ಅಳಿವಿನ ಅಂಚಿನತ್ತ ಸಾಗುತ್ತಿದೆ ದೊಡ್ಡಾಟ-ಬಯಲಾಟ
Team Udayavani, Mar 30, 2019, 4:38 PM IST
ನರಗುಂದ: ಇಂದಿನ ಆಧುನೀಕರಣದ ಭರಾಟೆಯಲ್ಲಿ ಸಾವಿರಾರು ವರ್ಷಗಳ ಇತಿಹಾಸ ಹೊಂದಿದ ದೊಡ್ಡಾಟ, ಬಯಲಾಟಗಳಂತಹ ರಂಗ ಕಲೆಗಳು ನಶಿಸಿ ಹೋಗುತ್ತಿರುವುದು ದುರ್ದೈವದ ಸಂಗತಿ ಎಂದು ಬಯಲಾಟ ಅಕಾಡೆಮಿ ಸದಸ್ಯ ಆಶೋಕ ಸುತಾರ ಕಳವಳ ವ್ಯಕ್ತಪಡಿಸಿದರು.
ತಾಲೂಕಿನ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದಲ್ಲಿ ಕರ್ನಾಟಕ ರಂಗಭೂಮಿ ದಿನಾಚರಣೆ ನಿಮಿತ್ತ ದೊರೆಸ್ವಾಮಿ ವಿವಿಧೋದ್ದೇಶ ಟ್ರಸ್ಟ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ನಾಟಕ ಪುಸ್ತಕಗಳ ಹಾಗೂ ರಂಗಭೂಮಿ ಕಲಾವಿದರ ಛಾಯಾಚಿತ್ರಗಳ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಜನಪದ ಕಲೆಗಳು ಮನುಷ್ಯನಷ್ಟೇ ಪ್ರಾಚೀನತೆ ಹೊಂದಿದ ವಿಶಿಷ್ಟವಾದ ಕಲೆ. ಸಮಾಜದಲ್ಲಿರುವ ಅಂಕುಡೊಂಕು ತಿದ್ದುವ ಶಕ್ತಿ ಜನಪದ ಕಲೆಯಲ್ಲಿ ಅಡಗಿದೆ. ಜಾನಪದ ಕಲೆಗಳು ಮನರಂಜನೆ ಜೊತೆಗೆ ಬುದ್ಧಿಶಕ್ತಿ ಹಾಗೂ ಮಾರ್ಗದರ್ಶನ ನೀಡುವ ಮಾಧ್ಯಮವಾಗಿದೆ ಎಂದು ಹೇಳಿದರು.
ಕರ್ನಾಟಕದಲ್ಲಿ ಸುಮಾರು ನಲವತ್ತಕ್ಕೂ ಹೆಚ್ಚು ಜನಪದ ನೃತ್ಯ ಪ್ರಕಾರಗಳು ರೂಢಿಯಲ್ಲಿವೆ. ಕಲೆಗಳು ಪರಂಪರೆಯಿಂದ ಉಳಿದ ಸಂಪ್ರದಾಯ. ಗ್ರಾಮೀಣ ಜನರ ಬದುಕಿನ ಅವಿಭಾಜ್ಯ ಅಂಗವಾದ ಜನಪದ ಸಂಸ್ಕೃತಿ ಉಳಿದರೆ ಮಾತ್ರ ಮಾನವ ಸಂಕುಲ ಉಳಿಯಲು ಸಾಧ್ಯ. ವಿಶಿಷ್ಟ ನಂಬಿಕೆ, ಆಚರಣೆ ಪ್ರಾತಿನಿಧಿಕ ಸಂಕೇತವಾಗಿ ರೂಪಗೊಂಡ ಜನಪದ ಸಾಂಸ್ಕೃತಿಕ ಪರಂಪರೆ ಅತ್ಯಂತ ಮಹತ್ವದ ಸ್ಥಾನ ಪಡೆದುಕೊಂಡಿದೆ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಸ್ವಾಮೀಜಿ ಮಾತನಾಡಿ, ನಮ್ಮ ಪೂರ್ವಜರು ತಾವಾಡುವ ಭಾಷೆಯಲ್ಲೇ ಕಟ್ಟಿ ಉಳಿಸಿಕೊಂಡು ಬಂದಿರುವ ಸಾಹಿತ್ಯ ಸಂಪನ್ಮೂಲ ಅದುವೇ ಜನಪದ ಸಾಹಿತ್ಯ. ಅದೊಂದು ಮೌಖಿಕ ಪರಂಪರೆಯ ಅಭಿವ್ಯಕ್ತ ರೂಪವಾಗಿದೆ. ಇಂದಿನ ಯುವ ಸಮುದಾಯ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗಿ ಕಲೆಯ ಮೂಲಕ ಪುರಾತನ ಇತಿಹಾಸದ ದೊಡ್ಡಾಟ, ಬಯಲಾಟ ಕಲೆಗಳು ನಿರ್ಲಕ್ಷಕ್ಕೆ ಒಳಗಾಗುತ್ತಿವೆ ಎಂದು ವಿಷಾದಿಸಿದರು.
ಪ್ರಾಚೀನ ಕಲೆಯನ್ನು ಪ್ರದರ್ಶಿಸಿ, ಉಳಿಸಿ ಬೆಳೆಸಿ ಯುವ ಸಮುದಾಯಕ್ಕೆ ಜಾಗೃತಿ ಮೂಡಿಸಬೇಕಾಗಿದೆ. ಉತ್ತರ ಕರ್ನಾಟಕ ಭಾಗದ ಪ್ರಸಿದ್ಧ ರಂಗಕಲೆಯಾದ ದೊಡ್ಡಾಟ, ಬಯಲಾಟ ಅಂತಹ ಜನಪದ ಕಲೆಗಳಿಗೆ ಸರಕಾರ ಇನ್ನೂ ಹೆಚ್ಚು ಪ್ರೋತ್ಸಾಹ ನೀಡಬೇಕಾಗಿದೆ ಎಂದು ಆಗ್ರಹಿಸಿದರು. ಹಿರಿಯ ರಂಗಭೂಮಿ ಕಲಾವಿದ ರುದ್ರಪ್ಪ ಮಾಸ್ತರ ಮತ್ತಿಗಟ್ಟಿ, ಬಯಲಾಟ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಚನ್ನಬಸಯ್ಯ ಕಾಡದೇವರಮಠ, ರುದ್ರಯ್ಯ ಹಿರೇಮಠ, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅದ್ಯಕ್ಷ ಸಿ.ಜಿ. ಕಂಠಿ, ಜೆ.ಆರ್. ಕದಂ, ಗಂಗಯ್ಯ ಕಾಡದೇವರಮಠ, ಸಾಹಿತಿ ವೀರನಗೌಡ ಮರಿಗೌಡ್ರ, ಲಯ ಕಲಾಮನೆಯ ಶಂಕರಗೌಡ ಪಾಟೀಲ, ಮಹಾಂತೇಶ ಸಾಲಿಮಠ
ವೇದಿಕೆಯಲ್ಲಿದ್ದರು.
ಗಮನ ಸೆಳೆದ ದೊಡ್ಡಾಟ- ಬಯಲಾಟ
ಭೈರನಹಟ್ಟಿಯಲ್ಲಿ ಬೋಪಳಾಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಿಂದ ದೊಡ್ಡಾಟ ಪ್ರದರ್ಶನ, ಯಾವಗಲ್ಲ ಗ್ರಾಮದ ಚನ್ನಬಸಯ್ಯ ಕಾಡದೇವರಮಠ ತಂಡದಿಂದ ದೊಡ್ಡಾಟ ಮತ್ತು ರಂಗಗೀತೆ ಗಾಯನ ಪ್ರೇಕ್ಷಕರ ಮನಸೂರೆಗೊಂಡಿತು. ಗದುಗಿನ ಲಯ ಕಲಾಮನೆಯ ಶಂಕರಗೌಡ ಪಾಟೀಲ ಸಂಗ್ರಹಿಸಿದ ಹಳೆಯ ನಾಟಕ ಪುಸ್ತಕ ಹಾಗೂ ರಂಗಭೂಮಿ ಕಲಾವಿದರ ಛಾಯಾಚಿತ್ರ, ಲೇಖನಗಳ ಪ್ರದರ್ಶನ ಗಮನ ಸೆಳೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gajendragad: ಮನೆಯಲ್ಲೇ ಮುಖ್ಯ ಶಿಕ್ಷಕಿಯ ಹ*ತ್ಯೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ
CM Siddaramaiah: ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮದು
Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.