![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
![Gambhir-Agarkar have differences of opinion on Pant-Rahul issue](https://www.udayavani.com/wp-content/uploads/2025/02/agarkar-415x233.jpg)
Team Udayavani, Jun 27, 2024, 5:50 PM IST
ಉದಯವಾಣಿ ಸಮಾಚಾರ
ನರಗುಂದ: ಮಹಾಜನ ವರದಿಯಂತೆ ಬೆಳಗಾವಿ ರಾಜ್ಯದ ಅವಿಭಾಜ್ಯ ಅಂಗವೆಂದು ಘಲಾಚ ಪಾಹಿಜಿ ಚಳುವಳಿ ವಿರುದ್ಧ ನರಗುಂದದಲ್ಲಿ ಬಂದ್ ಆಚರಿಸಿ ಬೆಳಗಾವಿ ಎಂದೆಂದೂ ಕರ್ನಾಟಕದ್ದೇ ಎಂದಿದ್ದ ಅಪ್ರತಿಮ ಹೋರಾಟಗಾರ ಶಿವಮೂರ್ತಯ್ಯ ಸುರೇಬಾನ ಅವರ ಚಿಂತನೆಗಳು ಅಜರಾಮರ ಎಂದು ಶಿಕ್ಷಕ ವಿನಾಯಕ ಶಾಲದಾರ ಹೇಳಿದರು.
ತಾಲೂಕಿನ ಭೈರನಹಟ್ಟಿ ಗ್ರಾಮದ ದೊರೆಸ್ವಾಮಿ ವಿರಕ್ತಮಠದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ ಆಶ್ರಯದಲ್ಲಿ ನಡೆದ ಏಕೀಕರಣ ಯೋಧರ ಯಶೋಗಾಥೆ-14ರ ಕಾರ್ಯಕ್ರಮದಲ್ಲಿ ಹೋರಾಟಗಾರ ಶಿವಮೂರ್ತಯ್ಯ ಸುರೇಬಾನ ಅವರ ಕುರಿತು ಉಪನ್ಯಾಸ ನೀಡಿದರು.
ತಮ್ಮ ಬದುಕಿನುದ್ದಕ್ಕೂ ಹೋರಾಟವನ್ನೇ ಉಸಿರಾಗಿಸಿಕೊಂಡಿದ್ದ ಶಿವಮೂರ್ತಯ್ಯ ಸುರೇಬಾನ ಕರ್ನಾಟಕ ಏಕೀಕರಣ ಹೋರಾಟದಲ್ಲಿ ಸಕ್ರೀಯವಾಗಿ ಇದ್ದರು.
ಭಾರತೀಯ ಸೇನೆಯಲ್ಲಿ ಯೋಧರಾಗಿದ್ದ ಶಿವಮೂರ್ತಯ್ಯನವರು ನಿವೃತ್ತಿ ನಂತರ ಅಳವಂಡಿ ಶಿವಮೂರ್ತಿ ಶ್ರೀಗಳ
ಅನುಯಾಯಿಗಳಾಗಿ ಅವರ ಪ್ರಭಾವದಿಂದ ಹುಬ್ಬಳ್ಳಿ ಗಲಭೆ ಮತ್ತು ತುಂಗಭದ್ರಾ ನದಿ ನೀರು ಹೋರಾಟದ ಮೂಲಕ ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಪಾಲ್ಗೊಂಡಿದ್ದ ಅವರ ಪಾತ್ರ ಹಿರಿದಾದುದು ಎಂದರು. ಸಾನ್ನಿಧ್ಯ ವಹಿಸಿದ್ದ ದೊರೆಸ್ವಾಮಿ ವಿರಕ್ತಮಠದ ಶ್ರೀ ಶಾಂತಲಿಂಗ ಶ್ರೀ ಆಶೀರ್ವಚನ ನೀಡಿ, ಈ ಭಾಗದಲ್ಲಿ ಹೋರಾಟಕ್ಕೆ ಇನ್ನೊಂದು ಹೆಸರೆ ಶಿವಮೂರ್ತಯ್ಯನವರು ಎನ್ನುವ ಹಾಗೆ ಸಾಮಾಜಿಕ ಜೀವಿಗಳಾಗಿದ್ದ ಅವರು ಪ್ರತಿಯೊಂದು ಹೋರಾಟದಲ್ಲೂ ಮುಂಚೂಣಿಯಲ್ಲಿರುತ್ತಿದ್ದರು.
1980ರಲ್ಲಿ ನಡೆದ ರೈತರ ವಿವಿಧ ಬೇಡಿಕೆಗಳಿಗಾಗಿ ನಡೆದ ಹೋರಾಟದಲ್ಲಿ ಸಕ್ರಿಯರಾಗಿದ್ದ ಶಿವಮೂರ್ತಯ್ಯನವರು ಎರಡನೇ ಮಹಾ ಯುದ್ಧದಲ್ಲಿ ಸೈನಿಕರಾಗಿ ಸೇವೆ ಸಲ್ಲಿಸಿ ಅಪ್ರತಿಮ ದೇಶಾಭಿಮಾನಿ ಹಾಗೂ ನಾಡಿನ ಅಭಿಮಾನಿಗಳಾಗಿದ್ದರು ಎಂದರು. ಈ ವೇಳೆ ಮಹೇಶ್ವರಯ್ಯ ಸುರೇಬಾನ ಅವರು ಮಾತನಾಡಿದರು. ತಿಮ್ಮಣ್ಣ ಆನೇಗುಂದಿ, ಡಾ| ಬಿ.ಎಸ್. ಕೋನನ್ನವರ, ಮಲ್ಲಪ್ಪ ಅರೆಬೆಂಚಿ, ವೀರಯ್ಯ ಸಾಲಿಮಠ, ಈರಣ್ಣ ಐನಾಪೂರ ಇದ್ದರು.
ಶಿವಮೂರ್ತಯ್ಯನವರ ಹೋರಾಟದ ಬದುಕು ಇಂದಿನ ಯುವ ಪೀಳಿಗೆಗೆ ಮಾದರಿಯಾಗಿದೆ. ಏಕೀಕರಣ ಪ್ರಶಸ್ತಿ ಪಡೆದ ಅವರು ಬಂಡಾಯದ ನಾಡಿನ ತಾಯಿ ಕನ್ನಡಾಂಬೆಯ ಹೆಮ್ಮೆಯ ಪುತ್ರರಾಗಿದ್ದರು.
*ಶ್ರೀ ಶಾಂತಲಿಂಗ ಸ್ವಾಮಿಗಳು, ದೊರೆಸ್ವಾಮಿ
ವಿರಕ್ತಮಠ, ಭೈರನಹಟ್ಟಿ
ಗದಗ-ಬೆಟಗೇರಿ ನಗರಸಭೆ ಮಾಜಿ ಅದ್ಯಕ್ಷೆ ಸೇರಿ ಇಬ್ಬರು ಸದಸ್ಯರ ಸದಸ್ಯತ್ವ ರದ್ದು
Gadag: ಕೌಟುಂಬಿಕ ಕಲಹದಿಂದ ನೊಂದು ಪೊಲೀಸ್ ಪೇದೆ ಆತ್ಮಹ*ತ್ಯೆ!
Approve:ಮೈಕ್ರೋ ಫೈನಾನ್ಸ್ ಕಿರುಕುಳ ವಿರುದ್ಧದ ಸುಗ್ರೀವಾಜ್ಞೆಗೆ ಕೊನೆಗೂ ರಾಜ್ಯಪಾಲರ ಅಂಕಿತ
Gadag: ಅಕ್ರಮ ಬಡ್ಡಿ ವ್ಯವಹಾರದ ವಿರುದ್ಧ ಕಾರ್ಯಾಚರಣೆ… ಅಪಾರ ಪ್ರಮಾಣದ ನಗ ನಗದು ವಶ
ತುಂಗಭದ್ರಾ ನದಿಯಲ್ಲಿ ಅಕ್ರಮ ಮರಳುಗಾರಿಕೆ! ನಸುಕಿನ ವೇಳೆ ಡಿಸಿ ಹಾಗೂ ಎಸಿ ದಿಢೀರ್ ದಾಳಿ!
You seem to have an Ad Blocker on.
To continue reading, please turn it off or whitelist Udayavani.