ರೋಣ ಪುರಸಭೆಯಲ್ಲಿ ವಿಶೇಷ ಸಾಮಾನ್ಯ ಸಭೆ
Team Udayavani, Jun 30, 2021, 2:42 PM IST
ರೋಣ: ಎಸ್ಸಿ, ಎಸ್ಟಿ, ವಿಕಲಚೇತನ ಹಾಗೂ ಇತರೆ ಜನಾಂಗದ 24 ಜನ ಬೀದಿ ಬದಿವ್ಯಾಪಾರಸ್ಥರಿಗೆ ಪಟ್ಟಣದ ಮಧ್ಯ ಭಾಗದಲ್ಲಿರುವಕೆರೆ ಮುಂಭಾಗದಲ್ಲಿ ಒಂದೇ ಮಾದರಿಯ ಡಬ್ಟಾಅಂಗಡಿ ನಿರ್ಮಿಸಿ, ಬಾಡಗಿ ನಿಗ ದಿಪಡಿಸುವಯೋಜನೆ ಕುರಿತು ಪಟ್ಟಣದ ಪುರಸಭೆ ಸಭಾಭವನದಲ್ಲಿ ಮಂಗಳವಾರ ವಿಶೇಷ ಸಾಮಾನ್ಯ ಸಭೆ ನಡೆಯಿತು.
ಸಭೆಯಲ್ಲಿ ಡಬ್ಟಾ ಅಂಗಡಿ ನಿರ್ಮಿಸಿ, ಬಾಡಗಿ ನಿಗದಿಪಡಿಸುವ ಕುರಿತು ಕೆಲ ಸದಸ್ಯರು ಒಪ್ಪಿಗೆಸೂಚಿಸಿದರೆ, ಇನ್ನು ಕೆಲ ಸದಸ್ಯರು ವಿರೋಧ ವ್ಯಕ್ತಪಡಿಸಿದರು.
ಮುಖ್ಯಾಧಿಕಾರಿ ಎಂ.ಎ.ನೂರುಲ್ಲಾಖಾನ ಮಾತನಾಡಿ, 44 ಲಕ್ಷ ರೂ. ಅನುದಾನಬಿಡುಗಡೆಯಾಗಿದೆ. ಇದರಲ್ಲಿ ಪೌರಕಾರ್ಮಿಕರಿಗೆ21.46 ಲಕ್ಷ ವೇತನಕ್ಕೆ, ಎಸ್‌ಸಿಪಿ ಟಿಎಸ್‌ಪಿಅಡಿ 10 ಲಕ್ಷ ರೂ.ಅನ್ನು ಪರಿಶಿಷ್ಟ ಜಾತಿಗೆ,3 ಲಕ್ಷ ರೂ.ಅನ್ನು ಪರಿಶಿಷ್ಟ ಪಂಗಡಕ್ಕೆ, 4.5ಲಕ್ಷ ರೂ. ಇತರೆ ಜನಾಂಗದ ಅಭಿವೃದ್ಧಿಗೆ ಕಾಯ್ದಿರಿಸಲಾಗಿದೆ. ಇದರಲ್ಲಿ ಉಳಿದ 7.97 ಲಕ್ಷ ರೂ.ಗೆ ಕ್ರಿಯಾಯೋಜನೆ ತಯಾರಿಸಲು ಸದಸ್ಯರು ಸೂಚನೆ ನೀಡಬೇಕು ಎಂದರು.
3.5 ಲಕ್ಷ ರೂ.ನಲ್ಲಿ ಎರೆಹುಳು ಗೊಬ್ಬರ ತಯಾರಿಸುವ ಘಟಕ ನಿರ್ಮಿಸಲಾಗವುದು. 3.27ಕಿ.ಮೀ. ರಾಜಕಾಲುವೆ ಪೈಕಿ 1.8 ಕಿ.ಮೀ. ಸ್ವಚ್ಛತೆ ಕೈಗೊಳ್ಳಲಾಗಿದೆ. ಜೆಸಿಬಿ, ಹಿಟಾಚಿ, ಟ್ರ್ಯಾಕ್ಟರ್,ಕೂಲಿ ಸೇರಿ ಒಟ್ಟು 2.59 ಲಕ್ಷ ರೂ. ಖರ್ಚುಮಾಡಲಾಗಿದೆ. ಇದಕ್ಕೆ ಸಾರ್ವಜನಿಕರಿಂದಮೆಚ್ಚುಗೆ ವ್ಯಕ್ತವಾಗಿದೆ. ಮಳೆಗಾಲದಲ್ಲಿ ಎಲ್ಲೆಂದರಲ್ಲಿ ನೀರು ನಿಲ್ಲದೇ ಸರಾಗವಾಗಿ ಹರಿಯಲಿದೆ ಎಂದರು.
ಸಭೆಯಲ್ಲಿ ಪುರಸಭೆ ಅಧ್ಯಕ್ಷೆ ವಿದ್ಯಾ ದೊಡ್ಡಮನಿ, ಉಪಾಧ್ಯಕ್ಷ ಮಿಥುನ ಪಾಟೀಲ, ಮುಖ್ಯಾಧಿಕಾರಿಎಂ.ಎ.ನೂರುಲ್ಲಾಖಾನ, ಸದಸ್ಯರಾದ ಮಲ್ಲಯ್ಯ ಮಹಾಪುರು ಮಠ, ಗದಿಗೆಪ್ಪ ಕಿರೇಸೂರ ಮತ್ತಿತರರು ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.