ಬಹುತೇಕ ಶಾಲೆಗಳಲ್ಲಿ ಇಲ್ಲ ಪಿಟಿ ಮಾಸ್ತರ್
•ದೈಹಿಕ ಶಿಕ್ಷಕರು ಹುದ್ದೆಗಳು ಖಾಲಿಖಾಲಿ•ಕಾಡುತ್ತಿದೆ ಆಟದ ಮೈದಾನಗಳ ಕೊರತೆ
Team Udayavani, Jul 24, 2019, 11:35 AM IST
ರೋಣ: ಆಟದಲ್ಲಿ ತೊಡಗಿದ್ದ ಮುಶಿಗೇರಿ ಗ್ರಾಮದ ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳು.
ರೋಣ: ಗಜೇಂದ್ರಗಡ ಮತ್ತು ರೋಣ ತಾಲೂಕು ವ್ಯಾಪ್ತಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರಕಾರಿ ಪ್ರೌಢಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರು ಮತ್ತು ಮೈದಾನದ ಅಭಾವದಿಂದ ಮಕ್ಕಳು ಕ್ರೀಡಾ ಚಟುವಟಿಕೆಗಳಿಂದ ವಂಚಿತರಾಗುವಂತಾಗಿದೆ.
ಈ ಎರಡೂ ತಾಲೂಕುಗಳಲ್ಲಿ 158 ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗಳು, 35 ಸರಕಾರಿ ಪ್ರೌಢಶಾಲೆಗಳು ಕಾರ್ಯ ನಿರ್ವಹಿಸುತ್ತಿದ್ದು, ಅಗತ್ಯ ಸೌಲಭ್ಯಗಳು ಸಿಗದೇ ವಿದ್ಯಾರ್ಥಿಗಳ ಮೇಲೆ ವ್ಯತಿರಿಕ್ತ ಪರಿಣಾಮ ಬಿದ್ದಿದೆ. ವಲಯ ಮಟ್ಟದಿಂದ ಹಿಡಿದು ರಾಜ್ಯಮಟ್ಟದವರೆಗಿನ ಕ್ರೀಡಾಕೂಟಗಳಲ್ಲಿ ಭಾಗವಹಿಸಲು ತೊಡಕು ಉಂಟಾಗಿದೆ. ಕ್ರೀಡಾಪಟುಗಳು ಕ್ರೀಡೆಯಿಂದ ದೂರ ಉಳಿಯುವಂತಾಗಿದೆ.
ಕ್ರೀಡಾಪಟುಗಳಿಗೆ ತೊಂದರೆ: ಶಾಲೆಗಳಲ್ಲಿ ದೈಹಿಕ ಶಿಕ್ಷಣ ಪಠ್ಯಕ್ರಮ ಇದ್ದು, ಮಕ್ಕಳ ಭವಿಷ್ಯ ರೂಪಿಸಲು ಕತ್ತರಿ ಬಿದ್ದಿದೆ. ಶಾಲೆಯಲ್ಲಿ ಮಕ್ಕಳಿಗೆ ಖೋಖೋ, ಕಬ್ಬಡ್ಡಿ, ವಾಲಿಬಾಲ್, ಓಟ, ಎತ್ತರ ಜಿಗಿತ, ಉದ್ದ ಜಿಗಿತ, ವಿದ್ಯಾರ್ಥಿನಿಯರಿಗೆ ಥ್ರೋಬಾಲ್, ಚೆಸ್, ಯೋಗ, ಬ್ಯಾಡ್ಮಿಟನ್, ಶೆಟ್ಲಕಾಕ್ ಇನ್ನಿತರ ಕ್ರೀಡಾಪಟುಗಳಿಗೆ ಸರಿಯಾಗಿ (ಕೋಚ್)ಮಾರ್ಗದರ್ಶನ ದೊರೆಯದಂತಾಗಿದೆ.
ದೈಹಿಕ ಶಿಕ್ಷಕರ ಹುದ್ದೆಗಳು ಖಾಲಿ: ತಾಲೂಕಿನ ಪ್ರೈಮರಿ ಹಾಗೂ ಹೈಸ್ಕೂಲ್ನಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳು ಅಂದಾಜು ಆರೇಳು ವರ್ಷಗಳಿಂದ ಖಾಲಿಯಿದ್ದು, ಸರಕಾರ ಭರ್ತಿಗೊಳಿಸುವ ಗೋಜಿಗೆ ಹೋದಂತಿಲ್ಲ. ತಾಲೂಕಿನಲ್ಲಿ ಜಿ.ಎಚ್.ಎಸ್.ಶಾಂತಗೇರಿ, ಜಿ.ಎಚ್.ಎಸ್.ರೋಣ, ಜಿ.ಎಚ್.ಎಸ್.ಮುಗಳಿ, ಜಿ.ಎಚ್.ಎಸ್.ಮುಶಿಗೇರಿ ಸೇರಿದಂತೆ ನಾಲ್ಕು ಸರಕಾರಿ ಪ್ರೌಢಶಾಲೆಗಳಲ್ಲಿ ದೈಹಿಕ ಶಿಕ್ಷಕರು ಇಲ್ಲದಂತಾಗಿದೆ. ಹಿಳೆಮಣ್ಣೂರ, ರಾಜೂರ, ಮುಗಳಿ, ಬಮ್ಮಸಾಗರ, ನರೇಗಲ್, ಶಾಂತಗೇರಿ, ಮುದೇನಗುಡಿ, ಕಳಕಾಪೂರ, ಜಿಗಳೂರ ಸೇರಿದಂತೆ ಇನ್ನು ಅನೇಕ ಸರಕಾರಿ ಶಾಲೆಗಳಲ್ಲಿ ದೈಹಿಕ ಶಿಕ್ಷಕರ ಹುದ್ದೆಗಳು ಮತ್ತು ತಾಲೂಕು ದೈಹಿಕ ಶಿಕ್ಷಣಾಧಿಕಾರಿಗಳ ಹುದ್ದೆ ಖಾಲಿ ಇರುವುದರಿಂದ ಭರ್ತಿಗೊಳಿಸಲು ಸರಕಾರ ಮೀನಾಮೇಷ ಎಣಿಸುತ್ತಿದೆ.
ಆಟದ ಮೈದಾನಗಳೇ ಇಲ್ಲ: ತಾಲೂಕಿನ ಮಾಡಲಗೇರಿ, ಇಟಗಿ, ಕಳಕಾಪೂರ,ಹೊನ್ನಿಗನೂರ, ಬಳಗೋಡ, ಕುರಮನಾಳ,ರುದ್ರಾಪೂರ ಸೇರಿದಂತೆ ಇನ್ನು ಅನೇಕ ಸರಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಆಟದ ಮೈದಾನ ಅಭಾವ ಇದೆ. ಆಟೋಟಕ್ಕೆ ಅಡಚಣೆ ಎದುರಿಸುವ ಶಾಲೆಗಳಿಗೆ ಮೈದಾನ ವ್ಯವಸ್ಥೆ ಕಲ್ಪಿಸಬೇಕಾಗಿದೆ.
ತಾಲೂಕಿನ 15ಕ್ಕೂ ಹೆಚ್ಚು ಸರಕಾರಿ ಶಾಲೆಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರ ಕೊರತೆ ಇದೆ. ಕೆಲವು ಶಾಲೆಗಳಲ್ಲಿ ಆಟದ ಮೈದಾನ ಇಲ್ಲ. ವಿದ್ಯಾರ್ಥಿಗಳಿಗೆ ಕ್ರೀಡಾ ಕೋಚ್ ಸಿಗದ ಪರಿಣಾಮ ತೊಂದರೆ ಉಂಟಾಗಿದೆ. ಸರಕಾರ ದೈಹಿಕ ಶಿಕ್ಷಣ ಶಿಕ್ಷಕರ ನೇಮಕಗೊಳಿಸಬೇಕು.• ನಂಜುಂಡಯ್ಯ ಎನ್., ಕ್ಷೇತ್ರ ಶಿಕ್ಷಣಾಧಿಕಾರಿ.
ನಮಗೆ ದೈಹಿಕ ಶಿಕ್ಷಕರು ಇಲ್ಲ. ನಮ್ಮ ಶಾಲೆಯಲ್ಲಿ ಇರುವ ಗುರುಗಳೇ ಹೇಳಿಕೊಡುತ್ತಿದ್ದಾರೆ.ಆದರೆ ಮೇಲಿನ ಸಾಹೇಬರು ನಮಗೆ ಆಟದ ಮೈದಾನ ಹಾಗೂ ದೈಹಿಕ ಶಿಕ್ಷಕರನ್ನು ನೇಮಿಸಿದರೆ ನಮಗೆ ಇನ್ನೂ ಹೆಚ್ಚು ಅನಕೂಲವಾಗುತ್ತದೆ.•ಸ್ವರಸ್ವತಿ ಗಡ್ಡಿ, ಮಾಡಲಗೇರಿ ವಿದ್ಯಾರ್ಥಿನಿ
•ಯಚ್ಚರಗೌಡ ವೆಂ ಗೋವಿಂದಗೌಡ್ರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gajendragad: ಮನೆಯಲ್ಲೇ ಮುಖ್ಯ ಶಿಕ್ಷಕಿಯ ಹ*ತ್ಯೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ
CM Siddaramaiah: ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮದು
Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Davanagere: ವೃದ್ಧೆ ಮೇಲೆ ಅತ್ಯಾ*ಚಾರ; ಯುವಕನಿಗೆ 10 ವರ್ಷ ಕಠಿಣ ಶಿಕ್ಷೆ
Vasundhara Raje ಬೆಂಗಾವಲು ವಾಹನ ಪಲ್ಟಿ; ನಾಲ್ವರು ಪೊಲೀಸರಿಗೆ ಗಾಯ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.