ಅಪರಾಧ ತಡೆಗೆ ಜನರ ಸಹಕಾರವೂ ಅಗತ್ಯ
Team Udayavani, Jan 12, 2020, 12:17 PM IST
ನರಗುಂದ: ಅಪರಾಧ ಪ್ರಕರಣಗಳಿಂದ ಹೇಗೆ ಜಾಗೃತಿ ಹೊಂದಬೇಕು ಎಂಬಿತ್ಯಾದಿ ವಿಷಯಗಳ ಕುರಿತಂತೆ ಪೊಲೀಸ್ ಸಿಬ್ಬಂದಿಗಳೇ ಕಲಾವಿದರಾಗಿ ಜನಜಾಗೃತಿ ಮೂಡಿಸಿದರು.
ಶನಿವಾರ ಪೊಲೀಸ್ ಉಪವಿಭಾಗ, ಪೊಲೀಸ್ ಠಾಣೆ ವತಿಯಿಂದ ಪಟ್ಟಣದ ಬಸ್ ನಿಲ್ದಾಣ ಆವರಣದಲ್ಲಿ ಪೊಲೀಸರು ಅಪರಾಧ ತಡೆ ಮಾಸಾಚರಣೆ ಪ್ರಯುಕ್ತ ಬಹಿರಂಗ ರೂಪಕ ಪ್ರದರ್ಶನ ಏರ್ಪಡಿಸಿದ್ದರು.
ಜಿಲ್ಲಾ ಪೊಲೀಸ್ ಸೂಚನೆಯನ್ವಯ ರೂಪುಗೊಂಡ ಪೊಲೀಸ್ ಸಿಬ್ಬಂದಿಗಳೇ ಜಾನಪದ ಶೈಲಿಯ ರೂಪಕಗಳ ಪ್ರದರ್ಶನ ಮಾಡಿದರು. ಹಲವಾರು ಅಪರಾಧ ಪ್ರಕರಣಗಳಲ್ಲಿ ಕಳ್ಳಕಾಕರು ಹೇಗೆ ವರ್ತಿಸುತ್ತಾರೆ, ಏನು ಮುನ್ನೆಚ್ಚರಿಕೆ ವಹಿಸಬೇಕು ಇನ್ನಿತರ ವಿಷಯಗಳ ಕುರಿತು ಜನಜಾಗೃತಿ ಮೂಡಿಸಿದರು. ಕಲಾವಿದರಾದ ಪೊಲೀಸ್ ಸಿಬ್ಬಂದಿ ಎನ್.ಎಚ್. ಗುಡ್ಡದ ನೇತೃತ್ವದಲ್ಲಿ ಬಸವರಾಜ ಪವಾರ, ಹನಮಂತ, ಅನು ಹಾರನ್ನವರ, ಮಾಲತಿ ಸೀಗೆಹಳ್ಳಿ, ಭಾರತಿ ಚಳಗೇರಿ, ಭಾಷಾ ಹವಾಲ್ದಾರ, ದಶರಥ, ಚಂದ್ರಶೇಖರ ಬಾರಕೇರ, ರಾಜು ಅಲಮದಾರ, ಭಾನು, ಡ್ರಾಮಾ ಕಲಾವಿದ ಹರೀಶ ಪತ್ತಾರ ರೂಪಕ ಪ್ರದರ್ಶಿಸಿದರು.
ಡಿವೈಎಸ್‌ಪಿ ಶಿವಾನಂದ ಕಟಗಿ, ಸಿಪಿಐ ಡಿ.ಬಿ. ಪಾಟೀಲ, ಎಎಸ್‌ಐ ವಿ.ಜಿ. ಪವಾರ, ಸಾರಿಗೆ ಘಟಕ ವ್ಯವಸ್ಥಾಪಕ ಹಳ್ಳದ, ಸಿದ್ದೇಶ್ವರ ಕಾಲೇಜು ಪ್ರಾಧ್ಯಾಪಕ ಪ್ರೊ| ಪಿ.ಎಸ್.ಅಣ್ಣಿಗೇರಿ, ರವಿಕುಮಾರ ಮುಂತಾದವರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ
CM Siddaramaiah: ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮದು
Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ
Gadaga: ಮೂರು ದಿನಗಳ ಕಾಲ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ: ಸಿಎಂ ಸಿದ್ದರಾಮಯ್ಯ
Gadaga: ಪಂಚಮಸಾಲಿ ಮೀಸಲಾತಿ ಹೋರಾಟಗಾರರು ಪೊಲೀಸ್ ವಶಕ್ಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.