ಶಾಲಾ ಆವರಣದಲ್ಲಿ ಮಕ್ಕಳ ಕಲರವ
Team Udayavani, Jan 2, 2021, 2:05 PM IST
ಗದಗ: ಕೋವಿಡ್ ಮಹಾಮಾರಿ ಶಾಲಾ ಮಕ್ಕಳಿಗೆ ಶಾಲೆಯ ಮುಖನೋಡದಂತೆ ಮಾಡಿತ್ತು. ಇದೀಗ ಸೋಂಕಿನ ಪ್ರಮಾಣ ಗಣನೀಯವಾಗಿಕಡಿ ಮೆಯಾಗಿದ್ದರಿಂದ ಮಕ್ಕಳು ಸಂತಸದಿಂದ ಶಾಲೆಗೆ ಮರಳಿದರು. ಕಳೆದ 10 ತಿಂಗಳಿಂದ ಮಕ್ಕಳಿಲ್ಲದೇ ಬಿಕೋ ಎನ್ನುತ್ತಿದ್ದ ಶಾಲಾ ಆವರಣದಲ್ಲಿ ಮಕ್ಕಳ ಕಲರವ ಕಳೆಗಟ್ಟಿತ್ತು.
ಸೋಂಕಿನ ಪ್ರಮಾಣ ಕಡಿಮೆಯಾಗಿದ್ದರೂ ಕೋವಿಡ್ ಆತಂಕ ಮುಂದುವರಿದಿದೆ. ಹೀಗಾಗಿಕೋವಿಡ್ ನಿಯಂತ್ರಣಕ್ಕಾಗಿ ರಾಜ್ಯ ಸರಕಾರದ ನಿರ್ದೇಶನದಂತೆ ಶಾಲೆಗಳಲ್ಲಿ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಲಾಯಿತು. ಮಕ್ಕಳು ಶಾಲೆಪ್ರವೇಶಿಸುತ್ತಿದ್ದಂತೆ ಕೈಗೆ ಸ್ಯಾನಿಟೈಸರ್,ಕೈಗಳನ್ನು ಸ್ವತ್ಛವಾಗಿ ತೊಳೆಯಲುಸೋಪ್, ತರಗತಿಗಳಲ್ಲಿ ಕೂರಲುಸಾಮಾಜಿಕ ಅಂತರ ಪಾಲಿಸಲಾಯಿತು.
ಶಾಲೆಗಳಲ್ಲಿ ಹಬ್ಬದ ಸಂಭ್ರಮ: ಕಳೆದ10 ತಿಂಗಳಿಂದ ಬಂದ್ ಆಗಿದ್ದ ಶಾಲೆಗಳು ಹೊಸ ವರ್ಷದ ದಿನದಂದೇಆರಂಭಗೊಂಡಿವೆ. ಎಂದಿನಂತೆ ಬೆಳಗ್ಗೆ 10ಗಂಟೆಗೆ ಶಾಲೆಗಳು ಆರಂಭಗೊಂಡಿದ್ದು, ಮೊಲದ ದಿನವಾದ ಶುಕ್ರವಾರ 6 ರಿಂದ10ನೇ ತಗರತಿ ವರೆಗಿನ ನೂರಾರು ವಿದ್ಯಾರ್ಥಿಗಳು ಹಾಜರಾಗಿದ್ದರು.ಶಾಲೆಗಳ ಪುನಾರಂಭದ ಹಿನ್ನೆಲೆಯಲ್ಲಿಎಲ್ಲೆಡೆ ಶಾಲಾ ಆವರಣದಲ್ಲಿರಂಗೋಲಿಯ ಚಿತ್ತಾರ ಬಿಡಿಸಿ, ತಳಿರುತೋರಣಗಳಿಂದ ಸಿಂಗರಿಸಲಾಗಿತ್ತು.ನಗರದ ತೋಂಟದಾರ್ಯ ಮಠದಶಾಲೆ, ಶಾಸಕರ ಮಾದರಿ ಶಾಲೆ ನಂ.10, ಸರಕಾರಿ ಗಂಡು ಮಕ್ಕಳ ಶಾಲೆ-02,ಬೆಟಗೇರಿಯ ಶರಬಸವೇಶ್ವರ ಅವಳಿನಗರದ ಇನ್ನಿತರೆ ಶಾಲೆಗಳಲ್ಲೂಇದೇ ರೀತಿ ಅಲಂಕರಿಸಲಾಗಿತ್ತು.ಜೊತೆಗೆ ಸಾಮಾಜಿಕ ಅಂತರ ಪಾಲನೆ, ಥರ್ಮಲ್ ಸ್ಕ್ರೀನಿಂಗ್ ಸೇರಿ ಕೋವಿಡ್‌ನಿಯಮ ಪಾಲನೆ ಹೀಗೆ ಮಕ್ಕಳನ್ನು ಭರ್ಜರಿಯಾಗಿ ಸ್ವಾಗತಿಸಲಾಯಿತು.
ಗುಲಾಬಿ ಹೂ ನೀಡಿ ಸ್ವಾಗತ: ಬೆಟಗೇರಿ ಮಹಾರಾಣ ಪ್ರತಾಪ್‌ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಗುಲಾಬಿಹೂ ನೀಡಿ ಸ್ವಾಗತಿಸಲಾಯಿತು.ಶಾಲೆ ಆರಂಭವಾಗುತ್ತಿದ್ದಂತೆಸಾಮಾಜಿಕ ಅಂತರದಲ್ಲಿ ಆಗಮಿಸಿದವಿದ್ಯಾರ್ಥಿಗಳಿಗೆ ಶಾಲೆಯಲ್ಲಿಕಡ್ಡಾಯವಾಗಿ ಕೋವಿಡ್‌ನಿಯಮಗಳನ್ನು ಪಾಲಿಸುವಂತೆಶಿಕ್ಷಕರು ಸೂಚಿಸಿದರು. ಅಲ್ಲದೇ,ತರಗತಿಗಳಲ್ಲಿ ಹಾಜರಾತಿ ಕಡ್ಡಾ ಯವಲ್ಲ. ಯಾವುದೇ ವಿಷಯಕ್ಕೆಸಂಬಂಧಿಸಿದಂತೆ ಸಮಸ್ಯೆ ಹಾಗೂ ಪಾಠಗಳ ಕುರಿತು ಸಂಶಯಗಳಿದ್ದಲ್ಲಿ ಸಂಬಂಧಿಸಿದ ವಿಷಯ ಶಿಕ್ಷಕರನ್ನು ಕಂಡು ಬಗೆಹರಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಇನ್ನು, ಹಲವು ತಿಂಗಳುಗಳ ಬಳಿಕ ಶಾಲೆಗೆ ಆಗಮಿಸಿದ್ದ ಮಕ್ಕಳಸಂಭ್ರಮಕ್ಕೆ ಪಾರವೇ ಇರಲಿಲ್ಲ.ಹಲವು ತಿಂಗಳಿಂದ ಸ್ನೇಹಿತರ ಭೇಟಿಗೆಚಡಪಡಿಸುತ್ತಿದ್ದ ಚಿಣ್ಣರು, ಪರಿಸ್ಪರ ಕೈ ಕುಲಕಿ, ಹೊಸ ವರ್ಷದ ಶುಭಾಶಯ ವಿನಿಮಯ ಮಾಡಿಕೊಂಡರು.ಅಲ್ಲದೇ, ನೆಚ್ಚಿನ ಶಿಕ್ಷಕರನ್ನು ಭೇಟಿಮಾಡಿ ಸಂಭ್ರಮಿಸಿದರು. ಮೊಲದದಿನವಾಗಿದ್ದರಿಂದ ಎಲ್ಲೆಡೆ ಶೇ.60 ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದರು. ಶಾಲಾ ಪ್ರಾರಂಭೋತ್ಸವದ ನಿಮಿತ್ತಮಕ್ಕಳು ಜಾಥಾ ನಡೆಸಿದರು. ಶಾಲಾ ಆರಂಭದ ಮೊದಲ ದಿನವಾಗಿದ್ದರಿಂದಹೆಚ್ಚಿನ ಪಾಠಗಳುನಡೆಯಲಿಲ್ಲ.ಸೋಮವಾರದಿಂದ ಎಲ್ಲವೂ ವೇಳಾಪಟ್ಟಿಯಂತೆ ನಿರ್ವಹಿಸಲಾಗುತ್ತದೆ ಎಂದು ಶಿಕ್ಷಕರೊಬ್ಬರು ತಿಳಿಸಿದರು.
ಸರಕಾರಿ ಶಾಲೆಯಲ್ಲಿ 80, ಅನುದಾನಿತ ಶಾಲೆಗಳಲ್ಲಿ ಶೇ.85 ರಷ್ಟು ಹಾಜರಾತಿ ಕಂಡುಬಂದಿದೆ. ಕೋವಿಡ್ ನಿಯಂತ್ರಣಕ್ಕಾಗಿ ಸಾಮಾಜಿಕ ಕಾರ್ಯಕರ್ತಮುತ್ತಣ್ಣ ಭರಡಿ, ಸಿವಿಲ್ ಎಂಜಿನಿಯರ್ ವೀರೇಶ್ ಖಾನತೋಟದ 2 ಶಾಲೆಗಳು,ಗಂಗಿಮಡಿ, ಮರಾಠಾ ಶಾಲೆ, ಸಿದ್ಧಲಿಂಗ ನಗರದ ಪ್ರೌಢಶಾಲೆ ಸುಮಾರು 6 ಸಾವಿರ ಮಾಸ್ಕ್ ವಿತರಿಸಿದ್ದಾರೆ. ಇದೇ ವೇಳೆ ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ್ ಭೇಟಿ ನೀಡಿದ್ದರು. ಎಲ್ಲವೂ ಸುಸೂತ್ರವಾಗಿ ಆರಂಭಗೊಂಡಿವೆ. –ಎಸ್.ಎಸ್.ಕೆಳದಿಮಠ, ಶಹರ ಬಿಇಒ
ಶಾಲೆ ಪುನಾರಂಭಗೊಂಡಿರುವುದು ಸಂತಸ ಮೂಡಿಸಿದೆ. ಕೋವಿಡ್ ನಿಂದಾಗಿ ಆನ್‌ಲೈನ್‌ನಲ್ಲಿ ತಗರತಿಗಳುನಡೆದರೂ ಬೋಧನೆ ಪರಿಣಾಮಕಾರಿಯಾಗಿರಲಿಲ್ಲ.ಕೆಲವೊಮ್ಮೆ ಇಂಟರ್‌ನೆಟ್ ಕೈಕೊಡುವುದು,ಪೂವರ್ ಕನೆಕ್ಷನ್ ಮತ್ತಿತರೆ ತಾಂತ್ರಿಕ ಸಮಸ್ಯೆಗಳಿಂದಸಮರ್ಪಕವಾಗಿ ಪಾಠ ಆಲಿಸಲು ಸಾಧ್ಯವಾಗುತ್ತಿರಲಿಲ್ಲ. ಈಗ ಶಾಲೆ ಪುನಾರಂಭಗೊಂಡಿದ್ದರಿಂದ ಸಹಜ ಕಲಿಕೆಗೆ ಪೂರಕವಾಗಿರಲಿದೆ. – ಕಲಾವತಿ ತಡಸೂರ್, ವಿದ್ಯಾರ್ಥಿನಿ
ಆನ್‌ಲೈನ್ ಕಲಿಕೆ ಎಂಬುದು ತಾತೂ³ರ್ತಿಕವಷ್ಟೇ. ನೇರ ಕಲಿಕೆಯಷ್ಟು ಪರಿಣಾಮಕಾರಿಯಾಗದು. ಹೀಗಾಗಿ,ಪರಿಸ್ಥಿತಿಯನ್ನು ಅವಲೋಕಿಸಿ, ಅಗತ್ಯ ಮುಂಜಾಗ್ರತಾಕ್ರಮಗಳೊಂದಿಗೆ ಶಾಲೆಗಳ ಆರಂಭಕ್ಕೆ ಸರಕಾರ ಅನುಮತಿನೀಡಿರುವುದು ಸ್ವಾಗತಾರ್ಹ. ಹಲವು ತಿಂಗಳ ಬಳಿಕ ಶಾಲೆಆರಂಭಗೊಂಡಿದ್ದರೂ ಮಕ್ಕಳು ಕಲಿಕಾ ಆಸಕ್ತಿಯಿಂದಅತ್ಯಂತ ಉತ್ಸಾಹದೊಂದಿಗೆ ಆಗಮಿಸುತ್ತಿದ್ದಾರೆ. –ಗಣೇಶ್‌ಸಿಂಗ್ ಬ್ಯಾಳಿ, ಮಹಾರಾಣ ಪ್ರತಾಪ್ ಶಿಕ್ಷಣ ಸಂಸ್ಥೆ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮುದ್ರಣ ಕಾಶಿಯಲ್ಲಿ ಕ್ಯಾಲೆಂಡರ್ ಮುದ್ರಣ ಭರಾಟೆ; ಕ್ಯಾಲೆಂಡರ್-ತೂಗು ಪಂಚಾಂಗಗಳಿಗೆ ಖ್ಯಾತಿ
Gadg; ಜಗಳ ಬಿಡಿಸಲು ಬಂದ ಯುವಕನ ಕತ್ತಿಗೆ ಸ್ಕ್ರೂ ಡ್ರೈವರ್ ಚುಚ್ಚಿದ ದುಷ್ಕರ್ಮಿಗಳು
Diesel theft; ಗದಗ: ಕೆ.ಎಸ್.ಆರ್.ಟಿ.ಸಿ. ಬಸ್ ಗಳ ಡೀಸೆಲ್ ಕಳ್ಳತನ
ದೆಹಲಿ ಪರೇಡ್‌ಗೆ ಬ್ರಹ್ಮ ಜಿನಾಲಯ ಸ್ತಬ್ಧಚಿತ್ರ; ಗತ ವೈಭವ ಸಾರಲಿದೆ ಟ್ಯಾಬ್ಲೊ
ಗದಗ: 4 ವರ್ಷವಾದರೂ ಮುಗಿಯದ ವಸತಿ ಶಾಲೆ ಕೆಲಸ! 20 ಕೋಟಿ ರೂ. ವೆಚ್ಚ…
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.