ಸೋರುತಿಹುದು ಪಪಂ ಮೇಲ್ಛಾವಣಿ
ಮಳೆ ನೀರಿಗೆ ಕಡತಗಳು ನೆನೆಯುವ ಆತಂಕ
Team Udayavani, Oct 18, 2019, 12:35 PM IST
ನರೇಗಲ್ಲ: ಪಟ್ಟಣ ಪಂಚಾಯತಿ ಕಟ್ಟಡ ಮಳೆಗೆ ಸೋರುತ್ತಿದ್ದು, ಕಾರ್ಯಾಲಯದಲ್ಲಿರುವ ಕಡತಗಳು ನೆನೆಯುವಂತಹ ಸ್ಥಿತಿ ನಿರ್ಮಾಣವಾಗಿದೆ. ಪಟ್ಟಣದ ಹೃದಯ ಭಾಗದ ಗದಗ ರಸ್ತೆಯಲ್ಲಿರುವ ಒಂದನೇ ಅಂತಸ್ತಿನ ಕಟ್ಟಡ ಇದಾಗಿದ್ದು, ಈ ಅಂತಸ್ತಿನ ಕಟ್ಟಡದಲ್ಲಿ ಉತಾರ ಕೊಡುವುದು ಸೇರಿದಂತೆ ವಿವಿಧ ಕೆಲಸ ಕಾರ್ಯಗಳು ನಡೆಯುತ್ತಿವೆ.
ಇಲ್ಲಿಗೆ ನಿತ್ಯ ನೂರಾರೂ ಸಾರ್ವಜನಿಕರು ಉತಾರ ಹಾಗೂ ವಿವಿಧ ಕಾರ್ಯಗಳಿಗೆ ಭೇಟಿ ನೀಡುವುದು ಸಹಜವಾಗಿದೆ. ಆದರೆ ಈಗ ಬಿಟ್ಟು ಬಿಡದೇ ಮಳೆ ಸುರಿಯುತ್ತಿರುವುದರಿಂದ ಆರ್‌ಸಿಸಿ ಕಟ್ಟಡ ಹಾಗೂ ಅಭಿಯಂತರರ ಕೊಠಡಿ ಸೋರುತ್ತಿದೆ. ಇದರಿಂದ ಸಾರ್ವಜನಿಕರು ಆಡಳಿತ ನಡೆಸುವ ಕಟ್ಟಡವೇ ಸೋರುತ್ತಿದೆ. ಅಂದರೇ ಅದರ ಗುಣಮಟ್ಟದ ಬಗ್ಗೆ ಚರ್ಚೆಯಾಗುತ್ತಿದೆ.
ಸುಮಾರು ನಾಲ್ಕೈದು ವರ್ಷಗಳ ಹಿಂದೆ 13ನೇ ಹಣಕಾಸಿಕ ಅಡಿಯಲ್ಲಿ ನಿರ್ಮಾಣವಾಗಿರುವ ಈ ಒಂದನೇ ಮಹಡಿಯ ಕಟ್ಟಡವು ಇಷ್ಟು ದೊಡ್ಡ ಪ್ರಮಾಣದಲ್ಲಿ ಮಳೆಯಾಗದೇ ಇರುವುದರಿಂದ ಇದರ ಗುಣಮಟ್ಟ ತಿಳಿದಿರಲಿಲ್ಲ. ಆದರೆ, ಈಗ ಸತತ ಮಳೆರಾಯನ ಆಗಮನದಿಂದ ಕಾಮಗಾರಿಯ ನಿಜ ಸ್ವರೂಪ ತಿಳಿದಿದೆ. ಇದನ್ನು ಕಟ್ಟಿಸಿದವರಿಗೆ ಇಲ್ಲವೇ ನಿರ್ಮಾಣ ಮಾಡಿದ ಗುತ್ತಿಗೆದಾರರ ನಿರ್ಲಕ್ಷವೋ ಕಾರಣ ತಿಳಿಯದಂತಾಗಿರುವುದರಿಂದ ಸೋರುತ್ತಿಹುದು ಕಚೇರಿಯ ಮಾಳಿಗೆ ಎನ್ನುವಂತಾಗಿದೆ.
ಕಟ್ಟಡದ ಗೋಡೆಗಳು ಮೇಲ್ಛಾವಣಿ ಆವರಣದ ಸಮಸ್ಯೆಯಿಂದ ಈ ರೀತಿಯಾಗಿ ಸೋರುತ್ತಿದೆ. ತಾರಸಿಯು ಸೋರುವುದಲ್ಲದೇ ಗೋಡೆಗಳಲ್ಲಿಯೂ ಸಹ ನೀರು ಬರಲು ಆರಂಭವಾಗಿದೆ. ಅಲ್ಲಿಂದ ಮಳೆ ನೀರು ತಂತುರು ಹನಿ ಹನಿಯಾಗಿ ಕಡತಗಳ ಮೇಲೆ ಬೀಳುತ್ತಿವೆ. ಕಚೇರಿಯಲ್ಲಿನ ಕಡತಗಳು ಹಾಗೂ ಸಾರ್ವಜನಿಕರಿಗೆ ಮತ್ತು ಅಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ತೊಂದರೆಯಾಗಿದೆ. ಇದರ ಕಡೆಗೆ ಯಾರು ಗಮನ ನೀಡದೇ ಇರುವುದು ಖೇದನೀಯ ಎಂದು ಇಲ್ಲಿನ ನಾಗರಿಕರು ವಿಷಾದಿಸಿದ್ದಾರೆ.
ಕಟ್ಟಡ ನಿರ್ಮಾಣ ಮಾಡುವ ಹಂತದಲ್ಲಿ ವಿವಿಧ ರೀತಿಯಲ್ಲಿ ಪರೀಕ್ಷೆಗಳು ನಡೆಯುತ್ತಿವೆ. ನಂತರದಲ್ಲಿ ಹಾಗೂ ಮುಕ್ತಾಯವಾಗುವ ಹಂತದಲ್ಲಿಯೂ ಪರೀಕ್ಷೆ ನಡೆಯುವುದು. ಇದು ಸರ್ಕಾರಿ ನಿಯಮ. ಆದರೆ ಇವೆಲ್ಲವುಗಳನ್ನು ಗಾಳಿಗೆ ತೂರಿ ಒಂದನೇಯ ಮಹಡಿಯನ್ನು ನಿರ್ಮಾಣ ಮಾಡಲಾಗಿದೆ.
ಇದಕ್ಕೆ ಗುತ್ತಿಗೆದಾರರು ಇಲ್ಲವೇ ಇಲಾಖೆಯ ಅಭಿಯಂತರರು ಹಾಗೂ ಸಂಬಂಧಿಸಿದ ಹಿರಿಯ ಹಾಗೂ ಕಿರಿಯ ಅಧಿ ಕಾರಿಗಳ ನಿಷ್ಕಾಳಜಿ ಕಾರಣ ಎನ್ನುವುದು ಇಲ್ಲಿನ ಜನತೆಯ ಆರೋಪವಾಗಿದೆ.
ನಾನು ಇಲ್ಲಿಗೆ ಬರುವುದಕ್ಕಿಂತ ಮುಂಚೆಯೇ ಕಟ್ಟಡ ನಿರ್ಮಾಣವಾಗದೆ. ಈಗ ಸತತವಾಗಿ ಮಳೆ ಬಂದಿದ್ದರಿಂದ ಕಟ್ಟಡ ಸೋರುತ್ತಿದೆ. ತಕ್ಷಣ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿ ಇದನ್ನು ಸರಿಪಡಿಸುವ ವ್ಯವಸ್ಥೆ ಮಾಡಲಾಗುವುದು. – ಎಸ್.ಎಸ್. ಹುಲ್ಲಮ್ಮನವರ, ಪ.ಪಂ ಮುಖ್ಯಾಧಿಕಾರಿ.
ಪಟ್ಟಣದ ಆಡಳಿತ ಯಂತ್ರದ ಮುಖ್ಯ ಕಚೇರಿಯಾಗಿರುವುದರಿಂದ ಇಲ್ಲಿಗೆ ನಿತ್ಯ ಸಾಕಷ್ಟು ಸಾರ್ವಜನಿಕರು ತಮ್ಮ ವಿವಿಧ ಕೆಲಸ ಕಾರ್ಯಗಳ ನಿಮಿತ್ತ ಆಗಮಿಸಿ ತಮ್ಮ ಕಾರ್ಯಗಳನ್ನು ಮಾಡಿಕೊಂಡು ಹೋಗುತ್ತಾರೆ. ಅಕ್ಕಪಕ್ಕದ ಹಳ್ಳಿಯ ಜನತೆ ಕಚೇರಿಗೆ ಬರುತ್ತಾರೆ. ಕಚೇರಿಯ ಗೋಡೆಗಳು ಹಾಗೂ ಮೇಲ್ಛಾವಣಿ ಸೋರುತ್ತಿರುವುದರಿಂದ ಹಳೆಯ ಕಾಗದ ಪತ್ರಗಳು ಹಾಗೂ ಕೆಲವು ಪ್ರಮುಖ ದಾಖಲೆಗಳಲ್ಲಿ ನೀರು ಸೇರಿ ಹಾಳಾಗುವ ಸಾಧ್ಯತೆ ಹೆಚ್ಚಿದೆ. –ಯಲ್ಲಪ್ಪ ಕುರಿ, ಸ್ಥಳೀಯ.
-ಸಿಕಂದರ ಎಂ. ಆರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
ಗದಗ: ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ
Gadaga: ಎಸ್ಪಿ ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ವ್ಯಕ್ತಿಗೆ 25 ಸಾವಿರ ರೂ. ವಂಚನೆ
Gadaga: ಎಸ್ಪಿ ಬಿ.ಎಸ್.ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು ವಂಚನೆಗೆ ಯತ್ನ
Gadaga: ನರಗುಂದ ಬಳಿ ಭೀಕರ ಅಪಘಾತ: ಕಾರಿಗೆ ಲಾರಿ ಡಿಕ್ಕಿ ಹೊಡೆದು ದಂಪತಿ ಸ್ಥಳದಲ್ಲೇ ಸಾವು
MUST WATCH
ಹೊಸ ಸೇರ್ಪಡೆ
Chennai: ಲಾಟರಿ ಕಿಂಗ್ ಮಾರ್ಟಿನ್‌ನ 8.8 ಕೋಟಿ ರೂ. ಇ.ಡಿ. ವಶಕ್ಕೆ
Thiruvananthapuram: ಶಬರಿಮಲೆ ಅಯ್ಯಪ್ಪ ಸ್ವಾಮಿ ದರ್ಶನ, ಮಂಡಲ ಪೂಜೆ ಶುರು
Maharashtra: ಲೈಂಗಿಕ ಕಿರುಕುಳ ನೀಡುವವರ ಪರ ಬಿಜೆಪಿ ಪ್ರಚಾರ: ಉದ್ಧವ್ ಠಾಕ್ರೆ
Congress: ರಾಹುಲ್‌ಗೆ ಸಂವಿಧಾನದ ಎಬಿಸಿ ಕೂಡ ಗೊತ್ತಿಲ್ಲ: ಸಚಿವ ಜೆ.ಪಿ.ನಡ್ಡಾ ಟೀಕೆ
Maharashtra Election: ಮಲ್ಲಿಕಾರ್ಜುನ ಖರ್ಗೆ ಬಳಿಕ ಯೋಗಿ ವಿರುದ್ಧ ಶರದ್ ಪವಾರ್ ಟೀಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.