ಸಿದ್ದರಾಮೇಶ್ವರ ಜಯಂತಿ: ಪೂರ್ವಭಾವಿ ಸಭೆ
Team Udayavani, Jan 13, 2020, 12:32 PM IST
ಗಜೇಂದ್ರಗಡ: ಜ.14ರಂದು ಜರುಗುವ ಕಾಯಕಯೋಗಿ ಸಿದ್ದರಾಮೇಶ್ವರ ಜಯಂತ್ಯುತ್ಸವ ಆಚರಣೆ ಕುರಿತು ತಹಶೀಲ್ದಾರ್ ಕಾರ್ಯಾಲಯದಲ್ಲಿ ಸಮಾಜ ಮುಖಂಡರ ಸಮ್ಮುಖದಲ್ಲಿ ರವಿವಾರ ಪೂರ್ವಭಾವಿ ಸಭೆ ನಡೆಯಿತು.
ಈ ವೇಳೆ ರೋಣ ತಹಶೀಲ್ದಾರ್ ಜಿ.ಬಿ. ಜಕ್ಕನಗೌಡ ಮಾತನಾಡಿ, ಜಾತೀಯತೆಯಿಂದ ಕೂಡಿದ ಸಮಾಜವನ್ನು ಸಿದ್ದರಾಮೇಶ್ವರರು ತಮ್ಮ ವಚನಗಳ ಮೂಲಕಪರಿರ್ತನೆಗೊಳಿಸಿದ್ದಾರೆ. ಸಮಾಜ ಸುಧಾರಣೆಗೆ ಮೊದಲ ಆದ್ಯತೆ ನೀಡಬೇಕು ಎಂದು ಜಗತ್ತಿಗೆ ಸಾರಿದ ಮಹಾನ್ ಶಿವಯೋಗಿ ಸಿದ್ದರಾಮೇಶ್ವರರ ಸಂದೇಶ ಸಾರ್ವಕಾಲಿಕವಾಗಿದೆ. ಇಂತಹ ಮಹಾನ್ ಕಾಯಕ ಯೋಗಿಯ ಜಯಂತಿ ತಾಲೂಕಾಡಳಿತದಿಂದ ಅರ್ಥಪೂರ್ಣವಾಗಿ ಆಚರಿಸಬೇಕಿದೆ. ಹೀಗಾಗಿ ಜ.14ರಂದು ಬೆಳಗ್ಗೆ ಕಾರ್ಯಾಲಯದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಗುವುದು ಎಂದರು.
ಭೋವಿ ಸಮಾಜ ಅಧ್ಯಕ್ಷ ಯಲ್ಲಪ್ಪ ಬಂಕದ ಮಾತನಾಡಿ, ಜ.14ರಂದು ಸಿದ್ದರಾಮೇಶ್ವರ ಜಯಂತಿಯನ್ನು ಸರ್ಕಾರಿ ಕಚೇರಿಗಳಲ್ಲಿ ಸಾಂಕೇತಿಕವಾಗಿ ಆಚರಿಸಲಾಗುವುದು. ಜ.15ರಂದು ರೋಣ ಮತ್ತು ಗಜೇಂದ್ರಗಡ ತಾಲೂಕು ವತಿಯಿಂದ ಪಟ್ಟಣದಲ್ಲಿ ಅದ್ಧೂರಿಯಾಗಿ ಆಚರಿಸಲಾಗುವುದು. ಕಳೆದೆರಡು ವರ್ಷಗಳಿಂದ ಆಚರಣೆಗೆ ಸರ್ಕಾರದಿಂದ ನೀಡಲಾಗುವ ಅನುದಾನ ಈವರೆಗೂ ಬಿಡುಗಡೆ ಮಾಡಿಲ್ಲ. ಹೀಗಾಗಿ ಈ ಬಾರಿ ಅನುದಾನ ನೀಡಬೇಕು ಎಂದು ಮನವಿ ಮಾಡಿದರು.
ಸಭೆಯಲ್ಲಿ ಉಪನೋಂದಣಾಧಿಕಾರಿ ವಿಶ್ವನಾಥ ಸುಬೇದಾರ, ಠಾಣೆ ಪಿಎಸ್‌ಐ ಗುರುಶಾಂತ್ ದಾಶ್ಯಾಳ, ಹೆಸ್ಕಾಂ ಅಧಿಕಾರಿ ಬಸವರಾಜ ಮಹಾಮನಿ, ಪುರಸಭೆಯ ಆರ್.ಎಸ್. ಬೋಯಿಟೆ, ಶಿರಸ್ತೆದಾರ ಐ.ಟಿ. ಜಂತ್ಲಿ, ಕಂದಾಯ ನಿರೀಕ್ಷಕ ವೀರಣ್ಣ ಅಡಗತ್ತಿ, ಗಣೇಶ ಕೊಡಕೇರಿ, ಜೆ.ಪಿ. ಜಯರಾಮ್, ಎಸ್. ಕೆ. ಗೌಡರ, ಕಳಕಪ್ಪ ಸ್ವಾಮಿ, ಬಸವರಾಜ ಬಂಕದ, ಮೂಕಪ್ಪ ನಿಡಗುಂದಿ, ಲಕ್ಷ್ಮಣ ಲಕ್ಕಲಕಟ್ಟಿ, ಎಫ್.ಎಸ್. ಕರಿದುರಗನವರ, ಗುರು ಕಲ್ಲೋಡ್ಡರ, ರಾಮಣ್ಣ ನಿಡಗುಂದಿ, ನೇಮಣ್ಣ ಉಳ್ಳಾಗಡ್ಡಿ, ಯಮನೂರಪ್ಪ ಲಕ್ಕಲಕಟ್ಟಿ, ಸಣ್ಣವೀರಪ್ಪ ಬಂಕದ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
ಗದಗ: ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ
Gadaga: ಎಸ್ಪಿ ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ವ್ಯಕ್ತಿಗೆ 25 ಸಾವಿರ ರೂ. ವಂಚನೆ
Gadaga: ಎಸ್ಪಿ ಬಿ.ಎಸ್.ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ ತೆರೆದು ವಂಚನೆಗೆ ಯತ್ನ
Gadaga: ನರಗುಂದ ಬಳಿ ಭೀಕರ ಅಪಘಾತ: ಕಾರಿಗೆ ಲಾರಿ ಡಿಕ್ಕಿ ಹೊಡೆದು ದಂಪತಿ ಸ್ಥಳದಲ್ಲೇ ಸಾವು
MUST WATCH
ಹೊಸ ಸೇರ್ಪಡೆ
Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್ ನೋಟಿಸ್
Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್
Karkala: ಕೀಟ ನಾಶಕ ಸೇವಿಸಿ ವ್ಯಕ್ತಿ ಸಾವು
Hospital ನಿಂದ ಶಿಶುವಿನ ಅಪಹರಣ: ರೈಲು ನಿಲ್ದಾಣದಲ್ಲಿ ರಕ್ಷಣೆ: ಇಬ್ಬರ ಬಂಧನ
Middle class; ಮಧ್ಯಮ ವರ್ಗದವರಿಗೆ ಪರಿಹಾರ: ಎಕ್ಸ್ ಬಳಕೆದಾರಗೆ ನಿರ್ಮಲಾ ಪ್ರತಿಕ್ರಿಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.