ಕೋವಿಡ್ ಭೀತಿ ನಡುವೆ ರಕ್ಷಾ ಬಂಧನದ ಸಂಭ್ರಮ
Team Udayavani, Aug 4, 2020, 1:02 PM IST
ಗದಗ: ನೂಲ ಹುಣ್ಣಿಮೆ ನಿಮಿತ್ತ ಗದಗ-ಬೆಟಗೇರಿ ಅವಳಿ ನಗರ ಸೇರಿದಂತೆ ಜಿಲ್ಲಾದ್ಯಂತ ಸೋಮವಾರ ಸಹೋದರ-ಸಹೋದರಿಯರ ಮಧುರ ಬಾಂಧವ್ಯ ಬೆಸೆಯುವ ರಾಖೀ ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು.
ಮಹಿಳೆಯರು., ಯುವತಿಯರು, ಹೆಣ್ಣು ಮಕ್ಕಳು ಬೆಳಗ್ಗೆಯೇ ದೇವಸ್ಥಾನ, ಮಠಗಳಿಗೆ ತೆರಳಿ ಒಡಹುಟ್ಟಿದವರ ಶ್ರೇಯೋಭಿವೃದ್ಧಿಗಾಗಿ ಪ್ರಾರ್ಥಿಸಿ ಪೂಜೆ ಸಲ್ಲಿಸಿದರು. ಬಳಿಕ ಮನೆಯಲ್ಲಿ ಸಹೋದರರಿಗೆ ಆರತಿ ಬೆಳಗಿ, ಹಣೆಗೆ ತಿಲಕವಿಟ್ಟು ರಾಖೀ ಕಟ್ಟಿ, ಸಿಹಿ ತಿನ್ನಿಸಿದರು. ಹಿರಿಯ ಸಹೋದರರಿಂದ ಆಶೀರ್ವಾದ ಪಡೆದು, ಕಿರಿಯರನ್ನು ಹರಸಿ ಕಾಣಿಕೆ ಸ್ವೀಕರಿಸಿದರು. ನೆರೆಹೊರೆಯ, ಬಂಧು-ಬಾಂಧವರ ಮನೆಗೆ ಹೋಗಿ ಆತ್ಮೀಯರಿಗೆ ರಾಖೀ ಕಟ್ಟಿ, ಸಹೋದರರ ಶ್ರೀರಕ್ಷೆಗಾಗಿ ದೇವರಲ್ಲಿ ಪ್ರಾರ್ಥಿಸಿದರು.
ಅಂಚೆ ಮೂಲಕ ರಾಖೀ ರವಾನೆ: ಸಂಜೆಯವರೆಗೂ ಯುವತಿಯರು ಸೇರಿದಂತೆ ಮಕ್ಕಳು ರಾಖೀ ಖರೀದಿಸಿದರು. ಇನ್ನೂ ಕೆಲವರು ತಮ್ಮ ದೂರದ ಸಹೋದರರಿಗೆ ಅಂಚೆ ಮೂಲಕ ರಾಖೀ ಕಳಿಸುತ್ತಿದ್ದ ಸನ್ನಿವೇಶ ಕಂಡು ಬಂತು. ಬಸವೇಶ್ವರ ನಗರದಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಹೋದರಿಯರು ಪ್ರತಿ ವರ್ಷ ಅವಳಿ ನಗರ ಸೇರಿದಂತೆ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ನಿಂತು, ಜನರಿಗೆ ರಾಖೀ ಕಟ್ಟುವ ಮೂಲಕ ಶುಭ ಕೋರುತ್ತಿದ್ದರು. ಆದರೆ ಈ ಬಾರಿ ಕೋವಿಡ್ ಸೋಂಕಿನ ಭೀತಿ ಆವರಿಸಿದ್ದರಿಂದ ಈಶ್ವರೀಯ ವಿಶ್ವವಿದ್ಯಾಲಯದ ಅಕ್ಕನವರು, ಆಶ್ರಮದ ಸದ್ಭಕ್ತರಿಗೆ ಹಾಗೂ ಅನುಯಾಯಿಗಳು ಸೇರಿದಂತೆ 400ಕ್ಕೂ ಹೆಚ್ಚು ಜನರಿಗೆ ಅಂಚೆ ಮೂಲಕ ರಾಖೀ ತಲುಪಿಸಿದ್ದು ವಿಶೇಷ. ಇನ್ನುಳಿದಂತೆ ಇಲ್ಲಿನ ಜಿಲ್ಲಾಡಳಿತ ಭವನ ಹಾಗೂ ವಿವಿಧೆಡೆ ಇರುವ ಸರಕಾರಿ ಕಚೇರಿಗಳ ಸಿಬ್ಬಂದಿಗೆ ಪ್ಯಾಕಿಂಗ್‌ನಲ್ಲಿರುವ ರಾಖೀಗಳನ್ನು ನೀಡಿ, ಶುಭ ಹಾರೈಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gajendragad: ಮನೆಯಲ್ಲೇ ಮುಖ್ಯ ಶಿಕ್ಷಕಿಯ ಹ*ತ್ಯೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ
CM Siddaramaiah: ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮದು
Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.