ನಾಟಕಗಳಿಂದ ಕನ್ನಡ ಪಸರಿಸಿದ ಶಾಂತಕವಿ: ಬಿದರಕುಂದಿ
Team Udayavani, Feb 10, 2024, 4:05 PM IST
ಉದಯವಾಣಿ ಸಮಾಚಾರ
ಗದಗ: ಸಕ್ಕರಿ ಬಾಳಾಚಾರ್ಯರು ಕನ್ನಡದ ನೆಲದಲ್ಲಿ ಮರಾಠಿ ನಾಟಕ ಪ್ರದರ್ಶನದ ವಿರುದ್ಧ ಅಸಮಾಧಾನ ಹೊಂದಿ ಕನ್ನಡ
ನಾಟಕ ರಚಿಸಿ ಪ್ರದರ್ಶಿಸುವ ಮೂಲಕ ಕನ್ನಡದ ವಾತಾವರಣ ಪಸರಿಸುವ ಮಹತ್ವದ ಕಾರ್ಯ ಮಾಡಿದರು ಎಂದು ಖ್ಯಾತ ವಿಮರ್ಶಕ ಡಾ| ಶ್ಯಾಮಸುಂದರ ಬಿದರಕುಂದಿ ಹೇಳಿದರು.
ನಗರದಲ್ಲಿ ಧಾರವಾಡದ ಸಕ್ಕರಿ ಬಾಳಾಚಾರ್ಯ ಶಾಂತಕವಿ ಟ್ರಸ್ಟ್ ಹಾಗೂ ಜಿಲ್ಲಾ ಕಸಾಪ ವತಿಯಿಂದ ಶಾಂತಕವಿಗಳ 168ನೇ
ಜನ್ಮ ದಿನೋತ್ಸವ ಹಾಗೂ 2024ನೇ ವರ್ಷದ ದಿನದರ್ಶಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗದುಗಿನಲ್ಲಿ 1874ರಲ್ಲಿ ನಾಟಕ ಮಂಡಳಿ ಕಟ್ಟಿ ಅದರ ಮೂಲಕ ಕನ್ನಡ ನಾಟಕ ಪ್ರದರ್ಶನ ಮಾಡಿದರು. ಜತೆಗೆ ಕನ್ನಡದಲ್ಲಿ
ಕೀರ್ತನೆ ರಚಿಸಿ ಪ್ರಸ್ತುಪಡಿಸುವ ಮೂಲಕ ಕನ್ನಡದ ಕೀರ್ತನಕಾರರಾಗಿ ಕನ್ನಡದ ಬೆಳವಣಿಗೆಯಲ್ಲಿ ಪ್ರಧಾನ ಪಾತ್ರ ವಹಿಸಿದ್ದರು
ಎಂದು ಹೇಳಿದರು.
1918ರಲ್ಲಿ ಧಾರವಾಡದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ಬೇಡಲು ಬಂದಿಹೆ ದಾಸಯ್ಯ ಎನ್ನುತ್ತ ಮನೆ-ಮನೆಗೆ
ಹೋಗಿ ಹಣ ಸಂಗ್ರಹಿಸಿ ಸಾಹಿತ್ಯ ಸಮ್ಮೇಳನ ನಡೆಯುವಂತೆ ಮಾಡಿದರು. ಇಂದು ಸಾಹಿತ್ಯ ಸಮ್ಮೇಳನಕ್ಕಾಗಿ ಸರ್ಕಾರಕ್ಕೆ ಕೈಯೊಡ್ಡುವ ಪರಿಪಾಠವಿದೆ. ಜನರ ಸಹಾಯದಿಂದ ಸಮ್ಮೇಳನ ಮಾಡುವುದು ಸೂಕ್ತವಾಗಿದೆ ಎಂದರು.
ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ, ಹಿರಿಯ ರಂಗಕರ್ಮಿ ಡಾ| ಪ್ರಕಾಶ ಗರೂಡ ಮಾತನಾಡಿದರು. ಈ ವೇಳೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ವೀರಯ್ಯಸ್ವಾಮಿ ಬಿ., ಟ್ರಸ್ಟ್ ಅಧ್ಯಕ್ಷ ಬಾಬುರಾವ್ ಸಕ್ಕರಿ, ಕಾರ್ಯದರ್ಶಿ ಹನುಮೇಶ ಸಕ್ಕರಿ, ಡಾ| ರಾಜೇಂದ್ರ ಗೋಡಬೋಲೆ, ಡಾ| ಅನಂತ ಶಿವಪೂರ, ವಾಣಿ ಶಿವಪೂರ, ಡಾ| ಎಚ್.ಬಿ.
ಪೂಜಾರ ಡಾ| ರಶ್ಮಿ ಅಂಗಡಿ, ಡಾ| ಅರ್ಜುನ ಗೊಳಸಂಗಿ, ಚಂದ್ರಶೇಖರ ವಸ್ತ್ರದ, ಕೆ.ಎಚ್. ಬೇಲೂರ, ಶೇಖಣ್ಣ ಕಳಸಾಪುರಶೆಟ್ಟರ, ಅನ್ನದಾನಿ ಹಿರೇಮಠ ಸೇರಿದಂತೆ ಇತರರಿದ್ದರು. ಡಾ| ದತ್ತಪ್ರಸನ್ನ ಪಾಟೀಲ ನಿರೂಪಿಸಿದರು. ಕಿಶೋರಬಾಬು ನಾಗರಕಟ್ಟಿ ಸ್ವಾಗತಿಸಿದರು. ಶಿವಾನಂದ ಗಿಡ್ನಂದಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗಜೇಂದ್ರಗಡ: ಸೂಡಿ ಉತ್ಸವಕ್ಕೆ ತೋರಬೇಕಿದೆ ಇಚ್ಛಾಶಕ್ತಿ-ಹಾಳು ಕೊಂಪೆಯಾದ ಸ್ಮಾರಕ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
ಗದಗ: ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ
Gadaga: ಎಸ್ಪಿ ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ವ್ಯಕ್ತಿಗೆ 25 ಸಾವಿರ ರೂ. ವಂಚನೆ
Gadaga: ಎಸ್ಪಿ ಬಿ.ಎಸ್.ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು ವಂಚನೆಗೆ ಯತ್ನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.