ಕುಡಿವ ನೀರಿನ ಸಮಸ್ಯೆ ಬಗೆಹರಿಸಿ


Team Udayavani, Apr 21, 2019, 3:16 PM IST

gad-1

ಗದಗ: ತಾಲೂಕಿನ ಬಳಗಾನೂರು ಗ್ರಾಮದಲ್ಲಿನ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು. ಅಲ್ಲದೇ, ಬಳಗಾನೂರು-ಲಿಂಗದಾಳ ರೋಡ್‌ ಮಧ್ಯೆ ಇರುವ ರೈಲ್ವೆ ಗೇಟ್‌ಗೆ ಮೇಲ್ಸೇತುವೆ ನಿರ್ಮಿಸಬೇಕು ಎಂದು ಒತ್ತಾಯಿಸಿ ಶನಿವಾರ ಜಿಲ್ಲಾಡಳಿತ ಭವನ ಎದುರು ಬಳಗಾನೂರ ಗ್ರಾಮ ಹಿತರಕ್ಷಣಾ ಸಮಿತಿ ನೇತೃತ್ವದಲ್ಲಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.

ಅದಕ್ಕೂ ಮುನ್ನ ಇಲ್ಲಿನ ಮಹಾತ್ಮಗಾಂಧಿ ವೃತ್ತದಿಂದ ರೋಟರಿ ಸರ್ಕಲ್, ಭೀಷ್ಮಕೆರೆ, ಕಿತ್ತೂರು ರಾಣಿ ಚೆನ್ನಮ್ಮ ವೃತ್ತ, ಮುಳಗುಂದ ನಾಕಾ, ಟಿಪ್ಪು ಸುಲ್ತಾನ್‌ ಮಾರ್ಗವಾಗಿ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿ, ಜಿಲ್ಲಾಡಳಿತದ ವಿರುದ್ಧ ಧಿಕ್ಕಾರ ಕೂಗಿದರು.

ಈ ಕುರಿತು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ, ತಾಲೂಕಿನ ಬಳಗಾನೂರ ಗ್ರಾಮದಲ್ಲಿ ಹಲವಾರು ವರ್ಷಗಳಿಂದ ಕುಡಿಯುವ ನೀರಿನ ಸಮಸ್ಯೆಯಿದ್ದು, ತಕ್ಷಣವೇ ನಿವಾರಿಸಬೇಕು ಎಂದು ಒತ್ತಾಯಿಸಿದರು.

ಗ್ರಾಮಸ್ಥರ ಸುಮಾರು 2000 ಹೆಕ್ಟೇರ್‌ ಪ್ರದೇಶದ ಜಾಮಿನುಗಳು ಲಿಂಗದಾಳ ಭಾಗದಲ್ಲಿವೆ. ಹೀಗಾಗಿ ಪ್ರತಿನಿತ್ಯ ರೈಲ್ವೆ ಹಳಿ ದಾಟಿ ಸಾಗಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ರೈತರ ದೃಷ್ಟಿಯಿಂದ ಬಳಗಾನೂರ-ಲಿಂಗದಾಳ ರೋಡ್‌ ಮಧ್ಯೆ ಇರುವ ರೈಲ್ವೆ ಗೇಟ್ ನಂಬರ್‌ 10ರ 20/700 ಮತ್ತು 20/800 ಗದಗ-ವಿಜಯಪುರ ಮಧ್ಯ ಇರುವ ರೈಲು ಹಳಿಯ ಗೇಟ್‌ಗೆ ಮೇಲ್ಸೇತುವೆ ನಿರ್ಮಿಸಬೇಕು. ಇಲ್ಲವಾದರೆ ಮತದಾನ ಬಹಿಷ್ಕರಿಸಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.

ಬಳಗಾನೂರ ಗ್ರಾಮ ಹಿತರಕ್ಷಣಾ ಸಮಿತಿ ಮುಖಂಡ ಪ್ರೊ| ಹನುಮಂತಗೌಡ ಆರ್‌.ಕಲ್ಮನಿ, ಗ್ರಾ.ಪಂ. ಉಪಾಧ್ಯಕ್ಷ ಎಂ.ಬಿ. ವಗ್ಗನವರ, ಸದಸ್ಯರಾದ ಎಂ.ಬಿ. ಕಾಶಿಗೌಡರ, ಎಸ್‌.ಎಚ್. ಅಗಸಿಮನಿ ಪ್ರಭಣ್ಣ ಗೂಳರಡ್ಡಿ, ಹೇಮಣ್ಣ ದೊಡ್ಡಮನಿ, ತಾ.ಪಂ. ಮಾಜಿ ಸದಸ್ಯ ಶೇಖಪ್ಪ ಅಗಸಿಮನಿ, ಬೆಟಗೇರಿ ರೈಲ್ವೆ ಹೋರಾಟ ಸಮಿತಿ ಅಧ್ಯಕ್ಷ ಗಣೇಶಸಿಂಗ್‌ ಬ್ಯಾಳಿ, ಹಿರಿಯರಾದ ಚೆನ್ನವೀರಪ್ಪ ಚವಡಿ, ಕೃಷ್ಟಪ್ಪ ಪಡೆಸೂರು, ಎಸ್‌.ಬಿ. ಛಟ್ರಿ, ಉಮೇಶ ಮಡಿವಾಳರ, ಹನುಮಪ್ಪ ಛಟ್ರಿ, ವೀರೂಪಾಕ್ಷಿ ಹಿತ್ತಲಮನಿ, ಆರ್‌.ಎನ್‌. ಪಾಟೀಲ, ಬಸವರಾಜ ಕರಡ್ಡಿ, ಸಂಗಪ್ಪ ಗಡ್ಡೆಪ್ಪನವರ, ನಿಜಗುಣಪ್ಪ ಶಿವಸಿಂಪರ, ಸುರೇಶ ಛಲವಾದ, ಶರಣಪ್ಪ ಕರಡ್ಡಿ, ಮುತ್ತು ಛಟ್ರಿ ಮತ್ತಿತರರು ಇದ್ದರು.

ಟಾಪ್ ನ್ಯೂಸ್

Ullal: ಗಾಂಜಾ ಮಾರಾಟ: ಜೋಡಿ ಬಂಧನ

Ullal: ಗಾಂಜಾ ಮಾರಾಟ: ಜೋಡಿ ಬಂಧನ

Mangaluru: ವಕೀಲರ ಮೇಲೆ ಹಲ್ಲೆ: ದೂರು

Mangaluru: ವಕೀಲರ ಮೇಲೆ ಹಲ್ಲೆ: ದೂರು

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

BBK11: ಅನುಷಾಗೆ ಎಲ್ ಕೆಜಿ ಮಗು ಎಂದ ಚೈತ್ರಾ…

1-qwewqeqw

Pro Kabaddi;ಬೆಂಗಳೂರು ಬುಲ್ಸ್‌  ಜಯಭೇರಿ: ತಮಿಳ್‌ ತಲೈವಾಸ್‌ಗೆ 32-36 ಅಂಕಗಳ ಸೋಲು

1-ewewqe

Udupi;ಅಪಾರ್ಟ್ ಮೆಂಟ್ ನಲ್ಲಿ ಪಾರ್ಟಿ ವೇಳೆ ಸಿಲಿಂಡ‌ರ್ ಸ್ಫೋ*ಟ: ಅಪಾರ ಹಾನಿ

Bommai

By Poll: ಕ್ಷೇತ್ರದಲ್ಲಿ 5ಲಕ್ಷಕ್ಕೂ ಹೆಚ್ಚು ಮನೆಗಳ ಕಟ್ಟಿಸಿರುವೆ, ದಾಖಲೆ ನೋಡಲಿ: ಬೊಮ್ಮಾಯಿ

CM-Shiggavi

By Election: ಬೊಮ್ಮಾಯಿ 4 ಬಾರಿ ಗೆದ್ರೂ ಕ್ಷೇತ್ರದ ಬಡವರಿಗೆ ಒಂದೂ ಮನೆ ಕಟ್ಟಿಸಿಲ್ಲ: ಸಿಎಂ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗದಗ: ಭೀಷ್ಮ ಕೆರೆಗೆ ಸಚಿವ ಎಚ್‌.ಕೆ. ಪಾಟೀಲ ಬಾಗಿನ ಅರ್ಪಣೆ

ಗದಗ: ಭೀಷ್ಮ ಕೆರೆಗೆ ಸಚಿವ ಎಚ್‌.ಕೆ. ಪಾಟೀಲ ಬಾಗಿನ ಅರ್ಪಣೆ

1-chilly

Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ

Waqf

Waqf Issue: ಐದು ವರ್ಷ ಹಿಂದೆ ವಕ್ಫ್ ಆಸ್ತಿ ವಿರುದ್ಧ ಹೋರಾಡಿ ಗೆದ್ದಿದ್ದ 315 ರೈತರು

Gadaga: ಐತಿಹಾಸಿಕ ವೀರನಾರಾಯಣ ದೇವಸ್ಥಾನ ಪುನರುತ್ಥಾನ ಕಾರ್ಯಕ್ಕೆ ಚಾಲನೆ

Gadaga: ಐತಿಹಾಸಿಕ ವೀರನಾರಾಯಣ ದೇವಸ್ಥಾನ ಪುನರುತ್ಥಾನ ಕಾರ್ಯಕ್ಕೆ ಚಾಲನೆ

ಕುಂಬಾರರ ಬದುಕಿನಲ್ಲಿಲ್ಲ ದೀಪಾವಳಿ ಬೆಳಕು: ಮಾರುಕಟ್ಟೆಗೆ ಲಗ್ಗೆ ಇಟ್ಟ ಪಿಂಗಾಣಿ ಹಣತೆ

ಕುಂಬಾರರ ಬದುಕಿನಲ್ಲಿಲ್ಲ ದೀಪಾವಳಿ ಬೆಳಕು: ಮಾರುಕಟ್ಟೆಗೆ ಲಗ್ಗೆ ಇಟ್ಟ ಪಿಂಗಾಣಿ ಹಣತೆ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Hockey

National Hockey; ಕರ್ನಾಟಕಕ್ಕೆ ಜಯ

Ullal: ಗಾಂಜಾ ಮಾರಾಟ: ಜೋಡಿ ಬಂಧನ

Ullal: ಗಾಂಜಾ ಮಾರಾಟ: ಜೋಡಿ ಬಂಧನ

Mangaluru: ವಕೀಲರ ಮೇಲೆ ಹಲ್ಲೆ: ದೂರು

Mangaluru: ವಕೀಲರ ಮೇಲೆ ಹಲ್ಲೆ: ದೂರು

1-wqqwewq

Australia ಗೆಲುವಿಗೆ ಕಮಿನ್ಸ್‌  ನೆರವು: ಪಾಕಿಸ್ಥಾನ 203; ಆಸೀಸ್‌  8 ವಿಕೆಟಿಗೆ 204

crime

Trasi: ಕಾರು ಢಿಕ್ಕಿಯಾಗಿ ಗಾಯ; ಪ್ರಕರಣ ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.