ನರಗುಂದಕ್ಕೆ ‘ಅಮೃತ ನಿರ್ಮಲ ನಗರ’
1ಕೋಟಿ ರೂ. ವೆಚ್ಚದಲ್ಲಿ ಸೌಂದರ್ಯೀಕರಣಕ್ಕೆ ಸಜ್ಜು ; ಸಚಿವ ಸಿ.ಸಿ.ಪಾಟೀಲ ಮುತುವರ್ಜಿ
Team Udayavani, Jul 11, 2022, 4:12 PM IST
ನರಗುಂದ: ಬಂಡಾಯದ ನಾಡು ನರಗುಂದ ಈಗ ರಾಜ್ಯ ಸರ್ಕಾರದ ಅಮೃತ ನಿರ್ಮಲ ನಗರ ಯೋಜನೆಗೆ ಆಯ್ಕೆಯಾಗಿದ್ದು, 1 ಕೋಟಿ ರೂ. ವೆಚ್ಚದಲ್ಲಿ ಸೌಂದರ್ಯೀಕರಣಕ್ಕೆ ಸಜ್ಜಾಗುತ್ತಿದೆ.
ರಾಜ್ಯದ 75 ನಗರಗಳನ್ನು ಈ ಯೋಜನೆಯಡಿ ತರಲಾಗಿದ್ದು, ಇದರಲ್ಲಿ ನರಗುಂದ ಕೂಡಾ ಆಯ್ಕೆಯಾಗಿದೆ. 2021ರ ಸ್ವಾತಂತ್ರ್ಯೋತ್ಸವ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಘೋಷಣೆ ಮಾಡಿದ್ದಾರೆ.
ಸಚಿವ ಸಿ.ಸಿ.ಪಾಟೀಲ ಮುತುವರ್ಜಿ: ಲೋಕೋಪ ಯೋಗಿ ಸಚಿವ ಸಿ.ಸಿ.ಪಾಟೀಲ ಅವರ ಮುತುವರ್ಜಿಯಿಂದ ರಾಜ್ಯದ 75 ನಗರಗಳ ಪೈಕಿ ಗದಗ ಜಿಲ್ಲೆಯ ಗದಗ-ಬೆಟಗೇರಿ, ರೋಣ ಹಾಗೂ ನರಗುಂದ ಪುರಸಭೆ ಆಯ್ಕೆಯಾಗಿದೆ. ಸರ್ಕಾರದಿಂದ ಮಂಜೂರಾದ 1 ಕೋಟಿ ರೂ. ವೆಚ್ಚದಲ್ಲಿ ಪುರಸಭೆ ಹಲವಾರು ಯೋಜನೆ ಹಾಕಿಕೊಂಡಿದ್ದು, ಈಗಾಗಲೇ ಯೋಜನೆ ಅನುಷ್ಠಾನ ಹಂತದಲ್ಲಿದೆ.
ಯೋಜನೆಗಳೇನು?: 30 ಲಕ್ಷ ರೂ. ವೆಚ್ಚದಲ್ಲಿ ಹಾಲಬಾವಿ ಕೊಳಚೆ ಪ್ರದೇಶದ ಪುರಸಭೆ ಜಾಗೆ, ಹಳೆ ಎಪಿಎಂಸಿ ಹತ್ತಿರ ಪುರಸಭೆ ಜಾಗ, ಬಸ್ ನಿಲ್ದಾಣ ಆವರಣದಲ್ಲಿ ವಿದ್ಯಾರ್ಥಿನಿಯರ ಅನುಕೂಲಕ್ಕಾಗಿ ನ್ಯಾಪಕಿನ್ ವೆಂಡಿಂಗ್, ಡಿನ್ಪೋಸಲ್ ತಂತ್ರಜ್ಞಾನ ಯಂತ್ರ ಅಳವಡಿಸಿ ಶೌಚಾಲಯ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. 22ಲಕ್ಷ ರೂ. ವೆಚ್ಚದಲ್ಲಿ ಪಟ್ಟಣದಲ್ಲಿ ಧೂಳುಮುಕ್ತ ರಸ್ತೆಯನ್ನಾಗಿಸಲು 50 ಎಚ್‌ಪಿ ಟ್ರಾÂಕ್ಟರ್ ಮೌಂಟೆಡ್ ರೋಡ್ ಸ್ಕ್ರಿಪಿಂಗ್ ಮಶಿನ್ ಖರೀದಿಗೆ ಟೆಂಡರ್ ಕರೆಯಲಾಗಿದೆ. ನರಗುಂದ ಅರಸ ಬಾಬಾಸಾಹೇಬ ಭಾವೆ ಶೌರ್ಯ ಪರಾಕ್ರಮ ಸಾರುವ ಕೆಂಪಗಸಿ ಬಾಗಿಲು, ಬಾಬಾಸಾಹೇಬ ಅರಮನೆ ಸೌಂದಯೀìಕರಣ, ಬಾಬಾಸಾಹೇಬ ಕಲಾಭವನಕ್ಕೆ ವಾಲ್ ಪೇಂಟಿಂಗ್, ಸಾರ್ವಜನಿಕ ತ್ಯಾಜ್ಯ ವಿಲೇವಾರಿ ಜಾಗೃತಿಗೆ 4 ಕಾಂಪೌಂಡ್, 4 ಗೋಡೆಗಳಿಗೆ ಚಿತ್ರಸಹಿತ ಬರಹ ಪೂರ್ಣಗೊಂಡಿದೆ. 8 ಲಕ್ಷ ರೂ. ವೆಚ್ಚದಲ್ಲಿ ಶೌಚಾಲಯ, ಮೂತ್ರಾಲಯಗಳ ನಿರ್ವಹಣೆಗೆ ವೆಹಿಕಲ್ ಮೌಂಟೆಡ್ ಜಿಟ್ಟಿಂಗ್ ಯಂತ್ರ ಖರೀದಿ, 10 ಲಕ್ಷ ರೂ.ವೆಚ್ಚದಲ್ಲಿ ಐತಿಹಾಸಿಕ ಕೆಂಪಗಸಿ, ಸುಣ್ಣದಗಸಿ, ಸರ್ವಜ್ಞ ವೃತ್ತಗಳಲ್ಲಿ ಸಸಿ ನೆಟ್ಟು ಸಂರಕ್ಷಣೆಗಾಗಿ ಟ್ರೀಗಾರ್ಡ್ ಅಳವಡಿಕೆಗೆ ಟೆಂಡರ್ ಕರೆಯಲಾಗಿದೆ.
ತ್ಯಾಜ್ಯ ವಿಲೇವಾರಿ ಸ್ಪಾಟ್‌ಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ
12 ಲಕ್ಷ ರೂ.ವೆಚ್ಚದಲ್ಲಿ ತ್ಯಾಜ್ಯ ವಿಲೇವಾರಿ ಬ್ಲಾಕ್ ಸ್ಪಾಟ್‌ಗಳಾದ ಚಾವಡಿ, ಹುಯಿಗೋಳ ದವಾಖಾನೆ, ಮಯೂರ್ ಟಾಕೀಸ್, ಕೆಂಪಗಸಿ, ಸುಣದಗಸಿ, ಜಗನ್ನಾಥ ಜೋಶಿ ವೃತ್ತ, ಹುರಳಿ ದವಾಖಾನೆ ಹತ್ತಿರ, ತರಕಾರಿ ಮಾರುಕಟ್ಟೆ ಸೇರಿ 8 ಕಡೆ ತ್ಯಾಜ್ಯ ವಿಲೇವಾರಿಗೆ ನಿಗಾ ವಹಿಸಲು ಸಿಸಿ ಕ್ಯಾಮೆರಾ ಅಳವಡಿಸಲು ಗುತ್ತಿಗೆ ನೀಡಲಾಗಿದೆ.
ಗಮನ ಸೆಳೆದ ಕಾರಂಜಿ
10 ಲಕ್ಷ ರೂ. ವೆಚ್ಚದಲ್ಲಿ ಪುರಸಭೆ ಆವರಣದ ಉದ್ಯಾನವನ, ಬಾಬಾಸಾಹೇಬ ಪುತ್ಥಳಿ ಮುಂಭಾಗ ಅಲಂಕಾರಿಕ ಸಸಿ, ನೀರಿನ ಕಾರಂಜಿ ಅಳವಡಿಸಿದ್ದು ಸಾರ್ವಜನಿಕರ ಗಮನ ಸೆಳೆಯುತ್ತಿದೆ.
ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಅವರ ಮುತುವರ್ಜಿಯಿಂದ ಅಮೃತ ನಿರ್ಮಲ ನಗರ ಯೋಜನೆಯಡಿ ಮಂಜೂರಾದ 1 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. –ಅಮಿತ್ ತಾರದಾಳೆ, ಪುರಸಭೆ ಮುಖ್ಯಾಧಿಕಾರಿ
-ಸಿದ್ಧಲಿಂಗಯ್ಯ ಮಣ್ಣೂರಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gajendragad: ಮನೆಯಲ್ಲೇ ಮುಖ್ಯ ಶಿಕ್ಷಕಿಯ ಹ*ತ್ಯೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ
CM Siddaramaiah: ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮದು
Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.