ಕಾಲಮಿತಿಯಲ್ಲಿ ಅರ್ಜಿ ವಿಲೇವಾರಿಗೆ ಸೂಚನೆ
Team Udayavani, Mar 24, 2021, 2:11 PM IST
ಗದಗ: ಸಕಾಲದಡಿ ಒಟ್ಟು 258 ಸೇವೆಗಳನ್ನು ವಿವಿಧ ಇಲಾಖೆಗಳಲ್ಲಿ ಒದಗಿಸಲಾಗುತ್ತಿದೆ. ಇವುಗಳಲ್ಲಿ178 ಸೇವೆಗಳಿಗೆ ಮಾತ್ರ ಜಿಲ್ಲೆಯಲ್ಲಿ ಅರ್ಜಿಗಳು ಸ್ವೀಕೃತವಾಗಿದ್ದು, ಇನ್ನುಳಿದ ಸೇವೆಗಳಿಗೂ ಸಕಾಲದಡಿಅರ್ಜಿಗಳನ್ನು ಸ್ವೀಕರಿಸಬೇಕು. ಕಾಲಮಿತಿಯಲ್ಲಿಅರ್ಜಿಗಳನ್ನು ವಿಲೇವಾರಿ ಮಾಡಬೇಕು ಎಂದು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸಕಾಲ ಯೋಜನೆ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯ ವಿವಿಧಇಲಾಖೆಗಳ ವಿವಿಧ ಹಂತದ ಒಟ್ಟು 528 ಕಚೇರಿಗಳಪೈಕಿ 125 ಕಚೇರಿಗಳಲ್ಲಿ ಸಕಾಲದಡಿ ಅರ್ಜಿಸ್ವೀಕರಿಸದಿರುವುದು ಗಮನಕ್ಕೆ ಬಂದಿದೆ. ವಾ.ಕ.ರ.ಸಾ.ಸಂ. ಗದಗ ವಿಭಾಗದಲ್ಲಿ ಅರ್ಜಿ ಸ್ವೀಕರಿಸಿನಿಗದಿತ ಕಾಲಮಿತಿಯೊಳಗೆ ವಿಲೇವಾರಿ ಮಾಡದೇಇರುವ 5000ಕ್ಕೂ ಹೆಚ್ಚು ಅರ್ಜಿಗಳು ಬಾಕಿಯಿದ್ದು,ಇದರಿಂದ ಜಿಲ್ಲೆಯ ಸಕಾಲ ಪ್ರಗತಿ ಕುಂಠಿತವಾಗಿದೆ.ಇನ್ನೆರಡು ದಿನದಲ್ಲಿ ಅಂತಹ ಇಲಾಖೆಗಳ ಮುಖ್ಯಸ್ಥರುಸಕಾಲದಡಿ ಅರ್ಜಿಗಳ ಸ್ವೀಕಾರಕ್ಕೆ ಕ್ರಮ ವಹಿಸಬೇಕು.ಇಲ್ಲದಿದ್ದಲ್ಲಿ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಆರೋಗ್ಯ ಇಲಾಖೆಯ 59 ಕಚೇರಿಗಳ ಪೈಕಿ 35ಕಚೇರಿಗಳಲ್ಲಿ ಮಾತ್ರ ಸಕಾಲದಡಿ ಅರ್ಜಿ ಸ್ವೀಕೃತವಾಗಿದ್ದು,ಉಳಿದ ಕಚೇರಿಗಳಲ್ಲೂ ಸಕಾಲ ಕುಂಠಿತವಾಗಿದೆ. ಶಿಕ್ಷಣಇಲಾಖೆಯ 30 ಕಚೇರಿಗಳ ಪೈಕಿ 21 ಕಚೇರಿಗಳಲ್ಲಿಇವರೆಗೂ ಅರ್ಜಿ ಸ್ವೀಕೃತವಾಗಿಲ್ಲ. ಇದರಿಂದ ಜಿಲ್ಲೆಯಅಭಿವೃದ್ಧಿಗೆ ಹಿನ್ನಡೆಯಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರಶಾಂತ ವರಗಪ್ಪನವರ ಮಾತನಾಡಿ, ಪರಿಶಿಷ್ಟಜಾತಿ ವಿಶೇಷ ಘಟಕ ಯೋಜನೆಯಡಿ ಜಿಲ್ಲೆಯಆಯ್ದ ಇಲಾಖೆಗಳಲ್ಲಿ ಜಿಲ್ಲಾ, ರಾಜ್ಯ ಹಾಗೂ ಕೇಂದ್ರವಲಯಗಳಲ್ಲಿ ಒಟ್ಟಾರೆ 2021 ಫೆಬ್ರುವರಿ ಮಾಹೆಯಅಂತ್ಯದವರೆಗೆ 14365.56 ಲಕ್ಷ ರೂ. ಅನುದಾನನಿಗದಿಪಡಿಸಿದ್ದು, ಈವರೆಗೆ ಒಟ್ಟಾರೆ 7663.75 ಲಕ್ಷರೂ. ಅನುದಾನ ಬಿಡುಗಡೆಯಾಗಿದೆ. ಒಟ್ಟಾರೆ6772 ಲಕ್ಷ ರೂ. ವ್ಯಯಿಸಲಾಗಿದೆ. ಬಿಡುಗಡೆಯಾದ ಅನುದಾನದಲ್ಲಿ ಶೇ. 88 ರಷ್ಟು ಆರ್ಥಿಕ ಪ್ರಗತಿ ಸಾಧಿಸಿದೆ. 1,01,170 ನಿಗದಿಪಡಿಸಿದ ಫಲಾನುಭವಿಗಳಪೈಕಿ 42,232 ಫಲಾನುಭವಿಗಳು ಸೌಲಭ್ಯ ಪಡೆದಿದ್ದಾರೆ. 235 ಕಾಮಗಾರಿಗಳನ್ನು ಕೈಗೊಂಡಿದ್ದು, ಆ ಪೈಕಿ 163 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದೆ ಎಂದರು.
ಗಿರಿಜನ ಉಪಯೋಜನೆಯಡಿ(ಟಿಎಸ್‌ಪಿ) ಜಿಲ್ಲಾ, ರಾಜ್ಯ ಹಾಗೂ ಕೇಂದ್ರ ವಲಯದಲ್ಲಿ ಒಟ್ಟಾರೆ ಜನವರಿಅಂತ್ಯದವರೆಗೆ 5482.70 ಲಕ್ಷ ರೂ. ಅನುದಾನ ನಿಗದಿಪಡಿಸಿದ್ದು, ಈ ವರೆಗೆ 2604.93 ಲಕ್ಷ ರೂ.ಅನುದಾನ ಬಿಡುಗಡೆಯಾಗಿದ್ದು, 2288.80 ಲಕ್ಷರೂ. ವ್ಯಯಿಸಲಾಗಿದೆ. ಒಟ್ಟಾರೆ ಬಿಡುಗಡೆಯಾದಅನುದಾನದಲ್ಲಿ ಶೇ. 88ರಷ್ಟು ಆರ್ಥಿಕ ಪ್ರಗತಿಸಾಧಿಸಿದಂತಾಗಿದೆ. 40,977 ನಿಗದಿಪಡಿಸಿದಫಲಾನುಭವಿಗಳ ಪೈಕಿ 18,088 ಫಲಾನುಭವಿಗಳುಸೌಲಭ್ಯ ಪಡೆದಿರುತ್ತಾರೆ. ಅದರಂತೆ ಒಟ್ಟಾರೆ 152ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದ್ದು, ಆ ಪೈಕಿ 114ಕಾಮಗಾರಿಗಳು ಪೂರ್ಣಗೊಂಡಿವೆ ಎಂದು ಸಭೆಗೆ ಮಾಹಿತಿ ನೀಡಿದರು.
ಇದೇ ವೇಳೆ ಶಿಷ್ಟಾಚಾರ ಕುರಿತು ಜರುಗಿದ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಂ. ಸತೀಶ್ ಕುಮಾರಮಾತನಾಡಿ, ಜಿಲ್ಲಾಮಟ್ಟದ ಎಲ್ಲ ಅಧಿಕಾರಿಗಳುಯಾವುದೇ ಕಾಮಗಾರಿ, ಕಾರ್ಯಕ್ರಮಗಳನ್ನುಆಯೋಜಿಸುವ ಮುನ್ನ ಕಾರ್ಯಕ್ರಮದ ಆಹ್ವಾನ ಪತ್ರಿಕೆಮುದ್ರಣಕ್ಕೂ ಮುನ್ನ ಜಿಲ್ಲಾಡಳಿತದಿಂದ ಅನುಮೋದನೆ ಪಡೆಯಬೇಕು. ಕಾರ್ಯಕ್ರಮದಲ್ಲಿ ಶಿಷ್ಟಾಚಾರಉಲ್ಲಂಘನೆಗೆ ಅವಕಾಶ ನೀಡಬಾರದು. ಶಿಷ್ಟಾಚಾರ ಉಲ್ಲಂಘನೆ ಕುರಿತು ದೂರಗಳು ಬಂದಲ್ಲಿ ಆಯಾಇಲಾಖಾ ಮುಖ್ಯಸ್ಥರನ್ನೇ ಹೊಣೆ ಮಾಡಲಾಗುವುದು ಎಂದು ಸೂಚಿಸಿದರು.
ಜಿ.ಪಂ. ಸಿಇಒ ಭರತ್ ಎಸ್., ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಪ್ರಶಾಂತ ವರಗಪ್ಪನವರ, ನಗರಸಭೆ ಪೌರಯುಕ್ತ ರಮೇಶ ಜಾದವ, ಜಂಟಿ ಕೃಷಿ ನಿರ್ದೇಶಕ ಟಿ.ಎಸ್. ರುದ್ರೇಶಪ್ಪ, ನಗರಾಭಿವೃದ್ಧಿಕೋಶದ ಕಾರ್ಯಪಾಲಕ ಅಭಿಯಂತರಅನೀಲಕುಮಾರ ಮುದ್ದಾ ಮತ್ತಿತರೆ ಇಲಾಖೆಗಳ ಅಧಿಕಾರಿ ಹಾಗೂ ಸಿಬ್ಬಂದಿ ಇದ್ದರು.
ನೋಡಲ್ ಅಧಿಕಾರಿಗಳ ನೇಮಕ :
ಸಕಾಲ ಯೋಜನೆಗೆ ಸಂಬಂಧಿತ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಸಂಬಂಧಪಟ್ಟಇಲಾಖೆಗಳ ಇಲಾಖಾ ಮುಖ್ಯಸ್ಥರನ್ನುನೋಡಲ್ ಅಧಿಕಾರಿಗಳೆಂದು ನೇಮಕಮಾಡಲಾಗಿದ್ದು, ಸಂಬಂಧಿತ ಎಲ್ಲ ಇಲಾಖೆಗಳಕಾರ್ಯಾಲಯದಲ್ಲಿ ಸಾರ್ವಜನಿಕರಿಗೆಮಾಹಿತಿಗಾಗಿ ಸಕಾಲ ಯೋಜನೆಯಸೂಚನಾ ಫಲಕ ಅಳವಡಿಸಬೇಕು. ಜಿಲ್ಲೆಯಸಂಬಂಧಿಸಿದ ಇಲಾಖೆಗಳ ಕಾರ್ಯಾಲಯಗಳಿಗೆಯಾವುದೇ ಸಮಯದಲ್ಲಿ ಭೇಟಿ ನೀಡಿಸಕಾಲ ಯೋಜನೆಯಡಿ ಪ್ರಗತಿಯ ತಪಾಸಣೆನಡೆಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಗಜೇಂದ್ರಗಡ: ಸೂಡಿ ಉತ್ಸವಕ್ಕೆ ತೋರಬೇಕಿದೆ ಇಚ್ಛಾಶಕ್ತಿ-ಹಾಳು ಕೊಂಪೆಯಾದ ಸ್ಮಾರಕ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
ಗದಗ: ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ
Gadaga: ಎಸ್ಪಿ ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ವ್ಯಕ್ತಿಗೆ 25 ಸಾವಿರ ರೂ. ವಂಚನೆ
MUST WATCH
ಹೊಸ ಸೇರ್ಪಡೆ
Anandapura: ಬೈಕ್ ನಲ್ಲಿ ಶಾಲೆಗೆ ತೆರಳುತ್ತಿರುವಾಗಲೇ ಶಿಕ್ಷಕನಿಗೆ ಹೃದಯಾಘಾತ
Chikkamagaluru: ಅಪರಿಚಿತ ವಾಹನ ಡಿಕ್ಕಿಯಾಗಿ ಕಂಡಕ್ಟರ್ ಸಾವು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ನವೆಂಬರ್ 26-30: ಧರ್ಮಸ್ಥಳ ಲಕ್ಷದೀಪೋತ್ಸವ ಸಂಭ್ರಮ
Waqf Protest: ರಾಜ್ಯ ಸರ್ಕಾರವನ್ನು ಜನರೇ ಕಿತ್ತೊಗೆಯಲಿದ್ದಾರೆ: ದಾವಣಗೆರೆಯಲ್ಲಿ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.