ಉದ್ಯಾನವನಕ್ಕಿಲ್ಲ ಉದ್ಘಾಟನೆ ಭಾಗ್ಯ
Team Udayavani, Aug 3, 2019, 11:20 AM IST
ಗದಗ: ನಗರದಲ್ಲಿ ಲಕ್ಷಾಂತರ ರೂ. ಮೊತ್ತದಲ್ಲಿ ನಿರ್ಮಿಸಿರುವ ಅತ್ಯಾಧುನಿಕವಾದ ಶಿವಯೋಗಿ ಸಿದ್ಧರಾಮೇಶ್ವರ ಉದ್ಯಾನವನ ಜನಪ್ರತಿನಿಧಿಗಳ ನಿರಾಸಕ್ತಿ ಹಾಗೂ ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ವರ್ಷಗಳು ಕಳೆದರೂ ಉದ್ಘಾಟನೆ ಭಾಗ್ಯ ಕಂಡಿಲ್ಲ. ಸಾರ್ವಜನಿಕರ ಉಪಯೋಗವಿಲ್ಲದೇ ಮುಳ್ಳು ಕಂಟಿಗಳು ಬೆಳೆದು ಉದ್ಯಾನ ಈಗ ಅದ್ವಾನದ ಸ್ಥಿತಿ ತಲುಪಿದೆ.
ಗದಗ- ಬೆಟಗೇರಿ ನಗರಸಭೆಯ ವಾರ್ಡ್ ನಂ. 34ರ ವ್ಯಾಪ್ತಿಯ ಸಿದ್ಧಲಿಂಗೇಶ್ವರ ನಗರದಲ್ಲಿ 2017ನೇ ಸಾಲಿನಲ್ಲಿ ಕರ್ನಾಟಕ ನೀರಾವರಿ ನಿಗಮದಿಂದ ಎಸ್‌ಎಫ್‌ಸಿ, ಟಿಎಸ್‌ಪಿ ಲೆಕ್ಕಶೀರ್ಷಿಕೆಯಡಿ ಸುಮಾರು 36 ಲಕ್ಷ ರೂ. ಅಂದಾಜು ಮೊತ್ತದಲ್ಲಿ ಅತ್ಯಾಧುನಿಕವಾಗಿ ನಿರ್ಮಿಸಲಾಗಿದೆ.
ಸುಮಾರು 100×30 ಅಡಿ ಅಳತೆಯ ಉದ್ಯಾನದ ಸುತ್ತಲೂ ಫೆನ್ಸಿಂಗ್, ಗಾರ್ಡನ್ ಪ್ಲೇವರ್(ಪಾದಚಾರಿ), ಉದ್ಯಾನದ ಮೆರಗು ಹೆಚ್ಚಿಸುವ ಬಣ್ಣ ಬಣ್ಣದ ವಿದ್ಯುತ್ ದೀಪಗಳು, ಮಕ್ಕಳ ಆಟಿಕೆಗಳಾದ ಜೋಕಾಲಿ, ಸ್ಪ್ರಿಂಗ್ ಡಕ್, ಜಾರುವ ಬಂಡಿ, ಸೀಸೋ(ತಕ್ಕಡಿ ಮಾದರಿಯ ಆಟಿಕೆ), ಸಾರ್ವಜನಿಕರು ಕೂರಲು ಆಕರ್ಷಕ ಕಲ್ಲು ಬೆಂಚುಗಳು, ಹುಲ್ಲಿನ ಹಾಸು(ಗ್ರೀನ್ ಲಾಂಜ್), ತರಹೇವಾರಿ ಹೂವಿನ ಗಿಡಗಳಿಂದ ಕಂಗೊಳಿಸುವಂತೆ ಮಾಡಲಾಗಿತ್ತು. ಅದರೊಂದಿಗೆ ಉದ್ಯಾನದ ಅಲ್ಲಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಕಲ್ಲು ಬೆಂಚಿನ ಆಸನಗಳನ್ನು ಅಳವಡಿಸಲಾಗಿದೆ. ಆದರೆ, ವರ್ಷಗಳು ಕಳೆದರೂ ಉದ್ಘಾಟನೆಗೊಳ್ಳದ ಕಾರಣ ಅತ್ಯಾಧುನಿಕ ಉದ್ಯಾನ ಸಾರ್ವಜನಿಕರ ಉಪಯೋಗಕ್ಕಿಲ್ಲದಂತಾಗಿದೆ.
ಉದ್ಘಾಟನೆಗೆ ಕೈಗೂಡದ ಮುಹೂರ್ತ: 2018ರ ವೇಳೆಗೆ ಉದ್ಯಾನದ ಅಭಿವೃದ್ಧಿ ಕಾರ್ಯ ಪೂರ್ಣಗೊಂಡಿತ್ತು. ಸ್ಥಳೀಯ ವಾರ್ಡ್‌ನ ಸದಸ್ಯ ಹಾಗೂ ನಗರಸಭೆ ಅಧ್ಯಕ್ಷರೂ ಆಗಿದ್ದ ಸುರೇಶ ಕಟ್ಟಿಮನಿ ಉದ್ಯಾನವನ್ನು ಅಚ್ಚುಕಟ್ಟಾಗಿ ನಿರ್ಮಿಸಲು ಹೆಚ್ಚಿನ ಆಸಕ್ತಿ ತೋರಿದ್ದರು. ಅಲ್ಲದೇ, 2018ರಲ್ಲಿ ಪುನಃ ಶಾಸಕರಾಗಿ ಆಯ್ಕೆಯಾದ ಎಚ್.ಕೆ. ಪಾಟೀಲ ಅವರಿಗೆ ಮಂತ್ರಿ ಸ್ಥಾನ ಒಲಿಯುತ್ತದೆ. ಅವರಿಂದಲೇ ಉದ್ಘಾಟಿಸಬೇಕು ಎಂದು ಉದ್ದೇಶಿಸಿದ್ದರು. ಆದರೆ, ಮೈತ್ರಿ ಸರಕಾರದಲ್ಲಿ ಎಚ್.ಕೆ. ಪಾಟೀಲರಿಗೆ ಸಚಿವ ಸ್ಥಾನ ಒಲಿಯಲಿಲ್ಲ. ಈ ನಡುವೆ ನಗರಸಭೆ ಸದಸ್ಯರ ಅವಧಿಯೂ ಪೂರ್ಣಗೊಂಡು ಸುರೇಶ್ ಕಟ್ಟಿಮನಿ ಅವರ ಅಧಿಕಾರ ಅವಧಿಯೂ ಕೊನೆಗೊಂಡಿತು. ಹೀಗಾಗಿ ಉದ್ಯಾನದ ಉದ್ಘಾಟನೆಯೂ ನೆನೆಗುದಿಗೆ ಬಿದ್ದಿದೆ ಎನ್ನುತ್ತಾರೆ ಸ್ಥಳೀಯ ನಿವಾಸಿಗಳು.
ತುಕ್ಕು ಹಿಡಿಯುತ್ತಿವೆ ಆಟಿಕೆಗಳು: ಮಕ್ಕಳ ಆಕರ್ಷಣೆಗಾಗಿ ಉದ್ಯಾನದಲ್ಲಿ ಅಳವಡಿಸಿರುವ ಆಟಿಕೆ ಪರಿಕರಗಳು ಬಳಕೆಗಿಲ್ಲದೇ ತುಕ್ಕು ಹಿಡಿಯುತ್ತಿವೆ. ಉದ್ಯಾನದಲ್ಲಿ ಮುಳ್ಳು ಕಂಟಿ, ನಿರುಪಯುಕ್ತ ಗಿಡಗಳು ಬೆಳೆದು ನಿಂತಿವೆ. ಉದ್ಯಾನದ ನಿರ್ವಹಣೆಯಿಲ್ಲದೇ ಪಾದಚಾರಿಗಳಿಗೆ ಅಳವಡಿಸಿರುವ ಪ್ಲೇವರ್ಗಳೂ ಮುಚ್ಚಿ ಹೋಗಿದ್ದು, ದಾರಿ ಹುಡುಕುವಂತಾಗಿದೆ. ಉದ್ಯಾನದ ಹತ್ತಿರ ಹೋದರೆ ಸಾಕು ವಿಷ ಜಂತುಗಳ ಭಯ ಆವರಿಸುತ್ತದೆ. ಹೀಗಾಗಿ ಮಕ್ಕಳನ್ನು ಉದ್ಯಾನದ ಸುಳಿಯಲೂ ಬಿಡುವುದಿಲ್ಲ ಎನ್ನುತ್ತಾರೆ ಸ್ಥಳೀಯ ಮಹಿಳೆಯರು.
ಒಟ್ಟಾರೆ ನಗರಸಭೆ ಸ್ಥಳೀಯ ವಾರ್ಡ್‌ನ ಸದಸ್ಯರ ಪ್ರತಿಷ್ಠೆ ಹಾಗೂ ಅಧಿಕಾರಿಗಳ ನಿರಾಸಕ್ತಿಯಿಂದಾಗಿ ಲಕ್ಷಾಂತರ ರೂ. ಮೌಲ್ಯದ ಉದ್ಯಾನ ಅದ್ವಾನದ ಸ್ಥಿತಿ ತಲುಪಿರುವುದು ವಿಪರ್ಯಾಸದ ಸಂಗತಿ.
ಕೆಎನ್‌ಎಲ್ನಿಂದ ಅವಳಿ ನಗರದ ನಾಲ್ಕು ಕಡೆ ಉದ್ಯಾನಗಳನ್ನು ಅಭಿವೃದ್ಧಿ ಪಡಿಸಲಾಗಿದೆ. ಈಗಾಗಲೇ ಮೂರು ಉದ್ಯಾನಗಳನ್ನು ವಶಕ್ಕೆ ಪಡೆದಿರುವ ನಗರಸಭೆ, ಸಿದ್ಧರಾಮೇಶ್ವರ ನಗರ ಉದ್ಯಾನ ವಶಕ್ಕೆ ಪಡೆಯಲು ಹಿಂದೇಟು ಹಾಕುತ್ತಿದೆ. ಈ ಕುರಿತು ಪ್ರಸ್ತಾವನೆಗೂ ಪ್ರತಿಕ್ರಿಯಿಸುತ್ತಿಲ್ಲ. ಹೀಗಾಗಿ ಮತ್ತೂಮ್ಮೆ ನಗರಸಭೆ ಪೌರಾಯುಕ್ತರಿಗೆ ಪತ್ರ ಬರೆಯುತ್ತೇವೆ.•ಮಲ್ಲಿಕಾರ್ಜುನ ಜಾಲನ್ನವರ, ಎಇ, ಕೆಎನ್‌ಎಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
ಗದಗ: ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ
Gadaga: ಎಸ್ಪಿ ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ವ್ಯಕ್ತಿಗೆ 25 ಸಾವಿರ ರೂ. ವಂಚನೆ
Gadaga: ಎಸ್ಪಿ ಬಿ.ಎಸ್.ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು ವಂಚನೆಗೆ ಯತ್ನ
Gadaga: ನರಗುಂದ ಬಳಿ ಭೀಕರ ಅಪಘಾತ: ಕಾರಿಗೆ ಲಾರಿ ಡಿಕ್ಕಿ ಹೊಡೆದು ದಂಪತಿ ಸ್ಥಳದಲ್ಲೇ ಸಾವು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.