ಎಂಟಿಬಿ ಸೈಕ್ಲಿಂಗ್ : ಸ್ಪರ್ಧಾಳು ಸಂಖ್ಯೆ ಹೆಚ್ಚಳ
ಬಿಂಕದಕಟ್ಟಿ ಸಾಲುಮರದ ತಿಮ್ಮಕ್ಕ ಟ್ರ್ಯಾಕ್ ಗೆ ಭಾರೀ ಮೆಚ್ಚುಗೆ! ಯೋಧರು ಸೇರಿ 25 ರಾಜ್ಯಗಳ ಸ್ಪರ್ಧಿಗಳು ಭಾಗಿ
Team Udayavani, Feb 18, 2021, 7:19 PM IST
ಗದಗ: 17ನೇ ರಾಷ್ಟ್ರೀಯ ಮೌಂಟೇನ್ ಬೈಕ್ ಸೈಕ್ಲಿಂಗ್ ಚಾಂಪಿಯನ್‌ಶಿಪ್‌ಗೆ ಸಮೀಪದ ಬಿಂಕದಕಟ್ಟಿ ಸಸ್ಯೋದ್ಯಾನದಲ್ಲಿ ಅಖಾಡ ಸಿದ್ಧವಾಗಿದೆ. ಇದೇ ಮೊದಲ ಬಾರಿಗೆ ರಾಷ್ಟ್ರೀಯ ಎಂಟಿಬಿ ಸೈಕ್ಲಿಂಗ್‌ನಲ್ಲಿ ಸ್ಪರ್ಧಾಳುಗಳ ಸಂಖ್ಯೆ 400ರ ಗಡಿ ತಲುಪಿದ್ದರೆ, ವಿವಿಧ ಸೇನಾ ಪಡೆಗಳ ಮೂರು ತಂಡಗಳು ಹಾಗೂ 25 ರಾಜ್ಯಗಳ ಸೈಕ್ಲಿಸ್ಟ್‌ಗಳು ಆಗಮಿಸಿರುವುದು ಗಮನ ಸೆಳೆಯುತ್ತಿದೆ.
ರಾಜ್ಯದಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಮೌಂಟೇನ್ ಬೈಕ್ ಸೈಕ್ಲಿಂಗ್ ಚಾಂಪಿಯನ್‌ಶಿಪ್‌ನ ಐತಿಹಾಸಿಕ ಕ್ಷಣಕ್ಕೆ ಇಲ್ಲಿನ ಬಿಂಕದಕಟ್ಟಿ ಸಸ್ಯೋದ್ಯಾನ ಸಾಕ್ಷಿಯಾಗುತ್ತಿದೆ. ಈ ಹಿಂದಿನ ಸ್ಪರ್ಧೆಗಳಲ್ಲಿ 300-350 ಇರುತ್ತಿದ್ದ ಸ್ಪರ್ಧಾಳುಗಳ ಸಂಖ್ಯೆ ಈ ಬಾರಿ 400 ಜನರು ಪಾಲ್ಗೊಳ್ಳುವ ಸಾಧ್ಯತೆಗಳಿವೆ. ಈಗಾಗಲೇ 386 ಸ್ಪರ್ಧಾಳುಗಳು ವಿವಿಧ ವಿಭಾಗಗಳಲ್ಲಿ ಹೆಸರು ನೋಂದಾಯಿಸಿಕೊಂಡಿದ್ದು, ಗುರುವಾರ ಸಂಜೆ ವೇಳೆಗೆ ಈ ಸಂಖ್ಯೆ ಮತ್ತಷ್ಟು ಹೆಚ್ಚಳವಾಗಲಿದೆ. ಈ ಬಾರಿ ರಾಷ್ಟ್ರೀಯ ಎಂಟಿಬಿ ಸ್ಪರ್ಧೆಯಲ್ಲಿ ಸೈಕ್ಲಿಸ್ಟ್‌ಗಳ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಿವೆ. ಲೇ-ಲಡಾಖ್, ತ್ರಿಪುರ, ಸಿಕ್ಕಿಂ, ಮೇಘಾಲಯ ರಾಜ್ಯಗಳ ಸ್ಪರ್ಧಾಳುಗಳು ಇದೇ ಮೊದಲ ಬಾರಿಗೆ ರಾಷ್ಟ್ರೀಯ ಎಂಟಿಬಿ ಚಾಂಪಿಯನ್ ಶಿಪ್‌ಗೆ ಪ್ರವೇಶ ಪಡೆದಿದ್ದಾರೆ. ಇತರೆ ರಾಜ್ಯಗಳಿಂದಲೂ ಹೆಚ್ಚಿನ ಸ್ಪರ್ಧಾಳುಗಳು ಪಾಲ್ಗೊಳ್ಳಲಿದ್ದಾರೆ. ಜೊತೆಗೆ ಎಸ್‌ಎಸ್‌ಬಿ, ಭಾರತೀಯ ವಾಯುಪಡೆ ಹಾಗೂ ಆರ್ಮಿ ಅಡ್ವೆಂಚರ್ ವಿಂಗ್ ಪಡೆಗಳ ಸೈಕ್ಲಿಸ್ಟ್‌ಗಳು ಪಾಲ್ಗೊಂಡಿರುವುದು ವಿಶೇಷ.
ಯಾವ ರಾಜ್ಯದಿಂದ ಎಷ್ಟು ಜನ: ಈ ಪೈಕಿ ಕೇರಳಾ-40, ಹಿಮಾಚಲ ಪ್ರದೇಶ-24, ಹರ್ಯಾಣ-27, ಕರ್ನಾಟಕ-35, ಮಹಾರಾಷ್ಟ್ರ-35, ರಾಜಸ್ತಾನ್-34, ಜಮ್ಮು ಮತ್ತು ಕಾಶ್ಮೀರ-17, ಡಿಎಚ್ ರೈಡರ್-19, ಅರುಣಾಚಲ ಪ್ರದೇಶ, ಗುಜರಾತ್‌ನಿಂದ ತಲಾ 8, ಏರ್ ಫರ್ಸ್-7, ಆರ್ಮಿ ಅಡ್ವೆಂಚರ್ ವಿಂಗ್, ಎಸ್‌ಬಿ ಯಿಂದ ತಲಾ 6, ಮಧ್ಯಪ್ರದೇಶ, ಅಸ್ಸಾಂ, ಬಿಹಾರದಿಂದ ತಲಾ 4, ಜಾರ್ಖಂಡ್, ಲಡಾಕ್ (ಕೆಎಚ್)-2, ಸಿಎಫ್‌ಐ(ಎಪಿ) ಮತ್ತು ಸಿಎಫ್ ಐ(ಸಿಕ್ಕಿಂ)ನಿಂದ ತಲಾ ಒಬ್ಬರು ಈಗಾಗಲೇ ರಾಷ್ಟ್ರೀಯ ಎಂಟಿಬಿ ಸೈಕ್ಲಿಂಗ್ ಚಾಂಪಿಯನ್‌ಶಿಪ್‌ಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ ಕೆಲವರು ಕಳೆದ 15 ದಿನಗಳಿಂದ ಗದಗಿನಲ್ಲಿ ಸ್ವಂತ ಖರ್ಚಿನಲ್ಲೇ ಬೀಡುಬಿಟ್ಟಿದ್ದಾರೆ.
ಪ್ರತಿನಿತ್ಯ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನದ ಗುಡ್ಡಗಾಡು ಸೈಕ್ಲಿಂಗ್ ಸ್ಪರ್ಧೆಗೆ ತಾಲೀಮು ನಡೆಸುತ್ತಿದ್ದಾರೆ. ರಾಷ್ಟ್ರೀಯ ಚಾಂಪಿಯನ್ ಕನಸು ಹೊತ್ತಿರುವ ಸೈಕ್ಲಿಸ್ಟ್‌ಗಳು ದಿನಕ್ಕೆ ಐದಾರು ಗಂಟೆಗಳ ಕಾಲ ಸಾಲುಮರದ ತಿಮ್ಮಕ್ಕ ಉದ್ಯಾನದ ಬೆಟ್ಟದಲ್ಲಿ ಬೆವರು ಸುರಿಸುತ್ತಿದ್ದಾರೆ.
ದೇಶದಲ್ಲೇ ಅತ್ಯುತ್ತಮ ಟ್ರ್ಯಾಕ್!: ದೇಶದ ವಿವಿಧೆಡೆಯಿಂದ ಆಗಮಿಸಿರುವ ಸೈಕ್ಲಿಸ್ಟ್‌ಗಳು ಇಲ್ಲಿನ ಸಾಲುಮರದ ತಿಮ್ಮಕ್ಕ ಸಸ್ಯೋದ್ಯಾನದ ಎಂಟಿಬಿ ಟ್ರ್ಯಾಕ್ ಅನ್ನು ಮೆಚ್ಚುಕೊಂಡಿದ್ದಾರೆ. ಕಳೆದ ಬಾರಿ ಉತ್ತರಾಖಂಡ್‌ನಲ್ಲಿ ರಾಷ್ಟ್ರೀಯ ಸೈಕ್ಲಿಂಗ್ ಚಾಂಪಿಯನ್‌ಶಿಪ್ ನಡೆದಿತ್ತು. ಅಲ್ಲಿಗಿಂತಲೂ ಬಿಂಕದಕಟ್ಟಿಯ ಟ್ರ್ಯಾಕ್ ಅತ್ಯುತ್ತಮವಾಗಿದೆ. ತಿಮ್ಮಕ್ಕ ಸಸ್ಯೋದ್ಯಾನದಲ್ಲಿ ಗುರುತಿಸಿರುವ ಟ್ರ್ಯಾಕ್ ರಾಷ್ಟ್ರೀಯ ಸೈಕ್ಲಿಂಗ್‌ಗೆ ಹೇಳಿ ಮಾಡಿಸಿದಂತಿದೆ. ಹಲವೆಡೆ ದಿಬ್ಬ, ತಗ್ಗು, ಎತ್ತರ ಮತ್ತು ಇಳಿಜಾರು ಹೊಂದಿದ್ದು, ಸೈಕ್ಲಿಸ್ಟ್‌ಗಳಿಗೆ ಹೆಚ್ಚಿನ ಸವಾಲೊಡ್ಡಲಿದೆ. ಇದು ಸೈಕ್ಲಿಸ್ಟ್‌ಗಳ ಪ್ರತಿಭೆ, ದೈಹಿಕ ಸಾಮರ್ಥ್ಯ ಹಾಗೂ ಚಾಕಚಕ್ಯತೆಯನ್ನು ಓರೆಗೆ ಹಚ್ಚುತ್ತದೆ ಎನ್ನುತ್ತಾರೆ ಸೈಕ್ಲಿಂಗ್ ಫೆಡರೇಷನ್ ಆಫ್ ಇಂಡಿಯಾ ಪ್ರಧಾನ ಕಾರ್ಯದರ್ಶಿ ಮಣೆಂದರ್ ಪಾಲ್ ಸಿಂಗ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Ullala: ಗ್ಯಾಸ್ ಸಿಲಿಂಡರ್ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Ullala: ಗ್ಯಾಸ್ ಸಿಲಿಂಡರ್ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.