ಮಕ್ಕಳಿಗೆ ಕೆರೆಯಿಂದ ಶಾಲೆಗೆ ನೀರು ತರುವ ಕಾಯಕ
ಹೊಂಬಳ ಗ್ರಾಮದ ಸರಕಾರಿ ಶಾಲಾ ವಿದ್ಯಾರ್ಥಿಗಳು ತಳ್ಳು ಗಾಡಿಯಲ್ಲಿ ನೀರು ತರುವ ಕುರಿತು ಪೋಷಕರ ಆತಂಕ-ಆಕ್ರೋಶ
Team Udayavani, Oct 3, 2021, 10:06 PM IST
ಗದಗ: ಶಾಲೆಯ ಮುಖ್ಯ ಗುರುಗಳು, ಎಸ್‌ಡಿಎಂಸಿ ಅವರ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿಯಿಂದಾಗಿ ತಾಲೂಕಿನ ಹೊಂಬಳ ಗ್ರಾಮದ ಸರಕಾರಿ ಶಾಲಾ ಮಕ್ಕಳು ಪ್ರತಿನಿತ್ಯ ಅಪಾಯದ ಕದ ತಟ್ಟುತ್ತಿದ್ದಾರೆ. ಶಾಲಾ ಶಿಕ್ಷಕರು ಹಾಗೂ ಎಸ್‌ಡಿಎಂಸಿ ವಿರುದ್ಧ ಪೋಷಕರ ಆಕ್ರೋಶ ವ್ಯಕ್ತವಾಗುತ್ತಿದೆ.
ಶಾಲಾ ಕೆಲಸ ಕಾರ್ಯಗಳಿಗೆ ಮಕ್ಕಳನ್ನು ಬಳಕೆ ಮಾಡಬಾರದು ಎಂದು ಸರ್ಕಾರದ ಆದೇಶವಿದೆ. ಆದರೆ, ತಾಲೂಕಿನ ಹೊಂಬಳ ಗ್ರಾಮದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಅಡುಗೆ ಸಹಾಯಕಿಯರು, ಸಿಬ್ಬಂದಿ ಇದ್ದರೂ, ಮಕ್ಕಳಿಂದ ನೀರು ತರಿಸಲಾಗುತ್ತಿದೆ. ಪ್ರತಿನಿತ್ಯ ಶಾಲಾ ವಿದ್ಯಾರ್ಥಿಗಳಿಗೆ ತಳ್ಳುಗಾಡಿ ಕೊಟ್ಟು ಹೊಂಡಕ್ಕೆ ಕಳಿಸಲಾಗುತ್ತಿದೆ. ಅಡುಗೆ ಮಾಡಲು ಪಾತ್ರೆ ತೊಳೆಯಲು ಹಾಗೂ ಕುಡಿಯಲು ಸಾಕಾಗುವಷ್ಟು ಹತ್ತಾರು ಕೊಡ ನೀರು ತರುತ್ತಿದ್ದಾರೆ ಎಂಬುದು ಪೋಷಕರಿಂದ ಗಂಭೀರ ಆರೋಪ ಕೇಳಿಬಂದಿದೆ.
ಕೋವಿಡ್ ನಿಯಮಗಳ ಸಡಿಲಿಕೆ ಬಳಿಕ 6 ರಿಂದ ಉನ್ನತ ತರಗತಿಗಳ ಪುನಾರಂಭಗೊಂಡಿವೆ. ಆ ಪೈಕಿ ಹೊಂಬಳ ಶಾಲೆಯ 6 ಮತ್ತು 7ನೇ ತರಗತಿ ಸೇರಿದಂತೆ ಸುಮಾರು 80 ಮಕ್ಕಳಿದ್ದು, ಆ ಪೈಕಿ ಭಾಗಶಃ ವಿದ್ಯಾರ್ಥಿಗಳು ಹಾಜರಾಗುತ್ತಿದ್ದಾರೆ. ಅವರಲ್ಲಿ ಪ್ರತಿನಿತ್ಯ ನಾಲ್ಕೈದು ಜನರ ಒಂದು ಗುಂಪು ಮಾಡಿ ನೀರಿಗೆ ಕಳಿಸಲಾಗುತ್ತಿದೆ. ಹೊಂಡ ಸುಮಾರು ಒಂದಾಳಷ್ಟು ಆಳ ಇದೆ. ಚಿಕ್ಕ ಮಕ್ಕಳಿದ್ದು, ಈಜು ಬರುವುದಿಲ್ಲ. ಆಕಸ್ಮಿಕವಾಗಿ ಕಾಲು ಜಾರಿ ಹೊಂಡಕ್ಕೆ ಬಿದ್ದರೆ, ಹುಡುಗಾಟದಲ್ಲಿ ನೀರಿಗೆ ಬಿದ್ದು ಏನಾದರೂ ಅನಾಹುತ ಸಂಭವಿಸಿದರೆ, ಯಾರು ಹೊಣೆ? ಸದ್ಯಕ್ಕೆ ಶಾಲೆಯಲ್ಲಿ ಬಿಸಿಯೂಟವೂ ನೀಡುತ್ತಿಲ್ಲ. ಆದರೂ, ಹತ್ತಾರು ಕೊಡ ನೀರು ಯಾಕೆ ಹೊರಿಸುತ್ತಿದ್ದಾರೆ ಎಂಬುದು ಪೋಷಕರ ಪ್ರಶ್ನೆ.
ನಮಗೆ ಗೊತ್ತೇ ಇಲ್ಲ-ನಾವು ಹೇಳಿಲ್ಲ:ಈ ಕುರಿತು ಪ್ರತಿಕ್ರಿಯಿಸಿದ ಶಾಲೆಯ ಶಿಕ್ಷಕರು, ಶಾಲೆಯ ಮಕ್ಕಳಿಗೆ ನೀರು ತರಲು ಹೇಳುವುದಿಲ್ಲ. ಆದರೆ, ಇಂದು ನಮ್ಮ ಶಾಲೆ ಯಲ್ಲಿ ಯುವಜನಸೇವಾ ಮತ್ತು ಕ್ರೀಡಾ ಇಲಾಖೆ ಯಿಂದ ಗ್ರಾಮೀಣ ಕ್ರೀಡಾಕೂಟ ಆಯೋಜಿಸ ಲಾಗಿದೆ. ಅವರು ಹೇಳಿದ್ದರೋ ಗೊತ್ತಿಲ್ಲ. ಈ ಬಗ್ಗೆ ವಿಚಾರಿಸುತ್ತೇವೆ ಎಂದು ಜಾರಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brutal: ಪತ್ನಿ, ಇಬ್ಬರು ಮಕ್ಕಳನ್ನು ಮಚ್ಚಿನಿಂದ ಕೊಚ್ಚಿ ಕೊಂದ ಪತಿ!
Udupi: ಶ್ರೀಕೃಷ್ಣಮಠದಲ್ಲಿ ಇಂದಿನಿಂದ ಸಪ್ತೋತ್ಸವ
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.