ಹೆಸ್ಕಾಂ ಕಚೇರಿಗೆ ಲೈನ್‌ಮ್ಯಾನ್‌ಗಳೇ ಅಧಿಕಾರಿಗಳು!
Team Udayavani, Dec 9, 2019, 1:31 PM IST
ನರೇಗಲ್ಲ: ನರೇಗಲ್ಲ ಹೆಸ್ಕಾಂ ಶಾಖಾ ಕಚೇರಿಯಲ್ಲಿ ಕಳೆದ ಆರು ವರ್ಷದಿಂದ ಹುದ್ದೆ ಖಾಲಿ ಇದ್ದು, ಲೈನ್ ಮ್ಯಾನ್‌ಗಳೇ ಅಧಿಕಾರಿಗಳ ಕಾರ್ಯ ನಿರ್ವಹಿಸುತ್ತಿದ್ದಾರೆ.
ಹೀಗಿರುವಾಗ ಕೆಲವೊಂದು ಸಮಸ್ಯೆಗಳಿಗೆ ಪರಿಹಾರ ಸಿಗದೇ ಸಮಸ್ಯೆಗಳು ಸಮಸ್ಯೆಯಾಗಿಯೇ ಉಳಿದಿದ್ದು, ಖಾಲಿ ಹುದ್ದೆ ಭರ್ತಿ ಯಾವಾಗ? ಎನ್ನುವ ಪ್ರಶ್ನೆ ಉದ್ಭವಿಸಿದೆ. ಹೌದು, ಪಟ್ಟಣದ ಹೆಸ್ಕಾಂ ಇಲಾಖೆ ಶಾಖಾ ಅಧಿಕಾರಿ ಹುದ್ದೆ ಖಾಲಿ ಇದ್ದು, ಲೈನ್ ಮ್ಯಾನ್‌ಗಳೇ ಈ ಹುದ್ದೆಯನ್ನೂ ನಿರ್ವಹಿಸುತ್ತಿದ್ದಾರೆ. ಆದರೆ ಇತ್ತ ಸರ್ಕಾರ ಕಣ್ತೆರೆದು ನೋಡದಿರುವುದು ದುರ್ದೈವ ಎನ್ನುತ್ತಿದ್ದಾರೆ ಸಾರ್ವಜನಿಕರು.
ಗ್ರಾಹಕರು–ರೈತರಿಗೆ ತೊಂದರೆ: ಈ ಸಮಸ್ಯೆ ಸುಮಾರು ದಿನಗಳಿಂದ ಹಾಗೆಯೇ ಇದ್ದು, ವಿದ್ಯುತ್ ಬಳಸುವ ಗ್ರಾಹಕರಿಗೆ ಅದರಲ್ಲೂ ವಿಶೇಷವಾಗಿ ರೈತರಿಗೆ ತೀವ್ರ ತೊಂದರೆಯಾಗುತ್ತಿದೆ. ಏನಾದರೂ ಸಮಸ್ಯೆಗಳು ಇದ್ದಲ್ಲಿ ಅಧಿಕಾರಿಗಳನ್ನು ಭೇಟಿಯಾಗಿ ಸಮಸ್ಯೆ ಹೇಳಿಕೊಂಡರೆ ಪರಿಹಾರವಾಗಬಹುದು ಎನ್ನುವ ನಿರೀಕ್ಷೆಯನ್ನಿಟ್ಟುಕೊಂಡು ಬಂದವರಿಗೆ “ನಾಳೆ ಬನ್ನಿ–ನಾಡಿದ್ದು ಬನ್ನಿ‘ ಎನ್ನುವ ಉತ್ತರ ಸಾಮಾನ್ಯವಾಗಿದ್ದು, ನಾವು ಪ್ರಭಾರಿಯಾಗಿದ್ದೇವೆ ಎನ್ನುವ ಅಳಲು ಕೂಡ ಕೇಳಿ ಬರುತ್ತಿದೆ.
ಬರೀ ಅಲೆದಾಟ: ನಿಮ್ಮ ಸಮಸ್ಯೆಯನ್ನುಮೇಲಧಿಕಾರಿಗಳ ಗಮನಕ್ಕೆ ತರುತ್ತೇವೆ. ಅವರ ಸೂಚನೆಯಂತೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಸಾಗಹಾಕುತ್ತಿರುವುದರಿಂದ ಹೆಸ್ಕಾಂ ಗ್ರಾಹಕರು ಬರೀ ಮನೆಯಿಂದ–ಕಚೇರಿಗೆ, ಕಚೇರಿಯಿಂದ–ಮನೆಗೆ ಪರದಾಡುವಂತಾಗಿದೆ. ಇಲಾಖೆ ಮುಖ್ಯಸ್ಥರು ಕಾರ್ಯಾಲಯದಲ್ಲಿ ಕುಳಿತು ಆಡಳಿತ ವ್ಯವಸ್ಥೆಯನ್ನು ನಿರ್ವಹಿಸಿದರೆ ಅವರ ಕೈಕೆಳಗೆ ಕೆಲಸ ಮಾಡುವರು ತಮಗೆ ಒಪ್ಪಿಸಿದ ಕೆಲಸ ಮಾಡಿ ಹೋಗುತ್ತಾರೆ. ಆದರೆ ಮುಖ್ಯಸ್ಥರೇ ಇಲ್ಲದಿದ್ದಾಗ ಯಾವ ಕಾರ್ಯ ಮಾಡಬೇಕು?, ಏನು ಕ್ರಮ ಕೈಗೊಳ್ಳಬೇಕು ಎನ್ನುವುದೇ ದೊಡ್ಡ ಸಮಸ್ಯೆಯಾಗಿದೆ.
ನರೇಗಲ್ಲ ಭಾಗದ ಹೆಸ್ಕಾಂ ಶಾಖಾ ಕಚೇರಿಗೆ ಶಾಖಾಧಿಕಾರಿಗಳನ್ನು ಸರ್ಕಾರದ ಮಟ್ಟದಿಂದಲೇ ನೇಮಕ ಮಾಡಬೇಕು. ಇದಕ್ಕಾಗಿ ನಾವು ಈಗಾಗಲೇ ಮಾಹಿತಿ ರವಾನಿಸಿದ್ದೇವೆ. ನರೇಗಲ್ಲ ಸೇರಿದಂತೆ ಹೊಳೆಆಲೂರ, ಬೆಳವಣಿಕೆ, ರೋಣ ಶಾಖಾ ಕಚೇರಿಗೆ ಅಧಿ ಕಾರಿಗಳ
ನೇಮಕ ಮಾಡಿಕೊಳ್ಳುವುದಕ್ಕೆ ಸರ್ಕಾರಕ್ಕೆ
ಮನವಿ ಮಾಡಲಾಗಿದೆ. -ಚೇತನ ದೊಡ್ಡಮನಿ, ಹೆಸ್ಕಾಂ ಎಇಇ
-ಸಿಕಂದರ ಎಂ. ಆರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಗಜೇಂದ್ರಗಡ: ಸೂಡಿ ಉತ್ಸವಕ್ಕೆ ತೋರಬೇಕಿದೆ ಇಚ್ಛಾಶಕ್ತಿ-ಹಾಳು ಕೊಂಪೆಯಾದ ಸ್ಮಾರಕ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
ಗದಗ: ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ
Gadaga: ಎಸ್ಪಿ ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ವ್ಯಕ್ತಿಗೆ 25 ಸಾವಿರ ರೂ. ವಂಚನೆ
MUST WATCH
ಹೊಸ ಸೇರ್ಪಡೆ
Bagalakote: ಪ್ರೇಯಸಿ ಗೆಳತಿ ಹತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.