ಗ್ರೋಸರಿ ಮಾರ್ಕೆಟ್‌ಗೆ ಪಾಟೀಲ ಭೇಟಿ
Team Udayavani, Feb 7, 2020, 2:01 PM IST
ಗದಗ: ಆಕಸ್ಮಿಕ ಬೆಂಕಿ ಅವಘಡದಿಂದ ಹಾನಿಗೊಳಗಾದ ನಗರದ ಗ್ರೇನ್ ಗ್ರೋಸರಿ ಮಾರ್ಕೆಟ್‌ಗೆ ಗುರುವಾರ ಮಾಜಿ ಶಾಸಕ ಡಿ.ಆರ್. ಪಾಟೀಲ ಭೇಟಿ ನೀಡಿ ಹಾನಿಗೊಳಗಾದ ವ್ಯಾಪಾರಸ್ಥರಿಗೆ ಸಮಾಧಾನ ಹೇಳಿದರು.
ಈ ಘಟನೆಯಿಂದಾಗಿ ಕಿರುಕೋಳ ವ್ಯಾಪಾರಸ್ಥರಿಗೆ ತುಂಬಲಾರದ ನಷ್ಟವಾಗಿದೆ. ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಉಪಜೀವನ ನಡೆಸುತ್ತಿದ್ದವರಿಗೆ ಈ ದುರ್ಘಟನೆ ಬರಸಿಡಿಲಿನಂತೆ ಅಪ್ಪಳಿಸಿದೆ. 20ಕ್ಕೂ ಹೆಚ್ಚಿನ ಸಗಟು ವ್ಯಾಪಾರಿ ಮಳಿಗೆಗಳು ಹಾಗೂ 40ಕ್ಕೂ ಹೆಚ್ಚು ಹಣ್ಣು ಕಾಯಿಪಲ್ಲೆ ಹಾಗೂ ಇತರೆ ಕಿರುಕೋಳ ವ್ಯಾಪಾರಸ್ಥರ ಅಂಗಡಿಗಳಲ್ಲಿ ಸಾಮಗ್ರಿ ದಾಸ್ತಾನುಗಳು ಸುಟ್ಟು ಭಸ್ಮವಾಗಿವೆ.
ಇದೇ ವೇಳೆ ವರ್ತಕರು ವ್ಯಾಪಾರಿ ಮಳಿಗೆ ಹಾಗೂ ದಾಸ್ತಾನು ಕಳೆದುಕೊಂಡು ವ್ಯಾಪಾರಸ್ಥರು ದಿಕ್ಕು ತೋಚದಂತಾಗಿದ್ದಾರೆ. ತೀವ್ರ ಸಂಕಷ್ಟದಲ್ಲಿರುವ ವ್ಯಾಪಾರಸ್ಥರ ಕುಟುಂಬಗಳಿಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಸಂತ್ರಸ್ತರಿಗೆ ಯೋಗ್ಯ ಪರಿಹಾರ ಕಲ್ಪಿಸಲು ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಮನವಿ ಮಾಡಿದರು.
ಜಿಪಂ ಅಧ್ಯಕ್ಷ ಸಿದ್ದು ಪಾಟೀಲ, ಹಣ್ಣು, ಹೂವು ಎಲೆ ಹಾಗೂ ಇತರೆ ಕಿರುಕೋಳ ವ್ಯಾಪಾರಸ್ಥರ ಸಂಘ ಗೌರವ ಅಧ್ಯಕ್ಷ ಶರಣಪ್ಪ ಸಾಸನೂರ, ಅಧ್ಯಕ್ಷ ಅಬ್ದುಲ್‌ರೆಹಮಾನ ಹುಯಿಲಗೋಳ, ಉಪಾಧ್ಯಕ್ಷ ರಾಜೇಸಾಬ ಅಡರಕಟ್ಟಿ, ಕಾರ್ಯದರ್ಶಿ ಶರಣು ಶಿಗ್ಲಿ, ಸಹಕಾರ್ಯದರ್ಶಿ ಮೀರಅಲಿ ಢಾಲಾಯತ, ಸದಸ್ಯರುಗಳಾದ ಹಾಜಿ ಮಹ್ಮದ್ ಅಲಿ ಕಲೇಗಾರ, ಎ.ಎನ್. ಅನ್ಸಾರಿ, ರಿಯಾಜ ಅನ್ವರ್ ಖಾಜಿ, ವೆಂಕಟರಮನ್ ಗುತ್ತಲ, ರಿಹಾನ್ ಕಾಟಾಪುರ, ಮಹ್ಮದ್‌ಅಲಿ ರೋಣ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Property: 2019ರಲ್ಲೇ ಗದಗ ಹಾಲಕೆರೆ ಮಠದ 11.19 ಎಕರೆ ವಕ್ಫ್‌ಗೆ!
ಗದಗ: ಭೀಷ್ಮ ಕೆರೆಗೆ ಸಚಿವ ಎಚ್.ಕೆ. ಪಾಟೀಲ ಬಾಗಿನ ಅರ್ಪಣೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Waqf Issue: ಐದು ವರ್ಷ ಹಿಂದೆ ವಕ್ಫ್ ಆಸ್ತಿ ವಿರುದ್ಧ ಹೋರಾಡಿ ಗೆದ್ದಿದ್ದ 315 ರೈತರು
Gadaga: ಐತಿಹಾಸಿಕ ವೀರನಾರಾಯಣ ದೇವಸ್ಥಾನ ಪುನರುತ್ಥಾನ ಕಾರ್ಯಕ್ಕೆ ಚಾಲನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.