ಮನೆ ಮಹಾಮನೆ ಆಗಬೇಕೆಂಬುದೇ ಶರಣರ ಆಶಯ
ಸ್ವಾತಂತ್ರ್ಯ ಹೋರಾಟಗಾರರನ್ನು ತಯಾರು ಮಾಡಿದ ಈ ಗ್ರಾಮ ತನ್ನದೇ ಕೊಡುಗೆ ನೀಡಿದೆ.
Team Udayavani, May 13, 2022, 6:01 PM IST
ನರಗುಂದ: ಸಾತ್ವಿಕ ಬದುಕಿಗೆ ಶರಣರ ಸಂದೇಶಗಳು ಸನ್ಮಾರ್ಗ ತೋರಿಸಿವೆ. ಮನೆ ಮಹಾಮನೆ ಆಗಬೇಕೆಂಬುದು 12ನೇ ಶತಮಾನದ ಬಸವಾದಿ ಶರಣರ ಆಶಯವಾಗಿತ್ತು ಎಂದು ಶಿರೋಳ-ಚಿಂಚಣಿ ತೋಂಟದಾರ್ಯ ಮಠದ ಶ್ರೀ ಗುರುಬಸವ ಸ್ವಾಮಿಗಳು ಹೇಳಿದರು.
ಗುರುವಾರ ಮತಕ್ಷೇತ್ರದ ರೋಣ ತಾಲೂಕಿನ ಭೋಪಳಾಪೂರ ಗ್ರಾಮದಲ್ಲಿ ಏರ್ಪಡಿಸಿದ್ದ ಸಾಲಿಮಠ ಬಂಧುಗಳ ನೂತನ ಮನೆ ಗೃಹ ಪ್ರವೇಶ ಹಾಗೂ ವಿಶ್ರಾಂತ ಡಯಟ್ ಉಪನ್ಯಾಸಕ ವೀರಯ್ಯ ಸಾಲಿಮಠ ಅವರ 83ನೇ ವರ್ಷದ ಜನ್ಮದಿನದ ಸಹಸ್ರ ಚಂದ್ರದರ್ಶನ ಅಂಗವಾಗಿ ರೈತ ವಿಜ್ಞಾನಿ, ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಣ್ಣಿಗೇರಿಯ ಅಬ್ದುಲ್‌ಖಾದರಸಾಬ ನಡಕಟ್ಟಿನ ಅವರಿಗೆ ಗ್ರಾಮಸ್ಥರಿಂದ ಸನ್ಮಾನ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ನವಲಗುಂದ ಗವಿಮಠದ ಶ್ರೀ ಬಸವಲಿಂಗ ಸ್ವಾಮಿಗಳು ಮಾತನಾಡಿ, ಮಕ್ಕಳು ಯೋಗ್ಯರಾಗಿ ಬೆಳೆದರೆ ಯಾವ ಸಂಪತ್ತಿನ ಆಶ್ರಯವೂ ಬೇಕಾಗಿಲ್ಲ. ತಂದೆ-ತಾಯಿ ವೃದ್ಧಾಶ್ರಮಕ್ಕೆ ಸೇರಿಸುವ ಇಂದಿನ ದಿನಗಳಲ್ಲಿ ತಂದೆಯ ಸಹಸ್ರ ಚಂದ್ರದರ್ಶನ ಏರ್ಪಡಿಸಿದ್ದು ಸ್ತುತ್ಯಾರ್ಹ. ಜಗತ್ತಿನ ಎಲ್ಲ ದೇವರನ್ನು ನೋಡುವ ಭಾಗ್ಯ ಕರುಣಿಸಿದ ತಂದೆ-ತಾಯಿ ಸೇವೆ ಸ್ಮರಿಸಬೇಕು ಎಂದರು.
ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶ್ರೀ ಶಾಂತಲಿಂಗ ಸ್ವಾಮಿಗಳು ಮಾತನಾಡಿ, ಭೋಪಳಾಪುರ ಗ್ರಾಮ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಗೀಗಿ ಪದಗಳ ಮೂಲಕ ಸ್ವಾತಂತ್ರ್ಯ ಹೋರಾಟಗಾರರನ್ನು ತಯಾರು ಮಾಡಿದ ಈ ಗ್ರಾಮ ತನ್ನದೇ ಕೊಡುಗೆ ನೀಡಿದೆ. ನಡಕಟ್ಟಿನ ಅವರ ಎಲ್ಲ ಸಂಶೋಧನೆಗಳಿಗೆ ಪ್ರೋತ್ಸಾಹ ತುಂಬಿದವರು ಗದುಗಿನ ಲಿಂ. ತೋಂಟದ ಶ್ರೀಗಳು ಎಂದು ಸ್ಮರಿಸಿದರು.
ಇದೇ ಸಂದರ್ಭದಲ್ಲಿ ರೈತ ವಿಜ್ಞಾನಿ, ಕೃಷಿ ಸಂಶೋಧಕರಾದ ಪದ್ಮಶ್ರೀ ಪುರಸ್ಕೃತ ಅಬ್ದುಲ್‌ಖಾದರಸಾಬ ನಡಕಟ್ಟಿನ ಹಾಗೂ ಪತ್ನಿ ವಲೀಮಾ ಅವರನ್ನು ಗ್ರಾಮಸ್ಥರ ಪರವಾಗಿ ಪೂಜ್ಯರು ಸತ್ಕರಿಸಿದರು.
ಈ ವೇಳೆ ಅವರಾದಿ ಫಲಹಾರೇಶ್ವರ ಮಠದ ಶ್ರೀ ಶಿವಮೂರ್ತೇಶ್ವರ ಸ್ವಾಮಿಗಳು, ವೀರಯ್ಯ ಸಾಲಿಮಠ ದಂಪತಿಗಳು, ಶಿವಮೊಗ್ಗ ಸಹಾಯಕ ಔಷಧ ನಿಯಂತ್ರಣಾ ಧಿಕಾರಿ ಡಾ| ವೀರೇಶಬಾಬು, ವೈದ್ಯ ಡಾ| ಎ.ಐ. ಹುಯಿಲಗೋಳ, ನಿಜಲಿಂಗಪ್ಪ ಸಣ್ಣಕ್ಕಿ, ವಿ.ಎಸ್. ಹಿರೇಮಠ, ಕಲ್ಲಯ್ಯ ಕಲ್ಲೂರ, ಬಿ.ಬಿ. ಹಿರೇಗೌಡ್ರ, ಬಸಲಿಂಗಯ್ಯ ಇಂಗಳಳ್ಳಿಮಠ, ಚಂದ್ರಗೌಡ ಪಾಟೀಲ, ಲಿಂಗಬಸಪ್ಪ ಮರ್ಚನ್ನವರ, ಪುನೀತಪ್ಪ ಸಾಂಭ್ರಾಣಿ, ವಿ.ಎಸ್. ಹಿರೇಮಠ ಇದ್ದರು.
ಮಹಾಂತೇಶ ಸಾಲಿಮಠ ಸ್ವಾಗತಿಸಿದರು. ಪ್ರಾಚಾರ್ಯ ಬಿ.ಎಸ್. ಸಾಲಿಮಠ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gajendragad: ಮನೆಯಲ್ಲೇ ಮುಖ್ಯ ಶಿಕ್ಷಕಿಯ ಹ*ತ್ಯೆ
Gadaga: ನೀರಿನ ಟ್ಯಾಂಕರ್ ಹರಿದು 2 ವರ್ಷದ ಮಗು ಸಾವು
Gadag: ಬಡವರಿಗೆ ಶಕ್ತಿ ತುಂಬುವ ಗ್ಯಾರಂಟಿ ಯೋಜನೆಗಳಿಗೆ ವಿಪಕ್ಷಗಳಿಂದ ವಿರೋಧ: ಸಿದ್ದರಾಮಯ್ಯ
CM Siddaramaiah: ಗ್ಯಾರಂಟಿಗಳನ್ನು ಅನುಷ್ಠಾನಗೊಳಿಸಿ ನುಡಿದಂತೆ ನಡೆದ ಸರ್ಕಾರ ನಮ್ಮದು
Gadag: ಬಿಂಕದಕಟ್ಟಿ ಮೃಗಾಲಯದಲ್ಲಿ 16 ವರ್ಷದ ಹೆಣ್ಣು ಹುಲಿ ಅನುಸೂಯ ನಿಧನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.