ತೋಂಟದ ಶ್ರೀ ಆದರ್ಶ ಅನುಷ್ಠಾನಕ್ಕೆ ತರುವೆ
Team Udayavani, Oct 23, 2018, 6:25 AM IST
ಮುಂಡರಗಿ: ಜಗದ್ಗುರು ಡಾ. ತೋಂಟದ ಸಿದ್ಧಲಿಂಗ ಸ್ವಾಮಿಗಳ ನಡೆ-ನುಡಿ, ಆದರ್ಶಗಳನ್ನು ಅನುಷ್ಠಾನಕ್ಕೆ ತರುವ ಕಾರ್ಯ ಮಾಡುವುದಾಗಿ ನೂತನ ಪೀಠಾಧಿಪತಿ ಡಾ.ಸಿದ್ಧರಾಮ ಸ್ವಾಮಿಗಳು ಹೇಳಿದರು.
ತಾಲೂಕಿನ ಡಂಬಳ ಗ್ರಾಮದ ತೋಂಟದಾರ್ಯ ಮಠದ ಶ್ರೀಮದರ್ಧನಾರೀಶ್ವರರ ಕತೃì ಗದ್ದುಗೆಗೆ ಪೂಜೆ ಸಲ್ಲಿಸಿದರು. ನಂತರ ನಡೆದ ಭಕ್ತರ ಸಭೆಯಲ್ಲಿ ಮಾತನಾಡಿದ ಅವರು, ಡಾ. ತೋಂಟದ ಸಿದ್ಧಲಿಂಗ ಸ್ವಾಮಿಗಳವರ ನಿಕಟವರ್ತಿಯಾಗಿ, ಅವರ ಪ್ರೀತಿಗೆ ಪಾತ್ರನಾಗಿ, ಅವರಿಂದ ಸಲಹೆ-ಸೂಚನೆ ಪಡೆದು ನಾಗನೂರು ರುದ್ರಾಕ್ಷಿಮಠವನ್ನು ನಡೆಸಿಕೊಂಡು ಬರುತ್ತಿದ್ದೇನೆ. ಯಾವುದೇ ಗೊಂದಲ ಏರ್ಪಡಬಾರದೆಂದು ಶ್ರೀಗಳ ಇಚ್ಚೆಯಂತೆ ಎಡೆಯೂರು-ಡಂಬಳ-ಗದಗ ಮಠದ ಪೀಠಾ ಧಿಪತಿಯಾಗಲು ಒಪ್ಪಿಗೆ ಸೂಚಿಸಿದ್ದೇನೆ. ಡಂಬಳ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಮೇಲೆ ಶ್ರೀಗಳು ಇಟ್ಟಂಥ ಪ್ರೀತಿ, ವಿಶ್ವಾಸಕ್ಕೆ ಮಹತ್ವ ಕೊಟ್ಟು ಅವರಂತೆಯೇ ಮಠ ಮುನ್ನಡೆಸಲು ಪ್ರಯತ್ನಿಸುವುದಾಗಿ ಹೇಳಿದರು.
ಮಾಜಿ ಸಚಿವ ಎಸ್.ಎಸ್. ಪಾಟೀಲ ಮಾತನಾಡಿ, ಡಾ.ಸಿದ್ಧಲಿಂಗ ಶ್ರೀಗಳು ಧಾರ್ಮಿಕ ನೆಲೆಗಟ್ಟಿಗೆ ಮಹತ್ವ ಕೊಡದೆ ಸಾಮಾಜಿಕ ಬದಲಾವಣೆಗೆ ಮಹತ್ವ ಕೊಟ್ಟರು. ಕೋಮು ಸೌಹಾರ್ದತೆಗೆ ಮುಂದಾದರು. ಜತೆಗೆ ತಮ್ಮ ನೇರ ನಡೆ, ನುಡಿಯಿಂದ ರಾಜಕೀಯ ವ್ಯಕ್ತಿಗಳನ್ನು ತಿದ್ದುವ ಕೆಲಸ ಮಾಡಿದರು ಎಂದರು.
ತೋಂಟದಾರ್ಯ ಮಠದ ಆಡಳಿತಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ ಮಾತನಾಡಿ, ಶ್ರೀಗಳು ಸಮಾಜದಲ್ಲಿ ತಲೆ ತಲಾಂತರದಿಂದ ಬಂದ ಅನಿಷ್ಟ ನಿಲುವುಗಳ ವಿರುದ್ಧ ಗಟ್ಟಿ ನಿಲುವು ತಳೆದಿದ್ದರು ಎಂದು ಹೇಳಿದರು. ಗ್ರಾಪಂ ಸದಸ್ಯ ಗೋಣಿಬಸಪ್ಪ ಕೋರ್ಲಹಳ್ಳಿ ಪ್ರಾಸ್ತಾವಿಕ ಮಾತನಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
NABARD loan 58 % ಕಡಿತ: ಚರ್ಚೆಗೆ ನಿರ್ಮಲಾ ಬಳಿ ಸಮಯ ಕೋರಿದ ಸಿಎಂ ಸಿದ್ದರಾಮಯ್ಯ
Vikram Gowda ಎನ್‌ಕೌಂಟರ್; ತನಿಖೆ ಕರೆ ತಳ್ಳಿ ಹಾಕಿದ ಡಾ.ಜಿ. ಪರಮೇಶ್ವರ್
Raichur; ರಾತೋರಾತ್ರಿ ಸಿಎ ಸೈಟ್ ನಲ್ಲಿದ್ದ ಶಿವ, ಗಣೇಶ ದೇವಸ್ಥಾನ ತೆರವು
Encounter: ನಕ್ಸಲ್ ವಿಕ್ರಂ ಗೌಡ ತಂಡದ ಬೇಟೆಗೆ ಎಎನ್‌ಎಫ್ ‘ಆಪರೇಷನ್ ಮಾರುವೇಷ’!
Naxal Activity: ರಾಜ್ಯದಲ್ಲಿ ನಕ್ಸಲ್ ಚಳವಳಿ ಅಂತ್ಯಗೊಂಡೀತೇ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.