ಸೂರ್ಯಕಾಂತಿಗೆ ಕೀಟಬಾಧೆ : ರೈತರಿಗೆ ಸಂಕಷ್ಟ
ಎಲೆ ತಿಂದು ಬೆಳೆ ಹಾಳು ಮಾಡುತ್ತಿವೆ ಕಂಬಳಿ ಹುಳುಗಳು| ಕ್ರಿಮಿನಾಶಕ ಖರೀದಿಗೂ ಸಾಧ್ಯವಾಗದ ಸ್ಥಿತಿಯಲ್ಲಿ ಅನ್ನದಾತ
Team Udayavani, Oct 12, 2021, 10:45 PM IST
ಲಕ್ಷ್ಮೆಶ್ವರ: ತಾಲೂಕಿನಲ್ಲಿ ಹಿಂಗಾರು ಹಂಗಾಮಿನಲ್ಲಿ ಬೆಳೆದ ಸೂರ್ಯಕಾಂತಿಗೆ ಇದೀಗ ಕೀಟಬಾಧೆ ಆವರಿಸಿರುವುದರಿಂದ ರೈತರಿಗೆ ನೆಮ್ಮದಿ ಇಲ್ಲದಂತಾಗಿದೆ. ಮುಂಗಾರಿನಲ್ಲಿ ಅತಿವೃಷ್ಟಿ, ಹವಾಮಾನ ವೈಪರೀತ್ಯ, ಕೀಟ, ರೋಗಬಾಧೆಯ ಸಂಕಷ್ಟದಿಂದ ರೈತ ಸಮುದಾಯ ಪಾರಾಗುವಷ್ಟರಲ್ಲಿಯೇ ಮತ್ತೆ ಹಿಂಗಾರಿನ ಬಿತ್ತನೆ ಚಿಂತೆ, ಬಿತ್ತನೆ ಮಾಡಿ ಬೆಳೆದ ಬೆಳೆಗೆ ಕೀಟಬಾಧೆ ಆವರಿಸಿರುವುದು ರೈತರ ಸಂಕಷ್ಟಗಳಿಗೆ ತುಪ್ಪ ಸುರಿದಂತಾಗಿದೆ.
ಮುಂಗಾರಿನ ಶೇಂಗಾ, ಹತ್ತಿ, ಉಳ್ಳಾಗಡ್ಡಿಯಂತಹ ವಾಣಿಜ್ಯ ಬೆಳೆಗಳು ಕೆಲ ರೈತರ ಕೈ ಹಿಡಿದರೆ, ಮತ್ತೆ ಕೆಲ ರೈತರು ಕೈ ಸುಟ್ಟುಕೊಂಡಿದ್ದಾರೆ. ಕಡಿಮೆ ಖರ್ಚಿನಲ್ಲಿ ಉತ್ತಮ ಆದಾಯದ ನಿರೀಕ್ಷೆ ಮತ್ತು ಸದ್ಯ ಮಾರುಕಟ್ಟೆಯಲ್ಲಿ ಸೂರ್ಯಕಾಂತಿಗೆ ಉತ್ತಮ ಬೆಲೆ ಇರುವುದರಿಂದ ಅನೇಕ ರೈತರು ಶೇಂಗಾ,ಹೆಸರು ಬೆಳೆದ ಹೊಲ ಹದಗೊಳಿಸಿ, ನೀರಾವರಿ ಜಮೀನಿನಲ್ಲಿ ಸೂರ್ಯಕಾಂತಿ ಬೆಳೆದಿದ್ದಾರೆ. ಸೆಪ್ಟೆಂಬರ್ ಮೊದಲ ವಾರದಲ್ಲಿ ಬಿತ್ತನೆ ಮಾಡಿದ ಬೆಳೆ ಹುಲುಸಾಗಿಯೇ ಬೆಳೆದು ನಿಂತಿದೆ. ಆದರೆ, ಬೆಳೆ ತುಂಬ ಕೀಟ, ಕಂಬಳಿ ಹುಳುಗಳು ಆವರಿಸಿಕೊಂಡು ಎಲೆಗಳನ್ನು ಸಂಪೂರ್ಣ ತಿಂದು ದೇಟು ಮಾತ್ರ ಉಳಿಯುತ್ತಿರುವುದರಿಂದ ರೈತರು ಚಿಂತೆಗೀಡಾಗಿದ್ದಾರೆ.
ಕೃಷಿ ಇಲಾಖೆ ಮೂಲಗಳಿಂದ ಲಭ್ಯವಾಗಿರುವ ಮಾಹಿತಿ ಪ್ರಕಾರ ತಾಲೂಕಿನಲ್ಲಿ ಖುಷ್ಕಿ ಮತ್ತು ನೀರಾವರಿ ಸೇರಿ ಒಟ್ಟು 6250 ಎಕರೆ ಪ್ರದೇಶದಲ್ಲಿ ಸೂರ್ಯಕಾಂತಿ ಬೆಳೆಯಲಾಗಿದೆ. ಲಕ್ಷ್ಮೆಶ್ವರ, ಶಿಗ್ಲಿ, ಸೂರಣಗಿ, ಬಡ್ನಿ, ಗೊಜನೂರ, ಅಡರಕಟ್ಟಿ, ಆದ್ರಳ್ಳಿ, ಹರದಗಟ್ಟಿ, ದೊಡ್ಡೊರ ವ್ಯಾಪ್ತಿಯ ಜಮೀನುಗಳಲ್ಲಿ ಸೂರ್ಯಕಾಂತಿ ಬೆಳೆಯಲಾಗಿದೆ. ಆರಂಭದಲ್ಲಿಯೇ ಕೀಟಬಾಧೆಯಿಂದ ಇಳುವರಿ ಕುಸಿತದ ಜತೆಗೆ ಕಾಳು ಟೊಳ್ಳಾಗುವ ಆತಂಕ ರೈತರದ್ದಾಗಿದೆ. ಕೀಟ ನಿಯಂತ್ರಣಕ್ಕಾಗಿ ರೈತರು ಕ್ರಿಮಿನಾಶಕ ಸಿಂಪಡಣೆ ಕಾರ್ಯದಲ್ಲಿ ತೊಡಗಿರುವುದು ಕಂಡು ಬರುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗಜೇಂದ್ರಗಡ: ಸೂಡಿ ಉತ್ಸವಕ್ಕೆ ತೋರಬೇಕಿದೆ ಇಚ್ಛಾಶಕ್ತಿ-ಹಾಳು ಕೊಂಪೆಯಾದ ಸ್ಮಾರಕ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
ಗದಗ: ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ
Gadaga: ಎಸ್ಪಿ ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ವ್ಯಕ್ತಿಗೆ 25 ಸಾವಿರ ರೂ. ವಂಚನೆ
Gadaga: ಎಸ್ಪಿ ಬಿ.ಎಸ್.ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು ವಂಚನೆಗೆ ಯತ್ನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.