ಮಠಕ್ಕೆ ರಾಜೀನಾಮೆ ಕೊಟ್ಟು ಶಕ್ತಿ ತೋರಿಸಿ
Team Udayavani, Dec 25, 2017, 6:20 AM IST
ಗದಗ: ಪ್ರತ್ಯೇಕ ಧರ್ಮದ ಹೆಸರಿನಲ್ಲಿ ಕೆಲ ಮಠಾಧೀಶರೇ ಜನರ, ಭಕ್ತರ ಹಾದಿ ತಪ್ಪಿಸುತ್ತಿದ್ದಾರೆ. ಮಠದಲ್ಲೂ ರಾಜಕಾರಣ ಶುರುವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಅಂಥ ಮಠಾಧೀಶರು ಮಠದ ಸ್ಥಾನಮಾನಗಳಿಗೆ ರಾಜೀನಾಮೆ ನೀಡಿ ಧರ್ಮದ ತಾಕತ್ ತೋರಿಸಲಿ ನೋಡೋಣ ಎಂದು ಬಾಲೇಹೊಸೂರಿನ ದಿಂಗಾಲೇಶ್ವರ ಶ್ರೀಗಳು ಸವಾಲು ಹಾಕಿದರು.
ನಗರದಲ್ಲಿ ಭಾನುವಾರ ನಡೆದ ವೀರಶೈವ-ಲಿಂಗಾಯತ ಧರ್ಮ ಜನಜಾಗೃತಿ ಸಮಾವೇಶದಲ್ಲಿ ಆಶೀರ್ವಚನ ನೀಡಿದ ಅವರು, ನಿಮ್ಮ ಹಣೆಬಹರಕ್ಕೆ ಕೊಪ್ಪಳದಲ್ಲಿ 500 ಜನರನ್ನು ಸೇರಿಸಲಾಗಲಿಲ್ಲ. ಕೆಲವರು ಹಾನಗಲ್ ಕುಮಾರಸ್ವಾಮಿಯವರನ್ನು ನಿಂದಿಸುವ ಕೆಲಸ ಮಾಡುತ್ತಿದ್ದಾರೆ. ಮುಂದೊಂದು ದಿನ ಜನ ನಿಮ್ಮನ್ನ ನಾಯಿಗೆ ಹೊಡದಂಗ ಹೊಡಿತಾರ ಎಂದು ಹೇಳುತ್ತಿದ್ದಾರೆ. ನಾಯಿ ನಿಯತ್ತಿನ ಪ್ರಾಣಿ. ನೀವು ಅದಕ್ಕಿಂತಲೂ ಕಡೆ ಎಂದು ಕತ್ತೆಗೆ ಹೋಲಿಸಿದರು.
ಪ್ರತ್ಯೇಕ ಧರ್ಮದ ಬಣದಲ್ಲಿ ಕಾಣಿಸಿಕೊಂಡಿರುವ ಕೆಲ ಮಠಾಧೀಶರಿಗೆ ಮಠದಿಂದ ಹೊರಗೆ ಹಾಕುವ ಬೆದರಿಕೆ ರಾಜಕಾರಣಿಗಳಿಂದ ಇದೆ. ಅದಕ್ಕೆ ಅವರೊಂದಿಗೆ ಗುರುತಿಸಿಕೊಂಡಿದ್ದೇವೆ ಎಂದು ತಮ್ಮ ಬಳಿ ಹೇಳಿಕೊಂಡಿದ್ದಾರೆ. ಅವರನ್ನು ಎದುರಿಸಿ ಬಂದರೆ ನಾವು
ನಮ್ಮ ಮಠಗಳನ್ನು ನಿಮಗೆ ಬಿಟ್ಟು ಕೊಡುತ್ತೇವೆ ಬನ್ನಿ ಎಂದು ಆಹ್ವಾನಿಸಿದರು.
ಲಿಂಗಾಯತ ಅಂತ ಹೊರಟವರೆಲ್ಲ ವೀರಶೈವ-ಲಿಂಗಾಯತ ಧರ್ಮಕ್ಕೆ ಈ ಹಿಂದೆ ಸಹಿ ಹಾಕಿದವರು,ಕೇಳಿದರೆ ಆಗಿನ್ನೂ ನಮಗೆ ತಿಳಿವಳಿಕೆ ಇರಲಿಲ್ಲ. ಈಗ ಬಂದಿದೆ ಎನ್ನುತ್ತಾರೆ. ಮುಂದೊಂದು ದಿನ ಆವತ್ತು ತಿಳಿವಳಿಕೆ ಇರಲಿಲ್ಲ. ಅದಕ್ಕೆ ಲಿಂಗಾಯತ ಪ್ರತ್ಯೇಕ ಧರ್ಮ ಅಂತ ಹೋಗಿದ್ದೆವು ಎನ್ನುವ ಕಾಲ ಬರುತ್ತದೆ ಎಂದು ಸಚಿವ ಎಂ.ಬಿ. ಪಾಟೀಲ ಕುರಿತು ವ್ಯಂಗ್ಯವಾಡಿದರು.
ಧರ್ಮ ಕಲಹಕ್ಕೆ ರಾಜನೇ ಕಾರಣ: ಸಿದ್ದಲಿಂಗ ಸ್ವಾಮಿ
ಗದಗ: ಮುಖ್ಯಮಂತ್ರಿ ಸಿದ್ದರಾಮಯ್ಯ ಲಿಂಗಾಯತ ಪ್ರತ್ಯೇಕ ಧರ್ಮದ ಹೆಸರಿನಲ್ಲಿ ಕೆಲ ನಾಯಿಗಳನ್ನ ಛೂ ಬಿಟ್ಟು ಕಚ್ಚಿಸುವ
ಕೆಲಸಕ್ಕೆ ಕೈ ಹಾಕಿದ್ದಾರೆ ಎಂದು ಕಲಬುರಗಿ ಆಂದೋಲದ ಸಿದ್ದಲಿಂಗ ಸ್ವಾಮಿಗಳು ಆಕ್ರೋಶ ವ್ಯಕ್ತಪಡಿಸಿದರು.
ವೀರಶೈವ-ಲಿಂಗಾಯತ ಧರ್ಮ ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು,ಬೊಗಳುವ ನಾಯಿಗಳಿಗೆ ನಾವು ಬೆದರಲ್ಲ. ಅಂಥ ಈಡಿಯಟ್ಸ್‌ಗಳಿಂದ ಧರ್ಮ ಒಡೆಯಲು ಸಾಧ್ಯವಿಲ್ಲ ಎಂದರು. ರಾಜ್ಯದಲ್ಲಿ ತಲೆದೋರಿರುವ ಈ ಧರ್ಮ ಕಲಹಕ್ಕೆ ರಾಜನೇ ಕಾರಣ.
ಮುಖ್ಯಮಂತ್ರಿಗಳೇ ಮುಂದಾಗಿ ಕೆಲವರ ಮೂಲಕ ಧರ್ಮ ಇಬ್ಭಾಗದ ಕೆಲಸ ಮಾಡುತ್ತಿದ್ದಾರೆ. ಧರ್ಮ ವಿಭಜನೆ ಮಾಡಿ
ಮುಂಬರುವ ಚುನಾವಣೆಯಲ್ಲಿ ಮತ ಗಳಿಸುವ ಸಂಚು ರೂಪಿಸಿದ್ದಾರೆ. ನಿಮ್ಮಪ್ಪನಾಣೆಗೂ ಮುಂದೆ ನೀವು ಅಧಿಕಾರಕ್ಕೆ ಬರಲ್ಲ ಎಂದು ಭಾವಾವೇಶಕ್ಕೊಳಗಾದರು. ವೀರಶೈವ ಲಿಂಗಾಯತ ಪ್ರತ್ಯೇಕವಲ್ಲ ಎಂದ ವಿಜಯಪುರದ ಪ್ರಕಾಶ ಸ್ವಾಮಿಗಳಿಗೆ ಬೆದರಿಕೆ ಹಾಕುವ ಹೀನ ಕೃತ್ಯ ಎಸಗಿದ ಸಚಿವ ಎಂ.ಬಿ. ಪಾಟೀಲ ಯಾರು,ಎಂಥವರು ಎಂಬುದು ಜನರಿಗೆ ಗೊತ್ತಿದೆ. ಸಚಿವರು ಉದ್ಧಟತನ ತೋರುವ ಮೂಲಕ ಸ್ವಾಮಿಗಳಿಗೆ, ಸಮಾಜಕ್ಕೆ ಮೋಸ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅದರ ಫಲ ಉಣ್ಣುತ್ತಾರೆ ಎಂದು ಸೂಕ್ಷ್ಮವಾಗಿ ಹೇಳಿದರು.
ಗದಗನಲ್ಲಿ ರಾವಣರಂಥ ರಾಕ್ಷಸರಿದ್ದಾರೆ. ಕೋಮು ಸೌಹಾರ್ದತೆ ಹೆಸರಿನಲ್ಲಿ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಅದು ಹೇಗೆ ಪ್ರಶಸ್ತಿ ಬಂತು ಎಂಬುದು ಅವರಿಗೆ ಗೊತ್ತು ಎಂದು ಡಾ|ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳನ್ನು ಟೀಕಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bhadravathi:ಬಾಯ್ಲರ್ ಸ್ಫೋ*ಟದಿಂದ ರೈಸ್‌ಮಿಲ್ ಕುಸಿತ:7 ಮಂದಿಗೆ ಗಾಯ
Sringeri; ಅಸ್ಸಾಂ ಕಾರ್ಮಿಕನಿಂದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿ*ಕ ದೌರ್ಜನ್ಯ
Laxmi Hebbalkar; ಅವಾಚ್ಯ ಪದ ಬಳಕೆ ಕೇಸ್: ಸಿ.ಟಿ.ರವಿ ಬಂಧನ
Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.