ವರ್ಷದ ನಂತರ ಮರಣೋತ್ತರ ಪರೀಕ್ಷೆ!: ಮತ್ತೆ ಅಗೆಯಲಾಗುತ್ತಿದೆ ಸಮಾಧಿ
Team Udayavani, Sep 21, 2019, 2:07 PM IST
ನರೇಗಲ್ಲ(ಗದಗ): ವರ್ಷದ ಹಿಂದೆ ಅನುಮಾಸ್ಪದವಾಗಿ ಸಾವಿಗೀಡಾಗಿದ್ದ ವ್ಯಕ್ತಿಯೊಬ್ಬರ ಮರಣೋತ್ತರ ಪರೀಕ್ಷೆಗಾಗಿ ಉಪವಿಭಾಗಾಧಿಕಾರಿ ಪಿ.ಎಸ್.ಮಂಜುನಾಥ ನೇತೃತ್ವದಲ್ಲಿ ಶನಿವಾರ ಜಕ್ಕಲಿ ಗ್ರಾಮದ ಸಮಾಧಿಯನ್ನು ಅಗೆಯಲಾಗುತ್ತಿದೆ.
ಗ್ರಾಮದ ಮೆಣಸಿನಕಾಯಿ ವ್ಯಾಪಾರಿ ಚನ್ನವೀರಪ್ಪ ವೀರಪ್ಪ ಶೆಟ್ಟರ್(ಗುಗ್ಗರಿ)(40) ಎಂಬುವವರು 9-6-2018ರಂದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಭಾವಿಸಿ, ಕುಟುಂಬಸ್ಥರು ಸಾಂಪ್ರದಾಯಿಕವಾಗಿ ಅಂತ್ಯಕ್ರಿಯೆ ನೆರವೇರಿಸಿದ್ದರು. ಬಳಿಕ ಆತನ ಸಾವಿನ ಬಗ್ಗೆ ಸಂಶಯಗೊಂಡ ಮತೃನ ಪತ್ನಿ ಸುಮಾ, ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಶವ ಪರೀಕ್ಷೆಗಾಗಿ ಜಕ್ಕಲಿ ಗ್ರಾಮದಲ್ಲಿ ಪುರಸಭೆ ಸಿಬ್ಬಂದಿ ಹಾಗೂ ಜೆಸಿಬಿ ಯಂತ್ರಗಳನ್ನು ಬಳಸಿ, ಶವ ಹೊರ ತೆಗೆಯಲಾಗುತ್ತಿದೆ.
ಸ್ಥಳದಲ್ಲಿ ರೋಣ ಪಿಎಸ್‌ಐ ಜೂಲಕಟ್ಟಿ, ಆರೋಗ್ಯ ಇಲಾಖೆ ವೈದ್ಯರು ಹಾಗೂ ಸಿಬ್ಬಂದಿ ಮುಕ್ಕಾಂ ಹೂಡಿದ್ದಾರೆ. ವರ್ಷದ ಬಳಿಕ ಸಮಾಧಿಯಿಂದ ಶವ ಹೊರ ತೆಗೆಯುತ್ತಿರುವ ಸುದ್ದಿ ತಿಳಿಯುತ್ತಿದ್ದಂತೆ ಸುತ್ತಲಿನ ಗ್ರಾಮಸ್ಥರು ಕುತೂಹಲದಿಂದ ತಂಡೋಪ ತಂಡವಾಗಿ ಆಗಮಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Property: 2019ರಲ್ಲೇ ಗದಗ ಹಾಲಕೆರೆ ಮಠದ 11.19 ಎಕರೆ ವಕ್ಫ್‌ಗೆ!
ಗದಗ: ಭೀಷ್ಮ ಕೆರೆಗೆ ಸಚಿವ ಎಚ್.ಕೆ. ಪಾಟೀಲ ಬಾಗಿನ ಅರ್ಪಣೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Waqf Issue: ಐದು ವರ್ಷ ಹಿಂದೆ ವಕ್ಫ್ ಆಸ್ತಿ ವಿರುದ್ಧ ಹೋರಾಡಿ ಗೆದ್ದಿದ್ದ 315 ರೈತರು
Gadaga: ಐತಿಹಾಸಿಕ ವೀರನಾರಾಯಣ ದೇವಸ್ಥಾನ ಪುನರುತ್ಥಾನ ಕಾರ್ಯಕ್ಕೆ ಚಾಲನೆ
MUST WATCH
ಹೊಸ ಸೇರ್ಪಡೆ
Digital arrest: ವೃದ್ಧೆಗೆ ಡಿಜಿಟಲ್ ದಿಗ್ಬಂಧನ ಹಾಕಿ 10.21 ಲ. ರೂ. ಕಿತ್ತ ಸೈಬರ್ ವಂಚಕ
Director Guruprasad: ಗುರುಪ್ರಸಾದ್‌ಗೆ ಸಾಲ ಕೊಟ್ಟವರ ತನಿಖೆಗೆ ಸಿದ್ಧತೆ
Drunk & Drive Case: ಅತಿ ವೇಗದ ಚಾಲನೆ: 522 ಕೇಸ್, 1.29 ಲಕ್ಷ ದಂಡ
Bengaluru: ನಿಲ್ಲದ ಪಟಾಕಿ ಅವಘಡ: ಮತ್ತೆ 10 ಮಂದಿ ಕಣ್ಣಿಗೆ ತೊಂದರೆ
Sandalwood: ಕರಾವಳಿ ಸಂಸ್ಕೃತಿ ಸುತ್ತ ದಿಂಸೋಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.