ಅಂತಾರಾಷ್ಟ್ರೀಯ ಕ್ರೀಡಾಕೂಟಕ್ಕೆ ಗ್ರಾಮೀಣ ಪ್ರತಿಭೆ

ಸೌತ್‌ ಏಷ್ಯಾ ಅಟ್ಯಾ ಪಟ್ಯಾ ಚಾಂಪಿಯನ್‌ಶಿಪ್‌ನಲ್ಲಿ ಅವಕಾಶ; ನರೇಗಲ್ಲನ ಮೆಹಬೂಬಿ ಶೇಟಾಸಂಧಿ ಸಾಧನೆ

Team Udayavani, Oct 18, 2022, 4:13 PM IST

20

ಗಜೇಂದ್ರಗಡ: ಗ್ರಾಮೀಣ ಪ್ರತಿಭೆಗಳು ಸಾಧನೆಯ ಹಾದಿಯಲ್ಲಿ ಸಾಗಿದರೆ ಅವಕಾಶಗಳು ತಾನಾಗಿಯೇ ಒದಗಿ ಬರುತ್ತವೆ ಎನ್ನುವುದಕ್ಕೆ ಮೆಹಬೂಬಿ ಶೇಟಾಸಂಧಿ ಸಾಕ್ಷಿ. ಈಕೆ ಅಟ್ಯಾಪಟ್ಯಾ ಕ್ರೀಡೆಯಲ್ಲಿ ಭಾರತ ತಂಡ ಪ್ರತಿನಿಧಿಸುವ ಮೂಲಕ ಅಂತಾರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾಳೆ.

ಈ ಪ್ರತಿಭೆ ಸದ್ಯ ನರೇಗಲ್ಲನ ಅನ್ನದಾನೇಶ್ವರ ಪಪೂ ಮಹಾವಿದ್ಯಾಲಯದಲ್ಲಿ ದ್ವಿತೀಯ ವರ್ಷದ ವಿಜ್ಞಾನ ವಿಭಾಗದಲ್ಲಿ ಅಧ್ಯಯನ ಮಾಡಿ, ನೀಟ್‌ ಪರೀಕ್ಷೆಗೆಂದು ಲಾಂಗ್‌ ಟರ್ಮ್ ತರಬೇತಿ ಪಡೆಯುತ್ತಿದ್ದಾಳೆ. ಈ ಬಾರಿ ನೇಪಾಳದ ಕಟ್ಮಂಡುವಿನಲ್ಲಿ ಅ. 18ರಿಂದ 20ರ ವರೆಗೆ ನಡೆಯಲಿರುವ 7ನೇ ಸೌತ್‌ ಏಷ್ಯಾ ಅಟ್ಯಾ-ಪಟ್ಯಾ ಚಾಂಪಿಯನ್‌ಶಿಪ್‌ನಲ್ಲಿ ಅವಕಾಶ ದೊರತಿದೆ.

ಕರ್ನಾಟಕದಿಂದ ನಾಲ್ಕು ಕ್ರೀಡಾಪಟುಗಳು ಆಯ್ಕೆ: ಈ ಬಾರಿ ನಡೆಯಲಿರುವ 7ನೇ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದಿಂದ ಒಟ್ಟು ನಾಲ್ಕು ಜನ ಕ್ರೀಡಾಪಟುಗಳು ಆಯ್ಕೆಯಾಗಿದ್ದು, ಅದರಲ್ಲಿ ಇಬ್ಬರು ಬಾಲಕರು ಹಾಗೂ ಇಬ್ಬರು ಬಾಲಕಿಯರು ಆಯ್ಕೆಯಾಗಿದ್ದಾರೆ. ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ನರೇಗಲ್ಲಿನಿಂದ ಮೆಹಬೂಬಿ ಸೇಟಸಂಧಿ ಹಾಗೂ ನರಗುಂದ ತಾಲೂಕಿನ ವಾಸನದಿಂದ ಹರ್ಷಾ ನಡುಮನಿ ಆಯ್ಕೆಯಾಗಿದ್ದಾರೆ.

11 ಬಾರಿ ರಾಷ್ಟ್ರೀಯ ಕ್ರೀಡೆಯಲ್ಲಿ ಭಾಗಿ: ಮೆಹಬೂಬಿ ಚಿಕ್ಕಂದಿನಿಂದಲೂ ಸತತ ಕ್ರೀಡೆಯಲ್ಲಿ ತಲ್ಲಿನಳಾಗುವ ಮೂಲಕ ಸತತವಾಗಿ ಸೀನಿಯರ್‌, ಜೂನಿಯರ್‌ ಹಾಗೂ ಸಬ್‌ ಜೂನಿಯರ್‌ ವಿಭಾಗಗಳಲ್ಲಿ ಒಟ್ಟು 11 ಬಾರಿ ವಿವಿಧ ರಾಜ್ಯಗಳಲ್ಲಿ ಜರುಗಿದ ರಾಷ್ಟ್ರೀಯ ಅಟ್ಯಾಪಟ್ಯಾ ಚಾಂಪಿಯನ್‌ ಶಿಪ್‌ನಲ್ಲಿ ಭಾಗವಹಿಸುವ ಮೂಲಕ ತನ್ನದೇಯಾದ ಪ್ರತಿಭೆ ಪ್ರದರ್ಶಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದಾಳೆ.

ಮೆಹಬೂಬಿಗೆ ಚಿಕ್ಕಂದಿನಿಂದಲೂ ತರಬೇತುದಾರ ರಫೀಕ್‌ ರೇವಡಿಗಾರ ನಿರಂತರ ಐದಾರು ವರ್ಷಗಳಿಂದ ತರಬೇತಿ ನೀಡುತ್ತಾ ಪ್ರತಿವರ್ಷ ಚಾಂಪಿಯನ್‌ ಶಿಪ್‌ ವೇಳೆಯಲ್ಲಿ ಕ್ಯಾಂಪ್‌ ಆಯೋಜನೆ ಮಾಡುವ ಮೂಲಕ ರಾಜ್ಯದ ವಿವಿಧ ಮೂಲೆಯಲ್ಲಿರುವ ಅಟ್ಯಾಪಟ್ಯಾ ಕ್ರೀಡಾಪಟುಗಳಿಗೆ ತರಬೇತುಗೊಳಿಸಿ ರಾಜ್ಯದಿಂದ ಸಾಗರೋಪಾದಿಯಲ್ಲಿ ಮಕ್ಕಳನ್ನು ರಾಷ್ಟ್ರೀಯ ಹಾಗೂ ಅಂತರ್‌ ರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸುಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇದರಲ್ಲಿ ನರೇಗಲ್ಲಿನಿಂದ ಇವರಲ್ಲಿಯೇ ತರಬೇತಿ ಪಡೆದು ಈಗಾಗಲೇ ಐದು ಮಕ್ಕಳು ಸೌತ್‌ ಏಷ್ಯಾ ಚಾಂಪಿಯನ್‌ ಶಿಪ್‌ನಲ್ಲಿ ಭಾರತ ತಂಡ ಭಾಗವಹಿಸಿ ವಿಜಯಶಾಲಿಯಾಗುವಂತೆ ಮಾಡಿದ್ದು, ಈಗ ಮೆಹಬೂಬಿ ಸೇಟಸಂದಿ ಅದೇ ಹಾದಿಯಲ್ಲಿ ಆರನೆಯವಳಾಗಿ ಸೌತ್‌ ಏಷ್ಯಾ ಚಾಂಪಿಯನ್‌ ಶಿಪ್‌ಗೆ ಆಯ್ಕೆಯಾಗಿದ್ದಾಳೆ.

ಮೆಹಬೂಬಿ ಮನದಾಳದ ಮಾತು

ತನಗೆ ಚಿಕ್ಕಂದಿನಿಂದಲೂ ಕ್ರೀಡೆಯಲ್ಲಿ ಹೆಚ್ಚು ಆಸಕ್ತಿ. ತಾನು ಏಳನೇ ತರಗತಿಯಲ್ಲಿರುವಾಗ ತನ್ನ ಕ್ರೀಡಾ ಪ್ರತಿಭೆ ಗುರುತಿಸಿದ ರμಕ್‌ ರೇವಡಿಗಾರ ಗುರುಗಳು ನನಗೆ ಅಟ್ಯಾಪಟ್ಯಾ ಕ್ರೀಡೆ ಕುರಿತು ಮಾರ್ಗದರ್ಶನ ಮಾಡಿ, 11 ಬಾರಿ ರಾಷ್ಟ್ರೀಯ ಕ್ರೀಡೆಯಲ್ಲಿ ಭಾಗವಹಿಸಲು ಪ್ರೇರೇಪಿಸಿದ್ದಾರೆ. ಈಗ ಸೌತ್‌ ಏಷ್ಯಾ ಕ್ರೀಡೆಗೆ ಆಯ್ಕೆಯಾದದ್ದು ತನ್ನ ಮನೆಯವರಿಗಿಂತಲೂ ಅವರಿಗೆ ಹೆಚ್ಚಿನ ಸಂತಸ ತಂದಿದೆ ಎನ್ನುತ್ತಾರೆ ಮೆಹಬೂಬಿ.

ನಮ್ಮ ಸಂಸ್ಥೆಯ ಹಳೆಯ ವಿದ್ಯಾರ್ಥಿ ಭಾರತ ತಂಡಕ್ಕೆ ಆಯ್ಕೆಯಾಗಿದ್ದು ಸಂತಸ ತಂದಿದೆ. ಈ ಕ್ರೀಡಾಪಟು ನೇಪಾಳದ ಕಠ್ಮಂಡುವಿನಲ್ಲಿ ನಡೆಯಲಿರುವ ಅಟ್ಯಾಪಟ್ಯಾ ಚಾಂಪಿಯನ್‌ ಶಿಪ್‌ನಲ್ಲಿ ಉತ್ತಮವಾಗಿ ಆಟವಾಡಿ ಭಾರತಕ್ಕೆ ಕೀರ್ತಿ ತರುವಂತಾಗಲಿ. –ಶ್ರೀ ಮುಪ್ಪಿನ ಬಸವಲಿಂಗ ಸ್ವಾಮೀಜಿ ಹಾಲಕೆರೆ ಅನ್ನದಾನೇಶ್ವರ ಸಂಸ್ಥಾನ ಮಠ

ಗ್ರಾಮೀಣ ಪ್ರತಿಭೆಗಳನ್ನು ವಿಶ್ವ ಮಟ್ಟಕ್ಕೆ ಕೊಂಡೊಯ್ಯುವ ಅಭಿಲಾಷೆಯಿಂದಲೇ ಕಳೆದ ಹದಿನೈದು ವರ್ಷಗಳಿಂದ ಅಟ್ಯಾಪಟ್ಯಾ ತರಬೇತಿ ನೀಡುತ್ತಿದ್ದೇನೆ. ಮೆಹಬೂಬಿ ಇದೀಗ ಏಷ್ಯಾ ಟ್ರೋಫಿ ಗೆಲ್ಲುವುದೇ ನನ್ನ ಗುರಿಯಾಗಿದೆ. –ಮಹಮ್ಮದ್‌ ರಫೀಕ್‌ ರೇವಡಿಗಾರ, ತರಬೇತುದಾರ

ಟಾಪ್ ನ್ಯೂಸ್

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

Mulki-kambla

Mulki: ಕಂಬಳದಿಂದ ಕೃಷಿ, ಧಾರ್ಮಿಕ ನಂಬಿಕೆ ವೃದ್ಧಿ: ನ್ಯಾ. ಎನ್‌. ಸಂತೋಷ್‌ ಹೆಗ್ಡೆ

udupi-Bar-Asso

Udupi: ಸುಪ್ರೀಂ, ಹೈಕೋರ್ಟ್‌ಗಳ ತೀರ್ಪು ಆನ್‌ಲೈನ್‌ನಲ್ಲಿ ಲಭ್ಯ: ನ್ಯಾ.ಸೂರಜ್‌

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

crime (2)

Gajendragad: ಮನೆಯಲ್ಲೇ ಮುಖ್ಯ ಶಿಕ್ಷಕಿಯ ಹ*ತ್ಯೆ

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು

Gadag-CM-Dcm

Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ

8

CM Siddaramaiah: ಗ್ಯಾರಂಟಿಗಳನ್ನು‌ ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮ‌‌ದು

7

Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-reeeee

Vijay Hazare Trophy Cricket: ಇಂದು ಕರ್ನಾಟಕಕ್ಕೆ ಪುದುಚೇರಿ ಎದುರಾಳಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

ರಾಜ್ಯದ ಅರಣ್ಯ ವಿಸ್ತರಣೆ, ಸಂರಕ್ಷಣೆಗೆ ವೇಗ ಸಿಗಲಿ

Accident-logo

Siddapura: ಕಾರು ಸ್ಕೂಟಿಗೆ ಢಿಕ್ಕಿ; ಸವಾರರು ಗಂಭೀರ

Car-Palti

Sulya: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

Thief

Kaup: ಉದ್ಯಾವರ: ಮನೆಯ ಬೀಗ ಮುರಿದು ಸೊತ್ತು ಕಳವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.