ಅಜಗುಂಡಿ ರಸ್ತೆಯಲ್ಲಿ ನಿತ್ಯ ಪರದಾಟ
Team Udayavani, Sep 14, 2019, 11:41 AM IST
ನರಗುಂದ: ನರಗುಂದ-ರಾಮದುರ್ಗ ತಾಲೂಕುಗಳ ಗಡಿಭಾಗದಲ್ಲಿರುವ ಅಜಗುಂಡಿ ರಸ್ತೆ ಹದಗೆಟ್ಟಿರುವುದು.
ನರಗುಂದ: ಪೂರಕವಾಗಿ ನರಗುಂದ ಮತ್ತು ರಾಮದುರ್ಗ ತಾಲೂಕುಗಳ ಗಡಿಭಾಗದ ಅಜಗುಂಡಿ ರಸ್ತೆಯ ಅವ್ಯವಸ್ಥೆಯಿಂದ ಈ ಭಾಗದ ಅನ್ನದಾತರು ನಿತ್ಯ ಪರದಾಡುವಂತಾಗಿದೆ.
ನರಗುಂದ ತಾಲೂಕು ಬೆಳ್ಳೇರಿ ಗ್ರಾಮದಿಂದ 1 ಕಿಮೀ ದೂರಕ್ಕೆ ತಾಲೂಕು ಹದ್ದು ಮುಗಿದು ರಾಮದುರ್ಗ ತಾಲೂಕು ಹದ್ದು ಪ್ರಾರಂಭವಾಗುತ್ತದೆ. ಈ ಗಡಿಭಾಗದಲ್ಲಿ ರಾಮದುರ್ಗ ತಾಲೂಕಿನ ಕಲಹಾಳ ಗ್ರಾಮದ ಅಂಚಿಗಿದೆ ಅಜಗುಂಡಿ ರಸ್ತೆ. ಅಜಗುಂಡಿ ರಸ್ತೆಯ ಎರಡೂ ಕಡೆಗೆ ನರಗುಂದ ಮತ್ತು ರಾಮದುರ್ಗ ಹದ್ದು ಬರುತ್ತದೆ. ಈ ರಸ್ತೆ ನರಗುಂದ ವ್ಯಾಪ್ತಿಗೆ ಬರುತ್ತದೆ. ಎರಡು ತಿಂಗಳ ಹಿಂದೆ ರಸ್ತೆಯ ಪಕ್ಕದ ಸರುವಿನಲ್ಲಿ ನೀರು ಹರಿದು ರಸ್ತೆ ಎಲ್ಲೆಂದರಲ್ಲಿ ಕೊರೆದಿದೆ. ಇದರಿಂದ ರೈತರ ಸಂಚಾರಕ್ಕೆ ತೊಂದರೆಯಾಗಿದೆ.
ಅಜಗುಂಡಿ ರಸ್ತೆಗೆ ಹೊಂದಿಕೊಂಡು ನರಗುಂದ ತಾಲೂಕಿನ ವಾಸನ, ಬೆಳ್ಳೇರಿ, ಕೊಣ್ಣೂರ ಮತ್ತು ರಾಮದುರ್ಗ ತಾಲೂಕಿನ ಕಲಹಾಳ ಗ್ರಾಮಗಳ 600ಕ್ಕೂ ಹೆಚ್ಚು ಎಕರೆ ಕೃಷಿ ಪ್ರದೇಶವಿದೆ. ಈ ಭಾಗದ ರೈತರಿಗೆ ಇದೇ ಪ್ರಮುಖ ರಸ್ತೆಯಾಗಿದ್ದರಿಂದ ರಸ್ತೆ ಅವ್ಯವಸ್ಥೆ ತೊಂದರೆಗೀಡು ಮಾಡಿದೆ.
ರೈತರ ಕೋರಿಕೆ ಮೇರೆಗೆ ವಾಸನ ಗ್ರಾಮ ಪಂಚಾಯತ್ ವತಿಯಿಂದ 4-5 ವರ್ಷಗಳ ಹಿಂದೆ ರಸ್ತೆ ಸುಧಾರಣೆ ಮಾಡಲಾಗಿತ್ತು ಎನ್ನುತ್ತಾರೆ ರೈತರು. ಈಗ ಮತ್ತೆ ರಸ್ತೆ ಹದಗೆಟ್ಟು ಕೃಷಿ ಚಟುವಟಿಕೆಗಳಿಗೆ ಸಾಗಲು ಸಾಕಷ್ಟು ಕಷ್ಟಪಡುವಂತಾಗಿದೆ. ಕೂಡಲೇ ರಸ್ತೆ ದುರಸ್ತಿ ಮಾಡಿ ರೈತರ ನೆರವಿಗೆ ಧಾವಿಸಬೇಕು ಎಂದು ರೈತರಾದ ಹನಮಂತ ಮಡಿವಾಳರ, ಸಿದ್ದಲಿಂಗಪ್ಪ ಜಗ್ಗಲ, ಭರಮಪ್ಪ ಜಗ್ಗಲ, ಎಚ್.ವಿ. ಪಾಟೀಲ, ಗುರನಗೌಡ ಪಾಟೀಲ, ಎಸ್.ವಿ. ಪಾಟೀಲ, ಸಿದ್ದಲಿಂಗಪ್ಪ ಅರಳಿಸೀಮಿ ಆಗ್ರಹಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ
CM Siddaramaiah: ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮದು
Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ
Gadaga: ಮೂರು ದಿನಗಳ ಕಾಲ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ: ಸಿಎಂ ಸಿದ್ದರಾಮಯ್ಯ
Gadaga: ಪಂಚಮಸಾಲಿ ಮೀಸಲಾತಿ ಹೋರಾಟಗಾರರು ಪೊಲೀಸ್ ವಶಕ್ಕೆ
MUST WATCH
ಹೊಸ ಸೇರ್ಪಡೆ
Whale: ಅಂಬರ್ ಗ್ರೀಸ್ ಮಾರಾಟ ಜಾಲ ಶಂಕೆ: ಕಾರ್ಯಾಚರಣೆಗೆ ಬಂದಿದ್ದ ಅಧಿಕಾರಿಗಳಿಗೆ ಹಲ್ಲೆ!
Bill Amendment: ರಾಜ್ಯಪಾಲರ ಕುಲಾಧಿಪತಿ ಅಧಿಕಾರಕ್ಕೆ ಕತ್ತರಿ: ಮೇಲ್ಮನೆಯಲ್ಲೂ ಅಂಗೀಕಾರ
GST: ಜೊಮ್ಯಾಟೊ, ಸ್ವಿಗ್ಗಿ ತಾಣಗಳ ಮೇಲೆ ಶೇ.5 ಜಿಎಸ್‌ಟಿ ಕಡಿತ?
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
Surathkal: ತಡಂಬೈಲ್‌ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.