ನಗರಸಭೆ ಅಧಿಕಾರಿಗಳ ಅಣಕು ಶವಯಾತ್ರೆ
ಬೀದಿ ವ್ಯಾಪಾರಿಗಳ ಕಾನೂನು ಪಾಲಿಸದ ನಗರಸಭೆ-ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ವಿವಿಧೋದ್ದೇಶಗಳ ಸಂಘ ಆಕ್ರೋಶ
Team Udayavani, May 25, 2022, 3:09 PM IST
ಗದಗ: ಬೀದಿ ಬದಿ ವ್ಯಾಪಾರಿಗಳ ತೆರಿಗೆ ಸಂಗ್ರಹದ ಹಣ ಕ್ರೋಢೀಕರಣ ಹಾಗೂ ಸರಕಾರದ ನಿಯಮಾನುಸಾರ ಪಟ್ಟಣ ಮಾರಾಟ ಸಮಿತಿ ಚುನಾವಣೆ ನಂತರ ಇದುವರೆಗೆ ಸರಿಯಾಗಿ ಸಮಿತಿ ರಚನೆ ಮಾಡದ ಅಧಿಕಾರಿಗಳ ನಡೆ ಖಂಡಿಸಿ, ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ವಿವಿಧೋದ್ದೇಶಗಳ ಸಂಘ, ರಾಜ್ಯ ರಸ್ತೆ ವ್ಯಾಪಾರಿಗಳ ಮಹಾಮಂಡಳಿ ನೇತೃತ್ವದಲ್ಲಿ ನೂರಾರು ಬೀದಿ ಬದಿ ವ್ಯಾಪಾರಿಗಳು ನಗರಸಭೆ ಅಧಿಕಾರಿಗಳ ಅಣಕು ಶವಯಾತ್ರೆ ನಡೆಸಿದರು.
ನಗರದ ಮಹಾತ್ಮ ಗಾಂಧಿ ವೃತ್ತದಿಂದ ನಗರಸಭೆ ಕಚೇರಿ ವರೆಗೆ ಖಾಲಿ ತಳ್ಳುಗಾಡಿಗಳೊಂದಿಗೆ ಅಣಕು ಶವಯಾತ್ರೆ ನಡೆಸಿದ ಅವರು, ನಗರಸಭೆ ಪೌರಾಯುಕ್ತ ರಮೇಶ ಸುಣಗಾರ, ನಗರಸಭೆ ಸಮುದಾಯ ಸಂಘಟನಾ ಅಧಿಕಾರಿ ವಿಜಯಲಕ್ಷ್ಮೀ ಹಿರೇಮಠ ಹಾಗೂ ಕಂದಾಯ ಅಧಿಕಾರಿಗಳ ವಿರುದ್ಧ ಘೋಷಣೆ ಮೊಳಗಿಸಿದರು.
ಜಿಲ್ಲಾ ಬೀದಿ ಬದಿ ವ್ಯಾಪಾರಸ್ಥರ ಸಂಘದ ಕಾರ್ಯದರ್ಶಿ ಬಾಷಾಸಾಬ್ ಮಲ್ಲಸಮುದ್ರ ಮಾತನಾಡಿ, ಗದಗ-ಬೆಟಗೇರಿ ನಗರಸಭೆಯಿಂದ ಪಟ್ಟಣ ವ್ಯಾಪಾರ ಸಮಿತಿ ರಚನೆ ಮಾಡದೇ, ಪೌರಾಯುಕ್ತರು ಹಾಗೂ ಅಧಿಕಾರಿಗಳು ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಪಟ್ಟಣ ಮಾರಾಟ ಸಮಿತಿಗೆ ಚುನಾವಣೆ ನಡೆದು, ಹಲವು ತಿಂಗಳು ಕಳೆದರೂ, ಸರಕಾರದ ನಿಯಮಾನುಸಾರ ಇದುವರೆಗೆ ಸರಿಯಾಗಿ ಸಮಿತಿ ರಚನೆ ಮಾಡಿಲ್ಲ. ಬೀದಿ ವ್ಯಾಪಾರಿಗಳ ಎಸ್‌ಎಸ್‌ಜಿ, ಸಿಎಲ್‌ಎಫ್, ಎಎಲ್‌ಎಫ್ ಮಹಿಳಾ ಗುಂಪುಗಳನ್ನು ರಚನೆ ಮಾಡಿಲ್ಲ. ಬೀದಿ ವ್ಯಾಪಾರಿಗಳ ತೆರಿಗೆ ಸಂಗ್ರಹದ ಹಣ ಕ್ರೋಢೀಕರಣದ ಬಗ್ಗೆ ಪಟ್ಟಣ ಮಾರಾಟ ಸಮಿತಿಯಲ್ಲಿ ನಿರ್ಣಯಿಸಬೇಕು. ಆದರೆ, ಅದ್ಯಾವುದನ್ನೂ ಪಾಲಿಸದೇ ಏಕಪಕ್ಷೀಯವಾಗಿ ಟೆಂಡರ್ ಕರೆದಿದ್ದಾರೆ. ಆ ಮೂಲಕ ಬೀದಿ ಬದಿ ವ್ಯಾಪಾರಿಗಳ ಸುಲಿಗೆಗೆ ಮುಂದಾಗಿದ್ದಾರೆಂದು ಅಸಮಾಧಾನ ವ್ಯಕ್ತಪಡಿಸಿದರು.
2015-16 ರಲ್ಲಿ ಬೀದಿ ವ್ಯಾಪಾರಿಗಳ ತರಬೇತಿಗೆ 2.1 ಲಕ್ಷ ರೂ. ಬಂದಿದ್ದು, ಅದನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಬೀದಿ ವ್ಯಾಪಾರಿಗಳ ಪಿಎಂ ಸ್ವ-ನಿಧಿಯ ಬೋಗಸ್ ಫಲಾನುಭವಿಗಳಿಗೆ ಸ್ಕೀಮ್ ನೀಡಿದ್ದಾರೆ. ಬೀದಿ ವ್ಯಾಪಾರಿಗಳ ಕುಂದುಕೊರತೆ, ಮೂಲಭೂತ ಸೌಕರ್ಯ ನಿರ್ವಹಿಸದೆ ಬೇಜವಾಬ್ದಾರಿ ತೋರಿರುವುದು ಖಂಡನೀಯ. ಬೀದಿ ವ್ಯಾಪಾರಿಗಳ ತೆರಿಗೆ ಹರಾಜು ಕಾನೂನು ಬಾಹೀರವಾಗಿದ್ದು, ತಕ್ಷಣ ಅದನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿದರು.
ಈ ಕುರಿತು ಮನವಿ ಸ್ವೀಕರಿಸಿದ ನಗರಸಭೆ ಪೌರಾಯುಕ್ತ ರಮೇಶ ಸುಣ ಗಾರ, ನಾಳೆಯಿಂದ ಬೀದಿ ವ್ಯಾಪಾರಿ ಗಳ ತೆರಿಗೆ ಸಂಗ್ರಹ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುವುದು. 2 ದಿನಗಳಲ್ಲಿ ಬೀದಿ ವ್ಯಾಪಾರಿಗಳ ಕಾನೂನು ಅನುಷ್ಠಾನ ಗೊಳಿಸುವುದಾಗಿ ಭರವಸೆ ನೀಡಿದ್ದ ರಿಂದ ಪ್ರತಿಭಟನೆ ಕೈಬಿಡಲಾಯಿತು.
ಪ್ರತಿಭಟನೆಯಲ್ಲಿ ಎಂ.ಢಾಲಾಯತ್, ಮಕ್ತುಂಸಾಬ್ ನಾಲಬಂದ, ಮಾರುತಿ ಸೋಳಂಕಿ, ರಶೀದಾ ನದಾಫ್, ಫಯಾಜ್ ನಾರಾಯಣಕೇರಿ, ಸೋಳಂಕಿ, ನಿಂಗೇ ಗೌಡರು, ರಮೇಶ ಮುಳಗುಂದ, ಮೆಹರ ಢಾಲಾಯತ, ಐ.ಬಿ.ದಾವಲ್, ಮಂಜು ಮುಳಗುಂದ, ರಾಜೇಖಾನ ಪಠಾಣ, ಯಲ್ಲಪ್ಪ ಗಾರವಾಡ, ಕುತ್ತೇಜಾ ದೊಡ್ಡಮನಿ, ರಜಿಯಾ ಹತ್ತಿವಾಲೆ, ಶಿವಾಜಿ ಮಧುರಕರ, ಬುಡ್ಡೇಲಿ ಅತ್ತಾರ, ಚಂದ್ರಕಾಂತ ಚವ್ಹಾಣ, ರಾಜು ರೋಣದ, ನವೀನ ಭಂಡಾರಿ, ಅಬ್ಬು ರಾಟಿ, ಜಹಾಂಗೀರ ಮುಳಗುಂದ, ಅನೇಕ ಬೀದಿ ಬದಿ ವ್ಯಾಪಾರಸ್ಥರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Ullala: ಗ್ಯಾಸ್ ಸಿಲಿಂಡರ್ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ
Actress: ರೊಮ್ಯಾನ್ಸ್ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.