ಗೋವನಾಳದಲ್ಲಿ ದಿಢೀರ್ ಪ್ರತಿಭಟನೆ
Team Udayavani, Dec 14, 2020, 6:24 PM IST
ಲಕ್ಷ್ಮೇಶ್ವರ: ತಾಲೂಕಿನ ಗೋವನಾಳ ಗ್ರಾಮದಲ್ಲಿನ 3.36 ಎಕರೆ ಕುಡಿಯುವ ಕೆರೆ ಜಾಗೆಯ ಆಸ್ತಿ ದಾಖಲೆ ಈಗ ಅಂಜುಮನ್ ಏ ಇಸ್ಲಾಂ ಸೊಸೈಟಿವಕ್ಫ್ ಹೆಸರಿಗೆ ಬದಲಾವಣೆಯಾಗಿದ್ದಕ್ಕೆ ಭಾನುವಾರ ಗ್ರಾಮಸ್ಥರು ಏಕಾಏಕಿ ಪ್ರತಿಭಟನೆಗಿಳಿದ ಪರಿಣಾಮ ಗ್ರಾಮದಲ್ಲಿ ಕೆಲಹೊತ್ತು ಉದ್ವಿಗ್ನ ವಾತಾವರಣ ನಿರ್ಮಾಣವಾಯಿತು.
ನೂರಾರು ವರ್ಷಗಳಿಂದ ಕುಡಿಯುವ ನೀರಿನ ಕೆರೆ ಅಂತಲೇ ಇದ್ದ ಉತಾರ ಈಗ ಏಕಾಏಕಿ ಅಂಜುಮನ್ ಕಮಿಟಿಗೆ ಹೇಗೆ ವರ್ಗಾವಣೆಗೊಂಡಿದೆ. ಇದರ ಹಿಂದೆ ಯಾರ ಕೈವಾಡವಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು. ಮೊದಲಿನಂತೆ ಕೆರೆಯ ಹೆಸರಿನಲ್ಲಿ ದಾಖಲೆ ಮರುದಾಖಲಾಗಬೇಕು ಎಂದು ಗ್ರಾಮದ ಹಿರಿಯರು, ಯುವಕರು ಭಾನುವಾರ ಬೆಳಗ್ಗೆ ಗ್ರಾಮದಲ್ಲಿ ಸಭೆ ಸೇರಿದರು.
ಕೆರೆ ಆಸ್ತಿ ದಾಖಲೆ ಕೂಡಲೇ ಮೊದಲಿನಂತೆ ಬದಲಾಗಬೇಕು. ಇಲ್ಲದಿದ್ದರೆ ಗ್ರಾಪಂ ಚುನಾವಣೆ ಬಹಿಷ್ಕರಿಸುತ್ತೇವೆ ಎಂದು ಗ್ರಾಮದಲ್ಲಿ ಗುಂಪುಗುಂಪಾಗಿ ಚರ್ಚಿಸ ತೊಡಗಿದರು. ಸುದ್ದಿ ತಿಳಿದ ಕೂಡಲೇ ಸ್ಥಳಕ್ಕಾಗಮಿಸಿದ ತಹಶೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ, ಪಿಎಸ್‌ಐ ಶಿವಯೋಗಿ ಲೋಹಾರ ಉಂಟಾಗಿರುವ ತೊಂದರೆಯನ್ನು ಸರಿಪಡಿಸಬಹುದಾಗಿದ್ದು, ಯಾರೂ ದುಡುಕಿನ ನಿರ್ಧಾರ ಕೈಗೊಳ್ಳಬಾರದು. ಎಲ್ಲರೂ ಶಾಂತ ರೀತಿಯಿಂದ ವರ್ತಿಸಲು ಮನವಿ ಮಾಡಿದರು. ಮುಖಂಡ ಭರಮಣ್ಣ ರೊಟ್ಟಿಗವಾಡ ಮಾತನಾಡಿ, ಗ್ರಾಮಕ್ಕೆ ಹೊಂದಿರುವ ಸರ್ಕಾರಿಜಮೀನಿನಲ್ಲಿದ್ದ 3.36 ಎಕರೆ ಕುಡಿಯುವ ನೀರಿನ ಕೆರೆ ದಾಖಲೆ ಈಗ ಅಂಜುಮನ್ ಏ ಇಸ್ಲಾಂ ಸೊಸೈಟಿಗೆ ಸೇರಿದ ಆಸ್ತಿಯಾಗಿ ದಾಖಲಾಗಿದೆ.
ಕೆರೆಗೆ ಹೊಂದಿಕೊಂಡು 35 ಕುಟುಂಬಗಳು ವಾಸಿಸುತ್ತಿವೆ. ಈಗ ಕೆರೆ ಜಮೀನು ಇಸ್ಲಾಂ ಕಮಿಟಿಗೆ ಪರಭಾರೆಯಾಗಿರುವ ಕಾಗದ ಪತ್ರಗಳಿಂದ ಗ್ರಾಮದಲ್ಲಿ ಗೊಂದಲ, ಕೋಮು ಸಂಘರ್ಷಕ್ಕೆ ಕಾರಣವಾಗುವ ವಾತಾವರಣ ನಿರ್ಮಾಣವಾಗಿದೆ. ಆದ್ದರಿಂದ ಮೊದಲಿನಂತೆ ಕೆರೆ ದಾಖಲೆ ಬದಲಾಗದೇ ನಮ್ಮ ಗ್ರಾಮದ ಜನರ ಉಪಯೋಗಕ್ಕಾಗಿ ಇರಬೇಕು. ಈಗ ಗ್ರಾಪಂ ಚುನಾವಣೆ ನಡೆಯುತ್ತಿದ್ದು, ಇಂತಹ ಹೊತ್ತಲಲ್ಲಿ ಗ್ರಾಮದಲ್ಲಿಅಶಾಂತಿಯ ವಾತಾವರಣ ನಿರ್ಮಾಣವಾಗುವುದಕ್ಕೆ ಅವಕಾಶ ಮಾಡಿಕೊಡಬೇಡಿ ಎಂದು ವಿನಂತಿಸಿದರು.
ಈ ವೇಳೆ ತಹಶೀಲ್ದಾರ್ ಭ್ರಮರಾಂಬ ಗುಬ್ಬಿಶೆಟ್ಟಿ, ಸದರಿ ಸರ್ಕಾರಿ ಜಮೀನಿನ ಖಾತೆ ಬದಲಾವಣೆಯಾದ ಬಗ್ಗೆ ತಿಳಿದುಕೊಳ್ಳುತ್ತೇವೆ. ಗ್ರಾಮದ ಕೆಲವು ಮುಖಂಡರು ಇಲಾಖೆಗೆಮನವಿ ಪತ್ರ ನೀಡಿದರೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಈ ಬಗ್ಗೆ ಯಾರೂ ಊಹಾಪೋಹಕ್ಕೆ ಕಿವಿಗೊಡಬೇಡಿ ಮತ್ತು ಅಶಾಂತಿ ವಾತಾವರಣಕ್ಕೆ ಕಾರಣರಾಗಬೇಡಿ ಎಂದರು.
ಶೇಖರಗೌಡ ಕೊರಡೂರ, ನಾಗರಾಜ ದೊಡ್ಡಮನಿ, ಚಂದ್ರು ತಳವಾರ, ಮಂಜುನಾಥ ಕೆಂಚನಗೌಡ್ರ, ಗೌಡಪ್ಪಗೌಡ ಸಣ್ಣಗೌಡ್ರ,ಚಂದ್ರಗೌಡ ಕರಿಗೌಡರ, ದೇವಪ್ಪ ಬಡಿಗೇರ, ಶಂಭು ಕೇರಿ, ಮಾರುತಿ ಬಾರಕೇರ, ಚಿನ್ನಪ್ಪ ಕೊರಕನವರ, ನಿಂಗನಗೌಡ್ರ ಪೊಲೀಸ್‌ಪಾಟೀಲ, ದೇವೆಚಿದ್ರಪ್ಪ ಬಡಿಗೇರ,ದುಂಡಪ್ಪ ಮಣಕಟ್ಟಿ, ಮಹಾದೇವಪ್ಪ ಮಾಡಳ್ಳಿ, ನಾಗಪ್ಪ ಸಂಕದಾಳ, ನೀಲಪ್ಪಸವಣೂರ, ನಾಗಪ್ಪ ಮಾಡಳ್ಳಿ, ಪಾಂಡುರಂಗ ಭಂಡಾರಕರ, ನೀಲಪ್ಪ ಸವಣೂರ,ಮಂಜುನಾಥ ಕಟ್ಟಿಮನಿ, ಪ್ರಕಾಶ ಮಲ್ಲೂರ ಅನೇಕರಿದ್ದರು. ಕ್ರೈಂ ಪಿಎಎಸ್‌ಐ ಪಿ.ಎಂ. ಬಡಿಗೇರ, ಕಂದಾಯ ನಿರೀಕ್ಷಕ ಬಿ.ಎಂ. ಕಾತ್ರಾಳ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gajendragad: ಮನೆಯಲ್ಲೇ ಮುಖ್ಯ ಶಿಕ್ಷಕಿಯ ಹ*ತ್ಯೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ
CM Siddaramaiah: ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮದು
Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ
Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ
Road Mishap: ಬೈಕ್- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು
Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು
Rule; 5, 8ನೇ ತರಗತಿಯಲ್ಲಿ ಫೈಲ್ ಆದರೆ ಭಡ್ತಿ ನೀಡುವಂತಿಲ್ಲ; ಅದೇ ಕ್ಲಾಸಲ್ಲಿ ಮುಂದುವರಿಕೆ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.