ಬೇಡಿದ್ದು ಬೆಟ್ಟದಷ್ಟು; ಸಿಕ್ಕಿದ್ದು ಬೊಗಸೆಯಷ್ಟು ..
Team Udayavani, Mar 9, 2021, 3:10 PM IST
ಗದಗ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಡಿಸಿರುವ 2021-22ನೇ ಸಾಲಿನ ಆಯವ್ಯಯ ಜಿಲ್ಲೆಯ ಪಾಲಿಗೆ “ಬೇಡಿದ್ದು ಬೆಟ್ಟದಷ್ಟು, ಸಿಕ್ಕಿದ್ದು ಬೊಗಸೆಯಷ್ಟು’ ಎಂಬಂತಾಗಿದೆ. ಜಿಲ್ಲೆಯ ಮಹತ್ವಾಕಾಂಕ್ಷಿ ಮಹದಾಯಿ ಯೋಜನೆ, ಕೃಷ್ಣಾ “ಬಿ’ಸ್ಕೀಂ ನೀರಾವರಿ ಯೋಜನೆಗಳಿಗೆ ಅಸ್ತು ಎಂದಿದ್ದಾರೆ. ನೇಕಾರರ ಬಹುಬೇಡಿಕೆಯ “ಜವಳಿ ಪಾರ್ಕ್’ ಕೈತಪ್ಪಿದ್ದರೆ, ಮತ್ತಿತರೆ ಬೇಡಿಕೆಗಳಿಗೆ ಮನ್ನಣೆ ಸಿಕ್ಕಿಲ್ಲ.
ಮಹಾದಾಯಿ ಅಲ್ಪತೃಪ್ತಿ: ಈ ಭಾಗದ ನಾಲ್ಕು ಜಿಲ್ಲೆಗಳ 11 ತಾಲೂಕಿಗೆ ಜೀವ ಜಲ ಒದಗಿಸುವ ಮಹದಾಯಿ, ಕಳಸಾ-ಬಂಡೂರಿ ಯೋಜನೆಗೆ ಈ ಬಾರಿಯೂ ರಾಜ್ಯ ಸರಕಾರದ ಆಯವ್ಯಯದಲ್ಲಿಮಣೆ ಹಾಕಿದ್ದಾರೆ. 2021-22ನೇ ಸಾಲಿನ ಮುಂಗಡಪತ್ರದಲ್ಲಿ 1,677 ಕೋಟಿ ರೂ. ಘೋಷಿಸಿದ್ದಾರೆ. ಅನುಮೋದನೆ ನೀಡಿದ್ದು, ಯೋಜನೆಗೆಕೇಂದ್ರ ಸರ್ಕಾರದ ಸಕ್ಷಮ ಪ್ರಾ ಕಾರಗಳ ಅನುಮೋದನೆ ಪಡೆಯವುದರೊಂದಿಗೆ ಆದ್ಯತೆ ಮೇರೆಗೆ ಯೋಜನೆ ಅನು ಷ್ಠಾನಕ್ಕೆ ಅನುದಾನ ಒದಗಿಸ ಲಾಗುವುದೆಂಬ ಭರವಸೆ ನೀಡಿದ್ದಾರೆ. ಇದರಿಂದ ಈ ಭಾಗದ ರೈತರು ಹಾಗೂ ಮಹಾದಾಯಿ ಹೋರಾಟಗಾರರಲ್ಲಿ ಸಮಾಧಾನ ತಂದಿದೆ.
ಈಗಾಗಲೇ ಮಹದಾಯಿ ನ್ಯಾಯಾಧಿಕರಣ ನದಿ ನೀರು ಹಂಚಿಕೆ ಮಾಡಿ, 13.5 ಟಿಎಂಸಿ ನೀರು ಕರ್ನಾಟಕದ ಪಾಲಿಗೆ ಬಂದಿದೆ. ಯೋಜನೆಗೆ ಮೊದಲ ಹಂತದಲ್ಲಿ 2 ಸಾವಿರ ಕೋಟಿ ರೂ. ಮೀಸಲಿಡಬೇಕು ಎಂಬ ಬೇಡಿಕೆ ಇದೆ. 2020-21ನೇ ಸಾಲಿನಲ್ಲಿಬಜೆಟ್‌ನಲ್ಲಿ ಮಹದಾಯಿ ಯೋಜನೆ ಕಾಮಗಾರಿಗೆ 500 ಕೋಟಿ ರೂ. ಅನುದಾನ ಘೋಷಿಸಿದ್ದರೂ ಅದು ಅನುಷ್ಠಾನಕ್ಕೆ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಕಳೆದ ಬಾರಿಯಂತೆ ಬಜೆಟ್ ಕೇವಲ ಘೋಷಣೆಗೆಸೀಮಿತವಾಗದೇ, ಕಾಮಗಾರಿ ಅನುಷ್ಠಾನಕ್ಕೆ ಬರಬೇಕೆಂಬುದು ರೈತರ ಒತ್ತಾಯ.
ಕಾರ್ಮಿಕರಿಗೆ ತಾತ್ಕಾಲಿಕ ವಸತಿ ಗೃಹ: ನಿರ್ಮಾಣ ಕಾರ್ಮಿಕರು ವಸತಿ ಸಮಸ್ಯೆ ಎದುರಿಸುತ್ತಿರುವುದನ್ನು ಮನಗಂಡು ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಗದಗಸೇರಿದಂತೆ 9 ಜಿಲ್ಲೆಯಲ್ಲಿ ತಲಾ ಒಂದರಂತೆ ಸುಸಜ್ಜಿತ ತಾತ್ಕಾಲಿಕ ವಸತಿ ಗೃಹ ನಿರ್ಮಿಸುವುದಾಗಿ ಘೋಷಿಸಿದೆ. ಇನ್ನುಳಿದಂತೆ ರಾಜ್ಯ ವಲಯಕ್ಕೆ ಅನ್ವಯಿಸುವಂತೆ ಜಿಲ್ಲೆಗೊಂದು ಗೋ ಶಾಲೆ ಸ್ಥಾಪನೆ, ಜಲಜೀವನ್ ಮಿಷನ್ ಯೋಜನೆಯೊಂದಿಗೆ ಒಗ್ಗೂಡಿಸಿ ರೂಪಿಸಿರುವ “ಮನೆ ಮನೆಗೆ ಗಂಗೆ’ ಯೋಜನೆಯಡಿ ಜಿಲ್ಲೆಯ 334 ಗ್ರಾಮಗಳು ಒಳಪಡಲಿವೆ. ಗದಗ ಸೇರಿದಂತೆ ರಾಜ್ಯದ 26 ಅಮೃತ್ ನಗರಗಳಲ್ಲಿ 17 ಕೋಟಿ ರೂ. ವೆಚ್ಚದಲ್ಲಿ ನೀರಿನ ಪರೀûಾ ಪ್ರಯೋಗಾಲಯಗಳ ಸ್ಥಾಪಿಸುವ
ಭರವಸೆ ನೀಡಿದೆ. ಜತೆಗೆ ಆಸ್ಪತ್ರೆಗಳನ್ನು ಮೇಲ್ದಜೇìಗೇರಿಸುವುದು, ಸರಕಾರಿ ಶಾಲೆಗಳಲ್ಲಿ ಕಲಿಕಾ ಗುಣಮಟ್ಟ ಹೆಚ್ಚಿಸಲು ಪ್ರೌಢ ಶಾಲೆಗಳಿಗೆ ಕಂಪ್ಯೂಟರ್, ಪ್ರೊಜೆಕ್ಟರ್ ನೀಡುವ ಭರವಸೆ ನೀಡಿದ್ದರಿಂದ ಸರಕಾರಿ ಶಾಲೆಗಳ ಸಬಲೀಕರಣದ ಆಶಾಭಾವ ಗಟ್ಟಿಯಾಗಿದೆ.
ಕೈ ತಪ್ಪಿದ “ಜವಳಿ ಪಾರ್ಕ್’: ಬಾಗಲಕೋಟೆ ಜಿಲ್ಲೆಯ ಗುಳೇದಗುಡ್ಡಕ್ಕೆ “ಜವಳಿ ಪಾರ್ಕ್’ ಘೋಷಿಸಿದ್ದರಿಂದ ಜಿಲ್ಲೆಯ ಸಾವಿರಾರು ನೇಕಾರರ ಕುಟುಂಬಗಳ ದಶಕಗಳ ಕನಸು ನುಚ್ಚು ನೂರಾಗಿದೆ. ಇಲ್ಲಿನ ಬೆಟಗೇರಿ, ಶಿಗ್ಲಿ ಮತ್ತು ಗಜೇಂದ್ರಗಡ ನೇಕಾರರಿಗೆ ಹೆಸರುವಾಸಿಯಾಗಿವೆ. ಈ ಭಾಗದ ಸಾವಿರಾರು ಕುಟುಂಬಗಳು ನೇಕಾರಿಕೆಯನ್ನೇ ಅವಲಂಬಿಸಿದ್ದು, ಇಲ್ಲಿ ಸಿದ್ಧವಾಗುವ ಸೀರೆ ಮತ್ತಿತರೆ ಜವಳಿ ಉತ್ಪನ್ನಗಳು
ರಾಜ್ಯ ಹಾಗೂ ದೇಶದ ವಿವಿಧೆಡೆ ರಫ್ತಾಗುತ್ತದೆ. ನೇಕಾರಿಕೆಯನ್ನು ಮತ್ತಷ್ಟು ಉತ್ತೇಜಿಸಲು ಬೆಟಗೇರಿ ಸಮೀಪದ ನರಸಾಪುರದಲ್ಲಿ ಟೆಕ್ಸ್ಟ್ ಟೈಲ್ ಪಾರ್ಕ್ ಸ್ಥಾಪಿಸಬೇಕೆಂಬುದು ದಶಕಗಳ ಬೇಡಿಕೆಯಾಗಿತ್ತು. ಆದರೆ, 2021-22 ನೇ ಸಾಲಿನ ಮುಂಗಡ ಪತ್ರದಲ್ಲಿ ರಾಜ್ಯ ಸರಕಾರ ಗುಳೇದಗುಡ್ಡದಲ್ಲಿ ಪಿಪಿಪಿ ಸಹಭಾಗಿತ್ವದಲ್ಲಿ “ಜವಳಿ ಪಾರ್ಕ್, ಹ್ಯಾಂಡ್ ಲೂಮ್ ಡಿಸೈನ್ ಸ್ಟುಡಿಯೋ’ ಸ್ಥಾಪಿಸುವುದಾಗಿ ಪ್ರಕಟಿಸಿದೆ.
ಹತ್ತಾರು ಬೇಡಿಕೆಗಳು ಗೌಣ: ಕಾಂಗ್ರೆಸ್ ಸರಕಾರದಲ್ಲೇ ಲಕ್ಕುಂಡಿ ಅಭಿವೃದ್ಧಿ ಪ್ರಾಧಿಕಾರ ರಚನೆ ಘೋಷಿಸಿದ್ದರೂ, ತಾಂತ್ರಿಕ ಸಮಸ್ಯೆಯಿಂದ ಬಿಡುಗಡೆಯಾಗಿದ್ದ 50 ಲಕ್ಷ ರೂ. ಅನುದಾನ ವಾಪಸ್ಸಾಗಿದೆ. ಈ ಬಾರಿಯೂ ನಿರ್ಲಕ್ಷ್ಯ ವಹಿಸಲಾಗಿದೆ. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕಾರಿಡಾರ್ ರಚನೆ, ಜಿಲ್ಲಾಸ್ಪತ್ರೆಯನ್ನು ಸೂಪರ್ ಸ್ಪೆಷಾಲಿಟಿಆಸ್ಪತ್ರೆಯನ್ನಾಗಿಸಿ ಮೇಲ್ದರ್ಜೆಗೇರಿಸುವುದು, ಕಪ್ಪತ್ತಗುಡ್ಡದಲ್ಲಿ ಆರ್ಯುವೇದ ಮೆಡಿಕಲ್ ಕಾಲೇಜು ಸ್ಥಾಪನೆ, ಗಜೇಂದ್ರಗಡ, ಲಕ್ಷ್ಮೇಶ್ವರ ನೂತನ ತಾಲೂಕು ಬಲವರ್ಧನೆ ಬಗ್ಗೆ ಪ್ರಸ್ತಾಪವೇ ಇಲ್ಲ.
ಮಹದಾಯಿ ಯೋಜನೆಗೆ 1600 ಕೋಟಿ ರೂ.ಗಳ ಅನುದಾನ ಮೀಸಲಿಡುವದರೊಂದಿಗೆ ರಾಜ್ಯದ ನಗರಾಭಿವೃದ್ಧಿ,ಗ್ರಾಮೀಣಾಭಿವೃದ್ಧಿ, ಇಂಧನ,ವಸತಿ, ಆರೋಗ್ಯ, ಶೈಕ್ಷಣಿಕ, ರಸ್ತೆ ಹಾಗೂ ಮೂಲ ಸೌಕರ್ಯಗಳಿಗೆ ಆದ್ಯತೆಕೊಡುವುದರ ಜೊತೆಗೆ ಎಲ್ಲ ವಲಯಗಳನ್ನುಅಭಿವೃದ್ಧಿ ಪಡಿಸುವ ಗುರಿಯೊಂದಿಗೆ ಮಂಡಿಸಿದ 2021-22ನೇ ಸಾಲಿನ ಮುಂಗಡ ಪತ್ರ ಸ್ವಾಗತಾರ್ಹ. – ಶಿವಕುಮಾರ ಉದಾಸಿ, ಸಂಸದ
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಂಡಿಸಿರುವಈ ಬಾರಿ ಬಜೆಟ್ ಗದಗ ಮತ್ತು ಉತ್ತರ ಕರ್ನಾಟಕ ಭಾಗಕ್ಕೆ ಸಂಪೂರ್ಣನಿರಾಶಾದಾಯಕವಾಗಿದೆ. ಕಳೆದ ವರ್ಷ ಘೋಷಿಸಿದ್ದ ಮಹದಾಯಿಗೆ 500ಕೋಟಿ ರೂ. ಘೊಷಿಸಿದ್ದನ್ನೇ ಮುಂದುವರಿಸಿ, 1600 ಕೋಟಿರೂ. ನೀಡಿದೆ. ಈ ಬಾರಿ ಬಜೆಟ್ ಬೆಂಗಳೂರು, ಶಿವಮೊಗ್ಗ ಕೇಂದ್ರೀಕೃತವಾಗಿದ್ದು, ಗದಗ ಹಾಗೂ ಈ ಭಾಗದ ಜಿಲ್ಲೆಗಳಿಗೆ ನಿರಾಸೆ ತಂದಿದೆ.– ಜಿ.ಎಸ್. ಪಾಟೀಲ, ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ
ಪ್ರತಿ ಜಿಲ್ಲೆಯಲ್ಲಿ ಒಂದೊಂದು ಗೋ ಶಾಲೆ, ಸಣ್ಣ, ಅತಿ ಸಣ್ಣ ಹಿಡುವಳಿದಾರರಿಗೆ ವರ್ಷವಿಡೀ ವರಮಾನ ನೀಡುವ ಮೂಲಕ ಐತಿಹಾಸಿಕ ಬಜೆಟ್ ಮಂಡಿಸಿದ್ದಾರೆ. ಹಳ್ಳಿಗಳಿಗೆ ಸಗಟು ನೀರು ಪೂರೈಸಲು 25,740 ಕೋಟಿ ರೂ, ಗ್ರಾಮೀಣ ಭಾಗದ ಕುಡಿಯುವ ನೀರುಪೂರೈಸುವ ಯೋಜನೆಗೆ 6201 ಕೋಟಿ ರೂ, ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ 3000 ಕೋಟಿ ಅನುದಾನ, ಕಲ್ಯಾಣ ಕರ್ನಾಟಕ ಅಭಿವೃದ್ಧಿ 1500 ಕೋಟಿ ಅನುದಾನ, 58 ಅಣೆಕಟ್ಟುಗಳ ಪುನಃಶ್ಚೇತನಕ್ಕೆ 1500 ಕೋಟಿ, ಕೃಷ್ಣಾ ಭಾಗ್ಯ ಜಲನಿಗಮಕ್ಕೆ 5,600 ಕೋಟಿ ರೂ. ಅನುದಾನ ನೀಡಿ, ನೀರಾವರಿಗೆ ಒತ್ತು ನೀಡಿದ್ದಾರೆ. – ಮೋಹನ ಮಾಳಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ
ಮುಖ್ಯಮಂತ್ರಿ ಮಂಡಿಸಿರುವ ಬಜೆಟ್‌ನಲ್ಲಿ ಎಲ್ಲ ವರ್ಗ, ಜಾತಿ ಸಮುದಾಯದ ಜನರಿಗೂ ನ್ಯಾಯ ಒದಗಿಸಿದ್ದಾರೆ. ಪರಿಶಿಷ್ಟ ಜಾತಿ,ಪರಿಶಿಷ್ಟ ಪಂಗಡದ, ಹಿಂದುಳಿದವರು, ಅಲ್ಪಸಂಖ್ಯಾತರ, ಮಕ್ಕಳು, ಮಹಿಳೆಯರು,ಹಿರಿಯ ನಾಗರಿಕರು, ವಿಕಲಚೇತನರಅಭಿವೃದ್ಧಿಗೆ ಮುಂಗಡ ಪತ್ರದಲ್ಲಿ ಒತ್ತು ನೀಡಿದ್ದಾರೆ. ಅನ್ನದಾತನೆಮ್ಮದಿ ಹಾಗೂ ತೃಪ್ತಿಯಿಂದ ಬದುಕಬೇಕು ಎಂಬ ಆಶಯಬಜೆಟ್‌ನಲ್ಲಿ ವ್ಯಕ್ತಪಡಿಸಿರುವ ಮುಖ್ಯಮಂತ್ರಿಗಳ ಕ್ರಮ ಶ್ಲಾಘನೀಯ. – ಪ್ರೊ| ವಿ.ಎಸ್.ಸಂಕನೂರ ವಿಧಾನ ಪರಿಷತ್ ಸದಸ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Protest: ಕೊಪ್ಪಳ-ಗದಗದಲ್ಲಿ ಬಿಜೆಪಿ ಪ್ರತಿಭಟನೆ
ಗಜೇಂದ್ರಗಡ: ಸೂಡಿ ಉತ್ಸವಕ್ಕೆ ತೋರಬೇಕಿದೆ ಇಚ್ಛಾಶಕ್ತಿ-ಹಾಳು ಕೊಂಪೆಯಾದ ಸ್ಮಾರಕ
Leopard: ಮನೆಯ ಮಹಡಿ ಮೇಲೆ ಚಿರತೆ ಓಡಾಟ, CCTVಯಲ್ಲಿ ದೃಶ್ಯ ಸೆರೆ, ಆತಂಕದಲ್ಲಿ ಗ್ರಾಮಸ್ಥರು
ಗದಗ: ಸರ್ಕಾರಿ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕಾಯಕಲ್ಪ
Gadaga: ಎಸ್ಪಿ ನೇಮಗೌಡ ಹೆಸರಲ್ಲಿ ನಕಲಿ ಫೇಸ್‌ಬುಕ್ ಖಾತೆ; ವ್ಯಕ್ತಿಗೆ 25 ಸಾವಿರ ರೂ. ವಂಚನೆ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Result: ಮಹಾರಾಷ್ಟ್ರದಲ್ಲಿ ಎನ್‌ಡಿಎಗೆ ಜಯಭೇರಿ; ಮೋದಿ ನಾಯಕತ್ವಕ್ಕೆ ಮನ್ನಣೆ: ನಳಿನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Udupi: ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ -ಗೃಹ ಸಚಿವ ಅಮಿತ್ ಶಾ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.