ಜನರಿಗೆ ಅಗತ್ಯ ವಸ್ತು ಪೂರೈಕೆ
Team Udayavani, Apr 3, 2020, 1:13 PM IST
ನರಗುಂದ: ವೈದ್ಯಕೀಯ ಸಿಬ್ಬಂದಿ ಗದಗ, ವಿಜಯಪುರ ಎರಡೂ ಜಿಲ್ಲೆಗಳ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ 24/7 ಮಹತ್ವದ ಸೇವೆ ಸಲ್ಲಿಸುತ್ತಿದ್ದಾರೆ. ದೇವರ ದಯೆಯಿಂದ ಎರಡೂ ಜಿಲ್ಲೆ ಗಳಲ್ಲಿ ಆರೋಗ್ಯಕರ ವಾತಾವರಣವಿದೆ. ಸರಕಾರದಿಂದ ಜನರಿಗೆ ಅಗತ್ಯ ವಸ್ತುಗಳ ಪೂರೈಕೆ ಮಾಡಲಾಗಿದೆ. ಜನತೆ ಯಾವುದೇ ಆತಂಕಕ್ಕೆ ಒಳಗಾಗಬಾರದು ಎಂದು ಸಚಿವ ಸಿ.ಸಿ. ಪಾಟೀಲ ಹೇಳಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡೂ ಜಿಲ್ಲೆಗಳಲ್ಲಿ ಕೋವಿಡ್ 19 ವೈರಸ್‌ನ ಯಾವುದೇ ಪ್ರಕರಣಗಳಿಲ್ಲ. ಆದರೂ ಜನತೆ ಮುಂಜಾಗ್ರತೆ ವಹಿಸಿ ಏ. 14ರವರೆಗೆ ಮನೆಯಿಂದ ಹೊರಬರದೇ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಮನವಿ ಮಾಡಿದರು. ದೇಶ ಮತ್ತು ಸರ್ಕಾರಕ್ಕೆ ಸಾಕಷ್ಟು ನಷ್ಟ ಉಂಟಾಗಿದ್ದರೂ ದೇಶದ ಜನರ ಆರೋಗ್ಯ ಮುಖ್ಯ ಎಂಬ ಪ್ರಧಾನಿ ದಿಟ್ಟ ನಿರ್ಧಾರದಿಂದ ಲಾಕ್ ಡೌನ್ ಜಾರಿಗೆ ಬಂದಿದೆ. ಜನರ ಸಹಕಾರವೂ ಸಿಕ್ಕಿದೆ. ಇನ್ನೂ ಸಹಕಾರ ಕೋರುತ್ತೇವೆ. ಸಾಲಗಾರರು, ಬಾಡಿಗೆ ಮನೆಯಲ್ಲಿ ಇರುವವರಿಗೆ 3 ತಿಂಗಳುಹಣಕಾಸಿನ ಹೊರೆಯಾಗದಂತೆ ಮುಖ್ಯಮಂತ್ರಿಗಳು ಜವಾಬ್ದಾರಿ ವಹಿಸಿಕೊಂಡಿದ್ದಾರೆ ಎಂದು ಹೇಳಿದರು.
ನಿಜಾಮುದ್ದೀನ್ ಆತಂಕ: ದೆಹಲಿ ನಿಜಾಮುದ್ದೀನ್ ಧಾರ್ಮಿಕ ಸಭೆಗೆ ಹೋಗಿ ಬಂದಿರುವ ಜನರಿಂದ ಆತಂಕ ಸೃಷ್ಟಿಯಾಗಿದೆ. ಗದಗ, ವಿಜಯಪುರ ಜಿಲ್ಲೆಗಳಿಂದ ಹೋಗಿ ಬಂದವರನ್ನು ಪತ್ತೆ ಮಾಡಿ ಚಿಕಿತ್ಸೆಗೆ ಒಳಪಡಿಸಲಾಗಿದೆ. ಅವರ ಗಂಟಲು ದ್ರವ ಪರೀಕ್ಷೆಗೆ ಕಳಿಸಿದ್ದು ನಕಾರಾತ್ಮಕ ವರದಿ ಬಂದಿವೆ. ಇನ್ನೂ ಉಳಿದವರ ಪತ್ತೆ ಕಾರ್ಯ ನಡೆದಿದೆ ಎಂದು ಸಚಿವ ಸಿ.ಸಿ.ಪಾಟೀಲ ಹೇಳಿದರು.
ಅಂತರವೇ ಮುಕ್ತಿ: ಸಾಮಾಜಿಕ ಅಂತರವೊಂದೇ ಕೋವಿಡ್ 19 ದಿಂದ ಮುಕ್ತಿ ಪಡೆಯಲು ಪ್ರಮುಖ ಮಾರ್ಗ. ಪ್ರತಿಯೊಬ್ಬ ನಾಗರಿಕರು ಜಾಗೃತಿ ಹೊಂದಬೇಕು. ನರಗುಂದ ಪಟ್ಟಣದ ಕೆಲ ಬಡಾವಣೆಗಳಲ್ಲಿ ಗುಂಪಾಗಿ ನಿಲ್ಲುತ್ತಿದ್ದಾರೆ. ಅವರಿಗೆ ತಿಳಿವಳಿಕೆ ನೀಡಲಾಗಿದೆ. ತಪ್ಪಿದರೆ ಹೋಮ್ ಕ್ವಾರಂಟೈನ್‌ಗೆ ಸೇರಿಸುವುದು ಅನಿವಾರ್ಯ ಎಂದರು.
ಕೋವಿಡ್ 19 ವೈರಸ್ ನಿರ್ಮೂಲನೆ ಹಿನ್ನೆಲೆಯಲ್ಲಿ ಸರಕಾರಕ್ಕೆ ಸಹಕಾರ ನೀಡುವ ಉದ್ದೇಶದಿಂದ ನನ್ನ ಒಂದು ವರ್ಷದ ವೇತನವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆಕೊಟ್ಟಿದ್ದೇನೆ.-ಸಿ.ಸಿ. ಪಾಟೀಲ, ಗಣಿ ಮತ್ತು ಭೂವಿಜ್ಞಾನ ಖಾತೆ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Filmmaker Shafi: ಮಾಲಿವುಡ್‌ನ ಖ್ಯಾತ ನಿರ್ದೇಶಕ ಶಾಫಿ ನಿಧನ
ಗದಗ-ಬೆಟಗೇರಿ ಅವಳಿ ನಗರ ಅಭಿವೃದ್ಧಿಗೆ ವೇಗ ನೀಡಿದ್ದ ಉಷಾ ಮಹೇಶ ದಾಸರ
Thalapathy Vijay: ಕೊನೆ ಸಿನಿಮಾಕ್ಕೆ ʼಜನ ನಾಯಕʼನಾದ ವಿಜಯ್; ಫಸ್ಟ್ ಲುಕ್ ವೈರಲ್
Bantwal ಆಸ್ಪತ್ರೆ: ಪ್ರಸೂತಿ ತಜ್ಞರಿಲ್ಲ; 60ರಿಂದ 10ಕ್ಕಿಳಿದ ಹೆರಿಗೆ ಸಂಖ್ಯೆ
Mangaluru: ರಾಮ ಸೇನೆ ಇರಲಿ ಶ್ರೀರಾಮ ಸೇನೆ ಇರಲಿ ಈ ರೀತಿ ಮಾಡೋದು ತಪ್ಪು: ಗುಂಡೂರಾವ್