ರೇಷ್ಮೆ ನೂಲು ಬಿಚ್ಚಾಣಿಕೆ ಘಟಕಕ್ಕೆ ವಿದ್ಯುತ್ ಕಟ್
ರೇಷ್ಮೆ ನೂಲು ಬಿಚ್ಚುವ ರೀಲರ್‌ಗಳು ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
Team Udayavani, Jan 31, 2022, 6:23 PM IST
ಶಿರಹಟ್ಟಿ: ಶಿರಹಟ್ಟಿಯ ಸರಕಾರಿ ರೇಷ್ಮೆ ಗೂಡು ಮಾರುಕಟ್ಟೆ ಹಲವಾರು ವರ್ಷಗಳಿಂದ ವಹಿವಾಟು ನಡೆಸುತ್ತಿದೆ. ನಿತ್ಯವೂ 14-15 ಜಿಲ್ಲೆಗಳಿಂದ ರೈತರು ತಾವು ಬೆಳೆದಂತಹ ರೇಷ್ಮೆ ಗೂಡನ್ನು ಇಲ್ಲಿಗೆ ತಂದು ಮಾರಾಟ ಮಾಡುತ್ತಾರೆ. ಹೀಗೆ ಬರುವಂತಹ ರೈತರಿಗೆ ಸದಾ ಒಂದಿಲ್ಲೊಂದು ಸಂಕಷ್ಟ ಎದುರಾಗುತ್ತಿದ್ದು, ಇದೀಗ ಸರಕಾರಿ ಸಾಮೂಹಿಕ ರೇಷ್ಮೆ ನೂಲು ಬಿಚ್ಚುವ ಘಟಕಗಳ ಪವರ್ ಕಟ್ ಆಗಿರುವುದರಿಂದ ಸರಕಾರದಿಂದ ಪರವಾನಗಿ ಪಡೆದ ರೀಲರ್ ಗಳು ರೇಷ್ಮೆ ಇಲಾಖೆಯ ನಿರ್ಲಕ್ಷ್ಯಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ವಿದ್ಯುತ್ ಬಿಲ್ ಪಾವತಿಸದ್ದಕ್ಕೆ ಪವರ್ ಕಟ್:
ಶಿರಹಟ್ಟಿ ರೇಷ್ಮೆ ಇಲಾಖೆಯ ಸರಕಾರಿ ಸಾಮೂಹಿಕ ರೇಷ್ಮೆ ನೂಲು ಬಿಚ್ಚುವ ಘಟಕಗಳಲ್ಲಿ ಸುಮಾರು 10-11ಜನ ಸರಕಾರದಿಂದ ಪರವಾನಗಿ ಪಡೆದ ಫಲಾನುಭವಿಗಳು ರೇಷ್ಮೆ ರೀಲಿಂಗ್ ನಡೆಸುತ್ತಿದ್ದು, ಈ ಘಟಕಗಳಿಗೆ ರೀಲರ್‌ಗಳು ವಿದ್ಯುತ್ ಬಿಲ್ ತುಂಬುತ್ತಾರೆ. ರೇಷ್ಮೆ ಇಲಾಖೆಯಿಂದ ಪಾವತಿಸಬೇಕಾದ ಬೋರ್‌ವೆಲ್ ಹಾಗೂ ಹಾಟ್ ಅಂಡ್ ಡ್ರೆ„ ಘಟಕಗಳ ವಿದ್ಯುತ್ ಬಿಲ್ ಬಾಕಿ ಇರುವುದರಿಂದ ಇಡೀ ಸಂಕೀರ್ಣದ ವಿದ್ಯುತ್ ಸರಬರಾಜು ಕಡಿತಗೊಂಡಿದೆ. ಇದರಿಂದ ಸಹಜವಾಗಿಯೇ ರೇಷ್ಮೆ ನೂಲು ಬಿಚ್ಚುವ ರೀಲರ್‌ಗಳು ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನಷ್ಟ ಭರಿಸೋರು ಯಾರು?: ರೇಷ್ಮೆ ಗೂಡು ಖರೀದಿ ಮಾಡಿದ ನಂತರ ಸಮಯಕ್ಕೆ ಸರಿಯಾಗಿ ಗೂಡು ಬಿಚ್ಚಾಣಿಕೆ ಮಾಡದೇ ಹೋದರೆ ಗೂಡಿನಲ್ಲಿ ಚಿಟ್ಟೆ ಹೊರಬರುವ ಸಾಧ್ಯತೆ ಇರುತ್ತದೆ. ಇದರಿಂದಾಗುವ ನಷ್ಟವನ್ನು ನಮಗೆ ಯಾರು ಭರಿಸಿಕೊಡುತ್ತಾರೆ. ಘಟಕಗಳ ಉಸ್ತುವಾರಿ ನೋಡಿಕೊಳ್ಳಬೇಕಾದ ಅಧಿಕಾರಿಗಳು ವಾರಕ್ಕೆ ಒಮ್ಮೆಯಾದರೂ ಭೇಟಿ ನೀಡದೇ ಇದ್ದುದರಿಂದ ಇಂತಹ ಸಮಸ್ಯೆಗಳು ಉದ್ಭವಿಸುತ್ತಿವೆ ಎಂದು ಇಲ್ಲಿಯ ಬಹುತೇಕ ರೀಲರ್‌ಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ರೈತರಿಗೂ ತೊಂದರೆ: ನೂಲು ಬಿಚ್ಚುವ ಘಟಕಗಳಲ್ಲಿ ಪವರ್ ಕಟ್ ಆಗಿರುವುದರಿಂದ ಕಳೆದ 4-5 ದಿನಗಳಿಂದ ದೂರದ ಜಿಲ್ಲೆಗಳಿಂದ ರೇಷ್ಮೆ ಗೂಡು ಮಾರುಕಟ್ಟೆಗೆ ರೈತರು ಆಗಮಿಸುತ್ತಿದ್ದು, ರೇಷ್ಮೆ ಗೂಡು ಖರೀದಿಸಲು ರೀಲರ್‌ಗಳು ಸಹ ಮುಂದೆ ಬರುತ್ತಿಲ್ಲ. ಇದರಿಂದ ರೈತರು ಅನಿವಾರ್ಯವಾಗಿ ಇಲ್ಲಿಯ ಅವ್ಯವಸ್ಥೆಗೆ ಹಿಡಿಶಾಪ ಹಾಕಿ ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಬೇರೆ ಕಡೆಗೆ ತೆರಳುತ್ತಿದ್ದಾರೆ.
ಸರಕಾರ ಸಮಸ್ಯೆ ನಿವಾರಿಸಲಿ: ಅಕ್ಕಿ ಈ ಕುರಿತು ಪ್ರತಿಕ್ರಿಯಿಸಿದ ರೀಲರ್ ಸಂಘದ ಅಧ್ಯಕ್ಷ ಚಂದ್ರಕಾಂತ ಅಕ್ಕಿ, ರೇಷ್ಮೆ ಇಲಾಖೆ ಅಧಿಕಾರಿಗಳು ನೂಲು ಬಿಚ್ಚುವ ಘಟಕಗಳಿಗೆ ಸರಿಯಾಗಿ ಭೇಟಿ ನೀಡದೇ ಇದ್ದುದರಿಂದ ಅವರ ನಿರ್ಲಕ್ಷ್ಯ ಹಾಗೂ ವಿದ್ಯುತ್ ಬಿಲ್ ಪಾವತಿ ಮಾಡದ್ದರಿಂದ ರೀಲರ್‌ಗಳು ಸಂಕಷ್ಟ ಎದುರಿಸುತ್ತಿದ್ದಾರೆ. ಇದರಿಂದ ರೈತರಿಗೂ ತೊಂದರೆಯಾಗುತ್ತಿದೆ. ಸರಕಾರ ಇದನ್ನು ಸರಿಪಡಿಸಬೇಕೆಂದು ಆಗ್ರಹಿಸಿದರು.
ಬೇಡಿಕೆಯ ಶೇ.50ರಷ್ಟು ಅನುದಾನ ವಿಳಂಬವಾಗಿ ಬಂದಿದೆ. ಈಗಾಗಲೇ ಹೆಸ್ಕಾಂಗೆ ಬಿಲ್ ಭರಣಾ ಮಾಡಲಾಗಿದೆ. ನಾಳೆಯೇ ಖುದ್ದಾಗಿ ಹೆಸ್ಕಾಂ ಕಚೇರಿಗೆ ಭೇಟಿ ನೀಡಿ ಚರ್ಚಿಸಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು. 4 ಕಡೆ ಚಾರ್ಜ್ ಇರುವುದರಿಂದ ಅವಶ್ಯಕತೆಗನುಗುಣವಾಗಿ ಭೇಟಿ ನೀಡಲಾಗುತ್ತಿದೆ.
ಬಿ.ಆರ್.ಅಂಗಡಿ, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ, ಹಾವೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lakkundi: ಹೊಸದಾಗಿ 5 ಬಾವಿ, 5 ಶಾಸನಗಳು, ಸಾವಿರಕ್ಕೂ ಹೆಚ್ಚು ಶಿಲ್ಪಕಲೆಗಳ ಅನ್ವೇಷಣೆ
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಗಜೇಂದ್ರಗಡ: ಸೂಡಿ ಉತ್ಸವಕ್ಕೆ ತೋರಬೇಕಿದೆ ಇಚ್ಛಾಶಕ್ತಿ-ಹಾಳು ಕೊಂಪೆಯಾದ ಸ್ಮಾರಕ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
ಗದಗ: ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.