ಸತ್ತರೆ ಶವ ಸಂಸ್ಕಾರಕ್ಕೆ ಜಾಗದ ಹುಡುಕಾಟ!
Team Udayavani, Jan 10, 2020, 4:01 PM IST
ನರೇಗಲ್ಲ: ಕೋಚಲಾಪುರ ಗ್ರಾಮದಲ್ಲಿ ಯಾರದಾರೂ ಸತ್ತರೆ ಶವ ಮನೆಯಲ್ಲಿ ಇಟ್ಟುಕೊಂಡು ಸಂಸ್ಕಾರಕ್ಕಾಗಿ ಜಾಗದ ಹುಡುಕಾಟ ನಡೆಸಬೇಕು. ಈ ಸಮಸ್ಯೆ ಇಂದು ನಿನ್ನೆಯದಲ್ಲ. ಹಲವು ದಶಕಗಳಿಂದ ಈ ಊರಿನವರಿಗೆ ಸ್ಮಶಾನ ಸಮಸ್ಯೆ ಬಗೆಹರಿದಿಲ್ಲ. ಗ್ರಾಮದಲ್ಲಿ ಹಲವು ದಶಕಗಳಿಂದ ರುದ್ರಭೂಮಿ ಇಲ್ಲದೇ ಇಲ್ಲಿನ ನಿವಾಸಿಗಳು ಸಾಕಷ್ಟು ಪರದಾಟ ನಡೆಸುತ್ತಿದ್ದಾರೆ.
ಜಮೀನು ಹೊಂದಿದವರು ತಮ್ಮ ಹೊಲಗಳಲ್ಲಿ ಶವ ಸಂಸ್ಕಾರ ಮಾಡುತ್ತಾರೆ. ಆದರೆ ಬಡವರು ಸತ್ತರೆ ರಸ್ತೆಯಲ್ಲೇ ಅಂತ್ಯ ಸಂಸ್ಕಾರ ಮಾಡಿ ಕೈಮುಗಿದು ಬರುತ್ತಾರೆ. ಮಳೆಗಾಲದ ಸಮಯದಲ್ಲಿ ಸತ್ತ ಶವಗಳನ್ನು ಸುಡುವುದಕ್ಕೆ ಯಾವುದೇ ರೀತಿಯ ಸೌಲಭ್ಯ ಇಲ್ಲದೇ ನಡು ರಸ್ತೆಯಲ್ಲಿ ಶವಗಳನ್ನು ಸುಡುವ ಅಥವಾ ಮಣ್ಣು ಮಾಡುವ ಸ್ಥಿತಿ ಇಲ್ಲಿದೆ.
ಗ್ರಾಮದಲ್ಲಿ 720ಕ್ಕೂ ಅಧಿಕ ಮನೆಗಳಿದ್ದು, ಇಲ್ಲಿ ರಡ್ಡಿ, ವೀರಶೈವ ಲಿಂಗಾಯತ, ಕುಂಬಾರ, ಹಡಪದ, ಮುಸ್ಲಿಂ ಸೇರಿದಂತೆ ಅನೇಕ ಜಾತಿಯ ಜನರು ವಾಸಮಾಡುತ್ತಾರೆ. ಆದರೆ, ಮುಸ್ಲಿಂಸಮಾಜದವರಿಗೆ ಸ್ಮಶಾನವಿದೆ. ಇವರಿಗೆ ಯಾವುದೇ ರೀತಿಯ ತೊಂದರೆಯಿಲ್ಲ. ಇನ್ನೂಳಿದ ಜಾತಿಯ ಜನರು ಅಂತ್ಯ ಸಂಸ್ಕಾರಕ್ಕೆ ಹೊಲಹೊಲ ತಿರುಗಾಡಿ ಯಾರದೋ ಹೊಲದಲ್ಲಿ ಮುಚ್ಚುವ, ಸುಡುವ ಪರಿಸ್ಥಿತಿಯಿದೆ. ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಇಲ್ಲಿಯವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ತಹಶೀಲ್ದಾರ್‌ಗೆ ಹತ್ತು ಹಲವಾರು ಲಿಖೀತ ಅರ್ಜಿ ಮತ್ತು ಮೌಖೀಕವಾಗಿ ಸ್ಥಳೀಯ ಶಾಸಕರ ಗಮನಕ್ಕೂ ತಂದರೂ ಯಾವುದೇ ಪ್ರಯೋಜನವಾಗಿಲ್ಲ.
ಈಗಾಗಲೇ ತಾಲೂಕು ಆಡಳಿತದಿಂದ ಯಾವ ಗ್ರಾಮದಲ್ಲಿ ಸ್ಮಶಾನವಿಲ್ಲ ಎಂಬುದನ್ನು ಸರ್ವೇ ಮಾಡಿದ್ದು, ಅಲ್ಲದೇ ಆ ಗ್ರಾಮಗಳಲ್ಲಿ ಡಂಗುರ ಸಾರಲಾಗಿದೆ. ಸ್ಮಶಾನ ಇಲ್ಲದ ಗ್ರಾವದಲ್ಲಿನ ಜಮೀನು ಹೊಂದಿದ್ದ ಮಾಲೀಕರು ರುದ್ರಭೂಮಿಗೆ ತಮ್ಮ ಜಮೀನುಗಳನ್ನು ಸರ್ಕಾರಕ್ಕೆ ನೀಡುವುದಕ್ಕೆ ಮುಂದಾಗುತ್ತಿಲ್ಲ. ರೈತರು ಸ್ಮಶಾನಕ್ಕೆ ಭೂಮಿಯನ್ನು ಕೊಟ್ಟರೆ ಸರ್ಕಾರದಿಂದ ಖರೀದಿ ಮಾಡಿ ಪ್ರತಿಯೊಂದು ಸಮಾಜಕ್ಕೆ ಸ್ಮಶಾನ ವ್ಯವಸ್ಥೆ ಕಲ್ಪಿಸಲಾಗುವುದು. –ವೀರಣ್ಣ ಅಡಗತ್ತಿ, ನರೇಗಲ್ಲ ಕಂದಾಯ ನಿರೀಕ್ಷಕ
-ಸಿಕಂದರ ಎಂ. ಆರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Actress: ರೊಮ್ಯಾನ್ಸ್ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.