ಜಿಲ್ಲಾಡಳಿತ ಕ್ರಮಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ
Team Udayavani, Apr 29, 2021, 7:11 PM IST
ಗದಗ: ಕರ್ಫ್ಯೂ ಮಾರ್ಗಸೂಚಿಯಂತೆ ಬೆಳಗ್ಗೆ 6ರಿಂದ 10ರ ವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಕಲ್ಪಿಸಲಾಯಿತು. ನಾಮಜೋಶಿ ರಸ್ತೆಯಲ್ಲಿ ಕಿರಾಣಿ ಅಂಗಡಿಗಳು ಬಾಗಿಲು ತೆರೆದು ವ್ಯಾಪಾರ ವಹಿವಾಟು ನಡೆಸಿದವು. ಜೊತೆಗೆ ತರಕಾರಿ ಮಾರುಕಟ್ಟೆಯಲ್ಲಿ ಜನಸಂದಣಿ ತಪ್ಪಿಸಲು ಇಲ್ಲಿನ ಭೂಮರೆಡ್ಡಿ ಸರ್ಕಲ್‌ನಿಂದ ಕೆ.ಎಚ್ .ಪಾಟೀಲ ವೃತ್ತದ ವರೆಗೆ ರಸ್ತೆ ಬದಿಯಲ್ಲಿ ತರಕಾರಿ ಮಾರಾಟಕ್ಕೆ ಅವಕಾಶ ಕಲ್ಪಿಸಿರುವ ಜಿಲ್ಲಾಡಳಿತದ ಕ್ರಮಕ್ಕೆ ಸಾರ್ವಜನಿಕರಿಂದ ಮೆಚ್ಚುಗೆಯ ಮಾತುಗಳು ಕೇಳಿ ಬಂದಿತು.
ಬೀದಿ ಬದಿ ವ್ಯಾಪಾರಿಗಳ ಒಕ್ಕೂಟದಲ್ಲಿ ನೋಂದಾಯಿತರ ಪೈಕಿ ಸುಮಾರು 170ಕ್ಕೂ ಹೆಚ್ಚು ಬೀದಿ ಬದಿ ವ್ಯಾಪಾರಿಗಳು ತರಕಾರಿ, ಹಣ್ಣು ಮತ್ತು ಹೂವು ಮಾರಾಟದಲ್ಲಿ ತೊಡಗಿದ್ದರು. ಸುಮಾರು ಅರ್ಧ ಕಿ.ಮೀ. ಹೆಚ್ಚು ದೂರದುದ್ದಕ್ಕೂ ಎರಡೂ ಬದಿಗೆ ಕುಳಿತು ವ್ಯಾಪಾರ ಮಾಡಿದರು.
ಈ ವೇಳೆ ತರಕಾರಿ, ಹಣ್ಣು ಖರೀದಿಗಾಗಿ ನೂರಾರು ಸಂಖ್ಯೆಯಲ್ಲಿ ಜನರು ಆಗಮಿದ್ದರೂ ವಿಶಾಲವಾದ ರಸ್ತೆಯಿದ್ದುದ್ದರಿಂದ ಹೆಚ್ಚಿನ ಜನ ಸಂದಣಿ ಕಂಡು ಬರಲಿಲ್ಲ. ಮಾಸ್ಕ್ ಧರಿಸಿ ಆಗಮಿಸಿದ್ದ ಗ್ರಾಹಕರು ತಮಗೆ ಬೇಕಾದದ್ದುನ್ನು ಖರೀದಿಸಿದರು. ಸ್ಥಳ ಸಿಗದಿದ್ದಕ್ಕೆ ತಗಾದೆ: ಈ ವೇಳೆ ರಸ್ತೆಯಲ್ಲಿ ಕೂರಲು ತಮ್ಮವರಿಗೆ ಅವಕಾಶ ಸಿಗದಿದ್ದರಿಂದ ಬೀದಿ ಬದಿ ವ್ಯಾಪಾರಿಗಳ ಒಕ್ಕೂಟದ ರಾಜ್ಯ ಕಾರ್ಯದರ್ಶಿ, ಗೌರವ ಅಧ್ಯಕ್ಷ ಉಮರ್ ಫಾರೂಕ್ ಹುಬ್ಬಳ್ಳಿ ಹಾಗೂ ನಗರಸಭೆ ಪೌರಾಯುಕ್ತ ರಮೇಶ್ ಜಾದವ್ ಮಧ್ಯೆ ಕೆಲಕಾಲ ಮಾತಿನ ಚಕಮಕಿ ನಡೆಯಿತು.
ಇಲ್ಲಿನ ವೀರೇಶ್ವರ ಲೈಬ್ರರಿ ಬಳಿ ಜಮಾಯಿಸಿದ್ದ ಬೀದಿ ಬದಿ ವರ್ತಕರು, ತಮಗೆ ಕೂರಲು ಸ್ಥಳ ಸಿಕ್ಕಿಲ್ಲ. ನಾಳೆಯಿಂದ ನಗರದಲ್ಲಿ ತಿರುಗಾಡಿ ಮಾರಾಟ ಮಾಡಲು ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು. ಬೇಡಿಕೆಯನ್ನು ನಯವಾಗಿಯೇ ತಿರಸ್ಕರಿಸಿದ ಪೌರಾಯುಕ್ತರ ರಮೇಶ್ ಜಾದವ್, ಮಂಗಳವಾರ ಶಹರ ಪೊಲೀಸ್ ಠಾಣೆಯಲ್ಲಿ ಕರೆದಿದ್ದ ವರ್ತಕರನ್ನು ಪ್ರತಿನಿಧಿಸುವ ಮೂರೂ ಸಂಘಟನೆಗಳ ಒಪ್ಪಿಗೆಯಂತೆ ಇಲ್ಲಿ ತರಕಾರಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಒಂದೊಮ್ಮೆ ತಿರುಗಾಟಕ್ಕೆ ಅವಕಾಶ ಕೇಳುವು ದಾದರೆ, ಇಲ್ಲಿ ಯಾರೊಬ್ಬರೂ ಕೂರುವಂತಿಲ್ಲ. ಈ ಬಗ್ಗೆ ಯೋಚಿಸುವಂತೆ ನಿರ್ಧಾರ ತಿಳಿಸುವಂತೆ ಕಡ್ಡಿಮುರಿದಂತೆ ಹೇಳಿದರು.
ಬಳಿಕ ಪೂರ್ವ ನಿರ್ಧಾರದಂತೆ ರಸ್ತೆಯಲ್ಲಿ ತರಕಾರಿ ಮಾರಾಟದ ವೇಳೆ ಸಾಮಾಜಿ ಅಂತರ ಇರುವಂತೆ ವರ್ತಕರಿಗೆ ಸ್ಥಳ ನಿಗದಿಗೊಳಿಸಲಾಯಿತು. ಹಿರಿಯ ಅಧಿಕಾರಿಗಳ ಭೇಟಿ ಪರಿಶೀಲನೆ: ಮಾರುಕಟ್ಟೆ ತಾತ್ಕಾಲಿಕವಾಗಿ ಸ್ಥಳಾಂತರಿಸಿದ ಹಿನ್ನೆಲೆಯಲ್ಲಿ ಉಪ ವಿಭಾಗಾಧಿಕಾರಿ ರಾಯಪ್ಪ ಹುಣಸಗಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ ವರ್ತಕರ ಅಹವಾಲು ಆಲಿಸಿ ಎಸ್ಪಿ ಯತೀಶ್ ಎನ್., ಹೆಚ್ಚಿನ ವ್ಯಾಪಾರಿಗಳಿದ್ದಲ್ಲಿ ರಸ್ತೆಯ ಇನ್ನುಳಿದ ಭಾಗದಲ್ಲೂ ಕೂರಬಹುದು. ಹಣ್ಣು, ತರಕಾರಿ ಹಾಗೂ ಹೂವು ಮಾರಾಟಗಾರರಿಗೆ ಪ್ರತ್ಯೇಕವಾಗಿ ಸ್ಥಳ ಸೂಚಿಸುತ್ತೇವೆ. ಆದರೆ, ನಗರದಲ್ಲಿ ಸಂಚರಿಸಿ ಮಾರಾಟಕ್ಕೆ ಅವಕಾಶ ಇಲ್ಲ ಸ್ಪಷ್ಟಪಡಿಸಿದರು. ಇನ್ನು, ನಿಗದಿತ ಅವಧಿ ಪೂರ್ಣಗೊಂಡು, ವ್ಯಾಪಾರ ಮುಕ್ತಾಯವಾಗುತ್ತಿದ್ದಂತೆ ನಗರಸಭೆ ಸಿಬ್ಬಂದಿ ರಸ್ತೆಯನ್ನು ಸ್ವತ್ಛಗೊಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಗುತ್ತಿಗೆದಾರ ಸಚಿನ್ ಪ್ರಕರಣ; ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್ ಪಟೇಲ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಗುತ್ತಿಗೆದಾರ ಸಚಿನ್ ಪ್ರಕರಣ; ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.