ಮುಂಜಾಗ್ರತಾ ಕ್ರಮ ಪಾಲನೆ ಅವಶ್ಯ
Team Udayavani, May 3, 2020, 3:38 PM IST
ಶಿರಹಟ್ಟಿ: ಕೇಂದ್ರ ಹಾಗೂ ರಾಜ್ಯ ಸರಕಾರಗಳ ದಿಟ್ಟ ಕ್ರಮದಿಂದಾಗಿ ಮತ್ತು ದೇಶದ ಜನತೆಯ ಸಹಕಾರದಿಂದಾಗಿ ಕೋವಿಡ್ 19 ಅನ್ಯ ರಾಷ್ಟ್ರಗಳೀಗ ಸಾಕಷ್ಟು ನಿಯಂತ್ರಣದಲ್ಲಿದೆ. ಸಾರ್ವಜನಿಕರು ಕೋವಿಡ್ 19 ವೈರಸ್ ಬಗ್ಗೆ ಆತಂಕ ಪಡದೇ ಅಗತ್ಯ ಕ್ರಮಗಳನ್ನು ಪಾಲಿಸುವುದು ಅವಶ್ಯ ಎಂದು ಶಾಸಕ ರಾಮಣ್ಣ ಲಮಾಣಿ ಹೇಳಿದರು.
ಅವರು ಪಟ್ಟಣದ ಸರಕಾರಿ ಪ್ರಾಥಮಿಕ ಶಾಲಾ ಅವರಣದಲ್ಲಿ ಆಶಾ ಕಾರ್ಯಕರ್ತರಿಗೆ, ತಾಲೂಕು ಆಸ್ಪತ್ರೆಯ ಡಿ.ದರ್ಜೆ ಗುತ್ತಿಗೆಯ ಸಹಾಯಕರಿಗೆ ದಿನಸಿ ಕಿಟ್ ವಿತರಿಸಿ ಮಾತನಾಡಿದರು. ಕೋವಿಡ್ 19ಯೋಧರ ಸೇವಾ ಕಾರ್ಯವನ್ನು ಮೆಚ್ಚಿ ಪಟ್ಟಣದ ವರ್ತಕರ ಸಂಘದವರು ದಿನಸಿ ಕಿಟ್ ವಿತರಿಸುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.
ವರ್ತಕರಾದ ಉಮೇಶ ಗಾಣಿಗೇರ ಮತ್ತು ಬಸವರಾಜ ಹೊಸೂರ ಮತ್ತು ವಾಸಣ್ಣ ಪಾಶ್ಚಾಪೂರ, ಪ್ರಕಾಶ ಭೋರಶೆಟ್ಟರ ಮಾತನಾಡಿದರು. ಜಿಪಂ ಮಾಜಿ ಅಧ್ಯಕ್ಷ ವಿಶ್ವನಾಥ ಕಪ್ಪತ್ತನವರ, ತಹಶೀಲ್ದಾರ್ ಯಲ್ಲಪ್ಪ ಗೋಣೆಣ್ಣವರ, ಚಂದ್ರಣ್ಣ ನೂರಶೆಟ್ಟರ, ತಾಪಂ ಸದಸ್ಯ ತಿಪ್ಪಣ್ಣ ಕೊಂಚಿಗೇರಿ, ವರ್ತಕರ ಸಂಘದ ಅಧ್ಯಕ್ಷ ಸುರೇಶ ಕಪ್ಪತ್ತನವರ, ನಾಗರಾಜ ಲಕ್ಕುಂಡಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bellary: ತುಕಾರಾಂ ಆಡಳಿತದಲ್ಲಿ ಸಂಡೂರು ಅಭಿವೃದ್ಧಿಯಾಗಿದೆ: ಡಿಕೆ ಶಿವಕುಮಾರ್
Bunts Hostel, ಕರಂಗಲ್ಪಾಡಿ ಜಂಕ್ಷನ್: ಶಾಶ್ವತ ಡಿವೈಡರ್ ನಿರ್ಮಾಣ ಕಾಮಗಾರಿ
Mangaluru: ರಾತ್ರಿ ಪ್ರಿಪೇಯ್ಡ್ ಆಟೋ ಇಲ್ಲದೆ ಪ್ರಯಾಣಿಕರ ಪರದಾಟ
Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್ ಆಗಲಿದೆ ʼಕಂಗುವʼ
Urwa: ಬಾಯ್ದೆರೆದ ಕಾಂಕ್ರೀಟ್ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.