Mundargi;ವಾರಸುದಾರರಿಲ್ಲದ ಜಮೀನಿನ ಕೊಟ್ಟಿ ದಾಖಲೆ ಸೃಷ್ಟಿಸಿ ಜಮೀನು ಮಾರಾಟ

ತಹಶೀಲ್ದಾರ್  ಕಚೇರಿಯ ಅಧಿಕಾರಿಗಳು, ನೌಕರರಿಂದ ಹಗರಣ... ಪ್ರಕರಣ ಬೆಳಕಿಗೆ

Team Udayavani, Jan 29, 2025, 2:38 PM IST

Lokayukta

ಗದಗ: ವಾರಸುದಾರರಿಲ್ಲದ ಹಾಗೂ ಸಾಗುವಳಿ ಇಲ್ಲದಿರುವ ಜಮೀನಿನ ಮಾಹಿತಿ ಪಡೆದ ತಹಶೀಲ್ದಾರ ಕಚೇರಿಯ ಅಧಿಕಾರಿಗಳು, ನೌಕರರು ನಕಲಿ ವ್ಯಕ್ತಿ ಹಾಗೂ ಕೊಟ್ಟಿ ದಾಖಲೆ ಸೃಷ್ಟಿಸಿ ಅಂದಾಜು 42 ಎಕರೆ ಜಮೀನನ್ನು ಮಾರಾಟ ಮಾಡಿರುವ ಘಟನೆ ಜಿಲ್ಲೆಯ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಗ್ರಾಮದಲ್ಲಿ ಲೋಕಾಯುಕ್ತ ತನಿಖೆಯಿಂದ ಬೆಳಕಿಗೆ ಬಂದಿದೆ.

ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಗ್ರಾಮದ ರಿ.ಸ. ನಂ: 133ರ 15 ಎಕರೆ-30 ಗುಂಟೆ ಜಮೀನು ಮತ್ತು 136ರಲ್ಲಿಯ 27ಎಕರೆ 24ಗುಂಟೆ ಜಮೀನು ವಾರಸುದಾರರು ಇಲ್ಲದೇ ಹಲವಾರು ವರ್ಷಗಳಿಂದ ಸಾಗುವಳಿ ಇಲ್ಲದ್ದನ್ನು ತಿಳಿದುಕೊಂಡಿದ್ದ ಮುಂಡರಗಿ ತಹಶೀಲ್ದಾರ ಕಚೇರಿಯ ಅಧಿಕಾರಿಗಳು ಹಾಗೂ ನೌಕರರು ಕೊಟ್ಟಿ ವ್ಯಕ್ತಿಯನ್ನು ಜಮೀನು ಮಾಲೀಕ ಎಂದು ಹಾಜರಪಡಿಸಿ ತಮ್ಮ ಆಪ್ತರು ಹಾಗೂ ಸಂಬಂಧಿಗಳ ಹೆಸರಿನಲ್ಲಿ ಜಮೀನು ಖರೀದಿಸಿದಂತೆ ಕೊಟ್ಟಿ ದಾಖಲೆಗಳನ್ನು ಸೃಷ್ಟಿ ಮಾಡಿರುವುದು ತನಿಖೆ ಹಾಗೂ ದಾಖಲೆಗಳಿಂದ ದೃಢಪಟ್ಟಿದೆ.

ಈ ಕುರಿತು ಮುಂಡರಗಿಯ ನಾಗರಾಜ ಕಪ್ಪತ್ತಪ್ಪ ಹೊಸಮನಿ ಅವರು ಎರಡೂ ಜಮೀನಿನ ದಾಖಲೆಗಳೊಂದಿಗೆ ಲೋಕಾಯುಕ್ತ ಕಚೇರಿಗೆ ನೀಡಿ ದೂರಿನ ಅನ್ವಯ ಲೋಕಾಯುಕ್ತ ಅಧಿಕಾರಿಗಳು ತನಿಖೆ ನಡೆಸಿದ್ದು, ಮುಂಡರಗಿ ತಾಲೂಕಿನ ಕಂದಾಯ ಇಲಾಖೆಯ ಕೆಲವು ಅಧಿಕಾರಿಗಳು ಅಲ್ಲಿನ ರಿಯಲ್ ಎಸ್ಟೇಟ್ ಕುಳಗಳೊಂದಿಗೆ, ಪ್ರಭಾವಿ ವ್ಯಕ್ತಿಗಳೊಂದಿಗೆ ಶ್ಯಾಮಿಲಾಗಿ, ಭ್ರಷ್ಟಾಚಾರವೆಸಗಿ ತಮ್ಮ ಹುದ್ದೆಗಳನ್ನು ದುರುಪಯೋಗಪಡಿಸಿಕೊಳ್ಳುವುದರ ಮೂಲಕ ಜಮೀನುಗಳನ್ನು ತಮ್ಮ ಆಪ್ತರಿಗೆ, ಸಂಬಂಧಿಗಳ ಹೆಸರಿನಲ್ಲಿ ಖರೀದಿಸಿ, ಸರ್ಕಾರಕ್ಕೆ ಮೋಸ, ವಂಚನೆ ಹಾಗೂ ದ್ರೋಹವೆಸಗಿರುವುದು ಸಾಬೀತಾಗಿದೆ.

ಈ ಪ್ರಕರಣದಲ್ಲಿ ಮುಂಡರಗಿಯ ಹಿಂದಿನ ಕಂದಾಯ ನಿರೀಕ್ಷಕರಾಗಿದ್ದ ಎಂ.ಎ. ನದಾಫ, ಎಚ್.ಎಂ. ಪಾಟೀಲ, ಕೊರ್ಲಹಳ್ಳಿ ಹಿಂದಿನ ಗ್ರಾಮ ಆಡಳಿತಾಧಿಕಾರಿ ಮಂಜುನಾಥ ವಾಲ್ಮೀಕಿ, ತಹಶೀಲ್ದಾರ ಕಚೇರಿಯ ವಿಷಯ ನಿರ್ವಾಹಕ ಮಹೇಶ ಬಿ. ನಾಯ್ಕ, ಖಾಸಗಿ ವ್ಯಕ್ತಿಗಳಾದ ಭೀಮಣ್ಣ ಕರಿಯಪ್ಪ ಮರದ, ಶ್ರೀಕಾಂತ ಗೋಪಾಲರಾವ್ ಅರಣೆಕರ/ ಅರ್ಣಿಕರ್, ಮಹ್ಮದಹನೀಫ್ ಅಕ್ಷರಸಾಬ ಹುಯಿಲಗೋಳ, ಮೆಹಬೂಬಸಾಬ್ ಖಾಜಾಸಾಬ್ ತಾಡಪತ್ರಿ, ಜಹುರ ಮೆಹಬೂಬಸಾಬ ಯರಗುಡಿ, ಬಸವರಾಜ ಬಸಪ್ಪ ರಾಮೇನಹಳ್ಳಿ, ಮೌಲಾಸಾಬ ಇಮಾಮಸಾಬ ನದಾಫ, ಗಣೇಶ ವಿಶ್ವನಾಥಸಾ ಕಬಾಡಿ ಹಾಗೂ ಯಲ್ಲಪ್ಪ ರಾಮಪ್ಪ ಕುಕನೂರ ಹಾಗೂ ಇತರ ಹಿರಿಯ ಅಧಿಕಾರಿಗಳು, ನೌಕರರು ಮತ್ತು ಇನ್ನಿತರೆ ಖಾಸಗಿ ವ್ಯಕ್ತಿಗಳು ಕೃತ್ಯ ಎಸಗಿರುವುದು ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಹನುಮಂತರಾಯ, ಉಪಾಧೀಕ್ಷಕ ವಿಜಯ ಬಿರಾದಾರ ತನಿಖೆ ನೇತೃತ್ವ ವಹಿಸಿದ್ದು, ಎರಡೂ ಜಮೀನುಗಳ ಅವ್ಯವಹಾರ, ಭ್ರಷ್ಟಾಚಾರದಲ್ಲಿ ಭಾಗಿಯಾದ ತಹಶೀಲ್ದಾರ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಗಳು ಹಾಗೂ ಖಾಸಗಿ ವ್ಯಕ್ತಿಗಳ ವಿರುದ್ಧ 2024ರ ಡಿ. 26ರಂದು ಪ್ರಕರಣ ದಾಖಲಿಸಿ ತನಿಖೆಯನ್ನು ಕೈಗೊಂಡಿದ್ದಾರೆ.

ಟಾಪ್ ನ್ಯೂಸ್

ಎಲ್ಲೆಲ್ಲಿ ಆಡಿ ಬಂದೆ ಹೇಳಯ್ಯಾ ರಂಗ!: ಆಡೂ ಆಟ ಆಡು ….ನೀ ಆಡು ಆಡು ಆಡಿ ನೋಡು

ಎಲ್ಲೆಲ್ಲಿ ಆಡಿ ಬಂದೆ ಹೇಳಯ್ಯಾ ರಂಗ!: ಆಡೂ ಆಟ ಆಡು ….ನೀ ಆಡು ಆಡು ಆಡಿ ನೋಡು

1-rail

Railway; ಮಹಾಕುಂಭಕ್ಕೆ ಟಿಕೆಟ್ ಇಲ್ಲದೆ ಪ್ರಯಾಣಿಸಲು ಮೋದಿ ಜಿ ಹೇಳಿದ್ದಾರೆ ಎಂದ ಮಹಿಳೆಯರು

Rashmika Mandanna: ರಶ್ಮಿಕಾ ಮುಟ್ಟಿದ್ದೆಲ್ಲ ಚಿನ್ನ; ಹ್ಯಾಟ್ರಿಕ್‌ ಹಿಟ್‌ ಕಂಡ ಶ್ರೀವಲ್ಲಿ

Rashmika Mandanna: ರಶ್ಮಿಕಾ ಮುಟ್ಟಿದ್ದೆಲ್ಲ ಚಿನ್ನ; ಹ್ಯಾಟ್ರಿಕ್‌ ಹಿಟ್‌ ಕಂಡ ಶ್ರೀವಲ್ಲಿ

‌Bollywood: ರಿಷಬ್‌ ಶೆಟ್ಟಿ ʼಛತ್ರಪತಿ ಶಿವಾಜಿʼ ತಂಡದಿಂದ ಹೊರಬಿತ್ತು ಬಿಗ್‌ ಅಪ್ಡೇಟ್   

‌Bollywood: ರಿಷಬ್‌ ಶೆಟ್ಟಿ ʼಛತ್ರಪತಿ ಶಿವಾಜಿʼ ತಂಡದಿಂದ ಹೊರಬಿತ್ತು ಬಿಗ್‌ ಅಪ್ಡೇಟ್  

Shows cancelled: ಸ್ತ್ರೀ ವಿರೋಧಿ ಹೇಳಿಕೆ… ಹಾಸ್ಯಗಾರ ಬಸ್ಸಿ ಕಾರ್ಯಕ್ರಮ ರದ್ದು

Shows cancelled: ಸ್ತ್ರೀ ವಿರೋಧಿ ಹೇಳಿಕೆ… ಹಾಸ್ಯಗಾರ ಬಸ್ಸಿ ಕಾರ್ಯಕ್ರಮ ರದ್ದು

Website blocked: ಮೋದಿ ವ್ಯಂಗ್ಯಚಿತ್ರ ಪ್ರಕಟಿಸಿದ್ದಕ್ಕೆ ನಿರ್ಬಂಧ: ವಿಕಟನ್‌ ಪತ್ರಿಕೆ

Website blocked: ಮೋದಿ ವ್ಯಂಗ್ಯಚಿತ್ರ ಪ್ರಕಟಿಸಿದ್ದಕ್ಕೆ ನಿರ್ಬಂಧ: ವಿಕಟನ್‌ ಪತ್ರಿಕೆ

ಚೀನಾ ಭಾರತದ ಶತ್ರುವಲ್ಲ: ಕಾಂಗ್ರೆಸ್‌ ಮುಖಂಡ ಪಿತ್ರೋಡಾ ಹೇಳಿಕೆಗೆ ಬಿಜೆಪಿ ಆಕ್ರೋಶ

ಚೀನಾ ಭಾರತದ ಶತ್ರುವಲ್ಲ: ಕಾಂಗ್ರೆಸ್‌ ಮುಖಂಡ ಪಿತ್ರೋಡಾ ಹೇಳಿಕೆಗೆ ಬಿಜೆಪಿ ಆಕ್ರೋಶ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11 ವರ್ಷದಿಂದ ವಿಶ್ವಗುರು ನೋಡಿದ್ದೇವೆ, ಅವರನ್ನು ಕೆಳಗಿಳಿಸಿ: ಬಿಜೆಪಿಗೆ ಸಂತೋಷ್ ಲಾಡ್ ಟಾಂಗ್

11 ವರ್ಷದಿಂದ ವಿಶ್ವಗುರು ನೋಡಿದ್ದೇವೆ, ಅವರನ್ನು ಕೆಳಗಿಳಿಸಿ: ಬಿಜೆಪಿಗೆ ಸಂತೋಷ್ ಲಾಡ್ ಟಾಂಗ್

Bengaluru: ಮೇ 30 ರೊಳಗೆ ಜಿ.ಪಂ-ತಾ.ಪಂ ಅಂತಿಮ ಮೀಸಲಾತಿ ಪಟ್ಟಿ ಆಯೋಗಕ್ಕೆ ಸಲ್ಲಿಕೆ

ಜಿಲ್ಲಾ ಪಂಚಾಯತ್‌, ತಾಲೂಕು ಪಂಚಾಯತ್‌ ಚುನಾವಣೆ: ಮೇ 30 ರೊಳಗೆ ಮೀಸಲಾತಿ ಪಟ್ಟಿ ಸಲ್ಲಿಕೆ

Davanagere: 115 ರೂ. ಕೇಳಿದ್ದಕ್ಕೆ ಬೇಕರಿ ಮಾಲೀಕನಿಗೆ ಚಾಕುವಿನಿಂದ ಇರಿದ ವ್ಯಕ್ತಿ

Davanagere: 115 ರೂ. ಕೇಳಿದ್ದಕ್ಕೆ ಬೇಕರಿ ಮಾಲೀಕನಿಗೆ ಚಾಕುವಿನಿಂದ ಇರಿದ ವ್ಯಕ್ತಿ

ಸಾವಿರ ಕೋ.ರೂ ವೆಚ್ಚದ ಕಲ್ಯಾಣಪಥ ಯೋಜನೆಗೆ ಶೀಘ್ರ ಅಡಿಗಲ್ಲು: ಡಾ. ಅಜಯ್‌ ಸಿಂಗ್

Kalaburagi: ಸಾವಿರ ಕೋ.ರೂ ವೆಚ್ಚದ ಕಲ್ಯಾಣಪಥ ಯೋಜನೆಗೆ ಶೀಘ್ರ ಅಡಿಗಲ್ಲು: ಡಾ. ಅಜಯ್‌ ಸಿಂಗ್

Belagavi: ಮುಂದಿನ ಅವಧಿಗೂ ಸಿದ್ದರಾಮಯ್ಯ ಸಿಎಂ ಆದರೆ ತಪ್ಪೇನಿದೆ… ಸಚಿವ ಶಿವಾನಂದ ಪಾಟೀಲ

Belagavi: ಮುಂದಿನ ಅವಧಿಗೂ ಸಿದ್ದರಾಮಯ್ಯ ಸಿಎಂ ಆದರೆ ತಪ್ಪೇನಿದೆ… ಸಚಿವ ಶಿವಾನಂದ ಪಾಟೀಲ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

ಎಲ್ಲೆಲ್ಲಿ ಆಡಿ ಬಂದೆ ಹೇಳಯ್ಯಾ ರಂಗ!: ಆಡೂ ಆಟ ಆಡು ….ನೀ ಆಡು ಆಡು ಆಡಿ ನೋಡು

ಎಲ್ಲೆಲ್ಲಿ ಆಡಿ ಬಂದೆ ಹೇಳಯ್ಯಾ ರಂಗ!: ಆಡೂ ಆಟ ಆಡು ….ನೀ ಆಡು ಆಡು ಆಡಿ ನೋಡು

1-rail

Railway; ಮಹಾಕುಂಭಕ್ಕೆ ಟಿಕೆಟ್ ಇಲ್ಲದೆ ಪ್ರಯಾಣಿಸಲು ಮೋದಿ ಜಿ ಹೇಳಿದ್ದಾರೆ ಎಂದ ಮಹಿಳೆಯರು

Udupi: ಡಾ| ಟಿಎಂಎ ಪೈ ಆಸ್ಪತ್ರೆ; ಫೆ.20ರಂದು ಲಿಂಫೆಡೆಮಾ ತಪಾಸಣೆ ಶಿಬಿರ

Udupi: ಡಾ| ಟಿಎಂಎ ಪೈ ಆಸ್ಪತ್ರೆ; ಫೆ.20ರಂದು ಲಿಂಫೆಡೆಮಾ ತಪಾಸಣೆ ಶಿಬಿರ

Rashmika Mandanna: ರಶ್ಮಿಕಾ ಮುಟ್ಟಿದ್ದೆಲ್ಲ ಚಿನ್ನ; ಹ್ಯಾಟ್ರಿಕ್‌ ಹಿಟ್‌ ಕಂಡ ಶ್ರೀವಲ್ಲಿ

Rashmika Mandanna: ರಶ್ಮಿಕಾ ಮುಟ್ಟಿದ್ದೆಲ್ಲ ಚಿನ್ನ; ಹ್ಯಾಟ್ರಿಕ್‌ ಹಿಟ್‌ ಕಂಡ ಶ್ರೀವಲ್ಲಿ

9

Manipal: ಶಿವಪಾಡಿ ವೈಭವ ಆಯೋಜಕರ ಪೂರ್ವಭಾವಿ ಸಭೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.