ಬಸ್ ಸಂಚಾರಕ್ಕೆ ಒತ್ತಾಯಿಸಿ ಪ್ರತಿಭಟನೆ
Team Udayavani, Oct 1, 2019, 2:15 PM IST
ಶಿರಹಟ್ಟಿ: ಬೆಳ್ಳಟ್ಟಿಯಿಂದ ಗದಗ ಮಾರ್ಗದ ಕಡೆಗೆ ಬೆಳಗ್ಗೆ 6:30, ಮಧ್ಯಾಹ್ನ 2:30 ಮತ್ತು ಸಂಜೆ 6:30ಕ್ಕೆ ಹೆಚ್ಚಿನ ಬಸ್ ಬಿಡುವಂತೆ ಒತ್ತಾಯಿಸಿ . ಲಕ್ಷ್ಮೇಶ್ವರ ಬಸ್ ಘಟಕದ ವ್ಯವಸ್ಥಾಪಕರಿಗೆ ಈಗಾಗಲೇ ಮನವಿ ಸಲ್ಲಿಸಲಾಗಿತ್ತು. ಆದರೆ ಅಧಿಕಾರಿಗಳು ಸಾರ್ವಜನಿಕರ ಬೇಡಿಕೆ ಈಡೇರಿಸದೇ ಇರುವ ಕಾರಣ ಸೋಮವಾರ ಬಸ್ ಸಂಚಾರ ಸ್ಥಗಿತಗೊಳಿಸಿ ಬೇಡಿಕೆ ಈಡೇರುವವರೆಗೂ ಹೋರಾಟಕ್ಕೆ ಮುಂದಾದರು.
ಈ ಕುರಿತು ಎಬಿವಿಪಿ ರಾಜ್ಯ ಕಾರ್ಯಕಾರಣಿ ಸದಸ್ಯ ವೀರೇಶ ಕುರವತ್ತಿ ಮಾತನಾಡಿ, ಈಗಾಗಲೆ ಮನವಿ ಸಲ್ಲಿಸಿ ತಿಂಗಳಾದರೂ ಯಾವುದೇ ಪ್ರಯೋಜನವಾಗಿಲ್ಲ. ಒಮ್ಮೆಯೂ ಫೋನ್ ಕಾಲ್ ಸ್ವೀಕರಿಸಿಲ್ಲ. ಜೊತೆಗೆ ಇಂದು ಬಸ್ ಸಂಚರ ಸ್ಥಗಿತಗೊಳಿಸಿದ್ದರೂ ಸ್ಥಳಕ್ಕೆ ಆಗಮಿಸಿ ಸಮಸ್ಯೆ ಆಲಿಸದೇ ಇರುವುದು ಖಂಡನೀಯವಾಗಿದೆ. ಸದ್ಯ ಪಿಎಸ್‌ಐ ಬಸವರಾಜ ತಿಪ್ಪರೆಡ್ಡಿ ಮಾತಿಗೆ ಬೆಲೆಕೊಟ್ಟು ಪ್ರತಿಭಟನೆ ಹಿಂಪಡೆಯಲಾಗಿದೆ. ಮೂರು ದಿನದಲ್ಲಿ ಬೇಡಿಕೆ ಈಡೇರದಿದ್ದರೆ ಅನಿರ್ದಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಅರುಣ ಗಡ್ಡಿ, ಆನಂದ ಹಿರೇಹೊಳಿ, ಸಂತೋಷ ಗಾಂಜಿ, ಸಚಿನ್ ಮೊರಬದ, ಅರುಣ ಮಾಂಡ್ರೆ, ಮಲ್ಲಿಕಾರ್ಜುನ ಕರಿಗಾರ, ಮಾಂತೇಶ ಮಾಳಮ್ಮನವರ, ಅರುಣ ತಳವಾರ, ಪ್ರದೀಪ ನೇಕಾರ, ಸೋಹಿಲ್ ನದಾಫ್, ರಕ್ಷಿತ ಜೋತಿ, ಸವಿತಾ ಪಾಟೀಲ್, ಸಂಜು ಬಂಡಿ, ಕವಿತಾ ಪಾಟೀಲ್, ಸಾನ್ವಿ ಹಾದಿಮನಿ, ಮಿಂಚು ಬಂಡಿ, ಅನಿಲ ವಡವಿ, ಶಿವಕುಮಾರ ಬೂದಿಹಾಳ, ಅರುಣ ಅಕ್ಕಿ, ಸಂಜೀವ ಮಹಾದೇವಪ್ಪನವರ ಹಾಗೂ ವಿದ್ಯಾರ್ಥಿಗಳು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gajendragad: ಮನೆಯಲ್ಲೇ ಮುಖ್ಯ ಶಿಕ್ಷಕಿಯ ಹ*ತ್ಯೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ
CM Siddaramaiah: ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮದು
Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು
Plane Mishap: ಲಘು ವಿಮಾನ ಪತನ… ಬ್ರೆಜಿಲ್ ನ ಉದ್ಯಮಿ ಸೇರಿ ಹತ್ತು ಮಂದಿ ಮೃತ್ಯು
BBK11: ಬಾಯಿ ಮುಚ್ಕೊಂಡು ಇರು.. ಫೈಯರ್ ಬ್ರ್ಯಾಂಡ್ ಚೈತ್ರಾ ಕೋಪಕ್ಕೆ ಮನೆಮಂದಿ ಶಾಕ್.!
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.