ಸಾಮಿಲ್ಗೆ ತಹಶೀಲ್ದಾರ್ ಭೇಟಿ
ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವ ಕುರಿತು ಪರಿಶೀಲನೆ
Team Udayavani, May 4, 2019, 2:05 PM IST
ಶಿರಹಟ್ಟಿ: ಪಟ್ಟಣದ ಮುಂಡರಗಿ ರಸ್ತೆಗೆ ಹೊಂದಿಕೊಂಡಿರುವ ಸುಮಾರು 4-5 ಸಾ ಮಿಲ್ಗಳಿಗೆ ಶುಕ್ರವಾರ ಮಧ್ಯಾಹ್ನ ತಹಶೀಲ್ದಾರ್ ಹಾಗೂ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ದಿಢೀರ್ ಭೇಟಿ ನೀಡಿ ಪರಿಶೀಲಿಸಿದರು.
ಪಟ್ಟಣದಲ್ಲಿನ ಜನಸಾಮಾನ್ಯರ ಆರೋಗ್ಯ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎಂದು ಸ್ಥಳೀಯರು ನೀಡಿದ ದೂರಿನ ಮೇರೆಗೆ ತಹಶೀಲ್ದಾರ್ ಭೇಟಿ ನೀಡಿ ಪರಿಶೀಲಿಸಲಾಗಿದ್ದು, ಮುಖ್ಯಾಧಿಕಾರಿಗೆ ಈ ಕುರಿತು ವರದಿ ನೀಡಲು ಸೂಚಿಸಿದರು.
ಸ್ಥಾನಿಕ ಪರಿಶೀಲನಾ ಸಮಯದಲ್ಲಿ ತಹಶೀಲ್ದಾರ್ ಆಶಪ್ಪನವರು ಸಾಮಿಲ್ಗಳಿಗೆ ಭೇಟಿ ನೀಡಿ ಸಾಮಿಲ್ಗಳಿಂದ ಸಾರ್ವಜನಿಕರ ಆರೋಗ್ಯ ಮೇಲೆ ಬೀರುತ್ತಿರುವ ದುಷ್ಪರಿಣಾಮ ಕುರಿತು ಪರಿಶೀಲಿಸಿದರು. ಕಟ್ಟಿಗೆ ಪೌಡರ್, ಶಬ್ದ ಮಾಲಿನ್ಯ, ಸಾರ್ವಜನಿಕರು ಅಡ್ಡಾಡುವ ರಸ್ತೆ ಮೇಲೆ ಅಡ್ಡಲಾಗಿ ಹಾಕಲಾಗಿರುವ ಕಟ್ಟಿಗೆ ತುಂಡುಗಳು ಹಾಗೂ ಕಟ್ಟಿಗೆ ಒಳಗಿನ ಹುಳಗಳು ಮನೆಯಲ್ಲಿ ಪ್ರವೇಶ, ಇದರಿಂದ ವಿದ್ಯಾರ್ಥಿಗಳ ಅಭ್ಯಾಸಕ್ಕೆ ತೊಂದರೆ ಉಂಟಾಗುವುದು ಎಂದು ದೂರ ಜನರು ನೀಡಿದ್ದ ದೂರಿನ ಕುರಿತು ಪರಿಶೀಲಿಸಿದರು.
ಜನ ವಾಸಿಸುವ ಪ್ರದೇಶದಲ್ಲಿ ಸಾಮಿಲ್ಗಳನ್ನು ಸ್ಥಾಪಿಸುವ ಹಾಗಿಲ್ಲ. ಜೊತೆಗೆ ಸಾರ್ವಜನಿರಿಗೆ ತೊಂದರೆಯಾಗುತ್ತಿದೆ ಎಂದು ದೂರು ನೀಡಿದರೆ ಅನಿವಾರ್ಯವಾಗಿ ಪಟ್ಟಣದ ಹೊರ ವಲಯದಲ್ಲಿ ತಮ್ಮ ತಮ್ಮ ನಿವೇಶನದಲ್ಲಿ ಪಪಂ ಪರವಾನಗಿ ಮೂಲಕ ಘಟಕ ಸ್ಥಾಪಿಸಿಕೊಳ್ಳಬಹುದಾಗಿದೆ ಎಂದು ಸಾಮಿಲ್ಗಳ ಮಾಲೀಕರಿಗೆ ಸೂಚಿಸಿದರು. ಈ ಕುರಿತು ಪಪಂ ಮುಖ್ಯಾಧಿಕಾರಿಗೆ ಸಾಮಿಲ್ಗಳ ಬಗ್ಗೆ ದಾಖಲಾತಿಗಳನ್ನು ಪರಿಶೀಲಿಸಿ ವರದಿ ಸಲ್ಲಿಸುವಂತೆ ಸೂಚಿಸಿದರು. ಸಾಮಿಲ್ ದಾಖಲಾತಿಗಳು ಸರಿ ಇರದೆ ಹೋಗಿದ್ದರೆ ಕೆಇಬಿಯವರಿಗೆ ಹೇಳಿ ವಿದ್ಯುತ್ ಸಂಪರ್ಕ ಕಡಿತಗೊಳಿಸವಂತೆ ತಿಳಿಸಬೇಕೆಂದು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.