ಬೆಲೆ ಏರಿಕೆಯಿಂದ ಜನರಿಗೆ ಸಂಕಷ್ಟ; ಮಾಜಿ ಶಾಸಕ ಜಿ.ಎಸ್.ಪಾಟೀಲ್
ಯುವಕರು ಮುಂದಿನ ದಿನಮಾನಗಳಲ್ಲಿ ಬಿಜೆಪಿ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ
Team Udayavani, Sep 21, 2022, 6:32 PM IST
ಮುಂಡರಗಿ: ರಾಜ್ಯ ಮತ್ತು ಕೇಂದ್ರ ಬಿಜೆಪಿ ಸರ್ಕಾರಗಳ ಆಡಳಿತ ವೈಫಲ್ಯಗಳು, ಕೈಗೊಂಡ ನಿರ್ಧಾರಗಳು ಜನಸಾಮಾನ್ಯರಿಗೆ ಹೊರೆಯಾಗುತ್ತಿವೆ. ಅಡುಗೆ ಅನಿಲ ಸಿಲಿಂಡರ್, ಪೆಟ್ರೋಲ್, ಡೀಸೆಲ್, ದಿನಬಳಕೆಯ ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯಿಂದ ಸಾಮಾನ್ಯ ಜನರು ಸಂಕಷ್ಟದಲ್ಲಿದ್ದಾರೆ ಎಂದು ಮಾಜಿ ಶಾಸಕ ಜಿ.ಎಸ್.ಪಾಟೀಲ್ ಹೇಳಿದರು.
ತಾಲೂಕಿನ ಹಿರೇವಡ್ಡಟ್ಟಿ ಗ್ರಾಮದ ಶ್ರೀ ಮೃತ್ಯುಂಜಯ ಕಲ್ಯಾಣ ಮಂಟಪದಲ್ಲಿ ಬೂತ್ ಅಧ್ಯಕ್ಷರ ಪ್ರತಿನಿ ಧಿಗಳ, ಬೂತ್ ಮಟ್ಟದ ಏಜೆಂಟರ ಸಭೆ ಮತ್ತು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಹಿರೇವಡ್ಡಟ್ಟಿ ಗ್ರಾಮದ ಬಿಜೆಪಿ ಪ್ರಧಾನ ಕಾರ್ಯದರ್ಶಿ ನಾಗರಾಜ ಕಾಟರಳ್ಳಿ, ನಿಂಗಪ್ಪ ಚಿಟ್ಟಿ, ಬಸವಣ್ಣೆಪ್ಪ ಚಿಟ್ಟಿ, ಮಹಾಂತೇಶ ಮಲ್ಲಜ್ಜ ಹಡಪದ, ಉಮೇಶ ಹಡಪದ, ಚನ್ನಪ್ಪ ಅಂಕದ, ಶರಣಪ್ಪ ಕಾಮಣ್ಣವರ, ಹಾರೋಗೇರಿ ಗ್ರಾಮದ ಶಿವು ಹಳ್ಳಿ, ಪ್ರವೀಣ ಕೋಟಿ, ಸಚಿನ ಬಜಮ್ಮನವರ, ಭೀಮೇಶ ವೆಂಕಟಾಪೂರ, ಪುಟ್ಟರಾಜ ಹಡಪದ, ಮುತ್ತಪ್ಪ ಬಂಡಿವಡ್ಡರ, ಬಸವರಾಜ ಹಳ್ಳಿ, ಚಿಕ್ಕವಡ್ಡಟ್ಟಿ ಗ್ರಾಮದ ಬಸವರಾಜ ಭಜಂತ್ರಿ ಸೇರಿದಂತೆ ನೂರಾರು ಯುವಕರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮಾತನಾಡಿದರು.
ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಕಡುಬಡವರು, ಯುವಕರು, ಜನಸಾಮಾನ್ಯರ ಹಿತದ ಸಲುವಾಗಿ ಸಾವಿರಾರು ಯೋಜನೆಗಳು ಜಾರಿಗೆ ತಂದಿದೆ. ಅಲ್ಲದೇ, ದೇಶವನ್ನು ಸುಭದ್ರವಾಗಿ ಕಟ್ಟಿದ ಶ್ರೇಯಸ್ಸು ಕಾಂಗ್ರೆಸ್ ಪಕ್ಷದ್ದಾಗಿದೆ ಎಂದರು.
ಕಾಂಗ್ರೆಸ್ ಪಕ್ಷದ ಸಿದ್ಧಾಂತಗಳು ಮತ್ತು ಸರ್ವಜನರ ಐಕ್ಯತೆಯ ಜೊತೆಗೆ ದೇಶ ಕಟ್ಟುವ ಕೇಂದ್ರವಾಗಿರುವ ಪಕ್ಷದ ವಿಚಾರಗಳಿಗೆ ಒಪ್ಪಿಕೊಂಡು ಯುವಕರು ಕಾಂಗ್ರೆಸ್‌ಗೆ ಸೇರುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ದೇಶದ ಕಟ್ಟಕಡೆ ವ್ಯಕ್ತಿಯ ಹಿತಕ್ಕಾಗಿ ಶ್ರಮಿಸುತ್ತಾ ಬರುತ್ತಿರುವ ಪಕ್ಷ ಎಂದು, ದೇಶ ಮತ್ತು ರಾಜ್ಯದ ಜನರು ಕಾಂಗ್ರೆಸ್‌ಗೆ ಮತ್ತೆ ಒಲವು ತೋರಿಸುತ್ತಿದ್ದಾರೆ ಎಂದು ಹೇಳಿದರು.
ಕುರಿ ಮತ್ತು ಉಣ್ಣೆ ನಿಗಮದ ಮಾಜಿ ಅಧ್ಯಕ್ಷ ವೈ.ಎನ್.ಗೌಡರ ಮಾತನಾಡಿ, ಬಿಜೆಪಿ ಪಕ್ಷ ದುರಾಡಳಿತ, ಸ್ವಜನ ಪಕ್ಷಪಾತ, ಭ್ರಷ್ಟಾಚಾರದ ಜತೆಗೆ ರಾಮ-ಲಕ್ಷ್ಮಣರಂತಿದ್ದ ಜನರಲ್ಲಿ ಕೋಮು ದ್ವೇಷ ಬಿತ್ತುತ್ತಿದೆ. ಅಲ್ಲದೇ, ಸುಳ್ಳು ಹೇಳುವ ಪ್ರಧಾನಿ ನರೇಂದ್ರ ಮೋದಿಯವರು ಕೆಲ ಖಾಸಗಿ ಕಂಪನಿಗಳ ಹಿತಕ್ಕಾಗಿ ಸರ್ಕಾರಿ ಸ್ವಾಮ್ಯದ ಏರ್ ಇಂಡಿಯಾ, ರೈಲ್ವೆ, ಎಲ್‌ಐಸಿ, ಬಿಎಸ್‌ಎನ್‌ಎಲ್ ನಂತಹ ಹಲವಾರು ಸಂಸ್ಥೆಗಳನ್ನು ಮಾರುವುದರ ಮೂಲಕ ದೇಶದ ಯುವಕರನ್ನು ಮತ್ತು ದೇಶವನ್ನು ಸಂಕಷ್ಟಕ್ಕೆ ದೂಡುತ್ತಿದ್ದಾರೆ. ಇದನ್ನರಿತಿರುವ ಯುವಕರು ಮುಂದಿನ ದಿನಮಾನಗಳಲ್ಲಿ ಬಿಜೆಪಿ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ವಿ.ಆರ್. ಗುಡಿಸಾಗರ, ಮಂಜುನಾಥ ಮುಂಡವಾಡ, ರಾಮು ಕಲಾಲ್, ಲೋಕಪ್ಪ ನಂದಿಕೋಲ, ಹನಮರಡ್ಡಿ ಮೇಟಿ, ಅಬ್ದುಲ್ ರೆಹಮಾನ ಕಲಕೇರಿ, ಹನುಮಂತಪ್ಪ ಶಿರುಂದ, ಹಾಲಪ್ಪ ಹರ್ತಿ, ಜ್ಯೋತಿ ಕುರಿ, ಪುಲಕೇಶಗೌಡ ಪಾಟೀಲ್, ಮಾಬುಸಾಬ ಮುಂಡರಗಿ, ಅಲ್ಲಾಸಾಬ ಕಮ್ಮಾರ, ರಾಜೀವ ಸಂಗನಾಳ, ಭೀಮರಡ್ಡಿ ರಾಜೂರ, ನಾಗರಾಜ ಯಳವತ್ತಿ, ಹುಲಗೇಶ ನಾಗರಳ್ಳಿ, ಶಿವಕುಮಾರಸ್ವಾಮಿ ಹಿರೇಮಠ, ಮನೋಜ ರಾಠೊಡ, ಭುವನೇಶ್ವೇರಿ ಕಲ್ಲಿಕುಟಿಗರ, ಎಚ್. ಎಂ.ಶಿರುಂದ, ಸುರೇಶ ಮುಪ್ಪಣ್ಣಿ, ಸುಭಾಸ ಹಳ್ಳಿಗುಡಿ, ವಾಜೀದ ಅಲಿ ಮುಲ್ಲಾ, ದಾವಲಸಾಬ ತೋಟದ, ಹನುಮಂತಪ್ಪ ಉಪ್ಪಾರ, ಚೆನ್ನಪ್ಪ ಜುಂಜರ, ಗರಿಬಸಾಬ ಮುಲ್ಲಾ, ಶರಣಪ್ಪ ಕುಂದ್ರಳ್ಳಿ, ಗವಿಸಿದ್ದಪ್ಪ ಜಂಗನವಾರಿ ಸೇರಿದಂತೆ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.