾಸರಿ 207 ಮಿಮೀ ವಾಡಿಕೆ ಮಳೆ ಪೈಕಿ 181 ಮಿಮೀ ಅಂದರೆ 26 ಮಿಮೀ ಮಳೆ ಕಡಿಮೆಯಾಗಿದೆ. ಆದರೆ ಜುಲೈನಲ್ಲಿ 12ರವರೆಗೆ ವಾಡಿಕೆ ಸರಾಸರಿ ಮಳೆ 19 ಮಿಮೀ ಪೈಕಿ 33 ಮಿಮೀ ಮಳೆ ಆಗಿದೆ.
ಹೊಳೆಆಲೂರು ಹೋಬಳಿಯಲ್ಲಿ ಜನವರಿ 1 ರಿಂದ ಜುಲೈ 12 ರವರೆಗೆ ಸರಾಸರಿ 212 ಮಿಮೀ ವಾಡಿಕೆ ಮಳೆ ಪೈಕಿ 158 ಮಿಮೀ ಅಂದರೆ 54 ಮಿಮೀ ಮಳೆ ಕಡಿಮೆಯಾಗಿದೆ. ಆದರೆ ಜುಲೈನಲ್ಲಿ 12ರವರೆಗೆ ವಾಡಿಕೆ ಸರಾಸರಿ ಮಳೆ 22 ಮಿಮೀ ಪೈಕಿ 36 ಮಿಮೀ ಮಳೆ ಆಗಿದೆ.
ನರೇಗಲ್ಲ ಹೋಬಳಿಯಲ್ಲಿ ಜ.1ರಿಂದ ಜು.12ರವರೆಗೆ ಸರಾಸರಿ 212 ಮಿಮೀ ವಾಡಿಕೆ ಮಳೆ ಪೈಕಿ 165 ಮಿಮೀ ಅಂದರೆ 47ಮಿಮೀ ಮಳೆ ಕಡಿಮೆಯಾಗಿದೆ. ಆದರೆ ಜುಲೈನಲ್ಲಿ 12ರವರೆಗೆ ವಾಡಿಕೆ ಸರಾಸರಿ ಮಳೆ 18 ಮಿಮೀ ಪೈಕಿ 20 ಮಿಮೀ ಮಳೆ ಆಗಿದೆ.
ಶಿರಹಟ್ಟಿ ತಾಲೂಕಿನಲ್ಲಿ ಜ.1ರಿಂದ ಜು.12ರವರೆಗೆ ಸರಾಸರಿ 254 ಮಿಮೀ ವಾಡಿಕೆ ಮಳೆ ಪೈಕಿ 207 ಮಿಮೀ ಅಂದರೆ 47ಮಿಮೀ ಮಳೆ ಕಡಿಮೆಯಾಗಿದೆ. ಆದರೆ ಜು.12ರವರೆಗೆ ವಾಡಿಕೆ ಸರಾಸರಿ ಮಳೆ 36 ಮಿಮೀ ಪೈಕಿ 63 ಮಿಮೀ ಮಳೆ ಆಗಿದೆ.
ಶಿರಹಟ್ಟಿ ಹೋಬಳಿಯಲ್ಲಿ ಜ.1ರಿಂದ ಜು.12ರವರೆಗೆ ಸರಾಸರಿ 241 ಮಿ.ಮೀ ವಾಡಿಕೆ ಮಳೆ ಪೈಕಿ 182 ಮಿಮೀ ಅಂದರೆ 59 ಮಿಮೀ ಮಳೆ ಕಡಿಮೆಯಾಗಿದೆ. ಆದರೆ ಜುಲೈನಲ್ಲಿ 12ರವರೆಗೆ ವಾಡಿಕೆ ಸರಾಸರಿ ಮಳೆ 31 ಮಿಮೀ ಪೈಕಿ 58 ಮಿಮೀ ಮಳೆ ಆಗಿದೆ.
ಲಕ್ಷ್ಮೇಶ್ವರ ಹೋಬಳಿಯಲ್ಲಿ ಜ.1ರಿಂದ ಜುಲೈ 12ರವರೆಗೆ ಸರಾಸರಿ 267 ಮಿಮೀ ವಾಡಿಕೆ ಮಳೆ ಪೈಕಿ 233 ಮಿಮೀ ಅಂದರೆ 34ಮಿಮೀ ಮಳೆ ಕಡಿಮೆಯಾಗಿದೆ. ಆದರೆ ಜುಲೈನಲ್ಲಿ 12ರವರೆಗೆ ವಾಡಿಕೆ ಸರಾಸರಿ ಮಳೆ 40 ಮಿಮೀ ಪೈಕಿ 67 ಮಿಮೀ ಮಳೆ ಆಗಿದೆ.
ಸತತ ಬರಗಾಲದಿಂದ ಕಂಗೆಟ್ಟಿರುವ ಜಿಲ್ಲೆಯ ರೈತಾಪಿ ಜನರಿಗೆ ಈ ಬಾರಿ ಮುಂಗಾರು ಹೊಸ ಭರವಸೆ ಮೂಡಿಸಿದೆ. ಮುಂಗಾರು ಆರಂಭದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಕೈಕೊಟ್ಟಿದ್ದರಿಂದ ಶೇ.30 ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಹೆಸರು ಬಿತ್ತನೆಯಾಗಿದೆ. ಇನ್ನು ಜುಲೈ ಆರಂಭದಿಂದ ಮುಂಗಾರು ಬಿರುಸುಗೊಳ್ಳುತ್ತಿರುವುದರಿಂದ ಈರುಳ್ಳಿ, ಶೇಂಗಾ, ಹತ್ತಿ ಸೇರಿದಂತೆ ಇನ್ನಿತರೆ ವಾಣಿಜ್ಯ ಬೆಳೆಗಳು ಕೈಹಿಡಿಯುವ ಸಾಧ್ಯತೆಗಳಿವೆ ಎಂದು ರೈತರ ಅಭಿಪ್ರಾಯವಾಗಿದೆ.
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
ಗದಗ-ಬೆಟಗೇರಿ ನಗರಸಭೆ ಮಾಜಿ ಅದ್ಯಕ್ಷೆ ಸೇರಿ ಇಬ್ಬರು ಸದಸ್ಯರ ಸದಸ್ಯತ್ವ ರದ್ದು
Gadag: ಕೌಟುಂಬಿಕ ಕಲಹದಿಂದ ನೊಂದು ಪೊಲೀಸ್ ಪೇದೆ ಆತ್ಮಹ*ತ್ಯೆ!
Approve:ಮೈಕ್ರೋ ಫೈನಾನ್ಸ್ ಕಿರುಕುಳ ವಿರುದ್ಧದ ಸುಗ್ರೀವಾಜ್ಞೆಗೆ ಕೊನೆಗೂ ರಾಜ್ಯಪಾಲರ ಅಂಕಿತ
Gadag: ಅಕ್ರಮ ಬಡ್ಡಿ ವ್ಯವಹಾರದ ವಿರುದ್ಧ ಕಾರ್ಯಾಚರಣೆ… ಅಪಾರ ಪ್ರಮಾಣದ ನಗ ನಗದು ವಶ
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
You seem to have an Ad Blocker on.
To continue reading, please turn it off or whitelist Udayavani.