ನರಗುಂದ ಪುರಸಭೆ: 6.51 ಲಕ್ಷ ರೂ.ಉಳಿತಾಯ ಬಜೆಟ್ ಮಂಡನೆ
Team Udayavani, Apr 1, 2022, 4:12 PM IST
ನರಗುಂದ: ಸ್ಥಳೀಯ ಪುರಸಭೆ ಪ್ರಸಕ್ತ ಸಾಲಿನ ಆಯವ್ಯಯ ಮಂಡಿಸಲಾಗಿದೆ. ಪುರಸಭೆ ಅಧ್ಯಕ್ಷೆ ರಾಜೇಶ್ವರಿ ಹವಾಲ್ದಾರ್ ಸುಮಾರು 12 ನಿಮಿಷಗಳ ಕಾಲ ಬಜೆಟ್ ಪ್ರತಿ ಓದುವ ಮೂಲಕ ಪ್ರಸಕ್ತ ಸಾಲಿನ 6.51 ಲಕ್ಷ ರೂ. ಉಳಿತಾಯ ಬಜೆಟ್ ಮಂಡಿಸಿದರು.
ಪ್ರಸಕ್ತ ಸಾಲಿನಲ್ಲಿ ಸರ್ಕಾರದ ಅನುದಾನ ಜೊತೆಗೆ ವಿವಿಧ ಮೂಲಗಳಿಂದ ಒಟ್ಟು 2268.72 ಲಕ್ಷ ರೂ. ಆದಾಯ ನಿರೀಕ್ಷಿಸಲಾಗಿದ್ದು, ಅದರಲ್ಲಿ 2262.21 ಲಕ್ಷ ರೂ. ಖರ್ಚು ವೆಚ್ಚಗಳಿಗೆ ಮೀಸಲಿಟ್ಟಿರುವುದಾಗಿ ವಿವರಿಸಿದರು.
ಪ್ರಮುಖ ಖರ್ಚುವೆಚ್ಚ: ಪಟ್ಟಣದಲ್ಲಿ ರಸ್ತೆ ಮತ್ತು ಚರಂಡಿಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಪುರಸಭೆ ನೂತನ ಕಟ್ಟಡಕ್ಕೆ 2 ಕೋಟಿ, ಎಸ್‌ಎಫ್‌ಸಿ ಯೋಜನೆಯಡಿ ಎಸ್ ಸಿಪಿ/ ಟಿಎಸ್‌ಪಿಗೆ 1 ಕೋಟಿ, ಎಸ್‌ಎಫ್‌ಸಿ ವಿಶೇಷ ಅನುದಾನದಡಿ ರಸ್ತೆ ನಿರ್ಮಾಣಕ್ಕೆ 2.5 ಕೋಟಿ, ಅಮೃತ ನಿರ್ಮಲ ನಗರ ಯೋಜನೆಯಡಿ ಸಸಿ ಅಳವಡಿಕೆಗೆ 20 ಲಕ್ಷ, ಕಸ ಬೀಳುವ ಬ್ಲಾಕ್ ಸ್ಪಾಟ್‌ಗಳಲ್ಲಿ ಸಿಸಿ ಕ್ಯಾಮರಾ ಅಳವಡಿಕೆಗೆ 12 ಲಕ್ಷ ರೂ. ಮುಂತಾದವುಗಳಿಗೆ ಅಂದಾಜು ಪತ್ರಿಕೆ ಸಿದ್ಧಪಡಿಸಲಾಗಿದೆ.
ಕರ ಹೆಚ್ಚಳ: ಆಸ್ತಿ ತೆರಿಗೆ ಶೇ.3 ಮತ್ತು ವಾಣಿಜ್ಯ ತೆರಿಗೆ ಶೇ.4 ರಷ್ಟು ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ ಎಂದು ಮುಖ್ಯಾಧಿಕಾರಿ ಅಮಿತ್ ತಾರದಾಳೆ ಸ್ಪಷ್ಟಪಡಿಸಿದರು.
24/7 ಕುಡಿಯುವ ನೀರು ಸರಬರಾಜು ಸಮರ್ಪಕವಾಗಿ ಆಗುತ್ತಿಲ್ಲ. ಹಿಂದೆಲ್ಲ 5 ದಿನಕ್ಕೊಮ್ಮೆಯಾದರೂ ನೀರು ಬರುವ ಭರವಸೆಯಿತ್ತು. ಈಗ ಯಾವಾಗ ಬರುತ್ತದೆ ಎಂಬುದೇ ತಿಳಿಯುತ್ತಿಲ್ಲ. ಇದನ್ನು ಮೊದಲು ಸರಿಪಡಿಸಿ ಎಂದು ಪುರಸಭೆ ವಿರೋಧ ಪಕ್ಷದ ನಾಯಕ ಅಪ್ಪಣ್ಣ ನಾಯ್ಕರ ಒತ್ತಾಯಿಸಿದರು.
ಪ್ರಸಕ್ತ ಸಾಲಿನ ಆಯವ್ಯಯ ಅಂದಾಜು ಪತ್ರಿಕೆಗೆ ಮತ್ತು ಆಸ್ತಿ ತೆರಿಗೆ ಪರಿಷ್ಕರಣೆಗೆ ವಿಶೇಷ ಸಾಮಾನ್ಯ ಸಭೆ ಅನುಮೋದನೆ ನೀಡಿತು. ಪುರಸಭೆ ಅಧ್ಯಕ್ಷೆ ರಾಜೇಶ್ವರಿ ಹವಾಲ್ದಾರ, ಉಪಾಧ್ಯಕ್ಷೆ ಅನ್ನಪೂರ್ಣ ಯಲಿಗಾರ ಸದಸ್ಯರಾದ ಎಸ್.ಎಸ್. ಕುಷ್ಟಗಿ, ಎಂ.ಪಿ. ಪಟ್ಟಣಶೆಟ್ಟಿ, ಡಿ.ಆರ್. ಕಿಲ್ಲೇದಾರ, ಡಿ.ಎಫ್. ಕಟ್ಟಿಮನಿ, ಸಿ.ಕೆ. ಪಾಟೀಲ, ಆರ್. ಎಚ್. ತಹಶೀಲ್ದಾರ್, ಪಿ.ಎಲ್. ಜೋಶಿ, ಬಿ.ಎಸ್. ಪಾಟೀಲ, ಆರ್.ಎಫ್. ಪಾಟೀಲ, ಎಂ.ಎಸ್. ಬೋಳಶೆಟ್ಟಿ, ಎನ್.ಪಿ. ವಡ್ಡಿಗೇರಿ, ಡಿ.ಬಿ. ಕಲಾಲ, ಎಫ್.ಎಸ್. ಹಾದಿಮನಿ, ಕೆ.ಎಂ. ಅರ್ಭಾಣದ, ವೈ.ಎಸ್. ನಾಯ್ಕರ, ಎಲ್.ಬಿ. ಮಳಗಿ, ಎಚ್.ಎನ್. ಗೋಟೂರ, ಆರ್.ಎಸ್. ಕಲ್ಲಾರಿ, ಆರ್.ಎಸ್. ವೀರನಗೌಡ್ರ, ಮುಖ್ಯಾಧಿಕಾರಿ ಅಮಿತ್ ತಾರದಾಳೆ, ಪುರಸಭೆ ಸಿಬ್ಬಂದಿ ಇದ್ದರು.
ಮಾದರಿ ತರಕಾರಿ ಮಾರುಕಟ್ಟೆ ಈಗಿರುವ ತರಕಾರಿ ಮಾರುಕಟ್ಟೆ ಜಾಗೆಯಲ್ಲಿ ನಗರೋತ್ಥಾನ 4ನೇ ಹಂತದ ಯೋಜನೆಯಡಿ 2.15 ಕೋಟಿ ರೂ. ವೆಚ್ಚದಲ್ಲಿ ಮಾದರಿ ತರಕಾರಿ ಮಾರುಕಟ್ಟೆ ನಿರ್ಮಾಣಕ್ಕೆ ಸಚಿವರು ಸೂಚನೆ ನೀಡಿದ್ದು, ಇದನ್ನು ಗುರಿಯಾಗಿ ಇಟ್ಟುಕೊಂಡಿದ್ದೇವೆ ಎಂದು ಮುಖ್ಯಾಧಿಕಾರಿ ಅಮಿತ್ ತಾರದಾಳೆ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gajendragad: ಮನೆಯಲ್ಲೇ ಮುಖ್ಯ ಶಿಕ್ಷಕಿಯ ಹ*ತ್ಯೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ
CM Siddaramaiah: ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮದು
Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.