ಮುಂಡರಗಿ-ರಾಜ್ಯ ಸರ್ಕಾರವೂ ಬರ ಪರಿಹಾರ ನೀಡಲಿ: ಶಿವಾನಂದ ಇಟಗಿ
Team Udayavani, May 14, 2024, 5:56 PM IST
ಉದಯವಾಣಿ ಸಮಾಚಾರ
ಮುಂಡರಗಿ: ಕೇಂದ್ರದ ಬರ ಪರಿಹಾರದ ಹಣ ಶೇ.60ರಷ್ಟು ಮಾತ್ರ ರೈತರ ಖಾತೆಗೆ ಬಂದಿದೆ. ಜೊತೆಗೆ ರಾಜ್ಯ ಸರ್ಕಾರ ಕೂಡ ರೈತರಿಗೆ ಬರ ಮತ್ತು ಬೆಳೆ ಹಾನಿ ಪರಿಹಾರ ನೀಡಲು ಮುಂದಾಗಬೇಕೆಂದು ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಶಿವಾನಂದ ಇಟಗಿ ಹೇಳಿದರು.
ಪಟ್ಟಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಕೇಂದ್ರ ಸರಕಾರ ಬರ ಪರಿಹಾರ ಹೆಕ್ಟೇರ್‌ಗೆ ನೀರಾವರಿ ಜಮೀನಿಗೆ 17 ಸಾವಿರ, ಖುಷ್ಕಿ ಜಮೀನಿಗೆ 13 ಸಾವಿರ, ತೋಟಗಾರಿಕೆ ಬೆಳೆಗಳಿಗೆ 25 ಸಾವಿರ ರೂ. ನಿಗದಿಪಡಿಸಲಾಗಿತ್ತು. ಆದರೆ ಹೆಕ್ಟೇರ್‌ಗೆ 4ರಿಂದ 5 ಸಾವಿರ ರೂ.ಗಳು ಮಾತ್ರ ರೈತರ ಖಾತೆಗೆ ಜಮೆ ಆಗಿವೆ. ರಾಜ್ಯ ಸರಕಾರ ನೀಡಿದ 2 ಸಾವಿರ ರೂ. ಗಳು ಶೇ. 75ರಷ್ಟು ರೈತರಿಗೆ ಬಂದಿಲ್ಲ. ಎಲ್ಲಾ ರೈತರಿಗೂ ಬರ ಪರಿಹಾರ ಹಣ ಬರಬೇಕು. ಅಲ್ಲದೇ ರಾಜ್ಯವು ಕೇಂದ್ರ ಸರಕಾರ ನೀಡಿರುವ
ಬರ ಪರಿಹಾರದಲ್ಲಿ ಶೇ. 50 ರಷ್ಟಾದರೂ ನೀಡಬೇಕು ಎಂದರು.
ಅಲ್ಲದೇ ಶಿಂಗಟಾಲೂರು ಏತ ನೀರಾವರಿ ಯೋಜನೆ ಮೂಲಕ ಸೂಕ್ಷ್ಮ ನೀರಾವರಿ ಮಾಡುತ್ತಿರುವುದು ಅವೈಜ್ಞಾನಿಕವಾಗಿದೆ. ಸೂಕ್ಷ್ಮ ನೀರಾವರಿ ಕಾಮಗಾರಿಗೆ ಅಳವಡಿಸುತ್ತಿರುವ ಪೈಪ್ ಕಳಪೆಯಾಗಿವೆ. ಈ ಕೊಡಲೇ ಸೂಕ್ಷ್ಮ ನೀರಾವರಿ ಪೈಪ್‌ಲೈನ್ ಕಾಮಗಾರಿ ನಿಲ್ಲಿಸಬೇಕು. ಅಲ್ಲದೇ ಮುಂಗಾರು ಹಂಗಾಮಿನಲ್ಲಿ ಬಿತ್ತನೆಗೆ ಬೇಕಾಗುವ ಬೀಜ, ಗೊಬ್ಬರವನ್ನು ಸಮರ್ಪಕವಾಗಿ ಪೂರೈಕೆ ಮಾಡಬೇಕು ಜೊತೆಗೆ ನೀರಿನ ಹಾಹಾಕಾರ ಪ್ರತಿ ಗ್ರಾಮದಲ್ಲಿದೆ. ಪ್ರತಿಯೊಂದು ಗ್ರಾಮದ ನೂರು ಎಕರೆ
ಪ್ರದೇಶದಲ್ಲಿ ಕಡಿಮೆ ವೆಚ್ಚದಲ್ಲಿ ಕೆರೆ ನಿರ್ಮಿಸಿದರೆ, ಹಸಿರು ಉಕ್ಕಿ ಅಂತರ್ಜಲ ಮಟ್ಟ ಹೆಚ್ಚಾಗಲಿದೆ ಎಂದರು.
ಶಂಕರಗೌಡ ಜಾಯನಗೌಡರ ಮಾತನಾಡಿದರು. ಈ ವೇಳೆ ರೈತ ಮುಖಂಡರಾದ ರಾಮಚಂದ್ರ ಇಲ್ಲೂರು, ಶಿವನಗೌಡ ಗೌಡರ, ಸಂದೇಶ ಹಡಪದ, ಅಶೋಕ ಬನ್ನಿಕೊಪ್ಪ, ಚಂದ್ರಪ್ಪ ಬಳ್ಳಾರಿ, ದ್ಯಾಮಣ್ಣ ವಾಲೀಕಾರ, ರಾಘವೇಂದ್ರ ಕುರಿ, ಹುಚ್ಚಪ್ಪ ಹಂದ್ರಾಳ, ಪುತ್ರಪ್ಪ ಅಳವಂಡಿ, ಮೃತ್ಯುಂಜಯ ಸಜ್ಜನ, ಹುಸೇನಸಾಬ್ ಕುರಿ, ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ
CM Siddaramaiah: ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮದು
Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ
Gadaga: ಮೂರು ದಿನಗಳ ಕಾಲ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.