ಅಧಿಕಾರಿಗಳ ಗೈರಿಗೆ ಆಕ್ರೋಶ
Team Udayavani, Jan 25, 2020, 12:52 PM IST
ಶಿರಹಟ್ಟಿ: ಪಟ್ಟಣದ ತಾಪಂ ಸಾಮರ್ಥ್ಯ ಸೌಧದಲ್ಲಿ ಶುಕ್ರವಾರ ನಡೆಯಬೇಕಾಗಿದ್ದ ಕೆಡಿಪಿ ತ್ತೈಮಾಸಿಕ ಸಭೆಯು ಅಧಿಕಾರಿಗಳ ಗೈರಿನಿಂದಾಗಿ ಆಕ್ರೋಶಗೊಂಡ ಶಾಸಕ ರಾಮಣ್ಣ ಲಮಾಣಿ ಸಭೆ ಮೊಟಕುಗೊಳಿಸಿ ಹೊರನಡೆದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪ್ರತಿ ಮೂರು ತಿಂಗಳಿಗೊಮ್ಮೆ ಶಾಸಕರ ಅಧ್ಯಕ್ಷೆಯಲ್ಲಿ ನಡೆಯುವ ಪ್ರಗತಿ ಪರಿಶೀಲನಾ ಸಭೆಗೆ ಅಧಿಕಾರಿಗಳು ಗೈರಾಗುವ ಮೂಲಕ ನಿರ್ಲಕ್ಷ್ಯ ಧೋರಣೆ ಅನುಸರಿಸಿದ್ದಾರೆ. ಬೆಳಗ್ಗೆ 11ಕ್ಕೆ ಪ್ರಾರಂಭವಾಗಬೇಕಾಗಿದ್ದ ಸಭೆಗೆ ಅಧಿಕಾರಿಗಳು ತಡವಾಗಿ ಬರುವುದು ಮತ್ತು ಬಾರದೇ ಇರುವುದು ಸಹಿಸಲಾಗದು. ಅಧಿಕಾರಿಗಳು ಗೈರಾಗಿ ಸಭೆ ಘನತೆಗೆ ಚ್ಯುತಿ ತಂದಿದ್ದು, ಜೊತೆಗೆ ಪ್ರತಿ ಇಲಾಖೆ ಅಧಿಕಾರಿಗಳು ಶಾಸಕರು ನಿರ್ದೇಶಿಸಿದ ವಿಷಯ ಪರಿಪಾಲಿಸದೆ ತಮಗೆ ಮನಃ ಬಂದಂತೆ ಅಧಿಕಾರ ನಡೆಸುತ್ತಿರುವುದು ಶಾಸಕರಿಗೆ ತೋರಿಸುವ ಅಗೌರವಾಗಿದೆ. ತಾಲೂಕು ಮಟ್ಟದ ಅಧಿಕಾರಿಗಳು ಶಾಸಕರ ಆದೇಶ ಪಾಲಿಸದಿದ್ದರೆ ಅವರನ್ನು ಇಟ್ಟುಕೊಂಡು ಏನು ಪ್ರಯೋಜನ. ಸಭೆಗಾದರು ಬಂದು ವಿಷಯ ಕುರಿತು ಚರ್ಚೆ ಮಾಡಬೇಕೆಂದರೆ ಸಭೆಗೂ ಬರುತ್ತಿಲ್ಲ. ಇವರ ನಡೆ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದ್ದು, ಮುಂದಿನ ಸಭೆಗೆ ಗೈರಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಅಸಾಯಕತೆ ತೋರಿದ ಇಒ: ಪ್ರತಿ ಕೆಡಿಪಿ, ಸಾಮಾನ್ಯ ಸಭೆಗೆ ಸರ್ವ ಇಲಾಖೆ ಅಧಿಕಾರಿಗಳು ಕಡ್ಡಾಯವಾಗಿ ಹಾಜರಾಗುವಂತೆ ನೋಟಿಸ್ ನೀಡಿದರೂ ಪಿಎಂಜಿಎಸ್‌ವೈ ಇಲಾಖೆ ಸೇರಿದಂತೆ ಕೆಲ ಅಧಿಕಾರಿಗಳು ಉದ್ದೇಶ ಪೂರ್ವಕವಾಗಿ ಸಭೆಗೆ ಗೈರಾಗುವುದರ ಮೂಲಕ ನೋಟಿಸ್‌ಗೆ ಅಗೌರವ ತೋರುತ್ತಿದ್ದಾರೆ. ಮೇಲಾಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ತಾಪಂ ಇಒ ತಮ್ಮ ಅಸಾಯಕತೆಯನ್ನು ಶಾಸಕರ ಎದುರು ತೋಡಿಕೊಂಡರು.
ಸಭೆಗೆ ಗೈರಾದ ಅಧಿಕಾರಿಗಳು: ಸಿಡಿಪಿಒ ಜಿ.ಆರ್. ಪವಿತ್ರ, ಗ್ರಾಮೀಣ ಕುಡಿಯುವ ನೀರು ಸರಬರಾಜ ಮತ್ತು ನೈರ್ಮಲ್ಯ ಇಲಾಖೆ ಹಾಗೂ ಜಿಪಂ ಇಲಾಖೆ ಅಧಿಕಾರಿ ನಾಗರತ್ನ, ಪಿಎಂಜಿಎಸ್‌ವೈ ಇಲಾಖೆ ಅಧಿಕಾರಿ, ತಾಲೂಕು ಆರೋಗ್ಯಾಧಿಕಾರಿ ಸುಬಾಸ ದೈಗೊಂಡ, ಸಮಾಜ ಕಲ್ಯಾಣ ಅಧಿಕಾರಿ ಎಸ್.ಬಿ. ಹರ್ತಿ, ಕಾರ್ಮಿಕಇಲಾಖೆ, ರೇಷ್ಮೆ ಇಲಾಖೆ, ಅಬಕಾರಿ, ಪೊಲೀಸ್, ತಹಶೀಲ್ದಾರ್ ಲಕ್ಷ್ಮೇಶ್ವರ, ಬಿಎಸ್ ಎನ್‌ಎಲ್, ಹೆಸ್ಕಾಂ, ಸಹಕಾರಿ ಸಂಘ, ಕೆಎಸ್ ಆರ್‌ಟಿಸಿ ಸೇರಿದಂತೆ ಶಿರಹಟ್ಟ ಹಾಗೂ ಲಕ್ಷ್ಮೇಶ್ವರ ಮುಖ್ಯಾಧಿಕಾರಿಗಳು ಸಭೆಗೆ ಗೈರು ಹಾಜರಾಗಿದ್ದರು. ಹೀಗಾಗಿ ಶಾಸಕರು ಸರ್ವ ಅಧಿಕಾರಿಗಳು ಸಭೆಗೆ ಹಾಜರಾಗದೆ ಜನರ ಸಮಸ್ಯೆಯನ್ನು ಯಾರ ಜೊತೆ ಚರ್ಚಿಸಬೇಕು ಎಂದು ಇಒ ಅವರನ್ನು ಪ್ರಶ್ನಿಸಿ, ಗೈರಾದ ಅಧಿಕಾರಿಗಳು ಅಮಾನತುಗೊಳಿಸುವಂತೆ ಸೂಚಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ
CM Siddaramaiah: ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮದು
Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ
Gadaga: ಮೂರು ದಿನಗಳ ಕಾಲ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ
Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ
Sullia: ಚಿನ್ನ ಕಳ್ಳತನ ಪ್ರಕರಣ: ಇಬ್ಬರು ಪೊಲೀಸರ ವಶಕ್ಕೆ
Mangaluru: ಎಂಸಿಸಿ ಬ್ಯಾಂಕ್ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ
Fraud Case: ಷೇರು ಮಾರುಕಟ್ಟೆಯಲ್ಲಿ ಲಾಭ ಆಮಿಷ 40.64 ಲಕ್ಷ ರೂ. ವಂಚನೆ: ಆರೋಪಿಯ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.