ಸಾಹಿತಿಯಿಂದ 600ಕ್ಕೂ ಪುಸ್ತಕ ದೇಣಿಗೆ
Team Udayavani, Apr 28, 2019, 2:28 PM IST
ನರಗುಂದ: ಭೈರನಹಟ್ಟಿ ವಿರಕ್ತಮಠದಲ್ಲಿ ನಡೆದ ವಿಶ್ವಪುಸ್ತಕ ದಿನಾಚರಣೆಯಲ್ಲಿ ಸಾಹಿತಿ ಎಂ.ಕೆ. ದಿಬ್ಬದ ಪರವಾಗಿ ಪುಸ್ತಕಗಳನ್ನು ದೇಣಿಗೆ ನೀಡಲಾಯಿತು.
ನರಗುಂದ: ಪುಸ್ತಕಗಳಿಗೆ ಜಗತ್ತನ್ನಾಳುವ ಶಕ್ತಿಯಿದೆ. ಪುಸ್ತಕಗಳು ಮನುಷ್ಯನ ಬಾಳಿನ ದಾರಿದೀಪವಾಗಿದೆ ಎಂದು ಉಪನ್ಯಾಸಕ ಪ್ರೊ| ಎಂ.ಎಸ್. ಯಾವಗಲ್ ಖೇದ ವ್ಯಕ್ತಪಡಿಸಿದರು.
ಶನಿವಾರ ತಾಲೂಕಿನ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪುಸ್ತಕ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಒಬ್ಬ ವ್ಯಕ್ತಿಯ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಪುಸ್ತಕಗಳ ಪಾತ್ರ ಮಹತ್ವದ್ದಿದೆ. ಆದರೆ ಇವತ್ತಿನ ವಿದ್ಯಾರ್ಥಿಗಳು ಪುಸ್ತಕಗಳಿಂದ ವಿಮುಕ್ತರಾಗಿ ಓದುವ ಹವ್ಯಾಸವನ್ನು ಬಿಟ್ಟು ವಾಟ್ಸ್ ಆ್ಯಪ್,ಫೇಸ್‌ಬುಕ್‌ನಲ್ಲಿ ಕಾಲಹರಣ ಮಾಡುತ್ತಿರುವುದು ಕಳವಳಕಾರಿ ಸಂಗತಿ ಎಂದರು. ನಾಡಿನ ಭಾಷೆ ಹಾಗೂ ಇತಿಹಾಸ ಜೀವಂತವಾಗಿರಬೇಕಾದರೆ ಅದಕ್ಕೆ ಮುಖ್ಯಕಾರಣ ಗ್ರಂಥಗಳು.
ಕತ್ತಲಿನಿಂದ ಬೆಳಕಿನೆಡೆಗೆ ಕೊಂಡ್ಯೊಯ್ಯುವ ಬಹುದೊಡ್ಡ ಶಕ್ತಿ ಪುಸ್ತಕಕ್ಕಿದೆ. ಹೀಗಾಗಿ ಶಿಕ್ಷಕರು, ಪಾಲಕರು ಮಕ್ಕಳಿಗೆ ಪುಸ್ತಕದ ಮಹತ ತಿಳಿಸಿ ಅವರಿಗೆ ವಾಚನಾಭಿರುಚಿ ಬೆಳೆಸುವ ಮೂಲಕ ಮಕ್ಕಳನ್ನು ಆದರ್ಶ ಪ್ರಜೆಗಳನ್ನಾಗಿ ಮಾಡಬೇಕಾಗಿದೆ ಎಂದರು.
ಸಾನ್ನಿಧ್ಯ ವಹಿಸಿದ್ದ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಸ್ವಾಮೀಜಿ ಮಾತನಾಡಿ, ಮಾನವನ ವ್ಯಕ್ತಿತ್ವ ವಿಕಸನಕ್ಕೆ ಪುಷ್ಠಿಕೊಡುವ ಕಾರ್ಯವನ್ನು ಮಾಡುವುದು ಪುಸ್ತಕ. ಇಡೀ ಪ್ರಪಂಚ ನಮ್ಮನ್ನು ಬಿಟ್ಟು ಹೋದಾಗ ಪುಸ್ತಕ ನಮ್ಮ ಜೊತೆಗಿದ್ದರೆ ಪ್ರಪಂಚವೇ ನಮ್ಮ ಜೊತೆಗಿದ್ದಂತೆ ಎಂದರು.
ಜ್ಯೋತಿ ಹೊರಗಿನ ಕತ್ತಲೆಯನ್ನು ಕಳೆದರೆ ಜ್ಞಾನ ಅಜ್ಞಾನವನ್ನು ಹೊಡೆದೋಡಿಸುತ್ತದೆ. ಗತಿಸಿ ಹೋದ ಇತಿಹಾಸವನ್ನು, ವಿಷಯವನ್ನು ತಿಳಿಸುವಂತ ಕಾರ್ಯವನ್ನು ಪುಸ್ತಕ ಮಾಡುತ್ತದೆ. ಪುಸ್ತಕಗಳಿಲ್ಲದ ಮನೆ ಆತ್ಮವಿಲ್ಲದ ದೇಹವಿದ್ದಂತೆ. ನಮ್ಮೊಳಗಿನ ಮೂಢನಂಭಿಕೆ, ಅಂಧಶ್ರದ್ಧೆಗಳಿಂದ ಹೊರಬರಲು ಒಳ್ಳೆಯ ಪುಸ್ತಕ ಓದುವ ಹವ್ಯಾಸವನ್ನು ಬೆಳೆಸಿಕೊಳ್ಳುವುದು ಅಗತ್ಯ ಎಂದರು. ಡಾ| ಎಂ.ಪಿ. ಕುಲಕರ್ಣಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಶಿಕ್ಷಕರಾದ ಎಸ್.ಜಿ. ಮಣ್ಣೂರಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಲೂಕು ಗ್ರಂಥಪಾಲಕ ಮನೋಜ ಗಡ್ಡಿ, ಶಿಕ್ಷಕ ಎಂ.ಡಿ. ಮಾದರ, ಬಾಪುಗೌಡ ತಿಮ್ಮನಗೌಡ್ರ ಇದ್ದರು. ಮಹಾಂತೇಶ ಹಿರೇಮಠ ನಿರ್ವಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.