ನರೇಗಾ ಕಾರ್ಮಿಕರ ವೇತನ ಪಾವತಿಗೆ ಆಗ್ರಹ
Team Udayavani, Jul 23, 2019, 3:48 PM IST
ಶಿರಹಟ್ಟಿ: ಹುಲ್ಲೂರ ಗ್ರಾಪಂ ವ್ಯಾಪಿಯಲ್ಲಿನ ನರೇಗಾ ಕಾರ್ಮಿಕರು ವೇತನ ನೀಡುವಂತೆ ಆಗ್ರಹಿಸಿ ತಾಪಂ ಇಒ ಆರ್.ವೈ. ಗುರಿಕಾರಗೆ ಮನವಿ ಸಲ್ಲಿಸಿದರು.
ಶಿರಹಟ್ಟಿ: ಹುಲ್ಲೂರ ಗ್ರಾಪಂ ವ್ಯಾಪಿಯಲ್ಲಿನ ನರೇಗಾ ಯೋಜನೆಯಡಿಯಲ್ಲಿ ಕಾರ್ಯನಿರ್ವಹಿಸಿದ ಕಾರ್ಮಿಕರಿಗೆ ಮೂರು ತಿಂಗಳಾದರೂ ವೇತನ ನೀಡಿಲ್ಲ. ಹೀಗಾಗಿ ಶೀಘ್ರ ವೇತನ ನೀಡುವಂತೆ ಆಗ್ರಹಿಸಿ ತಾಪಂ ಇಒ ಆರ್.ವೈ. ಗುರಿಕಾರಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ವಿ.ಸಿ. ಮುದಕಣ್ಣವರ ಮಾತನಾಡಿ, ನರೇಗಾ ಯೋಜನೆಯಡಿ ಮಳೆ ನೀರನ್ನು ಭೂಮಿಯಲ್ಲೇ ಇಂಗಿಸುವ (ಬದುವು ನಿರ್ಮಾಣ ) ಯೋಜನೆಯಲ್ಲಿ ಕಾರ್ಯ ನಿರ್ವಹಿಸಿದ ಕಾರ್ಮಿಕರಿಗೆ ಸುಮಾರು ಮೂರು ತಿಂಗಳಾದರೂ ವೇತನ ದೊರಕಿಲ್ಲ. ಒಂದು ವಾರದಲ್ಲಿ ವೇತನ ಭರಿಸುವುದಾಗಿ ಹೇಳಿದ್ದರಿಂದ ಕಾರ್ಯನಿರ್ವಹಿಸಲಾಗಿತ್ತು. ದಿನನಿತ್ಯ ಸುಮಾರು 180ರಿಂದ 200ಕ್ಕೂ ಹೆಚ್ಚು ಕೂಲಿ ಕಾರ್ಮಿಕರು ತಿಂಗಳವರೆಗೆ ನಿರಂತರವಾಗಿ ಕೆಲಸ ನಿರ್ವಹಿಸಿದ್ದು, ಈಗಾಗಲೇ ಎರಡು ತಿಂಗಳಾಗಿವೆ. ಸರಕಾರದಿಂದ ಅಂದಾಜು 1.90 ಕೋಟಿ ಮೊತ್ತದ ಕ್ರಿಯಾ ಯೋಜನೆ ಅನುಮೋದನೆಗೊಂಡಿದೆ. ಕಾರ್ಯ ಮುಗಿಸಿ ಎರಡು ತಿಂಗಳಾದರೂ ವೇತನ ಬಾರದೇ ಕೂಲಿ ಕಾರ್ಮಿಕರು ಚಾತಕ ಪಕ್ಷಿಯಂತೆ ಕಾಯುವಂತಾಗಿದೆ. ಅಧಿಕಾರಿಗಳು ಯಾವುದೇ ಕಾರಣ ನೀಡದೆ ಶೀಘ್ರ ವೇತನ ಒದಗಿಸಲು ಮುಂದಾಗಬೇಕೆಂದು ಆಗ್ರಹಿಸಿದರು. ತಾಪಂ ಇಒ ಆರ್.ವೈ. ಗುರಿಕಾರ ಮನವಿ ಸ್ವೀಕರಿಸಿ ಮಾತನಾಡಿ, ಕಾಮಗಾರಿಗೆ ಸಂಬಂಧಿಸಿದಂತೆ ಎಲ್ಲ ಪತ್ರ ವಹಿವಾಟು ಆಗಿದ್ದು, ಕೆಲವೇ ದಿನಗಳಲ್ಲಿ ನೇರವಾಗಿ ಕಾರ್ಮಿಕರ ಬ್ಯಾಂಕ್ ಖಾತೆಗೆ ಹಣ ಬರಲಿದೆ. ಇಲಾಖೆಯಿಂದ ಎಲ್ಲ ತಾಂತ್ರಿಕ ಅಡತಡೆ ನಿವಾರಿಸಲಾಗಿದ್ದು, ಆದಷ್ಟು ಬೇಗನೆ ಹಣ ಜಮಾಮಾಗಲಿದೆ ಎಂದು ಹೇಳಿದರು.
ಎಫ್.ಎಂ. ಕತ್ತಿಶೆಟ್ಟಿ, ವಿರೂಪಾಕ್ಷಪ್ಪ ಹಡಗಲಿ, ಎಸ್.ಬಿ. ಮೂಕಿ, ಸುರೇಶ ಮೂಕಿ, ಎಸ್.ಎಫ್. ಮೂಕಿ, ನಬೀಸಾಬ, ಶಿದ್ಧಪ್ಪ ಶಿರಹಟ್ಟಿ, ದೇವಪ್ಪ ಮೂಕಿ, ಎನ್.ಎಂ. ಬಡಿಗೇರ, ಈಶಪ್ಪ ಮೂಕಿ, ಚಾಂದಸಾಬ, ಮಜಫರ್ ನದಾಫ್, ಎನ್.ವೈ. ನದಾಫ್ ಮುಂತಾದವರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadag: ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರಿತ ಇಂಜಿನಿಯರ್ ಆತ್ಮಹ*ತ್ಯೆ
ಗದಗ: ನೀರು ಸೋರಿಕೆ- ನದಿಯಲ್ಲಿ ನೀರಿದ್ದರೂ ತಪ್ಪದ ಹಾಹಾಕಾರ!
ಮುದ್ರಣ ಕಾಶಿಯಲ್ಲಿ ಕ್ಯಾಲೆಂಡರ್ ಮುದ್ರಣ ಭರಾಟೆ; ಕ್ಯಾಲೆಂಡರ್-ತೂಗು ಪಂಚಾಂಗಗಳಿಗೆ ಖ್ಯಾತಿ
Gadg; ಜಗಳ ಬಿಡಿಸಲು ಬಂದ ಯುವಕನ ಕತ್ತಿಗೆ ಸ್ಕ್ರೂ ಡ್ರೈವರ್ ಚುಚ್ಚಿದ ದುಷ್ಕರ್ಮಿಗಳು
Diesel theft; ಗದಗ: ಕೆ.ಎಸ್.ಆರ್.ಟಿ.ಸಿ. ಬಸ್ ಗಳ ಡೀಸೆಲ್ ಕಳ್ಳತನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್ ಮಾದರಿಯ ಎಚ್ ಎಂಪಿವಿ ವೈರಸ್?
Gadag: ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರಿತ ಇಂಜಿನಿಯರ್ ಆತ್ಮಹ*ತ್ಯೆ
Bantwala: ನೇತ್ರಾವತಿ ನದಿಯ ಅಂಬಿಗ ನಾಪತ್ತೆ; ಸ್ಥಳೀಯರಿಂದ ಶೋಧ ಕಾರ್ಯ
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ರಸ್ತೆಯಲ್ಲೇ ನಡೆಯಿತು ಪವಾಡ
Public Picture; ಪ್ರೇಕ್ಷಕ ಏನು ಬಯಸುತ್ತಾನೆ ಗೊತ್ತಾ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.