ಪ್ಲಾಸ್ಟಿಕ್ ಮುಕ್ತ ಪಟ್ಟಣಕ್ಕೆ ಸಹಕರಿಸಿ
Team Udayavani, Oct 13, 2019, 12:38 PM IST
ಗಜೇಂದ್ರಗಡ: ಪಟ್ಟಣ ಪ್ಲಾಸ್ಟಿಕ್ ಮುಕ್ತವನ್ನಾಗಿಸಲು ಪಣತೊಟ್ಟಿರುವ ಪುರಸಭೆ ಪರಿಸರ ಕಾಳಜಿಗೆ ಕೈ ಜೋಡಿಸಿದ ಬಾಗಮಾರ ಸೇವಾ ಸಮಿತಿಯಿಂದ 500ಕ್ಕೂ ಅಧಿಕ ಬಟ್ಟೆ ಕೈ ಚೀಲ ನೀಡಲಾಯಿತು.
ಕಳೆದೊಂದು ವಾರದಿಂದ ಪ್ಲಾಸ್ಟಿಕ್ ಮಾರಾಟ ಮತ್ತು ಬಳಕೆ ಮಾಡುತ್ತಿರುವವರ ಮೇಲೆ ದಾಳಿ ನಡೆಸಿ, ದಂಡ ವಿಧಿಸುವ ಮೂಲಕ ಪ್ಲಾಸ್ಟಿಕ್ ಮುಕ್ತವನ್ನಾಗಿಸಲು ನಿರಂತರವಾಗಿ ಶ್ರಮಿಸುತ್ತಿರುವ ಪುರಸಭೆ ಅಧಿಕಾರಿಗಳು ಪಟ್ಟಣದ ಜೋಡು ರಸ್ತೆ ಬಳಿಯ ಅಂಗಡಿಗಳಿಗೂ ತೆರಳಿ ಪ್ಲಾಸ್ಟಿಕ್ ವಸ್ತುಗಳನ್ನು ಉಪಯೋಗಿಸದಂತೆ ಕಟ್ಟು ನಿಟ್ಟಿನ ಆದೇಶ ನೀಡಿದರು.
ಪುರಸಭೆ ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಿದ ಪಟ್ಟಣದ ಬಾಗಮಾರ ಸೇವಾ ಸಮಿತಿಯ ಅಜೀತ ಬಾಗಮಾರ ಅವರು ತಮ್ಮ ಜೋಡು ರಸ್ತೆ ಬಳಿಯ ಬಟ್ಟೆ ಅಂಗಡಿಯಲ್ಲಿ 500ಕ್ಕೂ ಅಧಿಕ ಬಟ್ಟೆಯಿಂದ ಸಿದ್ಧಪಡಿಸಿದ ಕೈ ಚೀಲಗಳನ್ನು ಪುರಸಭೆ ಅಧಿಕಾರಿಗಳಿಗೆ ಉಚಿತವಾಗಿ ನೀಡಿದರು.
ಪುರಸಭೆ ಆರೋಗ್ಯ ಅಧಿಕಾರಿ ರಾಘವೇಂದ್ರಮಂತ್ರಾ, ಕಂದಾಯ ಅಧಿಕಾರಿ ಬಸವರಾಜ ಬಳಗಾನೂರ, ಶಿವಕುಮಾರ ಇಲ್ಲಾಳ, ಇಮಾಮ್ ಕಾಲಾನಾಯಕ್, ನಜೀರಸಾಬ ಸಾಂಗ್ಲಿಕಾರ, ಆನಂದ ಮಳಗಿ, ಹನುಮಂತ ಚಲವಾದಿ, ಶಿವಪ್ಪ ಮಾದರ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Waqf Issue: ಐದು ವರ್ಷ ಹಿಂದೆ ವಕ್ಫ್ ಆಸ್ತಿ ವಿರುದ್ಧ ಹೋರಾಡಿ ಗೆದ್ದಿದ್ದ 315 ರೈತರು
Gadaga: ಐತಿಹಾಸಿಕ ವೀರನಾರಾಯಣ ದೇವಸ್ಥಾನ ಪುನರುತ್ಥಾನ ಕಾರ್ಯಕ್ಕೆ ಚಾಲನೆ
ಕುಂಬಾರರ ಬದುಕಿನಲ್ಲಿಲ್ಲ ದೀಪಾವಳಿ ಬೆಳಕು: ಮಾರುಕಟ್ಟೆಗೆ ಲಗ್ಗೆ ಇಟ್ಟ ಪಿಂಗಾಣಿ ಹಣತೆ
ಗದಗ: ಜನಮಾನಸದಲ್ಲಿ ಅಚ್ಚಳಿಯದ ರಾಣಿ ಚನ್ನಮ್ಮ
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.